Bible

Amos 6 - ASV (Kannada)

1 Woe to them that are at ease in Zion, and to them that are secure in the mountain of Samaria, the notable men of the chief of the nations, to whom the house of Israel come!ಚೀಯೋನಿನಲ್ಲಿ ನಿಶ್ಚಿಂತೆಯಿಂದಿರುವವ ರಿಗೂ ಸಮಾರ್ಯ ಬೆಟ್ಟದಲ್ಲಿ ನಂಬಿಕೆ ಯಿಡುವವರಿಗೂ ಇಸ್ರಾಯೇಲಿನ ಮನೆತನದವರ ಯಾರ ಬಳಿಗೆ ಬರುತ್ತಾರೋ ಆ ಪ್ರಮುಖ ಜನಾಂಗ ದಲ್ಲಿ ಹೆಸರುಗೊಂಡವರಿಗೂ ಅಯ್ಯೋ!

2 Pass ye unto Calneh, and see; and from thence go ye to Hamath the great; then go down to Gath of the Philistines: are they better than these kingdoms? or is their border greater than your border?ಕಲ್ನೆಗೆ ಹಾದುಹೋಗಿ ನೋಡಿರಿ; ಅಲ್ಲಿಂದ ಮಹಾ ಹಮಾತಿಗೆ ಹೋಗಿರಿ; ಅಲ್ಲಿಂದ ಫಿಲಿಷ್ಟಿಯರ ಗಾತಿಗೆ ಇಳಿದು ಹೋಗಿರಿ; ಅವು ಈ ರಾಜ್ಯಗಳಿಗಿಂತ ಒಳ್ಳೆಯವು ಗಳೇನು? ಅವುಗಳ ಪ್ರಾಂತ್ಯವು ನಿಮ್ಮ ಪ್ರಾಂತ್ಯಕ್ಕಿಂತ ದೊಡ್ಡದೋ?

3 -ye that put far away the evil day, and cause the seat of violence to come near;ನೀವು ಕೆಟ್ಟ ದಿನವನ್ನು ದೂರಮಾಡಿ ಕೊಂಡು ಬಲಾತ್ಕಾರದ ಪೀಠವನ್ನು ಹತ್ತಿರ ಮಾಡಿಕೊ ಳ್ಳುತ್ತೀರಿ.

4 that lie upon beds of ivory, and stretch themselves upon their couches, and eat the lambs out of the flock, and the calves out of the midst of the stall;ದಂತದ ಮಂಚಗಳ ಮೇಲೆ ಮಲಗಿಕೊಳ್ಳು ತ್ತಾರೆ; ತಮ್ಮ ಹಾಸಿಗೆಗಳ ಮೇಲೆ ಹಾಯಾಗಿ ಒರಗಿ ಕೊಳ್ಳುತ್ತಾರೆ; ಮಂದೆಯೊಳಗಿಂದ ಕುರಿಮರಿಗಳನ್ನು, ಹಟ್ಟಿಯ ಮಂದೆಯೊಳಗಿಂದ ಕರುಗಳನ್ನು ತಿನ್ನುತ್ತಾರೆ.

5 that sing idle songs to the sound of the viol; that invent for themselves instruments of music, like David;ವೀಣೆಯ ಸ್ವರಕ್ಕೆ ಹಾಡುತ್ತಾರೆ; ದಾವೀದನ ಹಾಗೆ ತಮಗೆ ತಾವೇ ಗಾನ ವಾದ್ಯಗಳನ್ನು ಕಲ್ಪಿಸಿಕೊಳ್ಳು ತ್ತಾರೆ.

6 that drink wine in bowls, and anoint themselves with the chief oils; but they are not grieved for the affliction of Joseph.ದ್ರಾಕ್ಷಾರಸದ ಪಾತ್ರೆಗಳಲ್ಲಿ ಕುಡಿಯುತ್ತಾರೆ. ಶ್ರೇಷ್ಠವಾದ ಎಣ್ಣೆಗಳಿಂದ ತಮ್ಮನ್ನು ಅಭಿಷೇಕಿಸಿ ಕೊಳ್ಳುತ್ತಾರೆ. ಆದರೆ ಯೋಸೇಫನ ನಷ್ಟಕ್ಕೆ ವ್ಯಸನಪಡು ವದಿಲ್ಲ.

7 Therefore shall they now go captive with the first that go captive; and the revelry of them that stretched themselves shall pass away.ಅದರಿಂದ ಸೆರೆಗೆ ಒಯ್ಯಲ್ಪಡುವವರಿಗೆ ಮೊದಲು ತಾವೇ ಸೆರೆಗೆ ಹೋಗುವರು; ಭೋಗ ಮಾಡುವವರ ಹರ್ಷಧ್ವನಿಯು ಬಿಟ್ಟು ಹೋಗುವದು.

8 The Lord Jehovah hath sworn by himself, saith Jehovah, the God of hosts: I abhor the excellency of Jacob, and hate his palaces; therefore will I deliver up the city with all that is therein.ಸೈನ್ಯಗಳ ದೇವರಾದ ಕರ್ತನು ಹೀಗೆ ಹೇಳುತ್ತಾನೆ--ದೇವರಾದ ಕರ್ತನು ತನ್ನ ಮೇಲೆ ಆಣೆಯಿಟ್ಟುಕೊಂಡಿ ದ್ದಾನೆ; ಅದೇನಂದರೆ--ನಾನು ಯಾಕೋಬಿನ ಹೆಚ್ಚಳ ವನ್ನು ಅಸಹ್ಯಿಸಿಕೊಂಡು ಅವನ ಅರಮನೆಗಳನ್ನು ಹಗೆ ಮಾಡುತ್ತೇನೆ; ಅದಕಾರಣ ಪಟ್ಟಣವನ್ನೂ ಅದರಲ್ಲಿ ರುವ ಸಮಸ್ತವನ್ನೂ ನಾನು ಒಪ್ಪಿಸಿಬಿಡುತ್ತೇನೆ.

9 And it shall come to pass, if there remain ten men in one house, that they shall die.ಆಗುವದೇನಂದರೆ, ಒಂದು ಮನೆಯಲ್ಲಿ ಹತ್ತು ಜನರು ಉಳಿದರೆ ಅವರು ಸಾಯುವರು.

10 And when a man's uncle shall take him up, even he that burneth him, to bring out the bones out of the house, and shall say unto him that is in the innermost parts of the house, Is there yet any with thee? and he shall say, No; then shall he say, Hold thy peace; for we may not make mention of the name of Jehovah.ಒಬ್ಬ ನೆಂಟನೂ ಅವನನ್ನು ಸುಡುವವನೂ ಮನೆಯೊಳಗಿಂದ ಅವನ ಎಲುಬುಗಳನ್ನು ತೆಗೆದುಕೊಂಡು ಹೋಗುವದಕ್ಕೆ ಅವ ನನ್ನು ಎತ್ತಿಕೊಳ್ಳುವಾಗ ಮನೆಯ ಒಳಭಾಗದಲ್ಲಿ ಇರುವ ವರಿಗೆ--ಇನ್ನೂ ಯಾರಾದರೂ ನಿನ್ನ ಬಳಿಯಲ್ಲಿ ಇದ್ದಾರೆಯೇ? ಎಂದು ಹೇಳುವನು; ಆಗ ಅವನು--ಯಾರೂ ಇಲ್ಲವೆಂದರೆ ಇವನು--ಸುಮ್ಮನಿರು, ನಾವು ಕರ್ತನ ಹೆಸರನ್ನು ಜ್ಞಾಪಕ ಮಾಡಿಕೊಳ್ಳಬಾರದೆಂದು ಹೇಳುವನು.

11 For, behold, Jehovah commandeth, and the great house shall be smitten with breaches, and the little house with clefts.ಇಗೋ, ಕರ್ತನು ಆಜ್ಞಾಪಿಸುತ್ತಾನೆ; ಆತನು ದೊಡ್ಡ ಮನೆಯನ್ನು ಸೀಳುಗಳಿಂದಲೂ ಚಿಕ್ಕ ಮನೆಯನ್ನು ಬಿರುಕುಗಳಿಂದಲೂ ಹೊಡೆಯುವನು.

12 Shall horses run upon the rock? will one plow `there' with oxen? that ye have turned justice into gall, and the fruit of righteousness into wormwood;ಕುದುರೆಗಳು ಬಂಡೆಯ ಮೇಲೆ ಓಡುವದುಂಟೇ? ಎತ್ತುಗಳಿಂದ ಅಲ್ಲಿ ಉಳುವನೋ? ನಿಮ್ಮ ನ್ಯಾಯವನ್ನು ವಿಷಕ್ಕೂ ನೀತಿ ಫಲವನ್ನು ಮಾಚಿಪತ್ರೆಗೂ ಬದಲಾಯಿ ಸಿದ್ದೀರಿ.

13 ye that rejoice in a thing of nought, that say, Have we not taken to us horns by our own strength?ಏನೂ ಇಲ್ಲದ್ದರಲ್ಲಿ ಸಂತೋಷಪಡುವ ವರೇ, ನೀವು ಹೆಚ್ಚಳ ಪಡುವದು ಶೂನ್ಯವಾಗಿರುವ ಲ್ಲಿಯೇ? ಸ್ವಬಲದಿಂದ ಕೊಂಬುಗಳನ್ನು ತೆಗೆದುಕೊಂಡಿ ಲ್ಲವೇ ಎಂದು ಹೇಳುತ್ತೀರಿ.

14 For, behold, I will raise up against you a nation, O house of Israel, saith Jehovah, the God of hosts; and they shall afflict you from the entrance of Hamath unto the brook of the Arabah.ಇಗೋ, ಜನಾಂಗವನ್ನು ನಿಮಗೆ ವಿರೋಧವಾಗಿ ಎಬ್ಬಿಸುತ್ತೇನೆ; ಇಸ್ರಾಯೇಲಿನ ಮನೆತನದವರೇ, ಹಮಾತಿನ ಪ್ರದೇಶದಿಂದ ಹಿಡಿದು ಅರಣ್ಯದ ನದಿಯ ವರೆಗೂ ನಿಮ್ಮನ್ನು ಹಿಂಸಿಸುತ್ತೇನೆ ಎಂದು ಸೈನ್ಯಗಳ ದೇವರಾದ ಕರ್ತನು ಹೇಳುತ್ತಾನೆ.

Kannada Bible