Deuteronomy 6:13 in Kannada

Kannada Kannada Bible Deuteronomy Deuteronomy 6 Deuteronomy 6:13

Deuteronomy 6:13
ನಿನ್ನ ದೇವರಾದ ಕರ್ತನಿಗೆ ನೀನು ಭಯಪಡ ಬೇಕು; ಆತನನ್ನು ಸೇವಿಸಬೇಕು, ಆತನ ಹೆಸರಿನಲ್ಲಿ ಪ್ರಮಾಣ ಮಾಡಬೇಕು.

Deuteronomy 6:12Deuteronomy 6Deuteronomy 6:14

Deuteronomy 6:13 in Other Translations

King James Version (KJV)
Thou shalt fear the LORD thy God, and serve him, and shalt swear by his name.

American Standard Version (ASV)
Thou shalt fear Jehovah thy God; and him shalt thou serve, and shalt swear by his name.

Bible in Basic English (BBE)
Let the fear of the Lord your God be in your hearts, and be his servants, taking your oaths by his name.

Darby English Bible (DBY)
Thou shalt fear Jehovah thy God, and serve him, and shalt swear by his name.

Webster's Bible (WBT)
Thou shalt fear the LORD thy God, and serve him, and shalt swear by his name.

World English Bible (WEB)
You shall fear Yahweh your God; and him shall you serve, and shall swear by his name.

Young's Literal Translation (YLT)
Jehovah thy God thou dost fear, and Him thou dost serve, and by His name thou dost swear;

Thou
shalt
fear
אֶתʾetet

יְהוָ֧הyĕhwâyeh-VA
the
Lord
אֱלֹהֶ֛יךָʾĕlōhêkāay-loh-HAY-ha
thy
God,
תִּירָ֖אtîrāʾtee-RA
serve
and
וְאֹת֣וֹwĕʾōtôveh-oh-TOH
him,
and
shalt
swear
תַֽעֲבֹ֑דtaʿăbōdta-uh-VODE
by
his
name.
וּבִשְׁמ֖וֹûbišmôoo-veesh-MOH
תִּשָּׁבֵֽעַ׃tiššābēaʿtee-sha-VAY-ah

Cross Reference

ಲೂಕನು 4:8
ಯೇಸು ಅವನಿಗೆ ಪ್ರತ್ಯುತ್ತರವಾಗಿ--ಸೈತಾನನೇ, ನನ್ನ ಹಿಂದೆ ಹೋಗು; ಯಾಕಂದರೆ--ನೀನು ನಿನ್ನ ದೇವರಾದ ಕರ್ತನನ್ನು ಆರಾಧಿಸಿ ಆತನೊಬ್ಬನನ್ನೇ ಸೇವಿಸತಕ್ಕದ್ದು ಎಂದು ಬರೆದದೆ ಅಂದನು.

ಧರ್ಮೋಪದೇಶಕಾಂಡ 10:20
ನಿನ್ನ ಕರ್ತನಾದ ದೇವರಿಗೆ ನೀನು ಭಯಪಡಬೇಕು; ಆತನ ಸೇವೆಮಾಡಿ ಆತನಿಗೆ ಅಂಟಿಕೊಂಡು ಆತನ ಹೆಸರಿನಲ್ಲಿ ಪ್ರಮಾಣಮಾಡಬೇಕು.

ಮತ್ತಾಯನು 4:10
ಆಗ ಯೇಸು ಅವನಿಗೆ--ಸೈತಾನನೇ, ಇಲ್ಲಿಂದ ತೊಲಗಿಹೋಗು; ಯಾಕಂದರೆ--ನೀನು ನಿನ್ನ ದೇವ ರಾದ ಕರ್ತನನ್ನು ಮಾತ್ರ ಆರಾಧಿಸಿ ಆತನೊಬ್ಬನನ್ನೇ ಸೇವಿಸಬೇಕು ಎಂಬದಾಗಿ ಬರೆದದೆ ಅಂದನು.

ಕೀರ್ತನೆಗಳು 63:11
ಆದರೆ ಅರಸನು ದೇವರಲ್ಲಿ ಸಂತೋಷಿಸುವನು; ಆತನ ಮೇಲೆ ಆಣೆ ಇಡುವ ವರೆಲ್ಲರು ಹೆಚ್ಚಳಪಡುವರು; ಆದರೆ ಸುಳ್ಳಾಡುವವರ ಬಾಯಿ ಮುಚ್ಚಲ್ಪಡುವದು.

ಧರ್ಮೋಪದೇಶಕಾಂಡ 13:4
ನಿಮ್ಮ ದೇವರಾದ ಕರ್ತನನ್ನೇ ಅನುಸರಿಸಿ ಆತನಿಗೆ ಭಯಪಟ್ಟು ಆತನ ಆಜ್ಞೆಗಳನ್ನು ಕೈಕೊಂಡು ಆತನ ಸ್ವರವನ್ನು ಕೇಳಿ ಆತನಿಗೆ ಸೇವೆಮಾಡಿ ಆತನಿಗೆ ಅಂಟಿಕೊಳ್ಳಬೇಕು.

ಯೆರೆಮಿಯ 12:16
ಬಾಳನ ಆಣೆ ಇಟ್ಟು ಕೊಳ್ಳುವದಕ್ಕೆ ಅವರು ನನ್ನ ಜನಕ್ಕೆ ಬೋಧಿಸಿದ ಪ್ರಕಾರ ಅವರು ಕರ್ತನ ಜೀವದಾಣೆ ಎಂದು ಹೇಳಿ ನನ್ನ ಹೆಸರಿನ ಆಣೆ ಇಟ್ಟುಕೊಳ್ಳುವದಕ್ಕೆ ನನ್ನ ಜನರ ಮಾರ್ಗ ಗಳನ್ನು ಜಾಗ್ರತೆಯಾಗಿ ಕಲಿತುಕೊಂಡರೆ ಆಗ ಅವರು ನನ್ನ ಜನರ ಮಧ್ಯದಲ್ಲಿ ಕಟ್ಟಲ್ಪಡುವರು.

ಯೆಶಾಯ 65:16
ಆಗ ದೇಶದಲ್ಲಿ ತನ್ನನ್ನು ಆಶೀರ್ವದಿಸಿಕೊಳ್ಳು ವವನು ಸತ್ಯ ದೇವರಲ್ಲಿ ಆಶೀರ್ವದಿಸಿಕೊಳ್ಳುವನು. ದೇಶದಲ್ಲಿ ಆಣೆ ಇಟ್ಟುಕೊಳ್ಳುವವನು; ಸತ್ಯದೇವರ ಮೇಲೆ ಆಣೆ ಇಟ್ಟುಕೊಳ್ಳುವನು; ಮುಂಚಿನ ಕಷ್ಟಗಳು ಮರೆತುಹೋಗಿವೆ ಮತ್ತು ಅವು ನನ್ನ ಕಣ್ಣುಗಳಿಗೆ ಮರೆಯಾಗಿವೆ.

ಯೆಶಾಯ 45:23
ನನ್ನಷ್ಟಕ್ಕೆ ನಾನೇ ಆಣೆಯನ್ನು ಇಟ್ಟಿದ್ದೇನೆ, ನೀತಿಯುಳ್ಳ ವಾಕ್ಯವು ನನ್ನ ಬಾಯಿಂದ ಹೊರಟಿದೆ, ಅದು ಹಿಂದಿರುಗದು: ಎಲ್ಲರೂ ನನಗೆ ಅಡ್ಡಬೀಳುವರು, ಪ್ರತಿ ನಾಲಿಗೆಯು ಪ್ರತಿಜ್ಞೆ ಮಾಡು ವದು.

ಯೆಹೋಶುವ 2:12
ಈಗ ನಾನು ನಿಮಗೆ ದಯ ತೋರಿಸಿದ್ದರಿಂದ ನೀವು ನನಗೆ ಮತ್ತು ನನ್ನ ತಂದೆಯ ಮನೆಗೆ ದಯತೋರಿಸಬೇಕು. ನನಗೆ ಸತ್ಯವಾದ ಗುರುತನ್ನು ಕೊಡಬೇಕು.

ಯಾಜಕಕಾಂಡ 19:12
ಇದಲ್ಲದೆ ನನ್ನ ಹೆಸರಿನಲ್ಲಿ ಸುಳ್ಳು ಪ್ರಮಾಣಮಾಡಬಾರದು ನಿಮ್ಮ ದೇವರ ಹೆಸರನ್ನು ಅಪವಿತ್ರಮಾಡಬಾರದು; ನಾನೇ ಕರ್ತನು.

ಯೆರೆಮಿಯ 5:7
ಇದಕ್ಕಾಗಿ ನಾನು ನಿನ್ನನ್ನು ಹೇಗೆ ಮನ್ನಿಸಲಿ? ನಿನ್ನ ಮಕ್ಕಳು ನನ್ನನ್ನು ಬಿಟ್ಟು ದೇವರಲ್ಲದವುಗಳ ಮೇಲೆ ಆಣೆ ಇಟ್ಟುಕೊಂಡಿದ್ದಾರೆ; ನಾನು ಅವರನ್ನು ತೃಪ್ತಿಪಡಿ ಸಿದ ಮೇಲೆ ಅವರು ವ್ಯಭಿಚಾರಮಾಡಿ ಸೂಳೆಯರ ಮನೆಗಳಲ್ಲಿ ಗುಂಪಾಗಿ ಕೂಡಿಕೊಂಡರು.

ಯೆರೆಮಿಯ 4:2
ನೀನು ಸತ್ಯದಿಂದಲೂ ನ್ಯಾಯದಿಂದಲೂ ನೀತಿ ಯಿಂದಲೂ ಕರ್ತನ ಜೀವದಾಣೆ ಎಂದು ಪ್ರಮಾಣಮಾಡುವಿ; ಆಗ ಜನಾಂಗಗಳು ಆತನಲ್ಲಿ ಆಶೀರ್ವದಿಸಿ ಕೊಳ್ಳುವವು; ಮತ್ತು ಆತನಲ್ಲಿ ಹೊಗಳಿಕೊಳ್ಳುವವು.

ಕೀರ್ತನೆಗಳು 15:4
ಅವನ ಕಣ್ಣುಗಳಿಗೆ ನೀಚನು ತಿರಸ್ಕರಿಸಲ್ಪ ಟ್ಟಿದ್ದಾನೆ. ಆದರೆ ಕರ್ತನಿಗೆ ಭಯಪಡುವವರನ್ನು ಗೌರವಿಸುತ್ತಾನೆ, ಆಣೆಯಿಂದ ನಷ್ಟವಾದರೂ ಬದಲಾ ಯಿಸದವನು.

ಧರ್ಮೋಪದೇಶಕಾಂಡ 10:12
ಈಗ ಇಸ್ರಾಯೇಲೇ, ನಿನ್ನ ಕರ್ತನಾದ ದೇವರಿಗೆ ಭಯಪಟ್ಟು ಆತನ ಎಲ್ಲಾ ಮಾರ್ಗಗಳಲ್ಲಿ ನಡೆದು ಕೊಂಡು ಆತನನ್ನು ಪ್ರೀತಿಮಾಡಿ ನಿನ್ನ ಕರ್ತನಾದ ದೇವರಿಗೆ ನಿನ್ನ ಪೂರ್ಣಹೃದಯದಿಂದಲೂ ನಿನ್ನ ಪೂರ್ಣಪ್ರಾಣದಿಂದಲೂ ಸೇವೆಮಾಡಿ

ಧರ್ಮೋಪದೇಶಕಾಂಡ 6:2
ನೀನು ನಿನ್ನ ದೇವರಾದ ಕರ್ತನಿಗೆ ಭಯಪಟ್ಟು ನಾನು ನಿನಗೆ ಆಜ್ಞಾಪಿಸುವ ಆತನ ಎಲ್ಲಾ ನಿಯಮಗಳನ್ನು ಮತ್ತು ಆಜ್ಞೆಗಳನ್ನು ನೀನೂ ನಿನ್ನ ಮಗನೂ ನಿನ್ನ ಮೊಮ್ಮ ಗನೂ ನಿನ್ನ ಜೀವಿತದ ದಿವಸಗಳಲ್ಲೆಲ್ಲಾ ಕೈಕೊ ಳ್ಳುವ ಹಾಗೆಯೂ ನಿನ್ನ ದಿವಸಗಳು ಬಹಳವಾಗುವ ಹಾಗೆಯೂ ನಿಮಗೆ ಬೋಧಿಸಬೇಕೆಂದು ನಿಮ್ಮ ದೇವ ರಾದ ಕರ್ತನು ಆಜ್ಞಾಪಿಸಿದ ಆಜ್ಞೆ ವಿಧಿ ನ್ಯಾಯ ಗಳು ಇವೇ.

ಧರ್ಮೋಪದೇಶಕಾಂಡ 5:29
ಅವರು ನನಗೆ ಭಯಪಟ್ಟು ನನ್ನ ಆಜ್ಞೆಗಳನ್ನೆಲ್ಲಾ ಎಂದೆಂದಿಗೂ ಕೈಕೊಳ್ಳುವಂಥ ಹೃದಯವು ಅವರಲ್ಲಿದ್ದರೆ ಎಷ್ಟೋ ಒಳ್ಳೇದು; ಆಗ ಅವರಿಗೂ ಅವರ ಮಕ್ಕಳಿಗೂ ಎಂದೆಂ ದಿಗೂ ಒಳ್ಳೆಯದಾಗುವದು.

ಯೆರೆಮಿಯ 5:2
ಅವರು--ಕರ್ತನು ಜೀವಿಸುತ್ತಾನೆಂದು ಹೇಳಿದರೂ ನಿಶ್ಚಯವಾಗಿ ಸುಳ್ಳಾಗಿಯೇ ಅವರು ಆಣೆ ಇಡುತ್ತಾರೆ.