Bible

2 Samuel 22 - WEB (Kannada)

1 David spoke to Yahweh the words of this song in the day that Yahweh delivered him out of the hand of all his enemies, and out of the hand of Saul:ಕರ್ತನು ದಾವೀದನನ್ನು ಅವನ ಎಲ್ಲಾ ಶತ್ರುಗಳ ಕೈಯೊಳಗಿಂದಲೂ ಸೌಲನ ಕೈಯೊಳಗಿಂದಲೂ ಬಿಡಿಸಿದ ದಿವಸದಲ್ಲಿ ಅವನು ಕರ್ತನನ್ನು ಕುರಿತು ಈ ಹಾಡಿನ ಮಾತುಗಳನ್ನು ಹೇಳಿದನು. ಏನಂದರೆ--

2 and he said, Yahweh is my rock, and my fortress, and my deliverer, even mine;ಕರ್ತನು ನನ್ನ ಬಂಡೆಯೂ ನನ್ನ ಕೋಟೆಯೂ ನನ್ನನ್ನು ತಪ್ಪಿಸುವವನೂ ಆಗಿದ್ದಾನೆ.

3 God, my rock, in him will I take refuge; My shield, and the horn of my salvation, my high tower, and my refuge; My savior, you save me from violence.ನನ್ನ ಬಂಡೆಯಾದ ದೇವರಲ್ಲಿ ನಾನು ಭರವಸ ವಿಡುವೆನು; ಆತನು ನನ್ನ ಗುರಾಣಿಯೂ ನನ್ನ ರಕ್ಷಣೆಯ ಕೊಂಬೂ ಉನ್ನತ ಗೋಪುರವೂ ನನ್ನ ಆಶ್ರಯವೂ ನನ್ನ ರಕ್ಷಕನೂ ಆಗಿದ್ದಾನೆ. ನೀನು ಬಲಾತ್ಕಾರಿಯಿಂದ ನನ್ನನ್ನು ರಕ್ಷಿಸುತ್ತೀ.

4 I will call on Yahweh, who is worthy to be praised: So shall I be saved from my enemies.ಸ್ತುತಿಗೆ ಯೋಗ್ಯನಾದ ಕರ್ತ ನನ್ನು ನಾನು ಕೂಗುತ್ತೇನೆ; ಹೀಗೆ ನಾನು ನನ್ನ ಶತ್ರು ಗಳೊಳಗಿಂದ ರಕ್ಷಿಸಲ್ಪಡುತ್ತೇನೆ.

5 For the waves of death compassed me; The floods of ungodliness made me afraid:ಮರಣದಲೆಗಳು ನನ್ನನ್ನು ಆವರಿಸಿಕೊಂಡವು; ಭಕ್ತಿಹೀನರ ಪ್ರವಾಹಗಳು ನನ್ನನ್ನು ಹೆದರಿಸಿದವು;

6 The cords of Sheol were round about me; The snares of death came on me.ಪಾತಾಳದ ದುಃಖಗಳು ನನ್ನನ್ನು ಸುತ್ತಿಕೊಂಡವು; ಮರಣದ ಉರ್ಲುಗಳು ನನ್ನನ್ನು ಎದುರುಗೊಂಡವು;

7 In my distress I called on Yahweh; Yes, I called to my God: He heard my voice out of his temple, My cry [came] into his ears.ನನ್ನ ಇಕ್ಕಟ್ಟಿನಲ್ಲಿ ಕರ್ತ ನನ್ನು ಕರೆದೆನು; ನನ್ನ ದೇವರನ್ನು ಕರೆದೆನು. ಆತನು ತನ್ನ ಮಂದಿರದೊಳಗಿಂದ ನನ್ನ ಶಬ್ದವನ್ನು ಕೇಳಿದನು; ನನ್ನ ಮೊರೆಯು ಆತನ ಕಿವಿಗೆ ಮುಟ್ಟಿತು.

8 Then the earth shook and trembled, The foundations of heaven quaked Were shaken, because he was angry.ಆಗ ಭೂಮಿಯು ಕದಲಿ ಕಂಪಿಸಿತು; ಆಕಾಶದ ಅಸ್ತಿವಾರಗಳು ನಡುಗಿ ಕದಲಿದವು; ಯಾಕಂದರೆ ಆತನು ಕೋಪ ಗೊಂಡನು.

9 There went up a smoke out of his nostrils, Fire out of his mouth devoured: Coals were kindled by it.ಆತನ ಮೂಗಿನಿಂದ ಹೊಗೆ ಏರಿತು, ಆತನ ಬಾಯಿಯೊಳಗಿಂದ ಬೆಂಕಿ ಹೊರಟು ದಹಿಸಿತು; ಕೆಂಡಗಳು ಅದರಿಂದ ಉರಿದವು.

10 He bowed the heavens also, and came down; Thick darkness was under his feet.ಆತನು ಆಕಾಶ ಗಳನ್ನು ಬೊಗ್ಗಿಸಿ ಇಳಿದನು; ಆತನ ಪಾದಗಳ ಕೆಳಗೆ ಕಾರ್ಗತ್ತಲು ಇತ್ತು;

11 He rode on a cherub, and did fly; Yes, he was seen on the wings of the wind.ಆತನು ಕೆರೂಬಿಯ ಮೇಲೆ ಕೂತು ಹಾರಿದನು, ಗಾಳಿಯ ರೆಕ್ಕೆಗಳ ಮೇಲೆ ಕಾಣಿಸಿ ಕೊಂಡನು.

12 He made darkness pavilions round about him, Gathering of waters, thick clouds of the skies.ಕತ್ತಲನ್ನೂ ಕತ್ತಲಾದ ನೀರುಗಳನ್ನೂ ಆಕಾಶದ ಕಾರ್ಮೋಡಗಳನ್ನೂ ತನ್ನ ಸುತ್ತಲೂ ಡೇರೆ ಗಳಾಗಿ ಮಾಡಿಕೊಂಡನು.

13 At the brightness before him Coals of fire were kindled.ಆತನ ಮುಂದಿನ ಪ್ರಕಾಶದಿಂದ ಬೆಂಕಿಯ ಕೆಂಡಗಳು ಉರಿಯಲ್ಪಟ್ಟವು.

14 Yahweh thundered from heaven, The Most High uttered his voice.ಕರ್ತನು ಆಕಾಶದಿಂದ ಗುಡುಗಿದನು. ಮಹೋ ನ್ನತನು ತನ್ನ ಶಬ್ದವನ್ನು ಕೊಟ್ಟನು;

15 He sent out arrows, and scattered them; Lightning, and confused them.ತನ್ನ ಬಾಣ ಗಳನ್ನು ಕಳುಹಿಸಿ ಅವರನ್ನು ಚದುರಿಸಿದನು;

16 Then the channels of the sea appeared, The foundations of the world were laid bare, By the rebuke of Yahweh, At the blast of the breath of his nostrils.ಮಿಂಚನ್ನು ಕಳುಹಿಸಿ ಅವರನ್ನು ಗಲಿಬಿಲಿ ಮಾಡಿ ದನು. ಆಗ ಕರ್ತನ ಗದರಿಕೆಯಿಂದಲೂ ಆತನ ಮೂಗಿನ ಶ್ವಾಸದ ಗಾಳಿಯಿಂದಲೂ ಸಮುದ್ರದ ನೆಲೆ ಗಳು ಕಾಣಲ್ಪಟ್ಟವು; ಭೂಲೋಕದ ಅಸ್ತಿವಾರಗಳು ಬೈಲಾದವು.

17 He sent from on high, he took me; He drew me out of many waters;ಮೇಲಿನಿಂದ ಕೈಚಾಚಿ ನನ್ನನ್ನು ಹಿಡಿದು, ವಿಸ್ತಾರವಾದ ನೀರುಗಳೊಳಗಿಂದ ನನ್ನನ್ನು ಎಳೆದನು.

18 He delivered me from my strong enemy, From those who hated me; for they were too mighty for me.ನನ್ನ ಬಲವುಳ್ಳ ಶತ್ರುವಿಗೂ ನನ್ನ ಹಗೆಯವರಿಗೂ ನನ್ನನ್ನು ತಪ್ಪಿಸಿದನು;

19 They came on me in the day of my calamity; But Yahweh was my stay.ಅವರು ನನಗಿಂತ ಬಲಿಷ್ಠ ರಾಗಿದ್ದರು. ನನ್ನ ಆಪತ್ತಿನ ದಿವಸದಲ್ಲಿ ನನಗೆ ಅಡ್ಡಿ ಯಾಗಿದ್ದರು; ಆದರೆ ಕರ್ತನು ನನಗೆ ಆಧಾರ ವಾಗಿದ್ದನು.

20 He brought me forth also into a large place; He delivered me, because he delighted in me.ನನ್ನನ್ನು ವಿಶಾಲ ಸ್ಥಳಕ್ಕೆ ಹೊರಗೆ ತಂದನು; ಆತನು ನನ್ನಲ್ಲಿ ಸಂತೋಷಪಟ್ಟದ್ದರಿಂದ ನನ್ನನ್ನು ತಪ್ಪಿಸಿಬಿಟ್ಟನು.

21 Yahweh rewarded me according to my righteousness; According to the cleanness of my hands has he recompensed me.ಕರ್ತನು ನನ್ನ ನೀತಿಯ ಪ್ರಕಾರ ನನಗೆ ಪ್ರತಿಫಲ ಕೊಟ್ಟನು ನನ್ನ ಕೈಗಳ ಶುದ್ಧತ್ವದ ಪ್ರಕಾರ ನನಗೆ ಬದಲುಕೊಟ್ಟನು.

22 For I have kept the ways of Yahweh, And have not wickedly departed from my God.ಕರ್ತನ ಮಾರ್ಗಗಳನ್ನು ಕೈಕೊಂಡೆನು; ನಾನು ನನ್ನ ದೇವರನ್ನು ತೊರೆದುಬಿಡುವ ದುಷ್ಟತ್ವಮಾಡಲಿಲ್ಲ.

23 For all his ordinances were before me; As for his statutes, I did not depart from them.ಆತನ ನ್ಯಾಯಗಳೆಲ್ಲಾ ನನ್ನ ಮುಂದೆ ಇದ್ದವು; ಆತನ ನಿಯಮ ಗಳನ್ನು ನನ್ನಿಂದ ಹೋಗಲಿಲ್ಲ.

24 I was also perfect toward him; I kept myself from my iniquity.ಆತನ ಮುಂದೆ ಸಂಪೂರ್ಣನಾಗಿದ್ದು ಅಕ್ರಮದಿಂದ ನನ್ನನ್ನು ತಪ್ಪಿಸಿ ಕಾಪಾಡಿಕೊಂಡೆನು.

25 Therefore has Yahweh recompensed me according to my righteousness, According to my cleanness in his eyesight.ಆದದರಿಂದ ಕರ್ತನು ನನ್ನ ನೀತಿಯ ಪ್ರಕಾರವಾಗಿಯೂ ಆತನ ಕಣ್ಣುಗಳ ಮುಂದಿನ ನನ್ನ ಶುದ್ಧತ್ವದ ಪ್ರಕಾರವಾಗಿಯೂ ನನಗೆ ಬದಲುಕೊಟ್ಟನು.

26 With the merciful you will show yourself merciful; With the perfect man you will show yourself perfect;ಕೃಪೆಯುಳ್ಳವನಿಗೆ ಕೃಪೆಯುಳ್ಳವ ನಾಗಿರುವಿ; ಸಂಪೂರ್ಣನಾದ ಮನುಷ್ಯನಿಗೆ ಸಂಪೂರ್ಣನಾಗಿರುವಿ.

27 With the pure you will show yourself pure; With the crooked you will show yourself shrewd.ಶುದ್ಧನಿಗೆ ಶುದ್ಧನಾಗಿರುವಿ, ಮೂರ್ಖನ ಸಂಗಡ ಹೋರಾಡುವಿ.

28 The afflicted people you will save; But your eyes are on the haughty, that you may bring them down.ನೀನು ದೀನರನ್ನು ರಕ್ಷಿಸುವಿ; ಗರ್ವಿಗಳನ್ನು ತಗ್ಗಿಸುವ ಹಾಗೆ ನಿನ್ನ ಕಣ್ಣುಗಳು ಅವರ ಮೇಲೆ ಅವೆ.

29 For you are my lamp, Yahweh; Yahweh will lighten my darkness.ಓ ಕರ್ತನೇ, ನನ್ನ ದೀಪವು ನೀನೇ; ಕರ್ತನು ನನ್ನ ಕತ್ತಲನ್ನು ಪ್ರಕಾಶಿಸುವಂತೆ ಮಾಡುವನು.

30 For by you I run on a troop; By my God do I leap over a wall.ನಿನ್ನಿಂದ ಸೈನ್ಯದ ಮೇಲೆ ಬಿದ್ದೆನು; ನನ್ನ ದೇವರಿಂದ ಗೋಡೆ ನೆಗೆದನು.

31 As for God, his way is perfect: The word of Yahweh is tried; He is a shield to all those who take refuge in him.ದೇವರಾದರೋ, ಆತನ ಮಾರ್ಗವು ಸಂಪೂರ್ಣ ವಾದದ್ದು; ಕರ್ತನ ವಾಕ್ಯವು ಶೋಧಿಸಲ್ಪಟ್ಟದ್ದಾಗಿದೆ; ಆತನಲ್ಲಿ ಭರವಸವಿಡುವವರೆಲ್ಲರಿಗೆ ಗುರಾಣಿಯಾಗಿ ದ್ದಾನೆ.

32 For who is God, save Yahweh? Who is a rock, save our God?ಕರ್ತನಲ್ಲದೆ ದೇವರು ಯಾರು? ನಮ್ಮ ದೇವರಲ್ಲದೆ ಬಂಡೆಯು ಯಾರು?

33 God is my strong fortress; He guides the perfect in his way.ದೇವರು ನನ್ನ ಬಲವೂ ನನ್ನ ಪರಾಕ್ರಮವೂ ಆಗಿದ್ದಾನೆ; ನನ್ನ ಮಾರ್ಗವನ್ನು ಸಂಪೂರ್ಣಮಾಡುತ್ತಾನೆ.

34 He makes his feet like hinds' [feet], Sets me on my high places.ನನ್ನ ಕಾಲುಗಳನ್ನು ಜಿಂಕೆಗಳ ಹಾಗೆ ಮಾಡಿ ನನ್ನನ್ನು ಉನ್ನತ ಸ್ಥಳಗಳ ಮೇಲೆ ನಿಲ್ಲಿಸುತ್ತಾನೆ.

35 He teaches my hands to war, So that my arms do bend a bow of brass.ನನ್ನ ಕೈಗಳಿಗೆ ಯುದ್ಧ ಕಲಿಸುತ್ತಾನೆ. ನನ್ನ ತೋಳುಗಳು ಕಬ್ಬಿಣದ ಬಿಲ್ಲನ್ನು ಬೊಗ್ಗಿಸುತ್ತವೆ.

36 You have also given me the shield of your salvation; Your gentleness has made me great.ನೀನು ನಿನ್ನ ರಕ್ಷಣೆಯ ಗುರಾಣಿ ಯನ್ನು ನನಗೆ ಕೊಟ್ಟೆ; ನಿನ್ನ ಸೌಮ್ಯತೆಯು ನನ್ನನ್ನು ಹೆಚ್ಚಿಸಿತು.

37 You have enlarged my steps under me; My feet have not slipped.ನನ್ನ ಹೆಜ್ಜೆಗಳನ್ನು ನನ್ನ ಕೆಳಗೆ ವಿಶಾಲ ಮಾಡಿದ್ದರಿಂದ ನನ್ನ ಕಾಲುಗಳು ಜಾರಲಿಲ್ಲ.

38 I have pursued my enemies, and destroyed them; Neither did I turn again until they were consumed.ನನ್ನ ಶತ್ರುಗಳನ್ನು ಹಿಂದಟ್ಟಿ ಅವರನ್ನು ನಾಶಮಾಡಿದೆನು; ಅವರನ್ನು ಸಂಹರಿಸಿಬಿಡುವ ವರೆಗೂ ನಾನು ಹಿಂತಿರು ಗಲಿಲ್ಲ.

39 I have consumed them, and struck them through, so that they can't arise: Yes, they are fallen under my feet.ಅವರನ್ನು ಸಂಹರಿಸಿಬಿಟ್ಟೆನು. ಗಾಯಮಾಡಿ ದೆನು. ಆದದರಿಂದ ಅವರು ಏಳದೆ ಹೋಗಿ, ನನ್ನ ಪಾದಗಳ ಕೆಳಗೆ ಬಿದ್ದರು.

40 For you have girded me with strength to the battle; You have subdued under me those who rose up against me.ನೀನು ಯುದ್ದಕ್ಕೆ ಪರಾ ಕ್ರಮದಿಂದ ನನ್ನ ನಡುವನ್ನು ಕಟ್ಟಿದಿ; ನನ್ನ ಎದು ರಾಳಿಗಳನ್ನು ನನ್ನ ಕೆಳಗೆ ಅಧೀನಮಾಡಿದಿ.

41 You have also made my enemies turn their backs to me, That I might cut off those who hate me.ನನ್ನ ಶತ್ರುಗಳು ನನಗೆ ಬೆನ್ನು ಕೊಡುವಂತೆ ಮಾಡಿದಿ; ನಾನು ನನ್ನ ಹಗೆಯವರನ್ನು ಸಂಹರಿಸುವ ಹಾಗೆ ಮಾಡಿದ್ದಿ.

42 They looked, but there was none to save; Even to Yahweh, but he didn't answer them.ಅವರು ನೋಡುತ್ತಿದ್ದರು, ಆದರೆ ರಕ್ಷಿಸು ವವನು ಯಾರು ಇರಲಿಲ್ಲ; ಕರ್ತನನ್ನು ನೋಡಿದರು, ಆದರೆ ಆತನು ಅವರಿಗೆ ಪ್ರತ್ಯುತ್ತರ ಕೊಡಲಿಲ್ಲ.

43 Then did I beat them small as the dust of the earth, I did crush them as the mire of the streets, and did spread them abroad.ಆಗ ನಾನು ಅವರನ್ನು ನೆಲದ ಧೂಳಿನ ಹಾಗೆ ಪುಡಿಪುಡಿಮಾಡಿದೆನು; ಬೀದಿಯ ಕೆಸರಿನ ಹಾಗೆ ಅವರನ್ನು ತುಳಿದು ಚದರುವಂತೆ ಮಾಡಿದೆನು.

44 You also have delivered me from the strivings of my people; You have kept me to be the head of the nations: A people whom I have not known shall serve me.ನೀನು ನನ್ನ ಜನರ ವಾಗ್ವಾದಗಳಿಂದ ನನ್ನನ್ನು ತಪ್ಪಿಸಿದ್ದೀ, ಜನಾಂಗಗಳಿಗೆ ತಲೆಯಾಗಿ ನನ್ನನ್ನು ಇರಿಸಿದ್ದೀ; ನಾನು ಅರಿಯದ ಜನರು ನನ್ನನ್ನು ಸೇವಿಸುವರು.

45 The foreigners shall submit themselves to me: As soon as they hear of me, they shall obey me.ದೇಶಾಂತ ದವರು ನನಗೆ ಅಧೀನರಾಗುವರು; ಕೇಳಿದ ಕೂಡಲೆ ನನಗೆ ವಿಧೇಯರಾಗುವರು.

46 The foreigners shall fade away, Shall come trembling out of their close places.ದೇಶಾಂತದವರು ಬಾಡಿಹೋಗುವರು; ತಮ್ಮನ್ನು ಮುಚ್ಚಿಕೊಂಡ ಸ್ಥಳ ಗಳಿಂದ ನಡುಗುತ್ತಾ ಬರುವರು.

47 Yahweh lives; Blessed be my rock; Exalted be God, the rock of my salvation,ಕರ್ತನು ಜೀವಿತ ನಾಗಿದ್ದಾನೆ; ನನ್ನ ಬಂಡೆಗೆ ಸ್ತುತಿಯಾಗಲಿ; ನನ್ನ ರಕ್ಷಣೆಯ ಬಂಡೆಯಾದ ದೇವರು ಉನ್ನತನಾಗಲಿ.

48 Even the God who executes vengeance for me, Who brings down peoples under me,ದೇವರೇ ನನಗೋಸ್ಕರ ಮುಯ್ಯಿಗೆ ಮುಯ್ಯಿ ತೀರಿಸುತ್ತಾನೆ; ಜನರನ್ನು ನನಗೆ ಅಧೀನಪಡಿಸುತ್ತಾನೆ.

49 Who brings me forth from my enemies: Yes, you lift me up above those who rise up against me; You deliver me from the violent man.ಆತನು ನನ್ನ ಶತ್ರುಗಳಿಂದ ನನ್ನನ್ನು ಹೊರಗೆ ತರು ತ್ತಾನೆ. ನೀನು ನನ್ನ ಎದುರಾಳಿಗಳಿಂದ ನನ್ನನ್ನು ತಪ್ಪಿಸಿ ಗೌರವಿಸುತ್ತೀ; ಬಲಾತ್ಕಾರದ ಮನುಷ್ಯನಿಂದ ತಪ್ಪಿ ಸುತ್ತೀ.

50 Therefore I will give thanks to you, Yahweh, among the nations, Will sing praises to your name.ಆದದರಿಂದ ಓ ಕರ್ತನೇ, ನಾನು ಜನಾಂಗ ಗಳಲ್ಲಿ ನಿನ್ನನ್ನು ಕೊಂಡಾಡುವೆನು; ನಿನ್ನ ಹೆಸರನ್ನು ಕೀರ್ತಿಸುವೆನು.

51 Great deliverance gives he to his king, Shows loving kindness to his anointed, To David and to his seed, forevermore.ಆತನು ತನ್ನ ಅರಸನಿಗೆ ರಕ್ಷಣೆಯ ಗೋಪುರವಾಗಿದ್ದಾನೆ; ತನ್ನ ಅಭಿಷಕ್ತನಾದ ದಾವೀದ ನಿಗೂ ಅವನ ಸಂತತಿಗೂ ಕೃಪೆಯನ್ನು ಯುಗಯುಗಕ್ಕೂ ಅನುಗ್ರಹಿಸುತ್ತಾನೆ.

Kannada Bible