ಯೋಹಾನನು 8:32
ಇದಲ್ಲದೆ ನೀವು ಸತ್ಯವನ್ನು ತಿಳಿದುಕೊಳ್ಳುವಿರಿ; ಆ ಸತ್ಯವು ನಿಮ್ಮನ್ನು ಬಿಡುಗಡೆ ಮಾಡುವದು ಎಂದು ಹೇಳಿದನು.
ಯೋಹಾನನು 8:36
ಆದದರಿಂದ ಮಗನು ನಿಮ್ಮನ್ನು ಬಿಡುಗಡೆ ಮಾಡಿದರೆ ನಿಜವಾಗಿಯೂ ನೀವು ಬಿಡುಗಡೆಯಾಗುವಿರಿ.
ರೋಮಾಪುರದವರಿಗೆ 6:18
ಹೀಗೆ ನೀವು ಪಾಪದಿಂದ ಬಿಡುಗಡೆಯನ್ನು ಹೊಂದಿ ನೀತಿಗೆ ದಾಸರಾದಿರಿ.
ರೋಮಾಪುರದವರಿಗೆ 6:22
ಈಗಲಾದರೋ ನೀವು ಪಾಪದಿಂದ ಬಿಡುಗಡೆಯನ್ನು ಹೊಂದಿ ದೇವರಿಗೆ ದಾಸರಾದದರಿಂದ ಪರಿಶುದ್ಧತೆಯೇ ನಿಮಗೆ ಫಲ; ಅದರ ಅಂತ್ಯವು ನಿತ್ಯಜೀವವೇ.
ರೋಮಾಪುರದವರಿಗೆ 8:2
ಜೀವವನ್ನುಂಟು ಮಾಡುವ ಆತ್ಮನ ನಿಯಮವು ಕ್ರಿಸ್ತ ಯೇಸುವಿನಲ್ಲಿ ನನ್ನನ್ನು ಪಾಪ ಮರಣಗಳ ನಿಯಮ ದಿಂದ ಬಿಡಿಸಿತು.
ರೋಮಾಪುರದವರಿಗೆ 8:21
ಸೃಷ್ಟಿಯು ತಾನೇ ದೇವರ ಮಕ್ಕಳ ಮಹಿಮೆಯ ಸ್ವಾತಂತ್ರ್ಯತೆಯಲ್ಲಿ ಸೇರುವಂತೆ ನಾಶನದ ದಾಸತ್ವದಿಂದ ಬಿಡುಗಡೆ ಹೊಂದುವದು.
ಗಲಾತ್ಯದವರಿಗೆ 5:1
ಕ್ರಿಸ್ತನು ನಮ್ಮನ್ನು ಸ್ವತಂತ್ರರನ್ನಾಗಿ ಮಾಡಿದ್ದಾನೆ. ಅದರಲ್ಲಿ ಸ್ಥಿರವಾಗಿ ನಿಲ್ಲಿರಿ; ದಾಸತ್ವದ ನೊಗದಲ್ಲಿ ತಿರಿಗಿ ಸಿಕ್ಕಿಕೊಳ್ಳಬೇಡಿರಿ.
Occurences : 7
எபிரேய எழுத்துக்கள் Hebrew Letters in Tamilஎபிரேய உயிரெழுத்துக்கள் Hebrew Vowels in TamilHebrew Short Vowels in Tamil எபிரேய குறில் உயிரெழுத்துக்கள்Hebrew Long Vowels in Tamil எபிரேய நெடில் உயிரெழுத்துக்கள்