1 Chronicles 11 - DBY (Kannada)
1 And all Israel assembled themselves to David to Hebron, saying, Behold, we are thy bone and thy flesh.ಇಸ್ರಾಯೇಲ್ಯರೆಲ್ಲರು ಹೆಬ್ರೋನಿನಲ್ಲಿದ್ದ ದಾವೀದನ ಬಳಿಗೆ ಕೂಡಿಬಂದು ಹೇಳಿ ದ್ದೇನಂದರೆ--ಇಗೋ, ನಾವು ನಿನ್ನ ಎಲುಬೂ ನಿನ್ನ ಮಾಂಸವೂ ಆಗಿದ್ದೇವೆ.
2 Even aforetime, even when Saul was king, thou wast he that leddest out and broughtest in Israel; and Jehovah thy God said to thee, Thou shalt feed my people Israel, and thou shalt be prince over my people Israel.ಇದಲ್ಲದೆ ಪೂರ್ವದಲ್ಲಿ ಸೌಲನು ಅರಸನಾಗಿದ್ದಾಗ ನೀನು ಇಸ್ರಾಯೇಲನ್ನು ಹೊರಗೆ ನಡಿಸುವವನಾಗಿಯೂ ಒಳಗೆ ತರುವವ ನಾಗಿಯೂ ಇದ್ದಿ; ಕರ್ತನಾದ ನಿನ್ನ ದೇವರು ನಿನಗೆ ಹೇಳಿದ್ದು--ನೀನು ನನ್ನ ಜನರಾದ ಇಸ್ರಾಯೇಲ್ಯರನ್ನು ಮೇಯಿಸುವವನಾಗಿಯೂ; ಇಸ್ರಾಯೇಲ್ಯರ ಮೇಲೆ ಅಧಿಕಾರಿಯಾಗಿರುವಿ ಎಂಬದು.
3 And all the elders of Israel came to the king to Hebron; and David made a covenant with them in Hebron before Jehovah; and they anointed David king over Israel according to the word of Jehovah through Samuel.ಹಾಗೆಯೇ ಇಸ್ರಾ ಯೇಲಿನ ಹಿರಿಯರೆಲ್ಲರು ಹೆಬ್ರೋನಿನಲ್ಲಿದ್ದ ಅರಸನ ಬಳಿಗೆ ಬಂದರು; ದಾವೀದನು ಹೆಬ್ರೋನಿನಲ್ಲಿ ಕರ್ತನ ಮುಂದೆ ಅವರ ಸಂಗಡ ಒಡಂಬಡಿಕೆ ಮಾಡಿದನು; ಕರ್ತನು ಸಮುವೇಲನ ಮುಖಾಂತರ ಹೇಳಿದ ವಾಕ್ಯದ ಪ್ರಕಾರ ಅವರು ದಾವೀದನನ್ನು ಇಸ್ರಾಯೇಲಿನ ಮೇಲೆ ಅರಸನಾಗಿರಲು ಅಭಿಷೇಕ ಮಾಡಿದರು.
4 And David and all Israel went to Jerusalem, which is Jebus; where the Jebusites were, the inhabitants of the land.ತರುವಾಯ ದಾವೀದನು ಸಮಸ್ತ ಇಸ್ರಾಯೇಲ್ಯರು ಯೆಬೂಸು ಎಂಬ ಹೆಸರುಳ್ಳ ಯೆರೂಸಲೇಮಿಗೆ ಹೋದರು.
5 And the inhabitants of Jebus said to David, Thou shalt not come in hither. But David took the stronghold of Zion, which is the city of David.ದೇಶ ನಿವಾಸಿಗಳಾದ ಯೆಬೂಸ್ಯರು ಅಲ್ಲಿ ಇದ್ದರು. ಆಗ ಯೆಬೂಸಿನ ನಿವಾಸಿಗಳು ದಾವೀದನಿಗೆ--ನೀನು ಇಲ್ಲಿ ಬರಬೇಡ ಅಂದರು. ಆದಾಗ್ಯೂ ದಾವೀದನ ಪಟ್ಟಣವಾದ ಚೀಯೋನೆಂಬ ಕೋಟೆಯನ್ನು ದಾವೀ ದನು ಹಿಡಿದನು.
6 And David said, Whoever smites the Jebusites first shall be chief and captain. And Joab the son of Zeruiah went first up, and was chief.ಯಾವನಾದರೂ ಮೊದಲು ಯೆಬೂಸಿಯರನ್ನು ಹೊಡೆದರೆ ಅವನೇ ಮುಖ್ಯಸ್ಥ ನಾಗಿಯೂ ಪ್ರಧಾನನಾಗಿಯೂ ಇರುವನೆಂದು ದಾವೀ ದನು ಹೇಳಿದ್ದನು. ಹಾಗೆಯೇ ಚೆರೂಯಳ ಮಗನಾದ ಯೋವಾಬನು ಮೊದಲು ಹೋಗಿ ಮುಖ್ಯಸ್ಥನಾದನು.
7 And David dwelt in the stronghold; therefore they called it the city of David.ದಾವೀದನು ಕೋಟೆಯೊಳಗೆ ವಾಸಮಾಡಿದನು; ಆದಕಾರಣ ಅದಕ್ಕೆ ದಾವೀದನ ಪಟ್ಟಣವೆಂದು ಹೆಸ ರಿಟ್ಟರು.
8 And he built the city round about, even from the Millo round about; and Joab renewed the rest of the city.ಅವನು ಮಿಲ್ಲೋವು ಮೊದಲುಗೊಂಡು ಸುತ್ತಲೂ ಪಟ್ಟಣವನ್ನು ಕಟ್ಟಿಸಿದನು. ಆದರೆ ಪಟ್ಟಣ ದಲ್ಲಿ ಮಿಕ್ಕದ್ದನ್ನು ಯೋವಾಬನು ದುರಸ್ತು ಮಾಡಿಸಿ ದನು.
9 And David became continually greater; and Jehovah of hosts was with him.ಹೀಗೆಯೇ ಸೈನ್ಯಗಳ ಕರ್ತನು ಅವನ ಸಂಗಡ ಇದದ್ದರಿಂದ ದಾವೀದನು ಕ್ರಮೇಣವಾಗಿ ಅಭಿವೃದ್ಧಿಯಾದನು.
10 And these are the chief of the mighty men whom David had, who shewed themselves valiant with him in his kingdom, with all Israel, to make him king, according to the word of Jehovah concerning Israel.ದಾವೀದನಿಗೆ ಇರುವ ಮುಖ್ಯಸ್ಥರಾದ ಪರಾಕ್ರಮ ಶಾಲಿಗಳು ಇವರೇ; ಇಸ್ರಾಯೇಲನ್ನು ಕುರಿತು ಕರ್ತನು ಹೇಳಿದ ವಾಕ್ಯದ ಪ್ರಕಾರ ಅವನನ್ನು ಅರಸನನ್ನಾಗಿ ಮಾಡುವದಕ್ಕೆ ಅವರು ಸಮಸ್ತ ಇಸ್ರಾಯೇಲಿನ ಸಂಗಡ ಅವನ ರಾಜ್ಯದಲ್ಲಿ ತಮ್ಮನ್ನು ದೃಢಪಡಿಸಿಕೊಂಡರು.
11 And this is the number of the mighty men whom David had: Jashobeam, the son of Hachmoni, the chief of the captains; he brandished his spear against three hundred, slain [by him] at one time.ದಾವೀದನ ಸಂಗಡ ಇದ್ದ ಪರಾಕ್ರಮಶಾಲಿಗಳ ಲೆಕ್ಕವೇನಂದರೆ--ಹಕ್ಮೋನಿಯನಾದ ಯಾಷೊಬ್ಬಾ ಮನು ಅಧಿಪತಿಗಳಲ್ಲಿ ಮುಖ್ಯಸ್ಥನಾಗಿದ್ದನು; ಅವನು ಮುನ್ನೂರು ಮಂದಿಗೆ ವಿರೋಧವಾಗಿ ತನ್ನ ಈಟಿ ಯನ್ನು ಎತ್ತಿ ಒಂದೇ ಸಾರಿ ಅವರನ್ನು ಕೊಂದು ಹಾಕಿದನು.
12 And after him, Eleazar the son of Dodo, the Ahohite; he was one of the three mighty men.ಅವನ ತರುವಾಯ ಅಹೋಹ್ಯನಾ ದಂಥ ದೋದೋನ ಮಗನಾದಂಥ ಎಲ್ಲಾಜಾರನು ಮೂರು ಮಂದಿ ಪರಾಕ್ರಮಾಶಾಲಿಗಳಲ್ಲಿ ಒಬ್ಬನಾ ಗಿದ್ದನು.
13 He was with David at Pas-dammim, where the Philistines were gathered together to battle; and there was [there] a plot of ground full of barley; and the people had fled from before the Philistines.ಇವನು ದಾವೀದನ ಸಂಗಡ ಪಸ್ದವ್ಮೆಾಮಿನ ಬಳಿಯಲ್ಲಿದ್ದನು. ಅಲ್ಲಿ ಫಿಲಿಷ್ಟಿಯರು ಜವೆಗೋಧಿ ತುಂಬಿರುವ ಹೊಲದಲ್ಲಿ ಯುದ್ಧಕ್ಕೆ ಕೂಡಿಸಲ್ಪಟ್ಟಿರುವಾಗ ಜನರು ಫಿಲಿಷ್ಟಿಯರ ಮುಂದೆ ಓಡಿಹೋದರು.
14 And they stood in the midst of the plot and delivered it, and smote the Philistines; and Jehovah wrought a great deliverance.ಆಗ ಇವರು ಆ ಹೊಲದ ಮಧ್ಯದಲ್ಲಿ ನಿಂತುಕೊಂಡು ಅದನ್ನು ತಪ್ಪಿಸಿ ಫಿಲಿಷ್ಟಿಯರನ್ನು ಕೊಂದುಹಾಕಿದರು; ಕರ್ತನು ಮಹಾ ಬಿಡುಗಡೆಯಿಂದ ರಕ್ಷಿಸಿದನು.
15 And three of the thirty chiefs went down to the rock to David, to the cave of Adullam, when the army of the Philistines was encamped in the valley of Rephaim.ಇದಲ್ಲದೆ ಮೂವತ್ತು ಮಂದಿ ಅಧಿಪತಿಗಳ ಲ್ಲಿರುವ ಮೂರು ಮಂದಿ ಅದುಲ್ಲಾಮ್ ಗವಿಯಲ್ಲಿರುವ ದಾವೀದನ ಬಳಿ ಗುಡ್ಡಕ್ಕೆ ಹೋದರು. ಅದೇ ವೇಳೆಯಲ್ಲಿ ಫಿಲಿಷ್ಟಿಯರ ಸೈನ್ಯವು ರೆಫಾಯಿಮ್ ತಗ್ಗಿನಲ್ಲಿ ಇಳಿದಿತ್ತು.
16 And David was then in the stronghold; and the Philistines' garrison was then at Bethlehem.ಆಗ ದಾವೀದನು ಗಡಿಸ್ಥಳದಲ್ಲಿ ಇದ್ದನು; ಫಿಲಿಷ್ಟಿಯರ ದಂಡು ಬೇತ್ಲೆಹೇಮಿನಲ್ಲಿತ್ತು.
17 And David longed, and said, Oh that one would give me to drink of the water of the well of Bethlehem, which is in the gate!ಆಗ ದಾವೀದನು ಬೇತ್ಲೆಹೇಮಿನ ಬಾಗಲ ಬಳಿಯಲ್ಲಿರುವ ಬಾವಿಯ ನೀರನ್ನು ತನಗೆ ಕುಡಿಯಲು ಕೊಡುವವನಾರೆಂದು ಆಶೆಪಟ್ಟು ಹೇಳಿದನು.
18 And the three broke through the camp of the Philistines, and drew water out of the well of Bethlehem, which is in the gate, and took it, and brought it to David; David however would not drink of it, but poured it out to Jehovah.ಆಗ ಆ ಮೂವರು ಫಿಲಿಷ್ಟಿಯರ ದಂಡಿನಲ್ಲಿ ನುಗ್ಗಿಹೋಗಿ ಬೇತ್ಲೆಹೇಮಿನ ಬಾಗಲ ಬಳಿಯಲ್ಲಿರುವ ಬಾವಿಯ ನೀರನ್ನು ಸೇದಿ ದಾವೀದನಿಗೆ ತೆಗೆದುಕೊಂಡು ಬಂದರು.
19 And he said, My God forbid it me, that I should do this thing! should I drink the blood of these men [who went] at the risk of their lives? for at the risk of their lives they brought it. Therefore he would not drink it. These things did the three mighty men.ಆದರೆ ದಾವೀದನು ಅದನ್ನು ಕುಡಿಯಲೊಲ್ಲದೆ ಕರ್ತನಿಗೆ ಹೊಯ್ದು--ನನ್ನ ದೇವರು ಇಂಥಾ ಕಾರ್ಯವನ್ನು ನನಗೆ ದೂರವಾಗ ಮಾಡಲಿ; ನಾನು ಈ ಮನುಷ್ಯರ ಪ್ರಾಣ ರಕ್ತವನ್ನು ಕುಡಿಯಬಹುದೇ? ತಮ್ಮ ಪ್ರಾಣ ಗಳಿಂದ ಅದನ್ನು ತಂದರಲ್ಲಾ ಎಂದು ಹೇಳಿ ಕುಡಿಯ ಲೊಲ್ಲದೆ ಇದ್ದನು. ಈ ಕಾರ್ಯಗಳನ್ನು ಮುಖ್ಯಸ್ಥರಾದ ಮೂರು ಮಂದಿ ಪರಾಕ್ರಮಶಾಲಿಗಳು ಮಾಡಿದರು.
20 And Abishai the brother of Joab, he was the chief of three; and he brandished his spear against three hundred and slew them; and he had a name among the three.ಇದಲ್ಲದೆ ಯೋವಾಬನ ಸಹೋದರನಾದ ಅಬ್ಷೈಯು ಮೂರು ಮಂದಿಯಲ್ಲಿ ಮುಖ್ಯಸ್ಥನಾಗಿದ್ದನು. ಅವನು ಮುನ್ನೂರು ಮಂದಿಗೆ ವಿರೋಧವಾಗಿ ತನ್ನ ಈಟಿಯನ್ನು ಎತ್ತಿ ಅವರನ್ನು ಕೊಂದುಹಾಕಿದ್ದರಿಂದ ಮೂವರಲ್ಲಿ ಹೆಸರುಗೊಂಡವನಾಗಿದ್ದನು.
21 Of the three he was more honourable than the two, and he was their captain; but he did not attain to the [first] three.ಈ ಮೂವರಲ್ಲಿ ಅವರಿಗೆ ಅವನು ಪ್ರಧಾನನಾಗಿದ್ದನು; ಆದರೆ ಮೂವರ ಕೂಡ ಸೇರದೆ ಇದ್ದನು. ಇಬ್ಬರಿಗಿಂತ ಅವನು ಘನವುಳ್ಳವನಾಗಿದ್ದನು;
22 Benaiah the son of Jehoiada, the son of a valiant man, great in exploits, of Kabzeel: he it was that smote two lions of Moab; and he went down and smote a lion in the midst of a pit on a snowy day.ಕಬ್ಜಯೇಲಿನವ ನಾದ ಪರಾಕ್ರಮಶಾಲಿಯ ಮಗನಾದಂಥ ಯೆಹೋ ಯಾದನ ಮಗನಾದ ಬೆನಾಯನು ಅನೇಕ ಕ್ರಿಯೆಗ ಳನ್ನು ಮಾಡಿದನು; ಅವನು ಸಿಂಹದ ಹಾಗಿರುವ ಮೋವಾಬಿನ ಇಬ್ಬರು ಮನುಷ್ಯರನ್ನು ಕೊಂದನು. ಇನ್ನೊಮ್ಮೆ ಹಿಮದ ದಿವಸದಲ್ಲಿ ಇಳಿದು ಹೋಗಿ ಕುಣಿಯೊಳಗೆ ಒಂದು ಸಿಂಹವನ್ನು ಕೊಂದುಬಿಟ್ಟನು.
23 He also smote the Egyptian, a man of stature, five cubits high: and in the Egyptian's hand was a spear like a weaver's beam; and he went down to him with a staff, and plucked the spear out of the Egyptian's hand, and slew him with his own spear.ಮತ್ತೊಮ್ಮೆ ಅವನು ಐದುಮೊಳ ಉದ್ದವಾದ ಐಗುಪ್ತ್ಯನನ್ನೂ ಕೊಂದುಬಿಟ್ಟನು; ಐಗುಪ್ತ್ಯನ ಕೈಯಲ್ಲಿ ನೇಯ್ಗೆಗಾರರ ಕುಂಟೆಯಂತಿರುವ ಒಂದು ಈಟಿ ಇತ್ತು; ಅವನು ಒಂದು ಕೋಲು ಹಿಡುಕೊಂಡು ಅವನ ಬಳಿಗೆ ಹೋಗಿ, ಐಗುಪ್ತ್ಯನ ಕೈಯಿಂದ ಈಟಿಯನ್ನು ಕಿತ್ತುಕೊಂಡು ಅವನ ಈಟಿಯಿಂದಲೇ ಅವನನ್ನು ಕೊಂದು ಹಾಕಿದನು.
24 These things did Benaiah the son of Jehoiada, and he had a name among the three mighty men.ಯೆಹೋಯಾದನ ಮಗ ನಾದ ಬೆನಾಯನು ಇವುಗಳನ್ನು ಮಾಡಿ ಮೂರು ಮಂದಿ ಪರಾಕ್ರಮಶಾಲಿಗಳಲ್ಲಿ ಹೆಸರುಗೊಂಡವನಾ ದನು.
25 Behold, he was honoured above the thirty, but he did not attain to the [first] three. And David set him in his council.ಇಗೋ, ಅವನು ಮೂವತ್ತು ಮಂದಿಯಲ್ಲಿ ಘನವುಳ್ಳವನಾಗಿದ್ದನು; ಆದರೆ ಮೂವರ ಕೂಡ ಸೇರದೆ ಇದ್ದನು. ದಾವೀದನು ಅವನನ್ನು ತನ್ನ ಕಾವಲಿ ನವರ ಮೇಲೆ ಇಟ್ಟನು.
26 And the valiant men of the forces were: Asahel the brother of Joab, Elhanan the son of Dodo of Bethlehem,ಇದಲ್ಲದೆ ದಂಡುಗಳಲ್ಲಿರುವ ಪರಾಕ್ರಮಶಾಲಿ ಗಳು ಯಾರಂದರೆ--ಯೋವಾಬನ ಸಹೋದರನಾದ ಅಸಾಹೇಲನು, ಬೇತ್ಲೆಹೇಮಿನವನಾದ ದೋದೋ ವಿನ ಮಗನಾದ ಎಲ್ಖಾನಾನು,
27 Shammoth the Harorite, Helez the Pelonite,ಹರೋರಿಯನಾದ ಶಮ್ಮೋತನು,
28 Ira the son of Ikkesh the Tekoite, Abiezer the Anathothite,ಪೆಲೋನ್ಯನಾದ ಹೆಲೆಚನು, ತೆಕೋ ವಿಯನಾದ ಇಕ್ಕೇಷನ ಮಗನಾದ ಈರನು, ಅನ ತೋತಿನವನಾದ ಅಬೀಯೆಜೆರನು,
29 Sibbechai the Hushathite, Ilai the Ahohite,ಹುಷಾತ್ಯನಾದ ಸಿಬ್ಕೈನು, ಅಹೋಹಿತನಾದ ಈಲೈನು, ನೆಟೋಫದ ವನಾದ ಮಹರೈನು,
30 Maharai the Netophathite, Heled the son of Baanah the Netophathite,ನೆಟೋಫದವನಾದ ಬಾಣನ ಮಗನಾದ ಹೆಲೇದನು,
31 Ittai the son of Ribai of Gibeah of the children of Benjamin, Benaiah the Pirathonite,ಬೆನ್ಯಾವಿಾನನ ಮಕ್ಕಳಿಗೆ ಉಂಟಾದ ಗಿಬ್ಯದ ರೀಬೈನ ಮಗನಾದ ಈತೈಯು, ಪಿರತೋನ್ಯನಾದ ಬೆನಾಯನು,
32 Hurai of the brooks of Gaash, Abiel the Arbathite,ಗಾಷಿನ ಹಳ್ಳಗಳ ಬಳಿಯಲ್ಲಿರುವ ಹೂರೈನು, ಅರಾಬಾತಗ್ಗಿನವನಾದ ಅಬೀಯೇಲನು,
33 Azmaveth the Baharumite, Eliahba the Shaalbonite,ಬಹರೂಮ್ಯನಾದ ಅಜ್ಮಾವೆತನು, ಶಾಲ್ಬೋನ್ಯನಾದ ಎಲೆಯಖ್ಬ,
34 Bene-Hashem the Gizonite, Jonathan the son of Shage the Hararite,ಗಿಜೋನ್ಯನಾದ ಹಾಷೇಮನ ಕುಮಾರರು, ಹರಾರಿಯನಾದ ಶಾಗೇಯ ಮಗನಾದ ಯೋನಾತಾನನು,
35 Ahiam the son of Sacar the Hararite, Eliphal the son of Ur,ಹರಾರಿಯನಾದ ಶಾಕಾರನ ಮಗನಾದ ಅಹೀಯಾಮನು,
36 Hepher the Mecherathite, Ahijah the Pelonite,ಊರನ ಮಗನಾದ ಎಲೀಫಲನು, ಮೆಕೆರಾತ್ಯನಾದ ಹೇಫೆ ರನು, ಫೆಲೋನ್ಯನಾದ ಅಹೀಯನು,
37 Hezro the Carmelite, Naarai the son of Ezbai,ಕರ್ಮೆಲ್ಯ ನಾದ ಹೆಚ್ರೋನು, ಎಜ್ಬೈಯನ ಮಗನಾದ ನಾರೈಯು,
38 Joel the brother of Nathan, Mibhar the son of Hagri,ನಾತಾನನ ಸಹೋದರನಾದ ಯೋವೇಲನು ಹಗ್ರಿ ಯನ ಮಗನಾದ ಮಿಬ್ಹಾರನು,
39 Zelek the Ammonite, Naharai the Berothite, the armour-bearer of Joab the son of Zeruiah,ಅಮ್ಮೋನ್ಯನಾದ ಚೆಲೆಕನು, ಚೆರೂಯಳ ಮಗನಾದ ಯೋವಾಬನ ಆಯುಧಗಳನ್ನು ಹೊತ್ತುಕೊಂಡು ಹೋಗುವವನಾಗಿ ರುವ ಬೆರೋತ್ಯನಾದ ನಹರೈಯು,
40 Ira the Ithrite, Gareb the Ithrite,ಇತ್ರೀಯನಾದ ಈರನು ಗಾರೇಬನು,
41 Uriah the Hittite, Zabad the son of Ahlai,ಹಿತ್ತೀಯನಾದ ಊರೀಯನು, ಅಹ್ಲೈಯ ಮಗನಾದ ಜಾಬಾದನು,
42 Adina the son of Shiza the Reubenite, a captain of the Reubenites, and thirty with him;ರೂಬೇನ್ಯ ನಾದ ಶೀಜನ ಮಗನಾದ ಅದೀನನು; ಇವನು ರೂಬೇನ್ಯರಲ್ಲಿ ಅಧಿಪತಿಯಾಗಿದ್ದನು; ಮೂವತ್ತು ಮಂದಿ ಅವನ ಸಂಗಡ ಇದ್ದರು.
43 Hanan the son of Maachah, and Joshaphat the Mithnite,ಮಾಕನ ಮಗ ನಾದ ಹಾನಾನನು, ಮೆತೆನನಾದ ಯೋಷಾಫಾಟನು,
44 Uzzia the Ashtarothite, Shama and Jeiel the sons of Hotham the Aroerite,ಅಷ್ಟೆರಾತ್ಯನಾದ ಉಜ್ಜೀಯನು ಅರೋಯೇರಿವ ನಾದ ಹೋತಾಮನ ಮಕ್ಕಳಾಗಿರುವ ಶಾಮಾ, ಯೆಗೀಯೇಲನೂ;
45 Jediael the son of Shimri, and Joha his brother, the Tizite,ಶಿಮ್ರಿಯ ಮಗನಾದ ಎದೀಗ ಯೇಲನು, ಅವನ ಸಹೋದರನಾದಂಥ ತೀಚೀಯ ನಾದಂಥ ಯೋಹನು.
46 Eliel of Mahavim, and Jeribai, and Joshaviah, the sons of Elnaam, and Jithmah the Moabite,ಮಹವೀಯನಾದ ಎಲೀ ಯೇಲನು, ಎಲ್ನಾಮನ ಮಕ್ಕಳಾದ ಯೇರಿಬೈಯನೂ ಯೋಷವ್ಯನೂ;
47 Eliel, and Obed, and Jaasiel the Mezobaite.ಮೋವಾಬ್ಯನಾದ ಇತ್ಮನು, ಎಲೀ ಯೇಲನು, ಓಬೆದನು, ಮೆಚಬಾಯದವ ನಾದ ಯಾಸಿಯೇಲನು.
Kannada Bible