Acts 15 - YLT (Kannada)
1 And certain having come down from Judea, were teaching the brethren -- `If ye be not circumcised after the custom of Moses, ye are not able to be saved;'ಬಳಿಕ ಕೆಲವರು ಯೂದಾಯದಿಂದ ಬಂದು--ಮೋಶೆಯ ನೇಮದ ಪ್ರಕಾರ ನೀವು ಸುನ್ನತಿ ಮಾಡಿಸಿಕೊಳ್ಳದಿದ್ದರೆ ನಿಮಗೆ ರಕ್ಷಣೆಯಾಗಲಾರದು ಎಂಬದಾಗಿ ಸಹೋದರರಿಗೆ ಉಪದೇಶ ಮಾಡುತ್ತಿದ್ದರು.
2 there having been, therefore, not a little dissension and disputation to Paul and Barnabas with them, they arranged for Paul and Barnabas, and certain others of them, to go up unto the apostles and elders to Jerusalem about this question,ಆದದರಿಂದ ಅವರ ಮತ್ತು ಪೌಲ ಬಾರ್ನಬರ ಮಧ್ಯೆ ದೊಡ್ಡ ಭಿನ್ನಾಭಿ ಪ್ರಾಯವೂ ವಾಗ್ವಾದವೂ ಉಂಟಾದಾಗ ಪೌಲ ಬಾರ್ನಬರೂ ಅವರಲ್ಲಿ ಬೇರೆ ಕೆಲವರೂ ಈ ಪ್ರಶ್ನೆಗಾಗಿ ಯೆರೂಸಲೇಮಿನಲ್ಲಿದ್ದ ಅಪೊಸ್ತಲರ ಮತ್ತು ಹಿರಿಯರ ಬಳಿಗೆ ಹೋಗಬೇಕೆಂದು ಅವರು ನಿರ್ಧರಿಸಿದರು.
3 they indeed, then, having been sent forward by the assembly, were passing through Phenice and Samaria, declaring the conversion of the nations, and they were causing great joy to all the brethren.ಸಭೆಯವರು ಅವರನ್ನು ಸಾಗಕಳು ಹಿಸಿದ ಮೇಲೆ ಅವರು ಫೊಯಿನಿಕೆ ಸಮಾರ್ಯಗಳ ಮಾರ್ಗವಾಗಿ ಹಾದು ಹೋಗುತ್ತಿರುವಾಗ ಅನ್ಯಜನರು (ಕರ್ತನ ಕಡೆಗೆ) ತಿರುಗಿಕೊಂಡ ವಿಷಯವನ್ನು ವಿವರ ವಾಗಿ ಹೇಳಿದ್ದರಿಂದ ಸಹೋದರರೆಲ್ಲರೂ ಬಹಳವಾಗಿ ಸಂತೋಷಪಡುವದಕ್ಕೆ ಕಾರಣವಾಯಿತು.
4 And having come to Jerusalem, they were received by the assembly, and the apostles, and the elders, they declared also as many things as God did with them;ಅವರು ಯೆರೂಸಲೇಮಿಗೆ ಬಂದಮೇಲೆ ಸಭೆಯವರೂ ಅಪೊಸ್ತ ಲರೂ ಹಿರಿಯರೂ ಅವರನ್ನು ಸೇರಿಸಿಕೊಂಡಾಗ ದೇವರು ತಮ್ಮೊಂದಿಗಿದ್ದು ಮಾಡಿದ ಕಾರ್ಯಗಳನ್ನೆಲ್ಲಾ ಅವರಿಗೆ ವಿವರಿಸಿದರು.
5 and there rose up certain of those of the sect of the Pharisees who believed, saying -- `It behoveth to circumcise them, to command them also to keep the law of Moses.'ಆದರೆ ಫರಿಸಾಯರ ಪಂಗಡದವರಲ್ಲಿ ನಂಬಿದ್ದ ಕೆಲವರು ಎದ್ದು--ಅವರಿಗೆ ಸುನ್ನತಿ ಮಾಡಿಸುವದು ಅವಶ್ಯವೆಂತಲೂ ಮೋಶೆಯ ನ್ಯಾಯಪ್ರಮಾಣವನ್ನು ಕೈಕೊಂಡು ನಡೆಯಬೇಕೆಂತಲೂ ಅವರಿಗೆ ಅಪ್ಪಣೆಕೊಡಬೇಕು ಎಂದು ಹೇಳಿ ದರು.
6 And there were gathered together the apostles and the elders, to see about this matter,ಅಪೊಸ್ತಲರೂ ಹಿರಿಯರೂ ಈ ವಿಷಯವಾಗಿ ಆಲೋಚಿಸುವದಕ್ಕೆ ಕೂಡಿ ಬಂದಿರುವಾಗ
7 and there having been much disputing, Peter having risen up said unto them, `Men, brethren, ye know that from former days, God among us did make choice, through my mouth, for the nations to hear the word of the good news, and to believe;ಬಹು ವಿವಾದವು ನಡೆದ ಮೇಲೆ ಪೇತ್ರನು ಎದ್ದು ಅವ ರಿಗೆ--ಜನರೇ, ಸಹೋದರರೇ, ಅನ್ಯಜನರು ನನ್ನ ಬಾಯಿಂದ ಸುವಾರ್ತೆಯ ವಾಕ್ಯವನ್ನು ಕೇಳಿ ನಂಬ ಬೇಕೆಂದು ದೇವರು ಬಹಳ ದಿವಸಗಳ ಕೆಳಗೆ ನಮ್ಮೊಳ ಗಿಂದ ಆರಿಸಿಕೊಂಡದ್ದು ನಿಮಗೇ ತಿಳಿದದೆ.
8 and the heart-knowing God did bare them testimony, having given to them the Holy Spirit, even as also to us,ಹೃದಯ ಗಳನ್ನು ಬಲ್ಲವನಾಗಿರುವ ದೇವರು ಹೇಗೆ ಪವಿತ್ರಾತ್ಮ ನನ್ನು ನಮಗೆ ದಯಪಾಲಿಸಿದನೋ ಹಾಗೆಯೇ ಅವರಿಗೂ ದಯಪಾಲಿಸಿ ಅವರ ವಿಷಯದಲ್ಲಿ ಸಾಕ್ಷಿಕೊಟ್ಟನು.
9 and did put no difference also between us and them, by the faith having purified their hearts;ಇದಲ್ಲದೆ ಆತನು ನಮಗೂ ಅವರಿಗೂ ಏನೂ ಭೇದ ಮಾಡದೆ ಅವರ ಹೃದಯ ಗಳನ್ನೂ ನಂಬಿಕೆಯ ಮೂಲಕವಾಗಿ ಶುದ್ಧೀಕರಿಸಿದನು.
10 now, therefore, why do ye tempt God, to put a yoke upon the neck of the disciples, which neither our fathers nor we were able to bear?ಹೀಗಿರುವದರಿಂದ ನಮ್ಮ ಪಿತೃಗಳಾಗಲಿ ನಾವಾಗಲಿ ಹೋರಲಾರದ ನೊಗವನ್ನು ನೀವು ಶಿಷ್ಯರ ಕುತ್ತಿಗೆಯ ಮೇಲೆ ಹಾಕಿ ದೇವರನ್ನು ಪರೀಕ್ಷಿಸುವದು ಯಾಕೆ?
11 but, through the grace of the Lord Jesus Christ, we believe to be saved, even as also they.'ಕರ್ತನಾದ ಯೇಸು ಕ್ರಿಸ್ತನ ಕೃಪೆಯಿಂದಲೇ ನಾವು ರಕ್ಷಣೆ ಹೊಂದುವೆವೆಂಬದಾಗಿ ನಂಬುತ್ತೇವಲ್ಲಾ; ಹಾಗೆಯೇ ಅವರೂ ಹೊಂದುವರು ಎಂದು ಹೇಳಿ ದನು.
12 And all the multitude did keep silence, and were hearkening to Barnabas and Paul, declaring as many signs and wonders as God did among the nations through them;ಸಮೂಹದವರೆಲ್ಲರೂ ಮೌನವಾಗಿದ್ದು ಬಾರ್ನ ಬನೂ ಪೌಲನೂ ತಮ್ಮ ಮೂಲಕವಾಗಿ ದೇವರು ಅನ್ಯಜನರಲ್ಲಿ ಮಾಡಿದ್ದ ಎಲ್ಲಾ ಸೂಚಕಕಾರ್ಯಗಳನ್ನೂ ಅದ್ಭುತಕಾರ್ಯಗಳನ್ನೂ ವಿವರಿಸುವದನ್ನು ಕಿವಿಗೊಟ್ಟು ಕೇಳಿದರು.
13 and after they are silent, James answered, saying, `Men, brethren, hearken to me;ಅವರು ಮೌನವಾಗಿದ್ದಾಗ ಯಾಕೋ ಬನು ಹೇಳಿದ್ದೇನಂದರೆ--ಜನರೇ, ಸಹೋದರರೇ, ನಾನು ಹೇಳುವದನ್ನು ಕೇಳಿರಿ;
14 Simeon did declare how at first God did look after to take out of the nations a people for His name,ದೇವರು ಮೊದಲೇ ಅನ್ಯಜನರನ್ನು ದರ್ಶಿಸಿ ತನ್ನ ಹೆಸರಿಗಾಗಿ ಅವರೊ ಳಗಿಂದ ಒಂದು ಪ್ರಜೆಯನ್ನು ಆರಿಸಿಕೊಂಡ ವಿಧವನ್ನು ಸಿಮೆಯೋನನು ವಿವರಿಸಿದನಷ್ಟೆ.
15 and to this agree the words of the prophets, as it hath been written:ಇದಕ್ಕೆ ಪ್ರವಾದಿ ಗಳ ಮಾತುಗಳು ಒಪ್ಪುತ್ತವೆ, ಹೇಗಂದರೆ--
16 After these things I will turn back, and I will build again the tabernacle of David, that is fallen down, and its ruins I will build again, and will set it upright --ಇದಾದ ಮೇಲೆ ನಾನು ಹಿಂತಿರುಗಿ ಬಂದು ಬಿದ್ದು ಹೋಗಿರುವ ದಾವೀದನ ಗುಡಾರವನ್ನು ತಿರಿಗಿ ಕಟ್ಟುವೆನು. ಅದರಲ್ಲಿ ಹಾಳಾದದ್ದನ್ನು ನಾನು ತಿರಿಗಿ ಸರಿಮಾಡಿಸಿ ಅದನ್ನು ನೆಟ್ಟಗೆ ನಿಲ್ಲಿಸುವೆನು.
17 that the residue of men may seek after the Lord, and all the nations, upon whom My name hath been called, saith the Lord, who is doing all these things.ಅವೆಲ್ಲವುಗಳನ್ನು ಮಾಡುವ ಕರ್ತನು--ನನ್ನ ಹೆಸರಿನಿಂದ ಕರೆಯಲ್ಪಟ್ಟ ಮನುಷ್ಯರಲ್ಲಿ ಉಳಿದವರೆಲ್ಲರೂ ಅನ್ಯಜನರೆಲ್ಲರೂ ಕರ್ತನನ್ನು ಹುಡುಕುವವರಾಗಿರಬೇಕು ಎಂದು ಹೇಳುತ್ತಾನೆ.
18 `Known from the ages to God are all His works;ದೇವರು ತನ್ನ ಕಾರ್ಯಗಳನ್ನೆಲ್ಲಾ ಲೋಕಾದಿಯಿಂದ ತಿಳಿದಿದ್ದಾನೆ.
19 wherefore I judge: not to trouble those who from the nations do turn back to God,ಹೀಗಿರಲಾಗಿ ಅನ್ಯಜನರಿಂದ ದೇವರ ಕಡೆಗೆ ತಿರುಗಿಕೊಂಡವರನ್ನು ನಾವು ತೊಂದರೆಪಡಿ ಸಬಾರದೆಂಬದು ನನ್ನ ಅಭಿಪ್ರಾಯವಾಗಿದೆ.
20 but to write to them to abstain from the pollutions of the idols, and the whoredom, and the strangled thing; and the blood;ಆದರೆ ಅವರು ವಿಗ್ರಹಗಳ ಮಲಿನತೆಯನ್ನೂ ಜಾರತ್ವವನ್ನೂ ಕುತ್ತಿಗೆ ಹಿಸುಕಿ ಕೊಂದವುಗಳನ್ನೂ ರಕ್ತವನ್ನೂ ವಿಸ ರ್ಜಿಸಬೇಕೆಂದು ನಾವು ಅವರಿಗೆ ಬರೆಯುವೆವು.
21 for Moses from former generations in every city hath those preaching him -- in the synagogues every sabbath being read.'ಯಾಕಂದರೆ ಪುರಾತನ ಕಾಲದಿಂದ ಎಲ್ಲಾ ಪಟ್ಟಣಗಳಲ್ಲಿ ಮೋಶೆಯ ಗ್ರಂಥವನ್ನು ಬೋಧಿಸುವ ವರು ಇದ್ದಾರೆ; ಅದು ಪ್ರತಿ ಸಬ್ಬತ್ ದಿನವೂ ಸಭಾಮಂದಿರಗಳಲ್ಲಿ ಪಾರಾಯಣವಾಗುತ್ತದಲ್ಲಾ ಎಂದು ಹೇಳಿದನು.
22 Then it seemed good to the apostles and the elders, with the whole assembly, chosen men out of themselves to send to Antioch with Paul and Barnabas -- Judas surnamed Barsabas, and Silas, leading men among the brethren --ಆಗ ಅಪೋಸ್ತಲರೂ ಹಿರಿಯರೂ ಸರ್ವಸಭೆಯ ಸಮ್ಮತಿಯಿಂದ ತಮ್ಮಲ್ಲಿ ಕೆಲವರನ್ನು ಆರಿಸಿಕೊಂಡು ಪೌಲ ಬಾರ್ನಬರ ಜೊತೆಯಲ್ಲಿ ಅಂತಿಯೋಕ್ಯಕ್ಕೆ ಕಳುಹಿಸುವದು ಯುಕ್ತವೆಂದು ತೀರ್ಮಾನಿಸಿದರು. ಆದಕಾರಣ ಸಹೋದರರಲ್ಲಿ ಮುಖ್ಯಸ್ಥರಾಗಿದ್ದ ಬಾರ್ಸ ಬ್ಬನೆನಿಸಿಕೊಳ್ಳುವ ಯೂದನನ್ನೂ ಸೀಲನನ್ನೂ ಆರಿಸಿ ಕೊಂ
23 having written through their hand thus: `The apostles, and the elders, and the brethren, to those in Antioch, and Syria, and Cilicia, brethren, who `are' of the nations, greeting;ಅವರು ಬರೆದುಕೊಟ್ಟದ್ದು ಈ ರೀತಿ ಯಲ್ಲಿತ್ತು; ಅಪೊಸ್ತಲರೂ ಹಿರಿಯರೂ ಸಹೋದರರೂ ಅಂತಿಯೋಕ್ಯ ಸಿರಿಯ ಕಿಲಿಕ್ಯ ಸೀಮೆಗಳಲ್ಲಿ ವಾಸಿಸುವ ಅನ್ಯಜನರೊಳಗಿಂದ ಸಹೋದರರಾದವರಿಗೆ ಮಾಡುವ ವಂದನೆ;
24 seeing we have heard that certain having gone forth from us did trouble you with words, subverting your souls, saying to be circumcised and to keep the law, to whom we did give no charge,ನಮ್ಮಿಂದ ಅಪ್ಪಣೆಹೊಂದದೆ ನಮ್ಮೊಳಗಿಂದ ಹೊರಟುಹೋದ ಕೆಲವರು--ನೀವು ಸುನ್ನತಿ ಮಾಡಿಸಿಕೊಂಡು ನ್ಯಾಯಪ್ರಮಾಣವನ್ನು ಅನುಸರಿಸಬೇಕೆಂದು ತಮ್ಮ ಮಾತುಗಳಿಂದ ನಿಮ್ಮನ್ನು ತೊಂದರೆಪಡಿಸಿ ನಿಮ್ಮ ಮನಸ್ಸುಗಳನ್ನು ಕಳವಳ ಗೊಳಿಸಿದ್ದಾರೆಂದು ಕೇಳಿದ್ದರಿಂದ
25 it seemed good to us, having come together with one accord, chosen men to send unto you, with our beloved Barnabas and Paul --ನಾವು ಒಮ್ಮನ ಸ್ಸಾಗಿ ಸೇರಿಬಂದು ನಮ್ಮ ಕರ್ತನಾದ ಯೇಸು ಕ್ರಿಸ್ತನ ಹೆಸರಿನ ನಿಮಿತ್ತ ಜೀವದ ಹಂಗನ್ನು ತೊರೆದವರಾಗಿರುವ
26 men who have given up their lives for the name of our Lord Jesus Christ --ನಮ್ಮ ಪ್ರಿಯ ಬಾರ್ನಬ ಸೌಲರ ಜೊತೆಯಲ್ಲಿ ನಾವು ಆರಿಸಿಕೊಂಡವರನ್ನು ನಿಮ್ಮ ಬಳಿಗೆ ಕಳುಹಿ ಸುವದು ಯುಕ್ತವೆಂದು ನಮಗೆ ತೋಚಿತು.
27 we have sent, therefore, Judas and Silas, and they by word are telling the same things.ಆದಕಾರಣ ಈ ಮಾತುಗಳನ್ನು ಬಾಯಿಂದ ಸಹ ತಿಳಿಸುವಂತೆ ನಾವು ಯೂದನನ್ನೂ ಸೀಲನನ್ನೂ ಕಳುಹಿಸಿಕೊಟ್ಟಿದ್ದೇವೆ.
28 `For it seemed good to the Holy Spirit, and to us, no more burden to lay upon you, except these necessary things:ಯಾಕಂದರೆ ಅವಶ್ಯವಾದ ಈ ವಿಷಯಗಳಿಗಿಂತ ಹೆಚ್ಚಿನ ಭಾರವನ್ನು ನಿಮ್ಮ ಮೇಲೆ ಹಾಕಬಾರದೆಂದು ಪವಿತ್ರಾತ್ಮನಿಗೂ ನಮಗೂ ಯುಕ್ತ ವೆಂದು ತೋಚಿತು.
29 to abstain from things offered to idols, and blood, and a strangled thing, and whoredom; from which keeping yourselves, ye shall do well; be strong!'ಏನಂದರೆ ವಿಗ್ರಹಗಳಿಗೆ ಅರ್ಪಿಸಿದ ಭೋಜನ ಪದಾರ್ಥಗಳನ್ನೂ ರಕ್ತವನ್ನೂ ಕುತ್ತಿಗೆ ಹಿಸುಕಿ ಕೊಂದವುಗಳನ್ನೂ ಜಾರತ್ವವನ್ನೂ ನೀವು ವಿಸರ್ಜಿಸಬೇಕೆಂಬದೇ. ಇವುಗಳಿಂದ ನಿಮ್ಮನ್ನು ನೀವು ಕಾಪಾಡಿಕೊಂಡರೆ ನಿಮಗೆ ಒಳ್ಳೇದಾಗುವದು. ನಿಮಗೆ ಶುಭವಾಗಲಿ.
30 They then, indeed, having been let go, went to Antioch, and having brought the multitude together, did deliver the epistle,ಹೀಗೆ ಅವರು ಕಳುಹಿಸಲ್ಪಟ್ಟು ಅಂತಿಯೋಕ್ಯಕ್ಕೆ ಬಂದರು; ಅವರು ಸಮೂಹವನ್ನು ಕೂಡಿಸಿ ಆ ಪತ್ರಿಕೆಯನ್ನು ಒಪ್ಪಿಸಿದರು.
31 and they having read, did rejoice for the consolation;ಅವರು ಅದನ್ನು ಓದಿ ಆದರಣೆ ಹೊಂದಿ ಸಂತೋಷಪಟ್ಟರು.
32 Judas also and Silas, being themselves also prophets, through much discourse did exhort the brethren, and confirm,ಯೂದನೂ ಸೀಲನೂ ತಾವೇ ಪ್ರವಾದಿಗಳಾಗಿದ್ದದರಿಂದ ಸಹೋ ದರರನ್ನು ಅನೇಕ ಮಾತುಗಳಿಂದ ಪ್ರಭೋದಿಸಿ ದೃಢ ಪಡಿಸಿದರು.
33 and having passed some time, they were let go with peace from the brethren unto the apostles;ಅಲ್ಲಿ ಕೆಲವು ಕಾಲ ಕಳೆದ ನಂತರ ಸಮಾಧಾನದಿಂದ ಅಪೊಸ್ತಲರ ಬಳಿಗೆ ತಿರಿಗಿ ಹೋಗುವದಕ್ಕೆ ಸಹೋದರರಿಂದ ಅಪ್ಪಣೆ ತೆಗೆದು ಕೊಂಡರು.
34 and it seemed good to Silas to remain there still.ಹೀಗಿದ್ದರೂ ಸೀಲನಿಗೆ ಅಲ್ಲಿಯೇ ಇನ್ನೂ ಇರುವದು ಉಚಿತವೆಂದು ತೋಚಿತು.
35 And Paul and Barnabas continued in Antioch, teaching and proclaiming good news -- with many others also -- the word of the Lord;ಆದರೆ ಪೌಲನೂ ಬಾರ್ನಬನೂ ಅಂತಿಯೋಕ್ಯ ದಲ್ಲಿಯೇ ನಿಂತು ಬೇರೆ ಅನೇಕರೊಂದಿಗೆ ಕರ್ತನ ವಾಕ್ಯವನ್ನು ಉಪದೇಶ ಮಾಡುತ್ತಾ ಸಾರುತ್ತಾ ಇದ್ದರು.
36 and after certain days, Paul said unto Barnabas, `Having turned back again, we may look after our brethren, in every city in which we have preached the word of the Lord -- how they are.'ಕೆಲವು ದಿವಸಗಳಾದ ಮೇಲೆ ಪೌಲನು ಬಾರ್ನಬನಿಗೆ--ನಾವು ಕರ್ತನ ವಾಕ್ಯವನ್ನು ಸಾರಿದ ಎಲ್ಲಾ ಪಟ್ಟಣಗಳಿಗೆ ತಿರಿಗಿ ಹೋಗಿ ಅಲ್ಲಿರುವ ಸಹೋದರರು ಹೇಗಿದ್ದಾರೆಂದು ನೋಡೋಣ ಬಾ ಎಂದು ಹೇಳಿದನು.
37 And Barnabas counseled to take with `them' John called Mark,ಬಾರ್ನಬನು ಮಾರ್ಕನೆನಿಸಿ ಕೊಳ್ಳುವ ಯೋಹಾನನನ್ನು ತಮ್ಮ ಸಂಗಡ ಕರೆದು ಕೊಂಡು ಹೋಗಬೇಕೆಂದು ನಿರ್ಧರಿಸಿದನು.
38 and Paul was not thinking it good to take him with them who withdrew from them from Pamphylia, and did not go with them to the work;ಆದರೆ ಪೌಲನು ತಮ್ಮೊಂದಿಗೆ ಕೆಲಸಕ್ಕೆ ಬಾರದೆ ಪಂಫುಲ್ಯದಿಂದ ತಮ್ಮನ್ನು ಬಿಟ್ಟು ಹೋದವನನ್ನು ತಮ್ಮೊಂದಿಗೆ ಕರೆದುಕೊಂಡು ಹೋಗುವದು ತಕ್ಕದ್ದಲ್ಲ ವೆಂದು ನೆನಸಿದನು.
39 there came, therefore, a sharp contention, so that they were parted from one another, and Barnabas having taken Mark, did sail to Cyprus,ಈ ವಿಷಯದಲ್ಲಿ ತೀಕ್ಷ್ಣ ವಾಗ್ವಾದವುಂಟಾಗಿ ಅವರು ಒಬ್ಬರನ್ನೊಬ್ಬರು ಅಗಲಿ ದರು. ಹೀಗೆ ಬಾರ್ನಬನು ಮಾರ್ಕನನ್ನು ಕರಕೊಂಡು ಸಮುದ್ರ ಮಾರ್ಗವಾಗಿ ಕುಪ್ರಕ್ಕೆ ಹೋದನು.
40 and Paul having chosen Silas, went forth, having been given up to the grace of God by the brethren;ಆದರೆ ಪೌಲನು ಸಹೋದರರಿಂದ ದೇವರ ಕೃಪೆಗೆ ಒಪ್ಪಿಸಲ್ಪಟ್ಟು ಸೀಲನನ್ನು ಆರಿಸಿಕೊಂಡು ಹೊರಟನು.
41 and he went through Syria and Cilicia, confirming the assemblies.ಅವನು ಸಭೆಗಳನ್ನು ದೃಢಪಡಿಸುತ್ತಾ ಸಿರಿಯ ಮತ್ತು ಕಿಲಿಕ್ಯಗಳ ಮಾರ್ಗವಾಗಿ ಹೋದನು.
Kannada Bible