Bible

2 Chronicles 9 - DBY (Kannada)

1 And the queen of Sheba heard of the fame of Solomon, and came to Jerusalem to prove Solomon with enigmas; with a very great train, and camels that bore spices and gold in great abundance, and precious stones; and she came to Solomon, and spoke with him of all that was in her heart.1 ಶೆಬದ ರಾಣಿಯು ಸೊಲೊಮೋನನ ಕೀರ್ತಿಯನ್ನು ಕೇಳಿದಾಗ ಒಗಟುಗಳಿಂದ ಅವನನ್ನು ಶೋಧಿಸಲು ಅವಳು ಮಹಾಗುಂಪಿನ ಸಂಗಡ ಸುಗಂಧಗಳನ್ನೂ ಬಹು ಬಂಗಾರವನ್ನೂ ಅಮೂಲ್ಯವಾದ ಕಲ್ಲುಗಳನ್ನೂ ಹೊತ್ತುಕೊಂಡಿರುವ ಒಂಟೆಗಳ ಸಂಗಡ ಯೆರೂಸಲೇಮಿಗೆ ಬಂದಳು. ಅವಳು ಸೊಲೊಮೋನನ ಬಳಿಗೆ ಬಂದ ಮೇಲೆ ತನ್ನ ಹೃದಯದಲ್ಲಿದ್ದ ಎಲ್ಲವನ್ನು ಅವನ ಸಂಗಡ ಮಾತಾ ಡಿದಳು.

2 And Solomon explained to her all she spoke of, and there was not a thing hidden from Solomon that he did not explain to her.ಆಗ ಸೊಲೊಮೋನನು ಅವಳ ಪ್ರಶ್ನೆ ಗಳಿಗೆಲ್ಲಾ ಉತ್ತರಕೊಟ್ಟನು. ಸೊಲೊಮೋನನು ಅವ ಳಿಗೆ ಉತ್ತರ ಕೊಡದಂಥ, ಅವನಿಗೆ ಬಚ್ಚಿಡಲ್ಪಟ್ಟಿದ್ದು ಒಂದೂ ಇರಲಿಲ್ಲ.

3 And when the queen of Sheba saw the wisdom of Solomon, and the house that he had built,ಶೆಬದ ರಾಣಿಯು ಸೊಲೊ ಮೋನನ ಜ್ಞಾನವನ್ನೂ ಅವನು ಕಟ್ಟಿಸಿದ ಮನೆಯನ್ನೂ

4 and the food of his table, and the deportment of his servants, and the order of service of his attendants and their apparel, and his cupbearers and their apparel, and his ascent by which he went up to the house of Jehovah, there was no more spirit in her.ಅವನ ಮೇಜಿನ ಭೋಜನವನ್ನೂ ಅವನ ಸೇವಕರು ಕೂತಿರುವದನ್ನೂ ನಿಂತಿರುವದನ್ನೂ ಅವನ ವಸ್ತ್ರಗಳನ್ನೂ ಅವನ ಪಾನದಾಯಕರನ್ನೂ ಅವರ ವಸ್ತ್ರಗಳನ್ನೂ ಅವನು ಕರ್ತನ ಆಲಯಕ್ಕೆ ಹೋಗುವ ಮಾರ್ಗವನ್ನೂ ನೋಡಿದಾಗ ಅವಳಿಗೆ ವಿಸ್ಮಯವಾಯಿತು.

5 And she said to the king, It was a true report that I heard in mine own land of thine affairs and of thy wisdom;ಅವಳು ಅರಸನಿಗೆ ನನ್ನ ದೇಶದಲ್ಲಿ ನಿನ್ನ ಕ್ರಿಯೆಗಳನ್ನು ಕುರಿತೂ ನಿನ್ನ ಜ್ಞಾನವನ್ನು ಕುರಿತೂ ನಾನು ಕೇಳಿದ ಮಾತು ಸತ್ಯ.

6 but I gave no credit to their words, until I came and mine eyes had seen; and behold, the half of the greatness of thy wisdom was not told me: thou exceedest the report that I heard.ಆದರೆ ನಾನು ಬಂದು ನನ್ನ ಕಣ್ಣುಗಳಿಂದ ನೋಡುವ ವರೆಗೆ ಆ ಮಾತುಗಳನ್ನು ನಂಬದೆ ಹೋದೆನು; ಇಗೋ, ನಿನ್ನ ಮಹಾಜ್ಞಾನದಲ್ಲಿ ಅರ್ಧ ವಾದರೂ ನನಗೆ ಹೇಳಲ್ಪಟ್ಟಿದ್ದಿಲ್ಲ; ನಾನು ಕೇಳಿದ್ದಕ್ಕಿಂತ ನಿನ್ನ ಕೀರ್ತಿ ಅಧಿಕವಾಗಿರುವದು.

7 Happy are thy men, and happy are these thy servants, who stand continually before thee and hear thy wisdom!ನಿನ್ನ ಮನುಷ್ಯರು ಭಾಗ್ಯವಂತರು; ನಿನ್ನ ಮುಂದೆ ಯಾವಾಗಲೂ ನಿಂತು ನಿನ್ನ ಜ್ಞಾನವನ್ನು ಕೇಳುವ ಈ ನಿನ್ನ ಸೇವಕರು ಭಾಗ್ಯ ವಂತರು.

8 Blessed be Jehovah thy God, who delighted in thee, to set thee on his throne, to be king to Jehovah thy God! Because thy God loved Israel, to establish them for ever, therefore did he make thee king over them, to do judgment and justice.ನಿನ್ನ ಕರ್ತನಾದ ದೇವರಿಗೋಸ್ಕರ ಅರಸ ನಾಗಿರಲು ತನ್ನ ಸಿಂಹಾಸನದ ಮೇಲೆ ನಿನ್ನನ್ನು ಇರಿ ಸಲು ನಿನ್ನಲ್ಲಿ ಇಷ್ಟಪಟ್ಟ ನಿನ್ನ ದೇವರಾದ ಕರ್ತನು ಸ್ತುತಿಸಲ್ಪಡಲಿ. ನಿನ್ನ ದೇವರು ಇಸ್ರಾಯೇಲನ್ನು ಯುಗ ಯುಗಕ್ಕೂ ನಿಲ್ಲಿಸಲು ಅವರನ್ನು ಪ್ರೀತಿಮಾಡಿದ್ದರಿಂದ ನ್ಯಾಯವನ್ನೂ ನೀತಿಯನ್ನೂ ನಡಿಸಲು ಆತನು ನಿನ್ನನ್ನು ಅವರ ಮೇಲೆ ಅರಸನಾಗಿರಲು ಮಾಡಿದನು ಅಂದಳು.

9 And she gave the king a hundred and twenty talents of gold, and spices in very great abundance, and precious stones; neither was there any such spice as that which the queen of Sheba gave to king Solomon.ಅವಳು ಅರಸನಿಗೆ ನೂರಿಪ್ಪತ್ತು ತಲಾಂತು ತೂಕ ಬಂಗಾರವನ್ನೂ ಬಹು ಹೆಚ್ಚಾದ ಸುಗಂಧಗಳನ್ನೂ ಅಮೂಲ್ಯವಾದ ಕಲ್ಲುಗಳನ್ನೂ ಕೊಟ್ಟಳು. ಶೆಬದ ರಾಣಿಯು ಅರಸನಾದ ಸೊಲೊಮೋನನಿಗೆ ಕೊಟ್ಟಂಥ ಸುಂಗಧಗಳು ತರುವಾಯ ಬಂದದ್ದಿಲ್ಲ.

10 (And the servants also of Huram, and the servants of Solomon, who brought gold from Ophir, brought sandal-wood and precious stones.ಇದಲ್ಲದೆ ಓಫೀರಿನಿಂದ ಬಂಗಾರವನ್ನು ತಂದ ಹೂರಾಮನ ಸೇವಕರೂ ಸೊಲೊಮೋನನ ಸೇವ ಕರೂ ಅಲ್ಮಗ್‌ ಮರಗಳನ್ನೂ ಅಮೂಲ್ಯವಾದ ಕಲ್ಲುಗ ಳನ್ನೂ ತಂದರು.

11 And the king made of the sandal-wood stairs for the house of Jehovah, and for the king's house, and harps and lutes for the singers. And there were none such seen before in the land of Judah.)ಅರಸನು ಆ ಸುಗಂಧ ಮರಗಳಿಂದ ಕರ್ತನ ಆಲಯಕ್ಕೋಸ್ಕರ ಅರಸನ ಮನೆಗೋಸ್ಕರವೂ ಸೋಪಾನಗಳನ್ನೂ ಹಾಡುವವರಿಗೋಸ್ಕರ ಕಿನ್ನರಿಗ ಳನ್ನೂ ವೀಣೆಗಳನ್ನೂ ಮಾಡಿಸಿದನು; ಯೆಹೂದ ದೇಶದಲ್ಲಿ ಅದಕ್ಕಿಂತ ಮುಂಚೆ ಅಂಥವುಗಳು ಕಾಣಲಿಲ್ಲ.

12 And king Solomon gave to the queen of Sheba all her desire, whatever she asked, besides what she had brought to the king. And she turned and went to her own land, she and her servants.ಶೆಬದ ರಾಣಿಯು ಅರಸನಿಗೆ ತಂದದ್ದಕ್ಕೆ ಬದ ಲಾಗಿ ಅರಸನಾದ ಸೊಲೊಮೋನನು ಕೊಟ್ಟದ್ದು ಹೊರತಾಗಿ ಅವಳು ಇಚ್ಛಿಸಿ ಕೇಳಿದ್ದನ್ನೆಲ್ಲಾ ಅವಳಿಗೆ ಕೊಟ್ಟನು. ಆಗ ಅವಳು ತಿರಿಗಿಕೊಂಡು ತನ್ನ ದೇಶಕ್ಕೆ ಹೋದಳು; ಅವಳೂ ಅವಳ ಸೇವಕರೂ ಕೂಡ ಹೋದರು.

13 And the weight of gold that came to Solomon in one year was six hundred and sixty-six talents of gold,ಆದರೆ ವರ್ತಕರೂ ವ್ಯಾಪಾರಸ್ಥರೂ ತಂದದ್ದು ಹೊರತಾಗಿ ಒಂದು ವರುಷದಲ್ಲಿ ಸೊಲೊಮೋನನಿಗೆ ಬಂದ ಬಂಗಾರದ ತೂಕವು ಆರುನೂರ ಅರವತ್ತಾರು ತಲಾಂತು ತೂಕ ಬಂಗಾರವಾಗಿತ್ತು.

14 besides [what] dealers and merchants brought, and [what] all the kings of Arabia and the governors of the country brought of gold and silver to Solomon.ಇದಲ್ಲದೆ ಅರಬಸ್ಥಾನದ ಅರಸುಗಳೂ ದೇಶದ ಅಧಿಪತಿಗಳೂ ಸೊಲೊಮೋನನಿಗೆ ಬೆಳ್ಳಿಬಂಗಾರವನ್ನು ತಂದರು.

15 And king Solomon made two hundred targets of beaten gold, -- he applied six hundred [shekels] of beaten gold to one target;ಅರಸನಾದ ಸೊಲೊಮೋನನು ಅಪರಂಜಿಯಿಂದ ಇನ್ನೂರು ಖೇಡ್ಯಗಳನ್ನು ಮಾಡಿಸಿದನು. ಒಂದೊಂದು ಖೇಡ್ಯಕ್ಕೆ ಆರುನೂರು ಶೆಕೇಲು ತೂಕ ಅಪರಂಜಿ ಇತ್ತು.

16 and three hundred shields of beaten gold, -- he applied three hundred [shekels] of gold to one shield; and the king put them in the house of the forest of Lebanon.ಹಾಗೆಯೇ ಅಪರಂಜಿಯಿಂದ ಮುನ್ನೂರು ಗುರಾಣಿಗಳನ್ನು ಮಾಡಿಸಿದನು. ಒಂದೊಂದು ಗುರಾ ಣಿಗೆ ಮುನ್ನೂರು ಶೆಕೇಲು ಅಪರಂಜಿ ಇತ್ತು. ಅರಸನು ಇವುಗಳನ್ನು ಲೆಬನೋನಿನ ಅಡವಿಯ ಮನೆಯಲ್ಲಿ ಇಟ್ಟನು.

17 And the king made a great throne of ivory, and overlaid it with pure gold;ಇದಲ್ಲದೆ ಅರಸನು ದಂತದಿಂದ ದೊಡ್ಡ ಸಿಂಹಾ ಸನವನ್ನು ಮಾಡಿಸಿ ಅದನ್ನು ಅಪರಂಜಿಯಿಂದ ಹೊದಿ ಸಿದನು.

18 and the throne had six steps, with a footstool of gold fastened to the throne; and there were arms on each side at the place of the seat, and two lions stood beside the arms;ಈ ಸಿಂಹಾಸನಕ್ಕೆ ಆರು ಮೆಟ್ಟಲುಗಳು ಇದ್ದವು. ಸಿಂಹಾಸನಕ್ಕೆ ತಗಲಿಸಲ್ಪಟ್ಟ ಬಂಗಾರದ ಪಾದ ಪೀಠ ಇತ್ತು. ಕುಳಿತುಕೊಳ್ಳುವ ಸ್ಥಳದ ಎರಡು ಪಾರ್ಶ್ವ ದಲ್ಲಿಯೂ ಕೈಗಳಿದ್ದವು; ಆ ಕೈಗಳ ಬಳಿಯಲ್ಲಿ ಎರಡು ಸಿಂಹಗಳು ನಿಂತಿದ್ದವು.

19 and twelve lions stood there on the one side and on the other upon the six steps: there was not the like made in any kingdom.ಹನ್ನೆರಡು ಸಿಂಹಗಳು ಆರು ಮೆಟ್ಟಲುಗಳ ಮೇಲೆ ಎರಡು ಪಾರ್ಶ್ವದಲ್ಲಿ ನಿಂತಿ ದ್ದವು. ಯಾವ ರಾಜ್ಯದಲ್ಲಿಯೂ ಅಂಥದ್ದು ಮಾಡಿ ದ್ದಿಲ್ಲ.

20 And all king Solomon's drinking vessels were of gold, and all the vessels of the house of the forest of Lebanon were of precious gold: silver was not of the least account in the days of Solomon.ಅರಸನಾದ ಸೊಲೊಮೋನನು ಕುಡಿಯುವ ಪಾತ್ರೆಗಳೆಲ್ಲಾ ಬಂಗಾರದವುಗಳು. ಲೆಬನೋನಿನ ಅಡವಿಯ ಮನೆಯ ಪಾತ್ರೆಗಳೆಲ್ಲಾ ಹೀಗೆಯೇ ಅಪ ರಂಜಿಯವುಗಳು. ಬೆಳ್ಳಿಯದು ಒಂದೂ ಇರಲಿಲ್ಲ. ಸೊಲೊಮೋನನ ದಿವಸಗಳಲ್ಲಿ ಬೆಳ್ಳಿಗೆ ಬೆಲೆಯೇ ಇರಲಿಲ್ಲ.

21 For the king's ships went to Tarshish with the servants of Huram: once in three years came the ships of Tarshish, bringing gold and silver, ivory, and apes, and peacocks.ಯಾಕಂದರೆ ಹೂರಾಮನ ಸೇವಕರ ಸಂಗಡ ಅರಸನ ಹಡಗುಗಳು ತಾರ್ಷಿಷಿಗೆ ಹೋಗಿ ಮೂರು ವರುಷಕ್ಕೆ ಒಂದುಸಾರಿ ಬಂಗಾರವನ್ನೂ ಬೆಳ್ಳಿ ಯನ್ನೂ ದಂತವನ್ನೂ ಕೋತಿಗಳನ್ನೂ ನವಿಲುಗಳನ್ನೂ ತಕ್ಕೊಂಡು ಬರುತ್ತಿದ್ದವು.

22 And king Solomon was greater than all the kings of the earth in riches and wisdom.ಹೀಗೆಯೇ ಅರಸನಾದ ಸೊಲೊಮೋನನು ಐಶ್ವರ್ಯದಲ್ಲಿಯೂ ಜ್ಞಾನದ ಲ್ಲಿಯೂ ಭೂಮಿಯ ಸಮಸ್ತ ಅರಸುಗಳಿಗಿಂತ ದೊಡ್ಡವನಾಗಿದ್ದನು.

23 And all the kings of the earth sought the presence of Solomon, to hear his wisdom, which God had put in his heart.ದೇವರು ಸೊಲೊಮೋನನ ಹೃದಯದಲ್ಲಿ ಉಂಟುಮಾಡಿದ ಅವನ ಜ್ಞಾನವನ್ನು ಕೇಳುವದಕ್ಕಾಗಿ ಭೂಮಿಯ ಸಮಸ್ತ ಅರಸುಗಳು ಸೊಲೊಮೋನನ ಮುಖದರ್ಶನವನ್ನು ಹುಡುಕಿದರು.

24 And they brought every man his present, vessels of silver and vessels of gold, and clothing, armour, and spices, horses and mules, a rate year by year.ಅವರವರು ಕಾಣಿಕೆಯಾಗಿ ಬೆಳ್ಳಿಯ ಪಾತ್ರೆಗಳನ್ನೂ ಬಂಗಾರದ ಪಾತ್ರೆಗಳನ್ನೂ ವಸ್ತ್ರಗಳನ್ನೂ ಆಯುಧ ಗಳನ್ನೂ ಸುಗಂಧಗಳನ್ನೂ ಕುದುರೆಗಳನ್ನೂ ಹೇಸರ ಕತ್ತೆಗಳನ್ನೂ ವರುಷ ವರುಷಕ್ಕೂ ನೇಮಕದ ಪ್ರಕಾರ ತರುತ್ತಿದ್ದರು.

25 And Solomon had four thousand stalls for horses and chariots, and twelve thousand horsemen; and he placed them in the chariot-cities, and with the king at Jerusalem.ಸೊಲೊಮೋನನಿಗೆ ನಾಲ್ಕು ಸಾವಿರ ಜೋಡು ಕುದುರೆಗಳೂ ರಥಗಳೂ ಇದ್ದವು. ಇದ ಲ್ಲದೆ ಹನ್ನೆರಡು ಸಾವಿರ ರಾಹುತರಿದ್ದರು. ಅವರನ್ನು ರಥಗಳ ಪಟ್ಟಣಗಳಲ್ಲಿಯೂ ಅರಸನ ಬಳಿಯಲ್ಲಿ ಯೆರೂಸಲೇಮಿನಲ್ಲಿಯೂ ಇರಿಸಿದನು.

26 And he ruled over all the kings from the river as far as the land of the Philistines, and up to the border of Egypt.ಅವನು ನದಿ ಮೊದಲುಗೊಂಡು ಫಿಲಿಷ್ಟಿಯರ ದೇಶವನ್ನು ಹಿಡಿದು ಐಗುಪ್ತದ ಮೇರೆಯ ವರೆಗೂ ಇರುವ ಸಮಸ್ತ ಅರಸುಗಳ ಮೇಲೆ ಆಳುತ್ತಾ ಇದ್ದನು.

27 And the king made silver in Jerusalem as stones, and cedars made he as the sycamores that are in the lowland for abundance.ಅರಸನು ಯೆರೂಸಲೇಮಿನಲ್ಲಿ ಬೆಳ್ಳಿಯನ್ನು ಕಲ್ಲು ಗಳ ಹಾಗೆಯೂ ದೇವದಾರು ಮರಗಳನ್ನು ತಗ್ಗಿನ ಲ್ಲಿರುವ ಆಲದ ಮರಗಳ ಹಾಗೆಯೂ ಬಹಳವಾಗಿ ಮಾಡಿದನು.

28 And they brought to Solomon horses out of Egypt, and out of all lands.ಇದಲ್ಲದೆ ಐಗುಪ್ತದಿಂದಲೂ ಸಮಸ್ತ ದೇಶಗಳಿಂದಲೂ ಸೊಲೊಮೋನನಿಗೆ ಕುದುರೆಗಳನ್ನು ತಕ್ಕೊಂಡು ಬಂದರು.

29 And the rest of the acts of Solomon first and last, are they not written in the words of Nathan the prophet, and in the prophecy of Ahijah the Shilonite, and in the visions of Iddo the seer concerning Jeroboam the son of Nebat?ಸೊಲೊಮೋನನ ಮಿಕ್ಕಾದ ಕ್ರಿಯೆಗಳು, ಮೊದ ಲನೆಯವುಗಳೂ ಕಡೆಯವುಗಳೂ ಪ್ರವಾದಿಯಾದ ನಾತಾನನ ಪುಸ್ತಕದಲ್ಲಿಯೂ ಶೀಲೋವಿನವನಾದ ಅಹೀಯನ ಪ್ರವಾದನೆಯಲ್ಲಿಯೂ ದರ್ಶಿಯಾದ ಇದ್ದೋವನು ನೆಬಾಟನ ಮಗನಾದ ಯಾರೊಬ್ಬಾಮ ನಿಗೆ ವಿರೋಧವಾಗಿ ಹೇಳಿದ ದರ್ಶನಗಳಲ್ಲಿಯೂ ಅವು ಬರೆಯಲ್ಪಟ್ಟವಲ್ಲವೋ?

30 And Solomon reigned in Jerusalem over all Israel forty years.ಹೀಗೆಯೇ ಸೊಲೊ ಮೋನನು ಯೆರೂಸಲೇಮಿನಲ್ಲಿ ಸಮಸ್ತ ಇಸ್ರಾಯೇ ಲಿನ ಮೇಲೆ ನಾಲ್ವತ್ತು ವರುಷಗಳು ಆಳಿದನು.

31 And Solomon slept with his fathers, and they buried him in the city of David his father; and Rehoboam his son reigned in his stead.ಸೊಲೊಮೋನನು ತನ್ನ ಪಿತೃಗಳ ಸಂಗಡ ಮಲಗಿ ದನು; ತನ್ನ ತಂದೆಯಾದ ದಾವೀದನ ಪಟ್ಟಣದಲ್ಲಿ ಹೂಣಿಡಲ್ಪಟ್ಟನು. ಅವನ ಮಗನಾದ ರೆಹಬ್ಬಾಮನು ಅವನಿಗೆ ಬದಲಾಗಿ ಆಳಿದನು.

Kannada Bible