1 Chronicles 7 - BBE (Kannada)
1 And of the sons of Issachar: Tola and Puah, Jashub and Shimron, four.ಇಸ್ಸಾಕಾರನ ಕುಮಾರರು--ತೋಲನು ಪೂವನುಯಾ ಶೂಬನು ಶಿಮ್ರೋನನುಈ ನಾಲ್ಕು ಮಂದಿ.
2 And the sons of Tola: Uzzi and Rephaiah and Jeriel and Jahmai and Ibsam and Shemuel, heads of their families; they were men of war; in the record of their generations their number in the time of David was twenty-two thousand, six hundred.ತೋಲನ ಕುಮಾರರು ಉಜ್ಜೀಯು ರೆಫಾಯನು ಯೆರೀಯೇಲನು ಯಹ್ಮೈಯು ಇಬ್ಸಾಮನು ಸಮುವೇಲನು. ಇವರು ತಮ್ಮ ತಂದೆ ಯಾದ ತೋಲನ ಮನೆಗೆ ಯಜಮಾನರಾಗಿದ್ದರು. ಇವರು ತಮ್ಮ ವಂಶಗಳಲ್ಲಿ ಯುದ್ಧ ಪರಾಕ್ರಮ ಶಾಲಿಗಳಾಗಿದ್ದರು; ದಾವೀದನ ದಿವಸಗಳಲ್ಲಿ ಅವರ ಲೆಕ್ಕ ಇಪ್ಪತ್ತೆರಡು ಸಾವಿರದ ಆರುನೂರು ಮಂದಿ ಆಗಿತ್ತು.
3 And the sons of Uzzi; Izrahiah; and the sons of Izrahiah: Michael and Obadiah and Joel and Isshiah, five; all of them chiefs.ಉಜ್ಜೀಯನ ಕುಮಾರನು ಇಜ್ಯಹ್ಯಾಹನು. ಇಜ್ಯಹ್ಯಾಹನ ಕುಮಾರರು -- ವಿಾಕಾಯೇಲನು, ಓಬದ್ಯನು, ಯೋವೇಲನು, ಇಷ್ಷೀಯನು--ಈ ಐದು ಮಂದಿಯು; ಇವರೆಲ್ಲರು ಮುಖ್ಯಸ್ಥರಾಗಿದ್ದರು.
4 And with them, recorded in generations by their families, were bands of fighting-men, thirty-six thousand of them, for they had a great number of wives and sons.ಇವರ ಸಂಗಡ ಅವರ ವಂಶಗಳ ಪ್ರಕಾರವೂ ಅವರ ಪಿತೃಗಳ ಮನೆಯ ಪ್ರಕಾರವೂ ಯುದ್ಧಕ್ಕೋಸ್ಕರ ಮೂವತ್ತಾರು ಸಾವಿರ ಮಂದಿ ಸೈನಿಕರ ಗುಂಪುಗಳಿದ್ದವು; ಯಾಕಂದರೆ ಹೆಂಡತಿಯರು ಮಕ್ಕಳು ಅವರಿಗೆ ಬಹಳ ಮಂದಿ ಇದ್ದರು.
5 And there were recorded among all the families of Issachar, great men of war, eighty-seven thousand.ಇಸ್ಸಾಕಾರನ ಕುಟುಂಬಗಳಾಗಿರುವ ಸಹೋ ದರರೊಳಗೆ ಅವರ ವಂಶಾವಳಿಗಳಲ್ಲಿ ಲೆಕ್ಕಿಸಲ್ಪಟ್ಟ ಯುದ್ಧ ಪರಾಕ್ರಮಶಾಲಿಗಳೆಲ್ಲರೂ ಎಂಭತ್ತೇಳು ಸಾವಿರ ಮಂದಿಯಾಗಿದ್ದರು.
6 The sons of Benjamin: Bela and Becher and Jediael, three.ಬೆನ್ಯಾವಿಾನನ ಕುಮಾರರು--ಬೆಳನು, ಬೆಕರನು, ಯೆದೀಯಯೇಲನು--ಈ ಮೂರು ಮಂದಿ.
7 And the sons of Bela: Ezbon and Uzzi and Uzziel and Jerimoth and Iri, five; heads of their families, great men of war; there were twenty-two thousand and thirty-four of them recorded by their families.ಬೆಳನ ಕುಮಾರರು--ಎಚ್ಬೋನನು, ಉಜ್ಜೀಯು, ಉಜ್ಜೀಯೇ ಲನು, ಯೆರೀಮೋತನು, ಈರೀಯು--ಈ ಐದು ಮಂದಿ ತಮ್ಮ ಪಿತೃಗಳ ಮನೆಯಲ್ಲಿ ಯಜಮಾನ ರಾಗಿಯೂ ಯುದ್ಧದ ಪರಾಕ್ರಮಶಾಲಿಗಳಾಗಿಯೂ ಇದ್ದು ತಮ್ಮ ವಂಶಾವಳಿಗಳ ಪ್ರಕಾರ ಇಪ್ಪತ್ತೆರಡು ಸಾವಿರದ ಮೂವತ್ತು ನಾಲ್ಕುಮಂದಿ ಲೆಕ್ಕಿಸಲ್ಪಟ್ಟಿದ್ದರು.
8 And the sons of Becher: Zemirah and Joash and Eliezer and Elioenai and Omri and Jerimoth and Abijah and Anathoth and Alemeth. All these were the sons of Becher.ಬೆಕರನ ಕುಮಾರರು ಜೆವಿಾರನು, ಯೋವಾಷನು, ಎಲೀಯೆಜೆರನು, ಎಲ್ಯೋವೇನೈ, ಒಮ್ರಿಯು, ಯೇರಿ ಮೋತನು, ಅಬೀಯನು, ಅನಾತೋತನು, ಆಲೆ ಮೆತ್. ಇವರೆಲ್ಲರು ಬೆಕರನ ಕುಮಾರರು.
9 And they were recorded by their generations, heads of their families, great men of war, twenty thousand, two hundred.ಇವರ ಲೆಕ್ಕವು ತಮ್ಮ ಪಿತೃಗಳ ಮನೆಯ ಯಜಮಾನರ ವಂಶ ಗಳ ವಂಶಾವಳಿಯ ಪ್ರಕಾರವಾಗಿ ಯುದ್ಧ ಪರಾಕ್ರಮಶಾಲಿಗಳಾದವರು ಇಪ್ಪತ್ತುಸಾವಿರದ ಇನ್ನೂರು ಮಂದಿ.
10 And the sons of Jediael: Bilhan; and the sons of Bilhan: Jeush and Benjamin and Ehud and Chenaanah and Zethan and Tarshish and Ahishahar.ಯೆದೀಯಯೇಲನ ಕುಮಾರನು ಬಿಲ್ಹಾ ನನು. ಬಿಲ್ಹಾನನ ಕುಮಾರರು--ಯೆಯೂಷನು, ಬೆನ್ಯಾವಿಾನನು, ಏಹೂದನು, ಕೆನಾನನು, ಜೇತಾ ನನು, ತಾರ್ಷೀಷನು, ಅಹೀಷೆಹರನು.
11 All these were the sons of Jediael, by the heads of their families, seventeen thousand, two hundred men of war, able to go out with the army for war.ಇವರೆ ಲ್ಲರು ಯೆದೀಯಯೇಲನ ಕುಮಾರರು. ಅವರು ತಮ್ಮ ಪಿತೃಗಳಲ್ಲಿ ಯಜಮಾನರಾಗಿಯೂ ಯುದ್ಧದ ಪರಾಕ್ರಮಶಾಲಿಗಳಾಗಿಯೂ ಯುದ್ಧಕ್ಕೆ ಹೊರಡ ತಕ್ಕವರು ಹದಿನೇಳು ಸಾವಿರದ ಇನ್ನೂರು ಮಂದಿ ಯಾಗಿದ್ದರು.
12 And Shuppim and Huppim. The sons of Dan, Hushim his son, one.ಅಹೇರನ ಕುಮಾರರಾದ ಈರನೂ ಹುಶೀ ಮನೂ ಎಂಬವರ ಮಕ್ಕಳು ಶುಪ್ಪೀಮನೂ ಹುಪ್ಪೀ ಮನೂ ಇದ್ದರು.
13 The sons of Naphtali: Jahziel and Guni and Jezer and Shallum, the sons of Bilhah.ನಫ್ತಾಲಿಯ ಕುಮಾರರು--ಯಹಚಿಯೇಲನು, ಗೂನೀಯು, ಯೇಚೆರನು, ಶಲ್ಲೂಮನು. ಇವರು ಬಿಲ್ಹಳ ಕುಮಾರರು.
14 The sons of Manasseh by his servant-wife, the Aramaean woman: she gave birth to Machir, the father of Gilead;ಮನಸ್ಸೆಯ ಕುಮಾರರು--ಅವನ ಹೆಂಡತಿಯು ಹೆತ್ತ ಅಷ್ರೀಯೇಲನು; ಅರಾಮ್ಯಳಾದ ಉಪಪತ್ನಿಯು ಗಿಲ್ಯಾದನಿಗೆ ತಂದೆಯಾದ ಮಾಕೀರನನ್ನು ಹೆತ್ತಳು.
15 (And Gilead took a wife, whose name was Maacah, and his sister's name was Hammoleketh;) and the name of his brother was Zelophehad, who was the father of daughters.ಆದರೆ ಈ ಮಾಕೀರನು ಹುಪ್ಪೀಮನು ಶುಪ್ಪೀಮನು ಎಂಬವರ ಸಹೋದರಿಯಾದ ಮಾಕಳನ್ನು ಹೆಂಡತಿ ಯಾಗಿ ತಕ್ಕೊಂಡನು. ಅವನ ಮೊಮ್ಮಗನ ಹೆಸರು ಚೆಲೋಫಾದನು; ಈ ಚೆಲೋಫಾದನಿಗೆ ಕುಮಾರ್ತೆ ಗಳು ಇದ್ದರು.
16 And Maacah, the wife of Gilead, gave birth to a son to whom she gave the name Peresh; and his brother was named Sheresh; and his sons were Ulam and Rakem.ಮಾಕೀರನ ಹೆಂಡತಿಯಾದ ಮಾಕಳು ಮಗನನ್ನು ಹೆತ್ತು ಪೆರೆಷೆಂದು ಹೆಸರಿಟ್ಟಳು. ಅವನ ಸಹೋದರನ ಹೆಸರು ಶೆರೆಷ್; ಇವನಿಗೆ ಊಲಾಮನು, ರೆಕೆಮನು ಎಂಬ ಹೆಸರುಳ್ಳ ಕುಮಾರ ರಿದ್ದರು.
17 And the son of Ulam: Bedan. These were the sons of Gilead, the son of Machir the son of Manasseh.ಊಲಾಮನ ಮಗ ಬೆದಾನನು. ಇವರೇ ಮನಸ್ಸೆಯ ಮಗನಾಗಿರುವ ಮಾಕೀರನ ಮಗನಾದ ಗಿಲ್ಯಾದನ ಕುಮಾರರು.
18 And his sister Hammoleketh was the mother of Ishhod and Abiezer and Mahlah.ಅವನ ಸಹೋದರಿಯಾದ ಹಮ್ಮೋಲೆಕೆತಳು ಈಷ್ಹೋದನನ್ನೂ ಅಬೀಯೆಜೆರ ನನ್ನೂ ಮಹ್ಲನನ್ನೂ ಹೆತ್ತಳು.
19 And the sons of Shemida were Ahian and Shechem and Likhi and Aniam.ಶೆವಿಾದನ ಕುಮಾ ರರು--ಅಹ್ಯಾನನು, ಶೆಕೆಮನು, ಲಿಕ್ಹೀಯು, ಅನೀಯಾಮನು.
20 And the sons of Ephraim: Shuthelah and Bered his son, and Tahath his son, and Eleadah his son, and Tahath his son,ಎಫ್ರಾಯಾಮನ ಕುಮಾರರು--ಶೂತೆಲಹನು; ಇವನ ಮಗನು ಬೆರದನು. ಇವನ ಮಗನು ತಹತನು, ಇವನ ಮಗನು ಎಲ್ಲಾದನು; ಇವನ ಮಗನು ತಹತನು.
21 And Zabad his son, and Shuthelah his son, and Ezer and Elead, whom the men of Gath, who had been living in the land from their birth, put to death, because they came down to take away their cattle.ಇವನ ಮಗನು ಜಾಬಾದನು; ಇವನ ಮಕ್ಕಳು --ಶೂತೆಲಹನು ಎಜೆರನೂ ಎಲ್ಲಾದನೂ. ಆ ದೇಶ ದಲ್ಲಿ ಹುಟ್ಟಿದ ಗತ್‌ನವರು ಇವರ ದನಗಳನ್ನು ಸುಲು ಕೊಳ್ಳಲು ಇಳಿದು ಬಂದಾಗ ಇವರನ್ನು ಕೊಂದು ಹಾಕಿದರು.
22 And for a long time Ephraim their father went on weeping for them, and his brothers came to give him comfort.ಅವರ ತಂದೆಯಾದ ಎಫ್ರಾಯಾಮನು ಅನೇಕ ದಿವಸಗಳು ದುಃಖಪಟ್ಟದ್ದರಿಂದ ಅವನ ಸಹೋದರರು ಅವನನ್ನು ಆದರಿಸಲು ಬಂದರು.
23 After that, he had connection with his wife, and she became with child and gave birth to a son, to whom his father gave the name of Beriah, because trouble had come on his family.ಅವನು ತನ್ನ ಹೆಂಡತಿಯನ್ನು ಕೂಡಿದಾಗ ಅವಳು ಗರ್ಭಧರಿಸಿ ಮಗನನ್ನು ಹೆತ್ತಳು. ಆಗ ತನ್ನ ಮನೆಯಲ್ಲಿ ಕೇಡು ಉಂಟಾದದ್ದರಿಂದ ಅವನಿಗೆ ಬೆರೀಯನೆಂಬ ಹೆಸರಿಟ್ಟನು.
24 And his daughter was Sheerah, the builder of Beth-horon the lower and the higher, and Uzzen-sheerah.ಇವನ ಕುಮಾರ್ತೆಯ ಹೆಸರು ಶೇರಳು; ಇವಳು ಮೇಲಣ ಮತ್ತು ಕೆಳಗಣ ಬೇತ್‌ಹೋರೋ ನನ್ನೂ, ಉಜ್ಜೇನ್‌ಶೇರವನ್ನೂ ಕಟ್ಟಿಸಿದಳು.
25 And Rephah was his son, and Resheph; his son was Telah, and his son was Tahan;ಬೆರೀಯ ಮಗನು ರೆಫಹ, ಇವನ ಮಗನು ರೆಷೆಫನು; ಇವನಮಗನು ತೆಲಹನು.
26 Ladan was his son, Ammihud his son, Elishama his son,ಇವನ ಮಗನು ತಹನ್, ಇವನ ಮಗನು ಲದ್ದಾನ್, ಇವನ ಮಗನು ಅವ್ಮೆಾಹೂದನು, ಇವನ ಮಗನು ಎಲೀಷಾಮನು,
27 Nun his son, Joshua his son.ಇವನ ಮಗನು ನೋನನು, ಇವನ ಮಗನು ಯೆಹೋಷುವನು.
28 Their heritage and their living-places were Beth-el and its daughter-towns, and Naaran to the east, and Gezer to the west, with its daughter-towns, as well as Shechem and its daughter-towns as far as Azzah and its daughter-towns;ಅವರ ಸ್ವಾಸ್ಥ್ಯಗಳೂ ನಿವಾಸಗಳೂ ಯಾವ ವೆಂದರೆ, ಬೇತೇಲೂ ಅದರ ಗ್ರಾಮಗಳೂ ಮೂಡಣ ದಿಕ್ಕಿನಲ್ಲಿ ನಾರಾನೂ ಪಡುವಣ ದಿಕ್ಕಿನಲ್ಲಿ ಗೆಜೆರೂ ಅದರ ಗ್ರಾಮಗಳೂ ಶೆಕೆಮೂ ಅದರ ಗ್ರಾಮಗಳೂ ಗಾಜವೂ ಅದರ ಗ್ರಾಮಗಳೂ
29 And by the limits of the children of Manasseh, Beth-shean and its daughter-towns, Taanach, Megiddo, and Dor, with their daughter-towns. In these the children of Joseph, the son of Israel, were living.ಮನಸ್ಸೆಯ ಮಕ್ಕಳ ಮೇರೆಯಲ್ಲಿರುವ ಬೇತ್ಷಾನೂ ಅದರ ಗ್ರಾಮಗಳೂ ತಾನಾಕವೂ ಅದರ ಗ್ರಾಮಗಳೂ ಮೆಗಿದ್ದೋನೂ ಅದರ ಗ್ರಾಮಗಳೂ ದೋರೂ ಅದರ ಗ್ರಾಮಗಳೂ ಇವುಗಳಲ್ಲಿ ಇಸ್ರಾಯೇಲನ ಮಗನಾದ ಯೋಸೇಫನ ಕುಮಾರರು ವಾಸವಾಗಿದ್ದರು.
30 The sons of Asher: Imnah and Ishvah and Ishvi and Beriah and Serah, their sister.ಆಶೇರನ ಕುಮಾರರು--ಇಮ್ನನು, ಇಷ್ವನು, ಇಷ್ವೀ, ಬೆರೀಯನು ಅವರ ಸಹೋದರಿಯಾದ ಸೆರಹಳು.
31 And the sons of Beriah: Heber and Malchiel, who was the father of Birzaith.ಬೆರೀಯನ ಕುಮಾರರು--ಹೆಬೆರನು ಮಲ್ಕೀಯೇಲನು;
32 And Heber was the father of Japhlet and Shomer and Hotham and Shua, their sister.ಇವನು ಬಿರ್ಜೈಯಿತನ ತಂದೆಯು. ಹೆಬೆರನು ಯಫ್ಲೇಟನನ್ನೂ ಶೋಮೇರ ನನ್ನೂ ಹೋತಾಮನನ್ನೂ ಅವರ ಸಹೋದರಿಯಾದ ಶೂವಳನ್ನೂ ಪಡೆದನು.
33 And the sons of Japhlet: Pasach and Bimhal and Ashvath. These are the sons of Japhlet.ಯಫ್ಲೇಟನ ಕುಮಾರರು--ಪಾಸಕನು, ಬಿಮ್ಹಾಲನು, ಅಶ್ವಾತನು. ಇವರೇ ಯಫ್ಲೇಟನ ಮಕ್ಕಳು.
34 And the sons of Shomer: Ahi and Rohgah, Jehubbah and Aram.ಶಮೆರನ ಕುಮಾರರು--ಅಹೀಯು, ರೊಹ್ಗನು, ಹುಬ್ಬನು, ಅರಾಮನು.
35 And the sons of Hotham, his brother: Zophah and Imna and Shelesh and Amal.ಅವನ ಸಹೋದರನಾದ ಹೆಲೆಮನ ಕುಮಾರರು--ಚೋಫಹನು, ಇಮ್ನನು, ಶೇಲೆಷನು, ಆಮಾಲನು.
36 The sons of Zophah: Suah and Harnepher and Shual and Beri and Imrah,ಚೋಫಹನ ಕುಮಾರರು-- ಸೂಹನು, ಹರ್ನೇಫೆರನು, ಶೂಗಾಲನು, ಬೇರೀಯು, ಇಮ್ರನು,
37 Bezer and Hod and Shamma and Shilshah and Ithran and Beera.ಬೆಚೆರನು, ಹೋದನು, ಶಮ್ಮನು, ಶಿಲ್ಷನು, ಇತ್ರಾನನು, ಬೇರನು.
38 And the sons of Jether: Jephunneh and Pispah and Ara.ಯೆತೆರನ ಕುಮಾ ರರು--ಯೆಫುನ್ನೆಯು, ಪಿಸ್ಪನು, ಅರಾನು,
39 And the sons of Ulla: Arah and Hanniel and Rizia.ಉಲ್ಲನ ಕುಮಾರರು--ಆರಹನು, ಹನ್ನೀಯೇಲನು ರಿಚ್ಯನು.
40 All these were the children of Asher, heads of their families, specially strong men of war, chiefs of the rulers. They were recorded in the army for war, twenty-six thousand men in number.ಇವರೆಲ್ಲರು ಆಶೇರನ ಮಕ್ಕಳಾಗಿದ್ದು ತಮ್ಮ ತಂದೆಯ ಮನೆಯಲ್ಲಿ ಯಜಮಾನರಾಗಿಯೂ ಯುದ್ಧಪರಾಕ್ರಮ ಶಾಲಿಗಳಲ್ಲಿ ಮುಖ್ಯಸ್ಥರಾಗಿಯೂ ಪ್ರಭುಗಳಲ್ಲಿ ಶ್ರೇಷ್ಠ ರಾಗಿಯೂ ಇದ್ದರು. ಅವರ ವಂಶಾವಳಿಯಲ್ಲಿ ಬರೆಯ ಲ್ಪಟ್ಟ ಲೆಕ್ಕದ ಪ್ರಕಾರ ಯುದ್ದಕ್ಕೆ ಸಿದ್ಧವಾದವರು ಇಪ್ಪ ತ್ತಾರು ಸಾವಿರ ಮಂದಿಯಾಗಿದ್ದರು.
Kannada Bible