Skip to content
CHRIST SONGS .IN
TAMIL CHRISTIAN SONGS .IN
  • Lyrics
  • Chords
  • Bible
  • /
  • A
  • B
  • C
  • D
  • E
  • F
  • G
  • H
  • I
  • J
  • K
  • L
  • M
  • N
  • O
  • P
  • Q
  • R
  • S
  • T
  • U
  • V
  • W
  • X
  • Y
  • Z

Index
  • A
  • B
  • C
  • D
  • E
  • F
  • G
  • H
  • I
  • J
  • K
  • L
  • M
  • N
  • O
  • P
  • Q
  • R
  • S
  • T
  • U
  • V
  • W
  • X
  • Y
  • Z
Zephaniah 3 KJV ASV BBE DBY WBT WEB YLT

Zephaniah 3 in Kannada WBT Compare Webster's Bible

Zephaniah 3

1 ಅಸಹ್ಯವಾದ, ಮೈಲಿಗೆಯಾದ, ಶ್ರಮೆಪಡಿಸುವ ಪಟ್ಟಣಕ್ಕೆ ಅಯ್ಯೋ!

2 ಅವಳು ಶಬ್ದಕ್ಕೆ ವಿಧೇಯಳಾಗಲಿಲ್ಲ, ಶಿಕ್ಷೆಗೆ ಒಳಪಡಲಿಲ್ಲ, ಕರ್ತನಲ್ಲಿ ಭರವಸವಿಡ ಲಿಲ್ಲ. ತನ್ನ ದೇವರ ಸವಿಾಪಕ್ಕೆ ಬರಲಿಲ್ಲ.

3 ಅದರ ಮಧ್ಯದಲ್ಲಿರುವ ಪ್ರಧಾನರುಗಳು ಗರ್ಜಿಸುವ ಸಿಂಹಗಳಾಗಿದ್ದಾರೆ; ಅದರ ನ್ಯಾಯಾಧಿಪತಿಗಳು ಸಂಜೆಯ ತೋಳಗಳಾಗಿದ್ದಾರೆ; ಮರುದಿನದ ವರೆಗೂ ಕಡಿಯುವದಕ್ಕೆ ಎಲುಬುಗಳಿಲ್ಲ.

4 ಅದರ ಪ್ರವಾದಿಗಳು ಹಗುರವಾಗಿಯೂ ವಂಚಕರಾಗಿಯೂ ಇದ್ದಾರೆ; ಅದರ ಯಾಜಕರು ಪರಿಶುದ್ಧ ಸ್ಥಳವನ್ನು ಅಪವಿತ್ರ ಮಾಡಿ ದ್ದಾರೆ; ನ್ಯಾಯಪ್ರಮಾಣಕ್ಕೆ ಬಲಾತ್ಕಾರಮಾಡಿದ್ದಾರೆ.

5 ನೀತಿ ಯುಳ್ಳ ಕರ್ತನು ಅದರ ಮಧ್ಯದಲ್ಲಿ ಇದ್ದಾನೆ, ಆತನು ಅನ್ಯಾಯಮಾಡುವದಿಲ್ಲ; ಪ್ರತಿ ಬೆಳಿಗ್ಗೆ ತನ್ನ ನ್ಯಾಯ ತೀರ್ಪನ್ನು ಬೆಳಕಿಗೆ ತರುತ್ತಾನೆ; ಆತನು ತಪ್ಪುವಾತನಲ್ಲ, ಆದರೆ ಅನ್ಯಾಯವಂತನು ನಾಚಿಕೆ ಯನ್ನು ಅರಿಯನು.

6 ನಾನು ಜನಾಂಗಗಳನ್ನು ಕಡಿದು ಬಿಟ್ಟಿದ್ದೇನೆ; ಅವುಗಳ ಗೋಪುರಗಳು ಹಾಳಾಗಿವೆ; ಅವರ ಬೀದಿಗಳನ್ನು ಯಾರೂ ಹಾದು ಹೋಗದ ಹಾಗೆ ಹಾಳು ಮಾಡಿದ್ದೇನೆ; ಅವುಗಳ ಪಟ್ಟಣಗಳು ನಾಶವಾದವು, ಹೀಗೆ ಅಲ್ಲಿ ಯಾವನೂ ಇರುವದಿಲ್ಲ, ಯಾವ ಮನುಷ್ಯನು ಅಲ್ಲಿ ವಾಸಿಸುವದೂ ಇಲ್ಲ.

7 ನಾನು--ನಿಶ್ಚಯವಾಗಿ ನೀನು ನನಗೆ ಭಯಪಟ್ಟು ಶಿಕ್ಷಣವನ್ನು ಹೊಂದುವಿ; ಹೀಗೆ ನಾನು ಅವರಿಗೆ ಶಿಕ್ಷೆ ವಿಧಿಸಿದರೂ ಅವರ ನಿವಾಸವು ಕಡಿದು ಬಿಡಲ್ಪ ಡುವದಿಲ್ಲ; ಆದರೆ ಅವರು ಬೇಗನೆ ಎದ್ದು ತಮ್ಮ ಕ್ರಿಯೆಗಳನ್ನೆಲ್ಲಾ ಕೆಡಿಸಿಬಿಟ್ಟರು ಅಂದೆನು.

8 ಆದದರಿಂದ ನಾನು ಕೊಳ್ಳೆಗೆ ಏಳುವ ದಿನದ ವರೆಗೂ ನನಗೆ ಕಾದುಕೊಳ್ಳಿರಿ; ಜನಾಂಗಗಳನ್ನು ಕೂಡಿಸುವದಕ್ಕೂ ರಾಜ್ಯಗಳನ್ನು ಒಟ್ಟು ಸೇರಿಸುವದಕ್ಕೂ ಅವುಗಳ ಮೇಲೆ ನನ್ನ ರೌದ್ರವನ್ನೂ ಕೋಪದ ಎಲ್ಲಾ ಉರಿಯನ್ನೂ ಹೊಯ್ಯುವದಕ್ಕೂ ತೀರ್ಮಾನಿಸಿಕೊಂಡಿದ್ದೇನೆ; ನನ್ನ ರೋಷದ ಬೆಂಕಿಯಿಂದ ಭೂಮಿಯೆಲ್ಲಾ ದಹಿಸ ಲ್ಪಡುವದು.

9 ಆಗ ನಾನು ಶುದ್ಧ ಭಾಷೆಯನ್ನು ಜನಾಂಗಗಳಿಗೆ ತಿರುಗಿ ಕೊಡುವೆನು; ಅವರೆಲ್ಲರು ಕರ್ತನ ಹೆಸರಿನಲ್ಲಿ ಮೊರೆಯಿಟ್ಟು ಏಕ ಮನಸ್ಸಿನಿಂದ ಆತನಿಗೆ ಸೇವೆ ಮಾಡು ವರು.

10 ಕೂಷಿನ ನದಿಗಳ ಆಚೆಯಿಂದ ನನ್ನ ಭಕ್ತರೂ ಚದರಿ ಹೋದವರ ನನ್ನ ಮಗಳೂ ನನ್ನ ಕಾಣಿಕೆಯನ್ನು ತರುವರು.

11 ಆ ದಿನದಲ್ಲಿ ನೀನು ನನಗೆ ವಿರೋಧ ವಾಗಿ ಪಾಪ ಮಾಡಿದ ನಿನ್ನ ಎಲ್ಲಾ ಕ್ರಿಯೆಗಳ ನಿಮಿತ್ತ ನಾಚಿಕೆಪಡದೆ ಇರುವಿ; ಆಗ ನಿನ್ನ ಹೆಚ್ಚಳದಲ್ಲಿ ಸಂಭ್ರಮ ಪಡುವವರನ್ನು ನಿನ್ನ ಮಧ್ಯದೊಳಗಿಂದ ತೆಗೆದುಹಾಕು ವೆನು; ನನ್ನ ಪರಿಶುದ್ಧ ಪರ್ವತಕ್ಕೋಸ್ಕರ ಇನ್ನು ಮೇಲೆ ನೀನು ಗರ್ವಪಡುವದೇ ಇಲ್ಲ.

12 ಇದಲ್ಲದೆ ನಿನ್ನ ಮಧ್ಯದಲ್ಲಿ ಬಡವರನ್ನೂ ಹೀನವಾದವರನ್ನೂ ಉಳಿಸುವೆನು; ಇವರು ಕರ್ತನ ಹೆಸರಿನಲ್ಲಿ ನಂಬಿಕೆ ಇಡುವರು.

13 ಇಸ್ರಾಯೇಲಿನಲ್ಲಿ ಉಳಿದವರು ಅನ್ಯಾಯಮಾಡುವದಿಲ್ಲ; ಸುಳ್ಳು ಹೇಳುವದಿಲ್ಲ; ಅವರ ಬಾಯಲ್ಲಿ ಮೋಸದ ನಾಲಿಗೆ ಕಾಣುವದಿಲ್ಲ; ಅವರು ಮಂದೆಯಂತೆ ಮೇದು ಮಲಗುವರು; ಭಯಪಡಿಸು ವವನು ಒಬ್ಬನೂ ಇರುವದಿಲ್ಲ.

14 ಓ ಚೀಯೋನಿನ ಕುಮಾರ್ತೆಯೇ, ಹಾಡು; ಇಸ್ರಾಯೇಲೇ ಆರ್ಭಟಿಸು; ಯೆರೂಸಲೇಮಿನ ಕುಮಾರ್ತೆಯೇ, ಪೂರ್ಣಹೃದಯ ದಿಂದ ಸಂಭ್ರಮಿಸಿ ಉಲ್ಲಾಸಪಡು.

15 ಕರ್ತನು ನಿನ್ನ ನ್ಯಾಯ ತೀರ್ವಿಕೆಗಳನ್ನು ದೂರಮಾಡಿ ನಿನ್ನ ಶತ್ರು ವನ್ನು ತೆಗೆದುಹಾಕಿದ್ದಾನೆ; ಇಸ್ರಾಯೇಲಿನ ಅರಸನಾದ ಕರ್ತನು ನಿನ್ನ ಮಧ್ಯದಲ್ಲಿ ಇದ್ದಾನೆ; ಇನ್ನು ಮೇಲೆ ನೀನು ಕೇಡನ್ನು ನೋಡುವದಿಲ್ಲ.

16 ಆ ದಿನದಲ್ಲಿ ಯೆರೂಸಲೇಮಿಗೆ ಹೇಳಲ್ಪಡುವದೇನಂದರೆ--ನೀನು ಭಯಪಡಬೇಡ; ಚೀಯೋನೇ, ನಿನ್ನ ಕೈಗಳು ಬಲ ಹೀನವಾಗದಿರಲಿ.

17 ನಿನ್ನ ದೇವರಾದ ಕರ್ತನು ನಿನ್ನ ಮಧ್ಯದಲ್ಲಿ ಪರಾಕ್ರಮಿಯಾಗಿದ್ದಾನೆ. ಆತನು ರಕ್ಷಿಸು ವಂಥ ವನು; ಆನಂದದಿಂದ ನಿನ್ನಲ್ಲಿ ಸಂತೋಷಿಸು ವನು; ತನ್ನ ಪ್ರೀತಿಯಲ್ಲಿ ಮೌನವಾಗಿರುವನು; ಆನಂದ ಸ್ವರದಿಂದ ನಿನ್ನ ಮೇಲೆ ಉಲ್ಲಾಸಿಸುವನು.

18 ಪರಿಶುದ್ಧ ಸಭೆಯ ವಿಷಯವಾಗಿ ವ್ಯಸನ ಪಡುವವರನ್ನು ನಾನು ಕೂಡಿಸುತ್ತೇನೆ; ಅವರು ನಿನ್ನವರೇ; ಅವರ ಮೇಲೆ ನಿಂದೆ ಭಾರವಾಗಿದೆ.

19 ಇಗೋ, ಆ ಕಾಲದಲ್ಲಿ ನಿನ್ನನ್ನು ಶ್ರಮೆ ಪಡಿಸುವವರನ್ನೆಲ್ಲಾ ತೀರಿಸಿಬಿಟ್ಟು, ಕುಂಟಾದ ದ್ದನ್ನು ರಕ್ಷಿಸಿ, ಹೊರಡಿಸಲ್ಪಟ್ಟವರನ್ನು ಕೂಡಿಸಿ, ಅವರಿಗೆ ನಾಚಿಕೆಯಾದ ದೇಶಗಳಲ್ಲೆಲ್ಲಾ ಹೊಗಳಿಕೆಯನ್ನೂ ಕೀರ್ತಿಯನ್ನೂ ಉಂಟುಮಾಡುವೆನು.

20 ಆ ಕಾಲದಲ್ಲಿ ಅಂದರೆ ನಾನು ನಿಮ್ಮನ್ನು ಕೂಡಿಸುವ ಕಾಲದಲ್ಲಿ ನಿಮ್ಮನ್ನು ಕರಕೊಂಡು ಬರುವೆನು; ನಾನು ನಿಮ್ಮ ಸೆರೆಯನ್ನು ನಿಮ್ಮ ಕಣ್ಣುಗಳ ಮುಂದೆ ತಿರುಗಿಸುವಾಗ ಭೂಮಿಯ ಎಲ್ಲಾ ಜನರಲ್ಲಿ ನಿಮಗೆ ಕೀರ್ತಿಯನ್ನೂ ಹೊಗಳಿಕೆ ಯನ್ನೂ ಉಂಟುಮಾಡುವೆನು ಎಂದು ಕರ್ತನು ಹೇಳುತ್ತಾನೆ.

  • Tamil
  • Hindi
  • Malayalam
  • Telugu
  • Kannada
  • Gujarati
  • Punjabi
  • Bengali
  • Oriya
  • Nepali

By continuing to browse the site, you are agreeing to our use of cookies.

Close