Psalm 26
1 ಓ ಕರ್ತನೇ, ನನಗೆ ನ್ಯಾಯತೀರಿಸು; ಯಾಕಂದರೆ ನಾನು ನನ್ನ ಯಥಾರ್ಥತ್ವ ದಲ್ಲಿ ನಡೆದುಕೊಂಡಿದ್ದೇನೆ. ನಾನು ಕರ್ತನಲ್ಲಿ ಭರ ವಸವಿಟ್ಟಿದ್ದೇನೆ; ನಾನು ಕದಲುವದಿಲ್ಲ.
2 ಓ ಕರ್ತನೇ ನನ್ನನ್ನು ಶೋಧಿಸಿ ಪರೀಕ್ಷಿಸು; ನನ್ನ ಅಂತರಿಂದ್ರಿ ಯಗಳನ್ನೂ ಹೃದಯವನ್ನೂ ಶೋಧಿಸು.
3 ನಿನ್ನ ಪ್ರೀತಿಯೂ ಕೃಪೆಯೂ ನನ್ನ ಕಣ್ಣುಗಳ ಮುಂದೆ ಅವೆ; ನಾನು ನಿನ್ನ ಸತ್ಯದಲ್ಲಿ ನಡೆದುಕೊಂಡಿದ್ದೇನೆ.
4 ನಿಷ್ಪ್ರಯೋಜಕರೊಂದಿಗೆ ನಾನು ಕೂತುಕೊಳ್ಳ ಲಿಲ್ಲ; ವಂಚಕರ ಸಂಗಡ ನಾನು ಹೋಗುವದಿಲ್ಲ.
5 ದುರ್ಮಾರ್ಗಿಗಳ ಸಭೆಯನ್ನು ಹಗೆಮಾಡಿದ್ದೇನೆ; ದುಷ್ಟರ ಸಂಗಡ ಕೂತುಕೊಳ್ಳುವದಿಲ್ಲ.
6 ಓ ಕರ್ತನೇ, ಸ್ತೋತ್ರದ ಶಬ್ದದಿಂದ ಪ್ರಕಟಿಸಿ ನಿನ್ನ ಅದ್ಭುತಗಳ ನ್ನೆಲ್ಲಾ ತಿಳಿಸುವ ಹಾಗೆ
7 ನನ್ನ ಕೈಗಳನ್ನು ನಿರ್ಮಲ ತ್ವದಲ್ಲಿ ತೊಳೆದು, ನಿನ್ನ ಬಲಿಪೀಠವನ್ನು ಸುತ್ತುವೆನು.
8 ಕರ್ತನೇ, ನಿನ್ನ ವಾಸಸ್ಥಾನವನ್ನೂ ಗೌರವದ ನಿವಾಸವನ್ನೂ ನಾನು ಪ್ರೀತಿಸಿದ್ದೇನೆ.
9 ಪಾಪಾತ್ಮರ ಸಂಗಡ ನನ್ನ ಪ್ರಾಣವನ್ನೂ ರಕ್ತ ಸುರಿಸುವವರ ಸಂಗಡ ನನ್ನ ಜೀವವನ್ನೂ ತೆಗೆಯಬೇಡ.
10 ಅವರ ಕೈಗಳಲ್ಲಿ ಕೇಡು ಅದೆ; ಅವರ ಬಲಗೈ ಲಂಚಗಳಿಂದ ತುಂಬಿದೆ.
11 ನಾನಾದರೋ ನನ್ನ ಯಥಾರ್ಥತ್ವದಲ್ಲಿ ನಡೆಯು ತ್ತೇನೆ: ನನ್ನನ್ನು ವಿಮೋಚಿಸು; ನನಗೆ ಕರುಣೆಯುಳ್ಳ ವನಾಗಿರು.
12 ನನ್ನ ಪಾದವು ಸಮಸ್ಥಳದಲ್ಲಿ ನಿಲ್ಲುತ್ತದೆ; ಸಭೆಗಳಲ್ಲಿ ನಾನು ಕರ್ತನನ್ನು ಸ್ತುತಿಸುವೆನು.
1 A Psalm of David.
2 Judge me, O Lord; for I have walked in mine integrity: I have trusted also in the Lord; therefore I shall not slide.
3 Examine me, O Lord, and prove me; try my reins and my heart.
4 For thy lovingkindness is before mine eyes: and I have walked in thy truth.
5 I have not sat with vain persons, neither will I go in with dissemblers.
6 I have hated the congregation of evil doers; and will not sit with the wicked.
7 I will wash mine hands in innocency: so will I compass thine altar, O Lord:
8 That I may publish with the voice of thanksgiving, and tell of all thy wondrous works.
9 Lord, I have loved the habitation of thy house, and the place where thine honour dwelleth.
10 Gather not my soul with sinners, nor my life with bloody men:
11 In whose hands is mischief, and their right hand is full of bribes.
12 But as for me, I will walk in mine integrity: redeem me, and be merciful unto me.
13 My foot standeth in an even place: in the congregations will I bless the Lord.