Bible

2 Kings 19 - BBE (Kannada)

1 And on hearing it, King Hezekiah took off his robe, and put on haircloth, and went into the house of the Lord.ಅರಸನಾದ ಹಿಜ್ಕೀಯನು ಅದನ್ನು ಕೇಳಿದಾಗ ತನ್ನ ವಸ್ತ್ರಗಳನ್ನು ಹರಿದುಕೊಂಡು ಗೋಣೀತಟ್ಟಿನಿಂದ ತನ್ನನ್ನು ಮುಚ್ಚಿಕೊಂಡು ಕರ್ತನ ಮನೆಯಲ್ಲಿ ಪ್ರವೇಶಿಸಿದನು.

2 And he sent Eliakim, who was over the house, and Shebna the scribe, and the chief priests, dressed in haircloth, to Isaiah the prophet, the son of Amoz.ಇದಲ್ಲದೆ ಅವನು ಗೋಣೀತಟ್ಟನ್ನು ಮುಚ್ಚಿಕೊಂಡ ಮನೆವಾರ್ತೆಯವ ನಾದ ಎಲ್ಯಾಕೀಮನನ್ನೂ ಲೇಖಕನಾದ ಶೆಬ್ನನನ್ನೂ ಯಾಜಕರ ಹಿರಿಯರನ್ನೂ ಆಮೋಚನ ಮಗನಾದ ಪ್ರವಾದಿಯಾದ ಯೆಶಾಯನ ಬಳಿಗೆ ಕಳುಹಿಸಿದನು.

3 And they said to him, Hezekiah says, This day is a day of trouble and punishment and shame; for the children are ready to come to birth, but there is no strength to give birth to them.ಅವರು ಅವನಿಗೆ ಹೇಳಿದ್ದೇನಂದರೆ--ಹಿಜ್ಕೀಯನು ಹೇಳುವದೇನಂದರೆ--ಇದು ಇಕ್ಕಟ್ಟೂ ಗದರಿಕೆಯೂ ನಿಂದೆಯೂ ಆದ ದಿವಸ; ಯಾಕಂದರೆ ಹೆರಿಗೆಯ ಸಮಯವು ಬಂತು ಆದರೆ ಹೆರುವ ಶಕ್ತಿ ಇಲ್ಲ.

4 It may be that the Lord your God will give ear to the words of the Rab-shakeh, whom the king of Assyria, his master, sent to say evil things against the living God, and will make his words come to nothing: so then make your prayer for the rest of the people.ಒಂದು ವೇಳೆ ನಿನ್ನ ದೇವರಾದ ಕರ್ತನು, ಜೀವವುಳ್ಳ ದೇವ ರನ್ನು ನಿಂದಿಸಲು ತನ್ನ ಯಜಮಾನನಾದ ಅಶ್ಶೂರಿನ ಅರಸನಿಂದ ಕಳುಹಿಸಲ್ಪಟ್ಟ ರಬ್ಷಾಕೆಯ ಮಾತುಗಳನ್ನು ಕೇಳಿ, ನಿನ್ನ ದೇವರಾದ ಕರ್ತನು ಕೇಳಿದ ಅವನ ಮಾತುಗಳಿಗೋಸ್ಕರ ಅವನನ್ನು ಗದರಿಸುವನು. ಆದ ದರಿಂದ ನೀನು ಉಳಿದವರಿಗೋಸ್ಕರ ಪ್ರಾರ್ಥನೆ ಸಲ್ಲಿಸಬೇಕು ಅಂದನು.

5 So the servants of King Hezekiah came to Isaiah.ಹಾಗೆಯೇ ಅರಸನಾದ ಹಿಜ್ಕೀಯನ ಸೇವಕರು ಯೆಶಾಯನ ಬಳಿಗೆ ಬಂದರು.

6 And Isaiah said to them, This is what you are to say to your master: The Lord says, Be not troubled by the words which the servants of the king of Assyria have said against me in your hearing.ಆಗ ಯೆಶಾಯನು ಅವರಿಗೆ -- ನೀವು ನಿಮ್ಮ ಯಜಮಾನನಿಗೆ ಹೇಳಬೇಕಾದದ್ದೇನಂದರೆ -- ನೀನು ಕೇಳಿದಂಥ, ಅಶ್ಶೂರಿನ ಅರಸನ ಸೇವಕರು ನನ್ನನ್ನು ದೂಷಿಸಿದಂಥ, ಮಾತುಗಳನ್ನು ನೀವು ಕೇಳಿದ್ದಕ್ಕೋಸ್ಕರ ಭಯಪಡಬೇಡಿರಿ.

7 See, I will put a spirit into him, and bad news will come to his ears, and he will go back to his land; and there I will have him put to death by the sword.ಇಗೋ, ನಾನು ಅವನ ಮೇಲೆ ಗಾಳಿಯನ್ನು ಕಳುಹಿಸುವೆನು. ಅವನು ಒಂದು ಸುದ್ದಿ ಯನ್ನು ಕೇಳಿ ತನ್ನ ದೇಶಕ್ಕೆ ಹಿಂತಿರುಗುವನು. ಇದಲ್ಲದೆ ತನ್ನ ದೇಶದಲ್ಲಿ ಕತ್ತಿಯಿಂದ ಅವನನ್ನು ಬೀಳಮಾಡು ವೆನು ಎಂದು ಕರ್ತನು ಹೇಳುತ್ತಾನೆ ಅಂದನು.

8 So the Rab-shakeh went back, and when he got there the king of Assyria was making war against Libnah, for it had come to his ears that he had gone away from Lachish.ರಬ್ಷಾಕೆಯು ತಿರಿಗಿ ಹೋಗುತ್ತಿರುವಾಗ ಲಿಬ್ನದ ಮೇಲೆ ಯುದ್ಧಮಾಡುತ್ತಿರುವ ಅಶ್ಶೂರಿನ ಅರಸನನ್ನು ಕಂಡುಕೊಂಡನು. ಲಾಕೀಷನ್ನು ಬಿಟ್ಟನೆಂದು ಕೇಳಿದ್ದನು.

9 And when news came to him that Tirhakah, king of Ethiopia, had made an attack on him, he sent representatives to Hezekiah again, saying,ಆಗ ಅವನು ಕೂಷಿನ ಅರಸನಾದ ತಿರ್ಹಾಕನನ್ನು ಕುರಿತು--ಇಗೋ, ಅವನು ನಿನ್ನ ಮೇಲೆ ಯುದ್ಧ ಮಾಡಲು ಹೊರಟಿದ್ದಾನೆಂದು ಕೇಳಿದಾಗ ತಿರಿಗಿ ಹಿಜ್ಕೀ ಯನ ಬಳಿಗೆ ಸೇವಕರನ್ನು ಕಳುಹಿಸಿ ಹೇಳಿದ್ದೇನಂದರೆ

10 This is what you are to say to Hezekiah, king of Judah: Let not your God, in whom is your faith, give you a false hope, saying, Jerusalem will not be given into the hands of the king of Assyria.ನೀವು ಯೆಹೂದದ ಅರಸನಾದ ಹಿಜ್ಕೀಯನಿಗೆ ಹೇಳಬೇಕಾದದ್ದೇನಂದರೆ--ಯೆರೂಸಲೇಮು ಅಶ್ಶೂ ರಿನ ಅರಸನ ಕೈಯಲ್ಲಿ ಒಪ್ಪಿಸಲ್ಪಡುವದಿಲ್ಲವೆಂದು ನೀನು ನಂಬಿರುವ ನಿನ್ನ ದೇವರು ನಿನ್ನನ್ನು ಮೋಸಗೊಳಿಸ ದಿರಲಿ.

11 No doubt the story has come to your ears of what the kings of Assyria have done to all lands, putting them to the curse; and will you be kept safe?ಇಗೋ, ಅಶ್ಶೂರಿನ ಅರಸುಗಳು ಎಲ್ಲಾ ದೇಶಗಳನ್ನು ಶಾಪಕೊಟ್ಟು ನಿರ್ಮೂಲ ಮಾಡಿದ ವರ್ತ ಮಾನವನ್ನು ಕೇಳಿದಿ. ಆದರೆ ನೀನು ತಪ್ಪಿಸಿಕೊಳ್ಳು ವಿಯೋ?

12 Did the gods of the nations keep safe those on whom my fathers sent destruction, Gozan and Haran and Rezeph and the children of Eden who were in Telassar?ನನ್ನ ತಂದೆಗಳು ಹಾಳು ಮಾಡಿದ ಗೋಜಾನ್‌, ಖಾರಾನ್‌, ರೆಚೆಫ್‌, ತೆಲಸ್ಸಾರ್‌ನಲ್ಲಿದ್ದ ಎದೆನಿನ ಮಕ್ಕಳು,

13 Where is the king of Hamath, and the king of Arpad, and the king of the town of Sepharvaim, of Hena and of Ivvah?ಈ ಜನಾಂಗಗಳ ದೇವರುಗಳು ಅವರನ್ನು ತಪ್ಪಿಸಿ ಬಿಟ್ಟರೋ? ಹಮಾತಿನ ಅರಸನೂ ಅರ್ಫಾದಿನ ಅರಸನೂ ಸೆಫರ್ವಯಿಮ್‌ ಪಟ್ಟಣದ, ಹೇನ, ಇವ್ವಾ ಅರಸನೂ ಎಲ್ಲಿ ಎಂಬದೇ.

14 And Hezekiah took the letter from the hands of those who had come with it; and after reading it, Hezekiah went up to the house of the Lord, opening the letter there before the Lord.ಹಿಜ್ಕೀ ಯನು ಸೇವಕರ ಕೈಯಿಂದ ಪತ್ರವನ್ನು ತಕ್ಕೊಂಡು ಓದಿದಾಗ ಹಿಜ್ಕೀಯನು ಕರ್ತನ ಮನೆಗೆ ಹೋಗಿ ಅದನ್ನು ಕರ್ತನ ಮುಂದೆ ಹಾಸಿದನು.

15 And Hezekiah made his prayer to the Lord, saying, O Lord, the God of Israel, seated between the winged ones, you only are the God of all the kingdoms of the earth; you have made heaven and earth.ಇದಲ್ಲದೆ ಹಿಜ್ಕೀಯನು ಕರ್ತನ ಮುಂದೆ ಪ್ರಾರ್ಥನೆ ಮಾಡಿ ಹೇಳಿದ್ದೇನಂದರೆ--ಕೆರೂಬಿಗಳ ಮಧ್ಯದಲ್ಲಿ ವಾಸ ವಾಗಿರುವ ಇಸ್ರಾಯೇಲಿನ ದೇವರಾದ ಕರ್ತನೇ, ನೀನೊಬ್ಬನೇ ಭೂಮಿಯ ಎಲ್ಲಾ ರಾಜ್ಯಗಳಿಗೆ ದೇವ ರಾಗಿದ್ದೀ.

16 Let your ear be turned to us, O Lord, and let your eyes be open, O Lord, and see; take note of all the words of Sennacherib who has sent men to say evil against the living God.ನೀನೇ ಆಕಾಶವನ್ನೂ ಭೂಮಿಯನ್ನೂ ಉಂಟು ಮಾಡಿದ್ದೀ. ಕರ್ತನೇ, ಕಿವಿ ಕೊಟ್ಟು ಕೇಳು; ಕರ್ತನೆ, ಕಣ್ಣುಗಳನ್ನು ತೆರೆದುನೋಡು. ಸನ್ಹೇರೀಬನು ಜೀವವುಳ್ಳ ದೇವರನ್ನು ನಿಂದಿಸಿ ಕಳುಹಿಸಿದ ಮಾತು ಗಳನ್ನು ಕೇಳು.

17 Truly, O Lord, the kings of Assyria have made waste the nations and their lands,ಕರ್ತನೇ, ನಿಶ್ಚಯವಾಗಿ ಅಶ್ಶೂರಿನ ಅರಸುಗಳು ಜನಾಂಗಗಳನ್ನೂ ಅವರ ದೇಶಗಳನ್ನೂ ಹಾಳು ಮಾಡಿ ಅವರ ದೇವರುಗಳನ್ನು ಬೆಂಕಿಯಲ್ಲಿ ಹಾಕಿದ್ದಾರೆ.

18 And have given their gods to the fire; for they were no gods, but wood and stone, the work of men's hands; so they have given them to destruction.ಅವು ದೇವರುಗಳಲ್ಲ, ಮನುಷ್ಯನ ಕೈಕೆಲಸವಾದ ಕಟ್ಟಿಗೆಯೂ ಕಲ್ಲೂ ಆಗಿದ್ದವು.

19 But now, O Lord our God, give us salvation from his hands, so that it may be clear to all the kingdoms of the earth that you and only you, O Lord, are God.ಆದದ ರಿಂದ ಅವರು ಅವುಗಳನ್ನು ನಾಶಮಾಡಿದ್ದಾರೆ. ಆದರೆ ಈಗ ನಮ್ಮ ದೇವರಾದ ಕರ್ತನೇ, ನೀನೊಬ್ಬನೇ ದೇವರಾದ ಕರ್ತನಾಗಿದ್ದೀ ಎಂದು ಭೂಮಿಯ ಎಲ್ಲಾ ರಾಜ್ಯಗಳೂ ತಿಳಿಯುವ ಹಾಗೆ ನಮ್ಮನ್ನು ಅವನ ಕೈಯಿಂದ ತಪ್ಪಿಸಿ ರಕ್ಷಿಸು ಎಂಬದೇ.

20 Then Isaiah, the son of Amoz, sent to Hezekiah, saying, The Lord, the God of Israel, says, The prayer which you have made to me against Sennacherib, king of Assyria, has come to my ears.ಆಗ ಆಮೋಚನ ಮಗನಾದ ಯೆಶಾಯನು ಹಿಜ್ಕೀಯನಿಗೆ ಹೇಳಿ ಕಳುಹಿಸಿದ್ದೇನಂದರೆ--ಇಸ್ರಾ ಯೇಲಿನ ದೇವರಾದ ಕರ್ತನು ಹೀಗೆ ಹೇಳುತ್ತಾನೆ --ಅಶ್ಶೂರಿನ ಅರಸನಾದ ಸನ್ಹೇರೀಬನನ್ನು ಕುರಿತು ನೀನು ನನಗೆ ಪ್ರಾರ್ಥನೆ ಮಾಡಿದ್ದನ್ನು ನಾನು ಕೇಳಿ ದ್ದೇನೆ. ಕರ್ತನು ಅವನನ್ನು ಕುರಿತು ಹೇಳಿದ ವಾಕ್ಯ ವೇನಂದರೆ--

21 This is the word which the Lord has said about him: In the eyes of the virgin daughter of Zion you are shamed and laughed at; the daughter of Jerusalem has made sport of you.ಚೀಯೋನಿನ ಮಗಳಾದ ಕನ್ಯಾಸ್ತ್ರೀ ನಿನ್ನನ್ನು ಉದಾಸೀನ ಮಾಡಿ ನಿನಗೆ ಅಪಹಾಸ್ಯ ಮಾಡು ತ್ತಾಳೆ; ಯೆರೂಸಲೇಮಿನ ಕುಮಾರ್ತೆ ನಿನ್ನ ಹಿಂದೆ ತಲೆ ಅಲ್ಲಾಡಿಸುತ್ತಾಳೆ.

22 Against whom have you said evil and bitter things? against whom has your voice been loud and your eyes lifted up? even against the Holy One of Israel.ಯಾರನ್ನು ನಿಂದಿಸಿ ದೂಷಿ ಸಿದಿ? ಯಾರಿಗೆ ವಿರೋಧವಾಗಿ ಸ್ವರವನ್ನು ಎತ್ತಿ ನಿನ್ನ ಕಣ್ಣುಗಳನ್ನು ಮೇಲಕ್ಕೆ ಎತ್ತಿದಿ? ಇಸ್ರಾಯೇಲಿನ ಪರಿಶುದ್ಧನಿಗೆ ವಿರೋಧವಾಗಿಯೇ.

23 You have sent your servants with evil words against the Lord, and have said, With all my war-carriages I have come up to the top of the mountains, to the inmost parts of Lebanon; its tall cedars will be cut down, and the best trees of its woods; I will come up into his highest places, into his thick woods.ನಿನ್ನ ಸೇವಕರ ಮುಖಾಂತರ ಕರ್ತನನ್ನು ನಿಂದಿಸಿ ಹೇಳಿದ್ದು--ನಾನು ನನ್ನ ಹೆಚ್ಚಾದ ರಥಗಳಿಂದ ಪರ್ವತಗಳ ಶಿಖರಕ್ಕೂ ಲೆಬನೋನಿನ ಪಾರ್ಶ್ವಗಳಿಗೂ ಹೋಗಿ ಅದರ ಉನ್ನತ ವಾದ ದೇವದಾರುಗಳನ್ನೂ ಅದರ ಮುಖ್ಯವಾದ ತುರಾಯಿ ಮರಗಳನ್ನೂ ಕಡಿದು ಅದರ ಅಂಚಿನ ಗಡಿ ಸ್ಥಳಗಳಲ್ಲಿಯೂ ಅದರ ಫಲವುಳ್ಳ ಅಡವಿಯ ಲ್ಲಿಯೂ ಸೇರುತ್ತೇನೆ.

24 I have made water-holes and taken their waters, and with my foot I have made all the rivers of Egypt dry.ನಾನು ಅಗೆದು ಅನ್ಯರ ನೀರನ್ನು ಕುಡಿದಿದ್ದೇನೆ; ನನ್ನ ಅಂಗಾಲುಗಳಿಂದ ಕೋಟೆ ಸ್ಥಳಗಳ ಪ್ರವಾಹಗಳನ್ನು ಬತ್ತಿಹೋಗುವಂತೆ ಮಾಡಿ ದ್ದೇನೆ.

25 Has it not come to your ears how I did it long before, purposing it in times long past? Now I have given effect to my design, so that by you strong towns might be turned into masses of broken walls.ನಾನು ಅದನ್ನು ಮಾಡಿದೆನೆಂದು ನೀನು ಬಹುಕಾಲದಿಂದಲೂ ನಾನು ಅದನ್ನು ನಿರೂಪಿಸಿದ್ದೇ ನೆಂದು ನೀನು ಪೂರ್ವದ ದಿವಸಗಳಿಂದಲೂ ಕೇಳ ಲಿಲ್ಲವೋ? ಈಗ ಅದನ್ನು ನಾನು ಅನುಭವಿಸುವಂತೆ ಮಾಡಿದ್ದೇನೆ, ನೀನು ಬಲವಾದ ಪಟ್ಟಣಗಳನ್ನು ಹಾಳಾದ ದಿಬ್ಬೆಗಳಾಗಿ ಮಾಡಿಬಿಡುವ ಹಾಗೆ ಇರು ವದೇ.

26 This is why their townsmen had no power, they were broken and put to shame; they were like the grass of the field and the green plant, like grass on the house-tops.ಆದದರಿಂದ ಅವುಗಳ ನಿವಾಸಿಗಳು ಬಲ ಹೀನರಾಗಿ ಹೆದರಿ ನಾಚಿಕೆಪಟ್ಟರು. ಹೊಲದ ಹುಲ್ಲಿನ ಹಾಗೆಯೂ ಹಸುರು ಪಲ್ಯದ ಹಾಗೆಯೂ ಮಾಳಿಗೆಗೆಳ ಮೇಲಿರುವ ಹುಲ್ಲಿನ ಹಾಗೆಯೂ ಬೆಳೆಯುವದಕ್ಕಿಂತ ಮುಂಚೆ ಬಾಡುವ ಪೈರಿನ ಹಾಗೆಯೂ ಇದ್ದರು.

27 But I have knowledge of your getting up and your resting, of your going out and your coming in.ನಿನ್ನ ಕೂತಿರುವಿಕೆಯನ್ನೂ ಹೊರಡುವಿಕೆಯನ್ನೂ ನಿನ್ನ ಬರುವಿಕೆಯನ್ನೂ ನೀನು ನನಗೆ ವಿರೋಧವಾಗಿ ಮಾಡುವ ರೌದ್ರವನ್ನೂ ನಾನು ಬಲ್ಲೆನು.

28 Because your wrath against me and your words of pride have come up to my ears, I will put my hook in your nose and my cord in your lips, and I will make you go back by the way you came.ನೀನು ನನಗೆ ವಿರೋಧವಾಗಿ ಮಾಡುವ ನಿನ್ನ ರೌದ್ರವೂ ನಿನ್ನ ಅಹಂಕಾರವೂ ನನ್ನ ಕಿವಿಗಳಲ್ಲಿ ಬಂದದರಿಂದ ನಾನು ನನ್ನ ಕೊಂಡಿಯನ್ನು ನಿನ್ನ ಮೂಗಿನಲ್ಲಿಯೂ ನನ್ನ ಕಡಿವಾಣವನ್ನು ನಿನ್ನ ಬಾಯಲ್ಲಿಯೂ ಹಾಕಿ ನೀನು ಬಂದ ಮಾರ್ಗದಲ್ಲಿ ನಿನ್ನನ್ನು ಹಿಂತಿರುಗಿಸುವೆನು.

29 And this will be the sign to you: you will get your food this year from what comes up of itself; and in the second year from the produce of the same; and in the third year you will put in your seed and get in the grain and make vine-gardens and take of their fruit.ನಿನಗೆ ಗುರುತು ಇದೇ--ಈ ವರುಷದಲ್ಲಿ ತನ್ನಷ್ಟಕ್ಕೆ ತಾನೇ ಬೆಳೆದದ್ದನ್ನೂ ಎರಡನೇ ವರುಷದಲ್ಲಿ ಅದರಿಂದ ಮೊಳೆತದ್ದನ್ನೂ ತಿನ್ನುವಿರಿ; ಆದರೆ ಮೂರನೇ ವರುಷ ದಲ್ಲಿ ನೀವು ಬಿತ್ತಿ ಕೊಯ್ಯಿರಿ; ದ್ರಾಕ್ಷೇ ತೋಟಗಳನ್ನು ನೆಟ್ಟು ಅವುಗಳ ಫಲಗಳನ್ನು ತಿನ್ನಿರಿ.

30 And those of Judah who are still living will again take root in the earth and give fruit.ಯೆಹೂದದ ಮನೆತನದಲ್ಲಿ ಉಳಿದು ತಪ್ಪಿಸಿಕೊಂಡವರು ತಿರಿಗಿ ಕೆಳಗೆ ಬೇರೂರಿ ಮೇಲಕ್ಕೆ ಫಲ ಬಿಡುವರು.

31 For from Jerusalem those who have been kept safe will go out, and those who are still living will go out of Mount Zion: by the fixed purpose of the Lord of armies this will be done.ಯೆರೂ ಸಲೇಮಿನಿಂದ ಉಳಿದವರೂ ಚಿಯೋನ್‌ ಪರ್ವತ ದಿಂದ ತಪ್ಪಿಸಿಕೊಂಡವರೂ ಹೊರಡುವರು. ಸೈನ್ಯಗಳ ಕರ್ತನ ಆಸಕ್ತಿಯು ಇದನ್ನು ಮಾಡುವದು.

32 For this cause the Lord says about the king of Assyria, He will not come into this town, or send an arrow against it; he will not come before it with arms, or put up an earthwork against it;ಆದ ದರಿಂದ ಕರ್ತನು ಅಶ್ಶೂರಿನ ಅರಸನನ್ನು ಕುರಿತು ಹೇಳುವದೇನಂದರೆ--ಅವನು ಈ ಪಟ್ಟಣದಲ್ಲಿ ಬರು ವದಿಲ್ಲ; ಅಲ್ಲಿ ಬಾಣವನ್ನು ಎಸೆಯುವದಿಲ್ಲ; ಗುರಾಣಿ ಹಿಡಿದುಕೊಂಡು ಅದರ ಮುಂದೆ ಸೇರುವದಿಲ್ಲ; ಅದಕ್ಕೆ ವಿರೋಧವಾಗಿ ದಿನ್ನೆಯನ್ನು ಹಾಕುವದಿಲ್ಲ.

33 By the way he came he will go back, and he will not get into this town, says the Lord.ಅವನು ಬಂದ ಮಾರ್ಗವಾಗಿಯೇ ತಿರಿಗಿ ಹೋಗುವನು; ಆದರೆ ಅವನು ಈ ಪಟ್ಟಣದಲ್ಲಿ ಬರುವದಿಲ್ಲವೆಂದು ಕರ್ತನು ಹೇಳುತ್ತಾನೆ.

34 For I will keep this town safe, for my honour, and for the honour of my servant David.ನನ್ನ ನಿಮಿತ್ತವೂ ನನ್ನ ಸೇವಕನಾದ ದಾವೀದನ ನಿಮಿತ್ತವೂ ನಾನು ಈ ಪಟ್ಟಣವನ್ನು ಕಾಪಾಡಿ ಅದನ್ನು ರಕ್ಷಿಸುವೆನು ಎಂಬದೇ.

35 And that night the angel of the Lord went out and put to death in the army of the Assyrians a hundred and eighty-five thousand men; and when the people got up early in the morning, there was nothing to be seen but dead bodies.ಅದೇ ರಾತ್ರಿಯಲ್ಲಿ ಏನಾಯಿತಂದರೆ, ಕರ್ತನ ದೂತನು ಹೊರಟು ಅಶ್ಶೂರಿನ ದಂಡಿನಲ್ಲಿ ಒಂದು ಲಕ್ಷ ಎಂಭತ್ತೈದು ಸಾವಿರ ಜನರನ್ನು ಸಂಹರಿಸಿದನು. ಉದಯದಲ್ಲಿ ಜನರು ಎದ್ದಾಗ ಇಗೋ, ಅವರೆಲ್ಲರೂ ಸತ್ತು ಹೆಣಗಳಾಗಿದ್ದರು.

36 So Sennacherib, king of Assyria, went back to his place at Nineveh.ಅಶ್ಶೂರಿನ ಅರಸನಾದ ಸನ್ಹೇರೀಬನು ಹಿಂತಿರುಗಿಹೋಗಿ ನಿನೆವೆಯಲ್ಲಿ ವಾಸ ವಾಗಿದ್ದನು.

37 And it came about, when he was worshipping in the house of Nisroch his god, that his sons Adrammelech and Sharezer put him to death with the sword; and they went in flight into the land of Ararat. And Esar-haddon his son became king in his place.ಅವನು ತನ್ನ ದೇವರಾದ ನಿಸ್ರೋಕನ ಮನೆಯಲ್ಲಿ ಆರಾಧಿಸುತ್ತಿರುವಾಗ ಅವನ ಮಕ್ಕಳಾದ ಅದ್ರಮ್ಮೆಲೆಕನೂ ಸರೆಚೆರನೂ ಅವನನ್ನು ಕತ್ತಿಯಿಂದ ಹೊಡೆದು ಅರರಾಟ್‌ ದೇಶಕ್ಕೆ ತಪ್ಪಿಸಿಕೊಂಡು ಹೋದರು. ಅವನ ಮಗನಾದ ಏಸರ್‌ಹದ್ದೋನನು ಅವನಿಗೆ ಬದಲಾಗಿ ಅರಸನಾದನು.

Kannada Bible