1 Corinthians 13 - WEB (Kannada)
1 If I speak with the languages of men and of angels, but don't have love, I have become sounding brass, or a clanging cymbal.ನಾನು ಮನುಷ್ಯರ ಮತ್ತು ದೂತರ ಭಾಷೆಗಳನ್ನು ಆಡುವವನಾದರೂ ಪ್ರೀತಿ ಯಿಲ್ಲದವನಾಗಿದ್ದರೆ ನಾದಕೊಡುವ ಕಂಚೂ ಗಣಗಣಿ ಸುವ ತಾಳವೂ ಆಗಿದ್ದೇನೆ.
2 If I have the gift of prophecy, and know all mysteries and all knowledge; and if I have all faith, so as to remove mountains, but don't have love, I am nothing.ನನಗೆ ಪ್ರವಾದನ ವರವಿದ್ದರೂ ಎಲ್ಲಾ ರಹಸ್ಯಗಳನ್ನು ಮತ್ತು ಸಕಲ ಜ್ಞಾನವನ್ನು ತಿಳಿದುಕೊಂಡವನಾಗಿದ್ದರೂ ಬೆಟ್ಟಗಳನ್ನು ತೆಗೆದಿಡುವದಕ್ಕೆ ಬೇಕಾದಷ್ಟು ನಂಬಿಕೆಯಿದ್ದರೂ ನಾನು ಪ್ರೀತಿಯಿಲ್ಲದವನಾಗಿದ್ದರೆ ಏನೂ ಅಲ್ಲದವನಾಗಿ ದ್ದೇನೆ.
3 If I dole out all my goods to feed the poor, and if I give my body to be burned, but don't have love, it profits me nothing.ನನಗಿರುವದೆಲ್ಲವನ್ನು ಬಡವರಿಗೆ ಅನ್ನದಾನ ಮಾಡಿದರೂ ನನ್ನ ದೇಹವನ್ನು ಸುಡುವದಕ್ಕೆ ಒಪ್ಪಿ ಸಿದರೂ ಪ್ರೀತಿಯು ನನಗಿಲ್ಲದಿದ್ದರೆ ನನಗೇನೂ ಪ್ರಯೋಜನವಾಗುವದಿಲ್ಲ.
4 Love is patient and is kind; love doesn't envy. Love doesn't brag, is not proud,ಪ್ರೀತಿ ಬಹು ತಾಳ್ಮೆಯುಳ್ಳದ್ದು, ಕರುಣೆಯುಳ್ಳದ್ದು; ಪ್ರೀತಿಯು ಹೊಟ್ಟೇಕಿಚ್ಚು ಪಡುವದಿಲ್ಲ, ಹೊಗಳಿ ಕೊಳ್ಳುವದಿಲ್ಲ, ಉಬ್ಬಿಕೊಳ್ಳುವದಿಲ್ಲ,
5 doesn't behave itself inappropriately, doesn't seek its own way, is not provoked, takes no account of evil;ಮರ್ಯಾದೆ ಗೆಟ್ಟು ನಡೆಯುವದಿಲ್ಲ, ಸ್ವಾರ್ಥತೆಯನ್ನು ಬಯಸು ವದಿಲ್ಲ, ಬೇಗನೆ ಕೋಪಗೊಳ್ಳುವದಿಲ್ಲ, ಕೆಟ್ಟದ್ದನ್ನು ಯೋಚಿಸುವದಿಲ್ಲ.
6 doesn't rejoice in unrighteousness, but rejoices with the truth;ಅನ್ಯಾಯದಲ್ಲಿ ಸಂತೋಷಪಡದೆ ಸತ್ಯದಲ್ಲಿಯೇ ಸಂತೋಷಪಡುತ್ತದೆ.
7 bears all things, believes all things, hopes all things, endures all things.ಎಲ್ಲವನ್ನೂ ಸಹಿಸಿಕೊಳ್ಳುತ್ತದೆ, ಎಲ್ಲವನ್ನೂ ನಂಬುತ್ತದೆ, ಎಲ್ಲವನ್ನೂ ನಿರೀಕ್ಷಿಸುತ್ತದೆ, ಎಲ್ಲವನ್ನೂ ತಾಳಿಕೊಳ್ಳುತ್ತದೆ.
8 Love never fails. But where there are prophecies, they will be done away with. Where there are various languages, they will cease. Where there is knowledge, it will be done away with.ಪ್ರೀತಿಯು ಎಂದಿಗೂ ಬಿದ್ದು ಹೋಗುವದಿಲ್ಲ;ಆದರೆ ಪ್ರವಾದನೆಗಳು ಬಿದ್ದುಹೋಗುವವು; ಭಾಷೆ ಗಳೋ ನಿಂತುಹೋಗುವವು: ಜ್ಞಾನವೋ ಇಲ್ಲದಂತಾ ಗುವದು.
9 For we know in part, and we prophesy in part;ನಾವು ಅಪೂರ್ಣವಾಗಿ ತಿಳುಕೊಳ್ಳುತ್ತೇವೆ, ಅಪೂರ್ಣವಾಗಿ ಪ್ರವಾದಿಸುತ್ತೇವೆ.
10 but when that which is complete has come, then that which is partial will be done away with.ಆದರೆ ಸಂಪೂರ್ಣವಾದದ್ದು ಬಂದಾಗ ಅಪೂರ್ಣವಾದದ್ದು ಇಲ್ಲದಂತಾಗುವದು.
11 When I was a child, I spoke as a child, I felt as a child, I thought as a child. Now that I have become a man, I have put away childish things.ನಾನು ಬಾಲಕನಾಗಿದ್ದಾಗ ಬಾಲಕನ ಹಾಗೆ ಮಾತನಾಡಿದೆನು; ಬಾಲಕನ ಹಾಗೆ ತಿಳಿದುಕೊಂಡೆನು. ಬಾಲಕನ ಹಾಗೆ ಯೋಚಿಸಿದೆನು. ಆದರೆ ನಾನು ಪ್ರಾಯಸ್ಥನಾದ ಮೇಲೆ ಬಾಲ್ಯದವು ಗಳನ್ನು ಬಿಟ್ಟುಬಿಟ್ಟೆನು.
12 For now we see in a mirror, dimly, but then face to face. Now I know in part, but then I will know fully, even as I was also fully known.ಈಗ ನಾವು ಕನ್ನಡಿಯಲ್ಲಿ ಮೊಬ್ಬಾಗಿ ನೋಡುತ್ತೇವೆ. ತರುವಾಯ ಮುಖಾಮುಖಿ ಯಾಗಿ ನೋಡುವೆವು; ಈಗ ನಾನು ಅಪೂರ್ಣವಾಗಿ ತಿಳಿದಿದ್ದೇನೆ. ತರುವಾಯ ದೇವರು ನನ್ನನ್ನು ತಿಳಿದು ಕೊಂಡಂತೆಯೇ ನಾನೂ ತಿಳಿದುಕೊಳ್ಳುತ್ತೇನೆ.
13 But now faith, hope, and love remain--these three. The greatest of these is love.ಹೀಗೆ ನಂಬಿಕೆ ನಿರೀಕ್ಷೆ ಪ್ರೀತಿ ಈ ಮೂರೇ ನಿಲ್ಲುತ್ತವೆ; ಆದರೆ ಇವುಗಳಲ್ಲಿ ದೊಡ್ಡದು ಪ್ರೀತಿಯೇ.
Kannada Bible