Acts 18 - ASV (Kannada)
1 After these things he departed from Athens, and came to Corinth.ಇವುಗಳಾದ ಮೇಲೆ ಪೌಲನು ಅಥೇನೆ ಯದಿಂದ ಹೊರಟು ಕೊರಿಂಥಕ್ಕೆ ಬಂದು
2 And he found a certain Jew named Aquila, a man of Pontus by race, lately come from Italy, with his wife Priscilla, because Claudius had commanded all the Jews to depart from Rome: and he came unto them;ಪೊಂತದಲ್ಲಿ ಹುಟ್ಟಿದ ಅಕ್ವಿಲನೆಂಬ ಒಬ್ಬ ಯೆಹೂದ್ಯ ನನ್ನು ಅಲ್ಲಿ ಕಂಡನು. (ಯೆಹೂದ್ಯರೆಲ್ಲರೂ ರೋಮಾ ಪುರವನ್ನು ಬಿಟ್ಟು ಹೋಗಬೇಕೆಂದು ಕ್ಲೌದ್ಯನು ಆಜ್ಞೆ ವಿಧಿಸಿದ್ದನು). ಆದಕಾರಣ ಅಕ್ವಿಲನೂ ಅವನ ಹೆಂಡತಿಯಾದ ಪ್ರಿಸ್ಕಿಲ್ಲಳೂ ಕೆಲವು ದಿವಸಗಳ ಮುಂಚೆ ಇತಾಲ್ಯದಿಂದ ಅಲ್ಲಿಗೆ ಬಂದಿದ್ದರು; ಪೌಲನು ಅವರ
3 and because he was of the same trade, he abode with them, and they wrought, for by their trade they were tentmakers.ಅವರು ತಮ್ಮ ವೃತ್ತಿಯಿಂದ ಗುಡಾರ ಮಾಡುವವರಾಗಿದ್ದದರಿಂದ ಅವನು ಅವ ರೊಂದಿಗೆ ಇದ್ದು ಕೆಲಸ ಮಾಡುತ್ತಿದ್ದನು ಯಾಕಂದರೆ ಅವನೂ ಅದೇ ಕಸಬಿನವನಾಗಿದ್ದನು.
4 And he reasoned in the synagogue every sabbath, and persuaded Jews and Greeks.ಅವನು ಪ್ರತಿ ಸಬ್ಬತ್ ದಿನವೂ ಸಭಾಮಂದಿರದಲ್ಲಿ ಚರ್ಚಿಸಿ ಯೆಹೂದ್ಯರನ್ನೂ ಗ್ರೀಕರನ್ನೂ ಒಡಂಬಡಿಸುತ್ತಿದ್ದನು.
5 But when Silas and Timothy came down from Macedonia, Paul was constrained by the word, testifying to the Jews that Jesus was the Christ.ಸೀಲ ತಿಮೊಥೆಯರು ಮಕೆದೋನ್ಯದಿಂದ ಬಂದಾಗ ಪೌಲನು ಆತ್ಮದಲ್ಲಿ ಒತ್ತಾಯ ಮಾಡಲ್ಪಟ್ಟು ಯೇಸುವೇ ಕ್ರಿಸ್ತನೆಂದು ಯೆಹೂದ್ಯರಿಗೆ ಸಾಕ್ಷಿಕೊಟ್ಟನು.
6 And when they opposed themselves and blasphemed, he shook out his raiment and said unto them, Your blood `be' upon your own heads; I am clean: from henceforth I will go unto the Gentiles.ಅವರು ಎದುರಿಸಿ ದೇವದೂಷಣೆ ಮಾಡಲಾಗಿ ಅವನು ತನ್ನ ವಸ್ತ್ರವನ್ನು ಝಾಡಿಸಿ ಅವರಿಗೆ--ನಿಮ್ಮ ರಕ್ತವು ನಿಮ್ಮ ತಲೆಗಳ ಮೇಲೆ ಇರಲಿ; ನಾನು ಇಂದಿನಿಂದ ದೋಷರಹಿತನಾಗಿ ಅನ್ಯಜನರ ಬಳಿಗೆ ಹೋಗುತ್ತೇನೆ ಎಂದು ಹೇಳಿ
7 And he departed thence, and went into the house of a certain man named Titus Justus, one that worshipped God, whose house joined hard to the synagogue.ಆ ಸ್ಥಳದಿಂದ ಹೊರಟು ದೇವರನ್ನು ಆರಾಧಿಸುವವನಾಗಿದ್ದ ಯುಸ್ತನೆಂಬವನ ಮನೆಗೆ ಹೋದನು. ಅವನ ಮನೆ ಸಭಾಮಂದಿರದ ಮಗ್ಗುಲಲ್ಲೇ ಇತ್ತು.
8 And Crispus, the ruler of the synagogue, believed in the Lord with all his house; and many of the Corinthians hearing believed, and were baptized.ಸಭಾಮಂದಿರದ ಮುಖ್ಯಾಧಿಕಾರಿಯಾದ ಕ್ರಿಸ್ಪನು ತನ್ನ ಮನೆಯವರೆಲ್ಲರ ಸಹಿತ ಕರ್ತನಲ್ಲಿ ನಂಬಿಕೆಯಿಟ್ಟನು. ಕೊರಿಂಥ ದಲ್ಲಿ ಅನೇಕರು ಕೇಳಿ ನಂಬಿ ಬಾಸ್ತಿಸ್ಮ ಮಾಡಿಸಿಕೊಂಡರು.
9 And the Lord said unto Paul in the night by a vision, Be not afraid, but speak and hold not thy peace:ಇದಲ್ಲದೆ ಕರ್ತನು ರಾತ್ರಿಯಲ್ಲಿ ಪೌಲನಿಗೆ ದರ್ಶನ ಕೊಟ್ಟು--ನೀನು ಹೆದರಬೇಡ; ಸುಮ್ಮನಿರದೆ ಮಾತ ನಾಡುತ್ತಲೇ ಇರು.
10 for I am with thee, and no man shall set on thee to harm thee: for I have much people in this city.ನಾನೇ ನಿನ್ನೊಂದಿಗಿದ್ದೇನೆ; ಯಾರೂ ನಿನ್ನ ಮೇಲೆ ಬಿದ್ದು ಕೇಡುಮಾಡುವದಿಲ್ಲ; ಈ ಪಟ್ಟಣದಲ್ಲಿ ಬಹಳ ಮಂದಿ ನನಗೆ ಇದ್ದಾರೆ ಎಂದು ಹೇಳಿದನು.
11 And he dwelt `there' a year and six months, teaching the word of God among them.ಅವನು ಒಂದು ವರುಷ ಆರು ತಿಂಗಳು ಅಲ್ಲೇ ಇದ್ದುಕೊಂಡು ಅವರಲ್ಲಿ ದೇವರ ವಾಕ್ಯವನ್ನು ಉಪದೇಶ ಮಾಡುತ್ತಿದ್ದನು.
12 But when Gallio was proconsul of Achaia, the Jews with one accord rose up against Paul and brought him before the judgment-seat,ಗಲ್ಲಿಯೋನನು ಅಖಾಯದ ಪ್ರತಿನಿಧಿ ಯಾಗಿದ್ದಾಗ ಯೆಹೂದ್ಯರು ಒಮ್ಮನಸ್ಸಿನಿಂದ ಪೌಲನಿಗೆ ವಿರೋಧವಾಗಿ ಧಂಗೆ ಎಬ್ಬಿಸಿ ನ್ಯಾಯಸ್ಥಾನದ ಮುಂದೆ ಹಿಡುಕೊಂಡು ಬಂದು--
13 saying, This man persuadeth men to worship God contrary to the law.ಇವನು ನ್ಯಾಯ ಪ್ರಮಾಣಕ್ಕೆ ಪ್ರತಿಕೂಲವಾಗಿ ದೇವರನ್ನು ಆರಾಧಿಸ ಬೇಕೆಂದು ಮನುಷ್ಯರನ್ನು ಪ್ರೇರೇಪಿಸುತ್ತಾನೆ ಎಂದು ಹೇಳಿದರು.
14 But when Paul was about to open his mouth, Gallio said unto the Jews, If indeed it were a matter of wrong or of wicked villany, O ye Jews, reason would that I should bear with you:ಪೌಲನು ಪ್ರತಿವಾದ ಮಾಡಬೇಕೆಂದಿ ದ್ದಾಗ ಗಲ್ಲಿಯೋನನು ಯೆಹೂದ್ಯರಿಗೆ--ಯೆಹೂ ದ್ಯರೇ, ಅನ್ಯಾಯವು ದುಷ್ಕಾರ್ಯವು ಇಂಥದ್ದೇನಾ ದರೂ ಇದ್ದ ಪಕ್ಷಕ್ಕೆ ನಾನು ನಿಮ್ಮ ಮಾತನ್ನು ಸಹನ ದಿಂದ ಕೇಳುವದು ನ್ಯಾಯವೇ.
15 but if they are questions about words and names and your own law, look to it yourselves; I am not minded to be a judge of these matters.ಆದರೆ ನೀವು ಮಾಡುವ ವಿವಾದದ ಮಾತುಗಳೂ ಹೆಸರುಗಳೂ ನಿಮ್ಮ ನ್ಯಾಯಪ್ರಮಾಣದ ವಿಷಯವಾಗಿರುವದಾದರೆ ಅವುಗಳನ್ನು ನೀವೇ ನೋಡಿಕೊಳ್ಳಿರಿ; ಇಂಥ ವಿಷಯ ಗಳನ್ನು ವಿಚಾರಣೆ ಮಾಡುವದಕ್ಕೆ ನನಗಂತೂ ಮನಸ್ಸಿಲ್ಲ ಎಂದು ಹೇಳಿ
16 And he drove them from the judgment-seat.ಅವರನ್ನು ನ್ಯಾಯ ಸ್ಥಾನದಿಂದ ಹೊರಡಿಸಿಬಿಟ್ಟನು.
17 And they all laid hold on Sosthenes, the ruler of the synagogue, and beat him before the judgment-seat. And Gallio cared for none of these things.ಆಗ ಗ್ರೀಕರೆಲ್ಲರೂ ಸಭಾಮಂದಿರದ ಮುಖ್ಯ ಅಧಿಕಾರಿಯಾಗಿದ್ದ ಸೋಸ್ಥೆನ ನನ್ನು ಹಿಡಿದುಕೊಂಡು ನ್ಯಾಯಸ್ಥಾನದ ಮುಂದೆ ಹೊಡೆದರು. ಗಲ್ಲಿಯೋನನಾದರೋ ಅವುಗಳಲ್ಲಿ ಒಂದಕ್ಕಾದರೂ ಲಕ್ಷ್ಯಕೊಡಲಿಲ್ಲ.
18 And Paul, having tarried after this yet many days, took his leave of the brethren, and sailed thence for Syria, and with him Priscilla and Aquila: having shorn his head in Cenchreae; for he had a vow.ಪೌಲನಿಗೆ ಹರಕೆಯಿದ್ದ ಕಾರಣ ಕೆಂಖ್ರೆಯದಲ್ಲಿ ತಲೆಬೋಳಿಸಿಕೊಂಡು ಅವನು ಅಲ್ಲಿ ಬಹಳ ಕಾಲ ಇದ್ದ ಮೇಲೆ ಸಹೋದರರಿಂದ ಅಪ್ಪಣೆ ತೆಗೆದುಕೊಂಡು ಪ್ರಿಸ್ಕಿಲ್ಲ ಅಕ್ವಿಲ್ಲರ ಕೂಡ ಅಲ್ಲಿಂದ ಸಿರಿಯಾಕ್ಕೆ ಸಮುದ್ರ ಪ್ರಯಾಣಮಾಡಿ
19 And they came to Ephesus, and he left them there: but he himself entered into the synagogue, and reasoned with the Jews.ಎಫೆಸಕ್ಕೆ ಬಂದು ಅವರನ್ನು ಅಲ್ಲಿ ಬಿಟ್ಟನು; ತಾನಾದರೋ ಸಭಾಮಂದಿರದೊಳಕ್ಕೆ ಹೋಗಿ ಯೆಹೂದ್ಯರ ಸಂಗಡ ತರ್ಕಿಸಿದನು.
20 And when they asked him to abide a longer time, he consented not;ಅವರು ಅವ ನನ್ನು ಇನ್ನೂ ಕೆಲವು ಕಾಲ ಇರಬೇಕೆಂದು ಕೇಳಿ ಕೊಂಡಾಗ ಅವನು ಒಪ್ಪದೆ--
21 but taking his leave of them, and saying, I will return again unto you if God will, he set sail from Ephesus.ಯೆರೂಸಲೇಮಿನಲ್ಲಿ ಬರುವ ಈ ಹಬ್ಬಕ್ಕೆ ನಾನು ಹೇಗಾದರೂ ಅಲ್ಲಿ ಇರತಕ್ಕದ್ದು; ದೇವರ ಚಿತ್ತವಾದರೆ ನಾನು ಹಿಂದಿರುಗಿ ನಿಮ್ಮ ಬಳಿಗೆ ಬರುತ್ತೇನೆ ಎಂದು ಹೇಳಿ ಅವರ ಅಪ್ಪಣೆ ತಕ್ಕೊಂಡು ಎಫೆಸದಿಂದ ಸಮುದ್ರ ಪ್ರಯಾಣಮಾಡಿ ದನು.
22 And when he had landed at Caesarea, he went up and saluted the church, and went down to Antioch.ಅವನು ಕೈಸರೈಯಕ್ಕೆ ಬಂದು ಸಭೆಯನ್ನು ವಂದಿಸಿ ಅಂತಿಯೋಕ್ಯಕ್ಕೆ ಹೋದನು.
23 And having spent some time `there', he departed, and went through the region of Galatia, and Phrygia, in order, establishing all the disciples.ತರುವಾಯ ಅವನು ಅಂತಿಯೋಕ್ಯದಲ್ಲಿ ಕೆಲವು ಕಾಲ ಇದ್ದು ತಿರಿಗಿ ಹೊರಟು ಕ್ರಮವಾಗಿ ಗಲಾತ್ಯ ಸೀಮೆಯಲ್ಲಿಯೂ ಫ್ರುಗ್ಯದಲ್ಲಿಯೂ ಸಂಚಾರ ಮಾಡುತ್ತಾ ಶಿಷ್ಯರೆಲ್ಲರನ್ನು ಬಲಪಡಿಸಿದನು.
24 Now a certain Jew named Apollos, an Alexandrian by race, an eloquent man, came to Ephesus; and he was mighty in the scriptures.ಅಷ್ಟರೊಳಗೆ ಅಲೆಕ್ಸಾಂದ್ರಿಯದಲ್ಲಿ ಹುಟ್ಟಿದ ಅಪೊಲ್ಲೋಸನೆಂಬ ಒಬ್ಬ ಯೆಹೂದ್ಯನು ಎಫೆಸಕ್ಕೆ ಬಂದನು. ಅವನು ವಾಕ್ಚಾತುರ್ಯವುಳ್ಳವನು, ಬರಹ ಗಳಲ್ಲಿ ಸಮರ್ಥನು ಆಗಿದ್ದನು.
25 This man had been instructed in the way of the Lord; and being fervent in spirit, he spake and taught accurately the things concerning Jesus, knowing only the baptism of John:ಇವನು ಕರ್ತನ ಮಾರ್ಗದ ವಿಷಯದಲ್ಲಿ ಉಪದೇಶ ಹೊಂದಿದ ವನಾಗಿದ್ದನು; ಆತ್ಮದಲ್ಲಿ ಆಸಕ್ತನಾಗಿದ್ದ ಇವನು ಯೋಹಾನನು ಮಾಡಿಸಿದ ಬಾಪ್ತಿಸ್ಮವನ್ನು ಮಾತ್ರ ಬಲ್ಲವನಾಗಿದ್ದನು. ಆದಾಗ್ಯೂ ಕರ್ತನ ವಿಷಯಗಳನ್ನು ಸೂಕ್ಷ್ಮವಾಗಿ ಹೇಳಿ ಉಪದೇಶಿಸುತ್ತಿದ್ದನು.
26 and he began to speak boldly in the synagogue. But when Priscilla and Aquila heard him, they took him unto them, and expounded unto him the way of God more accurately.ಅವನು ಸಭಾಮಂದಿರದಲ್ಲಿ ಧೈರ್ಯದಿಂದ ಮಾತನಾಡುವದಕ್ಕೆ ಪ್ರಾರಂಭಿಸಿದನು. ಅವನ ಮಾತುಗಳನ್ನು ಪ್ರಿಸ್ಕಿಲ್ಲಳೂ ಅಕ್ವಿಲನೂ ಕೇಳಿ ಅವನನ್ನು ತಮ್ಮಲ್ಲಿಗೆ ಕರೆದುಕೊಂಡು ಹೋಗಿ ದೇವರ ಮಾರ್ಗವನ್ನು ಅವನಿಗೆ ಇನ್ನೂ ಪೂರ್ಣವಾಗಿ ವಿವರಿಸಿದರು.
27 And when he was minded to pass over into Achaia, the brethren encouraged him, and wrote to the disciples to receive him: and when he was come, he helped them much that had believed through grace;ಅವನು ಅಖಾಯಕ್ಕೆ ಹೋಗಬೇಕೆಂದು ಮನಸ್ಸು ಮಾಡಿದಾಗ ಅಲ್ಲಿದ್ದ ಶಿಷ್ಯರು ಅವನನ್ನು ಸೇರಿಸಿಕೊಳ್ಳಬೇಕೆಂದು ಪ್ರೋತ್ಸಾಹ ಮಾಡಿ ಸಹೋದರರು ಅವರಿಗೆ ಬರೆದರು; ಅವನು ಅಲ್ಲಿಗೆ ಬಂದು ಕೃಪೆಯಿಂದ ನಂಬಿದ್ದವರಿಗೆ ಹೆಚ್ಚಾಗಿ ಸಹಾಯ ಮಾಡಿದನು;
28 for he powerfully confuted the Jews, `and that' publicly, showing by the scriptures that Jesus was the Christ.ಹೇಗಂದರೆ ಯೇಸುವೇ ಕ್ರಿಸ್ತನೆಂದು ಅವನು ಬರಹಗಳಿಂದ ತೋರಿಸಿ ಬಹಿ ರಂಗದಲ್ಲಿ ಯೆಹೂದ್ಯರು ಬಲವಾಗಿ ಒಪ್ಪಿಕೊಳ್ಳುವಂತೆ ಮಾಡಿದನು.
Kannada Bible