2 Kings 9 - WEB (Kannada)
1 Elisha the prophet called one of the sons of the prophets, and said to him, Gird up your loins, and take this vial of oil in your hand, and go to Ramoth-gilead.ಪ್ರವಾದಿಯಾದ ಎಲೀಷನು ಪ್ರವಾದಿಗಳ ಮಕ್ಕಳಲ್ಲಿ ಒಬ್ಬನನ್ನು ಕರೆದು ಅವನಿಗೆ--ನಡುವನ್ನು ಕಟ್ಟಿಕೊಂಡು ಈ ಎಣ್ಣೆಯ ಪಾತ್ರೆಯನ್ನು ನಿನ್ನ ಕೈಯಲ್ಲಿ ತೆಗೆದುಕೊಂಡು ಗಿಲ್ಯಾದಿನಲ್ಲಿರುವ ರಾಮೋತಿಗೆ ಹೋಗು.
2 When you come there, look out there Jehu the son of Jehoshaphat the son of Nimshi, and go in, and make him arise up from among his brothers, and carry him to an inner chamber.ನೀನು ಅಲ್ಲಿಗೆ ಸೇರಿದಾಗ ನಿಂಷಿಯ ಮಗನಾಗಿರುವ ಯೆಹೋಷಾಫಾಟನ ಮಗ ನಾದ ಯೇಹುವನ್ನು ಅಲ್ಲಿ ನೋಡಿ ಒಳಗೆ ಹೋಗಿ ಅವನನ್ನು ತನ್ನ ಸಹೋದರರ ಮಧ್ಯದಿಂದ ಏಳ ಮಾಡಿ ಒಳಗಿನ ಕೊಠಡಿಗೆ ಕರಕೊಂಡು ಹೋಗಿ ಎಣ್ಣೆಯ ಪಾತ್ರೆಯನ್ನು ತಕ್ಕೊಂಡು ಅವನ ತಲೆಯ ಮೇಲೆ ಹೊಯ್ದು
3 Then take the vial of oil, and pour it on his head, and say, Thus says Yahweh, I have anointed you king over Israel. Then open the door, and flee, and don't wait.ಅವನಿಗೆ--ಇಸ್ರಾಯೇಲಿನ ಮೇಲೆ ಅರಸನಾಗಿರಲು ನಿನ್ನನ್ನು ಅಭಿಷೇಕಿಸಿದ್ದೇನೆ ಎಂದು ಕರ್ತನು ಹೇಳುತ್ತಾನೆಂಬದಾಗಿ ಹೇಳಿ ಕದವನ್ನು ತೆರೆದು ತಡಮಾಡದೆ ಓಡಿಹೋಗು ಅಂದನು.
4 So the young man, even the young man the prophet, went to Ramoth-gilead.ಹಾಗೆಯೇ ಆ ಯೌವನಸ್ಥನು ಅಂದರೆ ಪ್ರವಾದಿ ಯಾದ ಆ ಯೌವನಸ್ಥನು ಗಿಲ್ಯಾದಿನಲ್ಲಿರುವ ರಾಮೋತಿಗೆ ಹೋದನು.
5 When he came, behold, the captains of the host were sitting; and he said, I have an errand to you, captain. Jehu said, To which of us all? He said, To you, O captain.ಅವನು ಅಲ್ಲಿ ಸೇರಿದಾಗ ಇಗೋ, ಸೈನ್ಯಾಧಿಪತಿಗಳು ಕುಳಿತುಕೊಂಡಿದ್ದರು. ಆಗ ಅವನು -- ಅಧಿಪತಿಯೇ, ನಿನಗೆ ಹೇಳಬೇಕಾದ ಮಾತು ನನಗೆ ಉಂಟು ಅಂದನು. ಯೇಹುವು ಅವ ನಿಗೆ--ನಮ್ಮೆಲ್ಲರಲ್ಲಿ ಯಾರಿಗೆ ಅಂದನು. ಅವನುಅಧಿಪತಿಯೇ, ನಿನಗೆ ಅಂದನು.
6 He arose, and went into the house; and he poured the oil on his head, and said to him, Thus says Yahweh, the God of Israel, I have anointed you king over the people of Yahweh, even over Israel.ಅವನು ಎದ್ದು ಮನೆಯೊಳಕ್ಕೆ ಹೋದನು. ಆಗ ಇವನು ಎಣ್ಣೆ ಯನ್ನು ಅವನ ತಲೆಯ ಮೇಲೆ ಹೊಯ್ದು ಅವನಿಗೆ ಹೇಳಿದ್ದು--ಇಸ್ರಾಯೇಲಿನ ದೇವರಾದ ಕರ್ತನು ಹೇಳುವದೇನಂದರೆ, ಕರ್ತನ ಜನರಾದ ಇಸ್ರಾ ಯೇಲಿನ ಮೇಲೆ ಅರಸನಾಗಿರಲು ನಿನ್ನನ್ನು ಅಭಿಷೇ ಕಿಸಿದ್ದೇನೆ.
7 You shall strike the house of Ahab your master, that I may avenge the blood of my servants the prophets, and the blood of all the servants of Yahweh, at the hand of Jezebel.ಪ್ರವಾದಿಗಳಾದ ನನ್ನ ಸೇವಕರ ರಕ್ತ ಕ್ಕೋಸ್ಕರವೂ ಕರ್ತನ ಎಲ್ಲಾ ಸೇವಕರ ರಕ್ತಕ್ಕೋಸ್ಕ ರವೂ ಈಜೆಬೆಲಳಿಗೆ ಮುಯ್ಯಿಗೆ ಮುಯ್ಯಿ ತೀರಿ ಸುವ ಹಾಗೆಯೂ ನೀನು ನಿನ್ನ ಯಜಮಾನ ನಾದ ಅಹಾಬನ ಮನೆಯವರನ್ನು ಸಂಹರಿಸಬೇಕು.
8 For the whole house of Ahab shall perish; and I will cut off from Ahab every man-child, and him who is shut up and him who is left at large in Israel.ಅಹಾಬನ ಮನೆಯೆಲ್ಲಾ ನಾಶವಾಗಿ ಹೋಗುವದು. ಅಹಾಬನ ಸಂತಾನದ ಗಂಡಸರನ್ನೂ ಇಸ್ರಾಯೇಲಿ ನಲ್ಲಿ ಉಳಿದು ಬಚ್ಚಿಡಲ್ಪಟ್ಟವನನ್ನೂ ನಾನು ಕಡಿದು ಬಿಡುವೆನು.
9 I will make the house of Ahab like the house of Jeroboam the son of Nebat, and like the house of Baasha the son of Ahijah.ಅಹಾಬನ ಮನೆಯನ್ನು ನೆಬಾಟನ ಮಗನಾದ ಯಾರೊಬ್ಬಾಮನ ಮನೆಯ ಹಾಗೆಯೂ ಅಹೀಯನ ಮಗನಾದ ಬಾಷನ ಮನೆಯ ಹಾಗೆಯೂ ಮಾಡುವೆನು.
10 The dogs shall eat Jezebel in the portion of Jezreel, and there shall be none to bury her. He opened the door, and fled.ಇದಲ್ಲದೆ ಇಜ್ರೇಲಿನ ಪಾಲಿನಲ್ಲಿ ನಾಯಿಗಳು ಈಜೆಬೆಲಳನ್ನು ತಿನ್ನುವವು; ಅವಳನ್ನು ಹೂಣಿಡಲು ಯಾವನೂ ಇರುವದಿಲ್ಲ ಎಂದು ಹೇಳಿ ಬಾಗಲನ್ನು ತೆರೆದು ಓಡಿಹೋದನು.
11 Then Jehu came forth to the servants of his lord: and one said to him, Is all well? why came this mad fellow to you? He said to them, You know the man and what his talk was.ಆಗ ಯೇಹುವು ತನ್ನ ಯಜಮಾನನ ಸೇವಕರ ಬಳಿಗೆ ಹೊರಟು ಬಂದನು. ಅವರು ಅವನಿಗೆ ಎಲ್ಲವೂ ಕ್ಷೇಮವೋ? ಈ ಹುಚ್ಚನು ನಿನ್ನ ಬಳಿಗೆ ಬಂದದ್ದೇನು ಅಂದರು. ಅವನು ಅವರಿಗೆ--ಆ ಮನುಷ್ಯನನ್ನೂ ಅವನ ಮಾತನ್ನೂ ನೀವು ಬಲ್ಲಿರಿ ಅಂದನು.
12 They said, It is false; tell us now. He said, Thus and thus spoke he to me, saying, Thus says Yahweh, I have anointed you king over Israel.ಅದಕ್ಕವರು--ಅದು ಸುಳ್ಳು, ದಯಮಾಡಿ ನಮಗೆ ತಿಳಿಸು ಅಂದರು. ಆದದರಿಂದ ಅವನು--ಇಸ್ರಾ ಯೇಲಿನ ಮೇಲೆ ಅರಸನಾಗಿರಲು ನಿನ್ನನ್ನು ಅಭಿಷೇಕಿ ಸಿದ್ದೇನೆಂಬದಾಗಿ ಕರ್ತನು ಹೇಳುತ್ತಾನೆಂದು ಹೀಗೆ ನನಗೆ ಹೇಳಿದನು ಅಂದನು.
13 Then they hurried, and took every man his garment, and put it under him on the top of the stairs, and blew the trumpet, saying, Jehu is king.ಆಗ ಅವರು ತ್ವರೆ ಪಟ್ಟು ಪ್ರತಿಯೊಬ್ಬನು ತನ್ನ ವಸ್ತ್ರವನ್ನು ತೆಗೆದು ಮೆಟ್ಟಲುಗಳ ಮೇಲೆ ಹಾಸಿ ಇವನನ್ನು ಕುಳ್ಳಿರಿಸಿ ತುತೂರಿಗಳನ್ನು ಊದಿ -- ಯೇಹುವು ಅರಸನಾಗಿ ದ್ದಾನೆಂದು ಹೇಳಿದರು.
14 So Jehu the son of Jehoshaphat the son of Nimshi conspired against Joram. (Now Joram was keeping Ramoth-gilead, he and all Israel, because of Hazael king of Syria;ಹೀಗೆ ನಿಂಷಿಯ ಮಗನಾಗಿ ರುವ ಯೆಹೋಷಾಫಾಟನ ಮಗನಾದ ಯೇಹುವು ಯೆಹೋರಾಮನಿಗೆ ವಿರೋಧವಾಗಿ ಒಳಸಂಚು ಮಾಡಿ ದನು. ಅರಾಮ್ಯರ ಅರಸನಾದ ಹಜಾಯೇಲನ ನಿಮಿತ್ತ ಯೆಹೋರಾಮನೂ ಎಲ್ಲಾ ಇಸ್ರಾಯೇಲ್ಯರೂ ಗಿಲ್ಯಾ ದಿನ ರಾಮೋತಿನಲ್ಲಿ ಕಾಯುತ್ತಾ ಇದ್ದರು.
15 but king Joram was returned to be healed in Jezreel of the wounds which the Syrians had given him, when he fought with Hazael king of Syria.) Jehu said, If this be your mind, then let none escape and go forth out of the city, to go to tell it in Jezreel.ಆದರೆ ಅರಸನಾದ ಯೋರಾಮನು ಅರಾಮ್ಯರ ಅರಸನಾದ ಹಜಾಯೇಲನ ಸಂಗಡ ಯುದ್ಧಮಾಡುವಾಗ ಅರಾ ಮ್ಯರು ತನ್ನನ್ನು ಹೊಡೆದ ಗಾಯಗಳನ್ನು ಸ್ವಸ್ಥಮಾಡಿ ಕೊಳ್ಳುವ ನಿಮಿತ್ತ ಇಜ್ರೇಲಿಗೆ ಹೋಗಿದ್ದನು.
16 So Jehu rode in a chariot, and went to Jezreel; for Joram lay there. Ahaziah king of Judah was come down to see Joram.ಆಗ ಯೇಹುವು -- ನಿಮಗೆ ಮನಸ್ಸಾದರೆ ಹೋಗಿ ಇದನ್ನು ಇಜ್ರೇಲಿನಲ್ಲಿ ತಿಳಿಸಲು ಪಟ್ಟಣ ದಿಂದ ಯಾರೂ ತಪ್ಪಿಸಿಕೊಂಡು ಹೊರಡದೆ ಇರಲಿ ಅಂದನು. ಯೇಹುವು ರಥದ ಮೇಲೆ ಏರಿ ಇಜ್ರೇಲಿಗೆ ಹೋದನು. ಯಾಕಂದರೆ ಯೋರಾಮನು ಅಲ್ಲಿ ಬಿದ್ದಿದ್ದನು. ಇದಲ್ಲದೆ ಯೋರಾಮನನ್ನು ನೋಡು ವದಕ್ಕೆ ಯೆಹೂದದ ಅರಸನಾದ ಅಹಜ್ಯನು ಅಲ್ಲಿಗೆ ಬಂದಿದ್ದನು.
17 Now the watchman was standing on the tower in Jezreel, and he spied the company of Jehu as he came, and said, I see a company. Joram said, Take a horseman, and send to meet them, and let him say, Is it peace?ಇಜ್ರೇಲಿನ ಬುರುಜಿನ ಮೇಲೆ ಕಾವಲು ಗಾರನು ನಿಂತಿದ್ದನು. ಇವನು ಬರುವ ಯೇಹುವಿನ ಗುಂಪನ್ನು ಕಂಡು--ನಾನು ಗುಂಪನ್ನು ನೋಡುತ್ತೇನೆ ಅಂದನು. ಅದಕ್ಕೆ ಯೋರಾಮನು ರಾಹುತನನ್ನು ಕರೆದು ಅವರಿಗೆ ಎದುರಾಗಿ ಕಳುಹಿಸಿ--ಸಮಾಧಾ ನವೋ ಎಂದು ಕೇಳಲಿ ಅಂದನು.
18 So there went one on horseback to meet him, and said, Thus says the king, Is it peace? Jehu said, What have you to do with peace? turn you behind me. The watchman told, saying, The messenger came to them, but he isn't coming back.ಆದದರಿಂದ ಒಬ್ಬನು ಕುದುರೆಯನ್ನು ಹತ್ತಿ ಅವನಿಗೆ ಎದುರಾಗಿ ಹೋಗಿ--ಸಮಾಧಾನವೋ ಎಂದು ಅರಸನು ಕೇಳು ತ್ತಾನೆ ಅಂದನು. ಅದಕ್ಕೆ ಯೇಹುವು--ಸಮಾಧಾನ ನಿನಗೆ ಏನು? ನನ್ನ ಹಿಂದಕ್ಕೆ ಹೋಗು ಅಂದನು. ಆಗ ಕಾವಲುಗಾರನು -- ಸೇವಕನು ಅವರ ಬಳಿಗೆ ಹೋಗಿ ತಿರಿಗಿ ಬರಲಿಲ್ಲ ಅಂದನು.
19 Then he sent out a second on horseback, who came to them, and said, Thus says the king, Is it peace? Jehu answered, What have you to do with peace? turn you behind me.ಆಗ ಬೇರೆ ರಾಹುತನನ್ನು ಕಳುಹಿಸಿದನು. ಇವನು ಅವರ ಬಳಿಗೆ ಹೋಗಿ--ಸಮಾಧಾನವೋ ಎಂದು ಅರಸನು ಕೇಳು ತ್ತಾನೆ ಅಂದನು. ಅದಕ್ಕೆ ಯೇಹುವು--ಸಮಾಧಾನ ನಿನಗೆ ಏನು--ನನ್ನ ಹಿಂದಕ್ಕೆ ಹೋಗು ಅಂದನು.
20 The watchman told, saying, He came even to them, and isn't coming back: and the driving is like the driving of Jehu the son of Nimshi; for he drives furiously.ಆಗ ಕಾವಲುಗಾರನು--ಇವನೂ ಅವರ ಬಳಿಗೆ ಹೋಗಿ ತಿರಿಗಿ ಬರಲಿಲ್ಲ. ಇದಲ್ಲದೆ ಓಡಿಸುವದು ನಿಂಷಿಯ ಮಗನಾದ ಯೇಹುವು ಓಡಿಸುವ ಹಾಗಿದೆ; ಯಾಕಂದರೆ ಅವನು ಹುಚ್ಚುತನವಾಗಿ ಓಡಿಸುತ್ತಾನೆ ಅಂದನು.
21 Joram said, Make ready. They made ready his chariot. Joram king of Israel and Ahaziah king of Judah went out, each in his chariot, and they went out to meet Jehu, and found him in the portion of Naboth the Jezreelite.ಯೋರಾಮನು ರಥಹೂಡಬೇಕೆಂದು ಹೇಳಿದನು. ಅವನ ರಥವು ಸಿದ್ಧವಾಯಿತು. ಆಗ ಇಸ್ರಾಯೇಲಿನ ಅರಸನಾದ ಯೋರಾಮನೂ ಯೆಹೂ ದದ ಅರಸನಾದ ಅಹಜ್ಯನೂ ಹೊರಟು ಅವನವನು ತನ್ನ ತನ್ನ ರಥದಲ್ಲಿ ಏರಿ ಯೇಹುವಿಗೆ ಎದುರಾಗಿ ಹೊರಟು ಇಜ್ರೇಲ್ಯನಾದ ನಾಬೋತನ ಹೊಲದಲ್ಲಿ ಅವನನ್ನು ಸಂಧಿಸಿದರು.
22 It happened, when Joram saw Jehu, that he said, Is it peace, Jehu? He answered, What peace, so long as the prostitution of your mother Jezebel and her witchcraft abound?ಯೋರಾಮನು ಯೇಹು ವನ್ನು ನೋಡಿದಾಗ--ಯೇಹುವೇ, ಸಮಾಧಾನವೋ ಅಂದನು. ಅದಕ್ಕವನು--ನಿನ್ನ ತಾಯಿಯಾದ ಈಜೆ ಬೆಲಳ ಜಾರತ್ವವೂ ಅವಳ ಮಾಟಗಳೂ ಅಧಿಕವಾಗಿರು ವಾಗ ಸಮಾಧಾನವೇನು ಅಂದನು.
23 Joram turned his hands, and fled, and said to Ahaziah, There is treachery, Ahaziah.ಆಗ ಯೋರಾ ಮನು ಅಹಜ್ಯನಿಗೆ--ಅಹಜ್ಯನೇ, ದ್ರೋಹ ಎಂದು ಹೇಳಿ ತನ್ನ ಕೈ ತಿರುಗಿಸಿಕೊಂಡು ಓಡಿಹೋದನು.
24 Jehu drew his bow with his full strength, and struck Joram between his arms; and the arrow went out at his heart, and he sunk down in his chariot.ಆದರೆ ಯೇಹುವು ಪೂರ್ಣಬಲದಿಂದ ಬಿಲ್ಲನ್ನು ಬೊಗ್ಗಿಸಿ ತನ್ನ ಕೈಯಿಂದ ಯೋರಾಮನನ್ನು ಅವನ ತೋಳುಗಳ ನಡುವೆ ಹೊಡೆದನು. ಬಾಣ ಹೃದಯದಲ್ಲಿ ತೂರಿ ಹೊರಟಿತು; ಅವನು ರಥದಲ್ಲಿ ಕೆಳಗೆ ಮುದುರಿ ಕೊಂಡು ಬಿದ್ದನು.
25 Then said [Jehu] to Bidkar his captain, Take up, and cast him in the portion of the field of Naboth the Jezreelite; for remember how that, when I and you rode together after Ahab his father, Yahweh laid this burden on him:ಆಗ ಯೇಹುವು ತನ್ನ ಅಧಿಪತಿ ಯಾದ ಬಿದ್ಕರನಿಗೆ--ನೀನು ಅವನನ್ನು ತೆಗೆದುಕೊಂಡು ಹೋಗಿ ಇಜ್ರೇಲ್ಯನಾದ ನಾಬೋತನ ಪಾಲಾಗಿರುವ ಹೊಲದಲ್ಲಿ ಹಾಕಿಬಿಡು.
26 Surely I have seen yesterday the blood of Naboth, and the blood of his sons, says Yahweh; and I will requite you in this plat, says Yahweh. Now therefore take and cast him into the plat [of ground], according to the word of Yahweh.ನಾನೂ ನೀನೂ ಅವನ ತಂದೆಯಾದ ಅಹಾಬನ ಹಿಂದೆ ಕುದುರೆ ಏರಿಕೊಂಡು ಹೋಗುತ್ತಿರುವಾಗ ಕರ್ತನು ಈ ಭಾರವನ್ನು ಅವನ ಮೇಲೆ ಹೊರಿಸಿದನೆಂದು ಜ್ಞಾಪಕಮಾಡಿಕೋ. ಏನಂದರೆ--ನಾಬೋತನ ರಕ್ತವನ್ನೂ ಅವನ ಕುಮಾರರ ರಕ್ತವನ್ನೂ ನಿನ್ನೆ ನಾನು ನಿಶ್ಚಯವಾಗಿ ನೋಡಿದೆನಲ್ಲಾ ಎಂದು ಕರ್ತನು ಹೇಳುತ್ತಾನೆ. ಇದಲ್ಲದೆ--ಇದೇ ಹೊಲದಲ್ಲಿ ನಿನಗೆ ಮುಯ್ಯಿಗೆ ಮುಯ್ಯಿ ಕೊಡುವೆ ನೆಂದು ಕರ್ತನು ಹೇಳುತ್ತಾನೆ. ಆದದರಿಂದ ಕರ್ತನ ವಾಕ್ಯದ ಪ್ರಕಾರ ಅವನನ್ನು ಎತ್ತಿಕೊಂಡು ಆ ಹೊಲ ದಲ್ಲಿ ಹಾಕಿಬಿಡು ಅಂದನು.
27 But when Ahaziah the king of Judah saw this, he fled by the way of the garden-house. Jehu followed after him, and said, Smite him also in the chariot: [and they struck him] at the ascent of Gur, which is by Ibleam. He fled to Megiddo, and died there.ಯೆಹೂದದ ಅರಸ ನಾದ ಅಹಜ್ಯನು ಇದನ್ನು ನೋಡಿದಾಗ ಅವನು ತೋಟದ ಮನೆಯ ಮಾರ್ಗವಾಗಿ ಓಡಿಹೋದನು. ಯೇಹುವು ಅವನ ಹಿಂದೆ ಹೋಗಿ--ರಥದಲ್ಲಿ ಅವ ನನ್ನು ಸಹ ಸಂಹರಿಸಿರಿ ಅಂದನು. ಇಬ್ಲೆಯಾಮಿನ ಬಳಿಯಲ್ಲಿರುವ ಗೂರ್ ಎಂಬ ಸ್ಥಳಕ್ಕೆ ಏರಿ ಹೋಗುವ ಮಾರ್ಗದಲ್ಲಿ ಹೊಡೆದರು. ಅವನು ಮೆಗಿದ್ದೋನಿಗೆ ಓಡಿಹೋಗಿ ಅಲ್ಲಿ ಸತ್ತುಹೋದನು.
28 His servants carried him in a chariot to Jerusalem, and buried him in his tomb with his fathers in the city of David.ಅವನ ಸೇವ ಕರು ಅವನನ್ನು ರಥದಲ್ಲಿ ಯೆರೂಸಲೇಮಿಗೆ ತಕ್ಕೊಂಡು ಹೋಗಿ ದಾವೀದನ ಪಟ್ಟಣದೊಳಗೆ ಅವನ ಪಿತೃಗಳ ಬಳಿಯಲ್ಲಿ ಅವನ ಸಮಾಧಿಯಲ್ಲಿ ಅವನನ್ನು ಹೂಣಿ ಟ್ಟರು.
29 In the eleventh year of Joram the son of Ahab began Ahaziah to reign over Judah.ಅಹಾಬನ ಮಗನಾದ ಯೋರಾಮನ ಆಳ್ವಿಕೆಯ ಹನ್ನೊಂದನೇ ವರುಷದಲ್ಲಿ ಅಹಜ್ಯನು ಯೆಹೂದದ ಮೇಲೆ ಆಳಲು ಪ್ರಾರಂಭಿಸಿದನು.
30 When Jehu was come to Jezreel, Jezebel heard of it; and she painted her eyes, and attired her head, and looked out at the window.ಯೇಹುವು ಇಜ್ರೇಲಿಗೆ ಬಂದಿದ್ದಾನೆಂದು ಈಜೆ ಬೆಲಳು ಕೇಳಿ ಅವಳು ತನ್ನ ಮುಖಕ್ಕೆ ಬಣ್ಣ ಹಚ್ಚಿ ಕೊಂಡು ತನ್ನ ತಲೆಯನ್ನು ಶೃಂಗರಿಸಿಕೊಂಡು ಕಿಟಕಿ ಯಿಂದ ಇಣಿಕಿ ನೋಡಿದಳು.
31 As Jehu entered in at the gate, she said, Is it peace, you Zimri, your master's murderer?ಯೇಹುವು ಬಾಗ ಲಲ್ಲಿ ಪ್ರವೇಶಿಸಿದಾಗ ಅವಳು ತನ್ನ ಯಜಮಾನನನ್ನು ಕೊಂದ ಜಿಮ್ರಿಗೆ ಸಮಾಧಾನವಿತ್ತೋ ಅಂದಳು.
32 He lifted up his face to the window, and said, Who is on my side? who? There looked out to him two or three eunuchs.ಅವನು ತನ್ನ ಮುಖವನ್ನು ಆ ಕಿಟಕಿಯ ಕಡೆಗೆ ಎತ್ತಿ--ನನ್ನ ಕಡೆ ಇರುವವರು ಯಾರು ಅಂದನು. ಆಗ ಇಬ್ಬರು ಮೂವರು ಕಂಚುಕಿಗಳು ಆ ಕಿಟಕಿ ಯಲ್ಲಿಂದ ಅವನನ್ನು ನೋಡಿದರು.
33 He said, Throw her down. So they threw her down; and some of her blood was sprinkled on the wall, and on the horses: and he trod her under foot.ಅವನು-- ಅವಳನ್ನು ಕೆಳಕ್ಕೆ ತಳ್ಳಿಬಿಡಿರಿ ಅಂದನು. ಅವರು ಅವ ಳನ್ನು ಕೆಳಕ್ಕೆ ತಳ್ಳಿಬಿಟ್ಟದ್ದರಿಂದ ಅವಳ ರಕ್ತವು ಗೋಡೆಯ ಮೇಲೆಯೂ ಕುದುರೆಗಳ ಮೇಲೆಯೂ ಚೆಲ್ಲಲ್ಪಟ್ಟಿತು. ಅವನು ಅವಳನ್ನು ತುಳಿಸಿದನು.
34 When he was come in, he ate and drink; and he said, See now to this cursed woman, and bury her; for she is a king's daughter.ಅವನು ಒಳಗೆ ಹೋಗಿ ತಿಂದು ಕುಡಿದ ಮೇಲೆ ಅವರಿಗೆ -- ನೀವು ಹೋಗಿ ಆ ಶಪಿಸಲ್ಪಟ್ಟವಳನ್ನು ನೋಡಿಕೊಂಡು ಹೂಣಿಡಿರಿ; ಅವಳು ಅರಸನ ಮಗಳು ಅಂದನು.
35 They went to bury her; but they found no more of her than the skull, and the feet, and the palms of her hands.ಅವರು ಅವಳನ್ನು ಹೂಣಿಡಲು ಹೋದಾಗ ಅವಳ ತಲೆ ಬುರುಡೆಯೂ ಕಾಲುಗಳೂ ಅಂಗೈಗಳೂ ಹೊರತು ಮತ್ತೇನೂ ಕಾಣಲಿಲ್ಲ. ಅವರು ತಿರಿಗಿ ಬಂದು ಅವನಿಗೆ ತಿಳಿಸಿದರು.
36 Therefore they came back, and told him. He said, This is the word of Yahweh, which he spoke by his servant Elijah the Tishbite, saying, In the portion of Jezreel shall the dogs eat the flesh of Jezebel;ಅದಕ್ಕವನುಕರ್ತನು ತನ್ನ ಸೇವಕನಾಗಿರುವ ತಿಷ್ಬೀಯನಾದ ಎಲೀ ಯನ ಮುಖಾಂತರ ಹೇಳಿದ ವಾಕ್ಯವು ಇದೇ--ಇಜ್ರೇಲಿನ ಹೊಲದಲ್ಲಿ ನಾಯಿಗಳು ಈಜೆಬೆಲಳ ಮಾಂಸವನ್ನು ತಿನ್ನುವವು.
37 and the body of Jezebel shall be as dung on the face of the field in the portion of Jezreel, so that they shall not say, This is Jezebel.ಇದಲ್ಲದೆ ಇದೇ ಈಜೆ ಬೆಲಳೆಂದು ಹೇಳಕೂಡದ ಹಾಗೆ ಇಜ್ರೇಲಿನ ಪಾಲಿನ ಹೊಲದ ಮೇಲ್ಭಾಗದಲ್ಲಿ ಈಜೆಬೆಲಳ ಹೆಣ ಗೊಬ್ಬರದ ಹಾಗೆ ಇರುವದು ಎಂಬದೇ.
Kannada Bible