Numbers 5:27
ಆಕೆಗೆ ಆ ನೀರನ್ನು ಕುಡಿಸಿದ ಮೇಲೆ ಆಕೆಯು ಅಶುದ್ಧಳಾಗಿ ತನ್ನ ಗಂಡನಿಗೆ ಅಪರಾಧ ಮಾಡಿದ್ದಾಗಿದ್ದರೆ ಶಪಿಸುವ ನೀರು ಆಕೆ ಯೊಳಗೆ ಸೇರಿ ಕಹಿಯಾಗುವದು; ಅವಳ ಹೊಟ್ಟೆ ಉಬ್ಬಿ ತೊಡೆ ಕ್ಷೀಣವಾಗುವದು. ಆಗ ಆ ಸ್ತ್ರೀ ತನ್ನ ಜನರ ಮಧ್ಯದಲ್ಲಿ ಶಾಪವಾಗಿರುವಳು.
And drink to her made hath he when | וְהִשְׁקָ֣הּ | wĕhišqāh | veh-heesh-KA |
אֶת | ʾet | et | |
the water, | הַמַּ֗יִם | hammayim | ha-MA-yeem |
pass, to come shall it then | וְהָֽיְתָ֣ה | wĕhāyĕtâ | veh-ha-yeh-TA |
that, if | אִֽם | ʾim | eem |
she be defiled, | נִטְמְאָה֮ | niṭmĕʾāh | neet-meh-AH |
done have and | וַתִּמְעֹ֣ל | wattimʿōl | va-teem-OLE |
trespass | מַ֣עַל | maʿal | MA-al |
against her husband, | בְּאִישָׁהּ֒ | bĕʾîšāh | beh-ee-SHA |
water the that | וּבָ֨אוּ | ûbāʾû | oo-VA-oo |
that causeth the curse | בָ֜הּ | bāh | va |
shall enter | הַמַּ֤יִם | hammayim | ha-MA-yeem |
bitter, become and her, into | הַמְאָֽרֲרִים֙ | hamʾārărîm | hahm-ah-ruh-REEM |
and her belly | לְמָרִ֔ים | lĕmārîm | leh-ma-REEM |
swell, shall | וְצָֽבְתָ֣ה | wĕṣābĕtâ | veh-tsa-veh-TA |
and her thigh | בִטְנָ֔הּ | biṭnāh | veet-NA |
shall rot: | וְנָֽפְלָ֖ה | wĕnāpĕlâ | veh-na-feh-LA |
woman the and | יְרֵכָ֑הּ | yĕrēkāh | yeh-ray-HA |
shall be | וְהָֽיְתָ֧ה | wĕhāyĕtâ | veh-ha-yeh-TA |
a curse | הָֽאִשָּׁ֛ה | hāʾiššâ | ha-ee-SHA |
among | לְאָלָ֖ה | lĕʾālâ | leh-ah-LA |
her people. | בְּקֶ֥רֶב | bĕqereb | beh-KEH-rev |
עַמָּֽהּ׃ | ʿammāh | ah-MA |
Cross Reference
Jeremiah 42:18
ಇಸ್ರಾಯೇಲಿನ ದೇವರಾದ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ನನ್ನ ಕೋಪವೂ ನನ್ನ ಉರಿಯೂ ಹೇಗೆ ಯೆರೂಸಲೇಮಿನ ನಿವಾಸಿಗಳ ಮೇಲೆ ಹೊಯ್ಯಲ್ಪಟ್ಟಿತೋ ಹಾಗೆಯೇ ನೀವು ಐಗುಪ್ತಕ್ಕೆ ಹೋದರೆ ನನ್ನ ಉರಿಯು ನಿಮ್ಮ ಮೇಲೆ ಹೊಯ್ಯಲ್ಪ ಡುವದು; ನೀವು ಅಸಹ್ಯವೂ ವಿಸ್ಮಯವೂ ಶಾಪವೂ ನಿಂದೆಯೂ ಆಗುವಿರಿ; ಈ ಸ್ಥಳವನ್ನು ನೀವು ತಿರುಗಿ ನೋಡುವದಿಲ್ಲ.
Jeremiah 29:18
ಕತ್ತಿಯಿಂದಲೂ ಕ್ಷಾಮ ದಿಂದಲೂ ಜಾಡ್ಯದಿಂದಲೂ ಅವರನ್ನು ಹಿಂಸಿಸಿ ನಾನು ಅವರನ್ನು ಓಡಿಸಿಬಿಟ್ಟ ಎಲ್ಲಾ ಜನಾಂಗಗಳಲ್ಲಿ ಶಾಪಕ್ಕೂ ವಿಸ್ಮಯಕ್ಕೂ ಸಿಳ್ಳಿಡುವಿಕೆಗೂ ನಿಂದೆಗೂ ಗುರಿಯಾಗುವ ಹಾಗೆ ಒಪ್ಪಿಸಿಬಿಡುವೆನು.
Zechariah 8:13
ಆಗುವದೇನಂದರೆ, ಓ ಯೆಹೂದದ ಮನೆತನದವರೇ, ಇಸ್ರಾಯೇಲಿನ ಮನೆತನದವರೇ, ನೀವು ಜನಾಂಗಗಳಲ್ಲಿ ಶಾಪವಾಗಿದ್ದ ಪ್ರಕಾರ ನಾನು ನಿಮ್ಮನ್ನು ರಕ್ಷಿಸುವೆನು ಮತ್ತು ನೀವು ಆಶೀರ್ವಾದವಾಗಿರುವಿರಿ; ಭಯಪಡಬೇಡಿರಿ; ನಿಮ್ಮ ಕೈಗಳು ಬಲವಾಗಿರಲಿ.
Jeremiah 44:12
ಐಗುಪ್ತದೇಶಕ್ಕೆ ಹೋಗಿ ಅಲ್ಲಿ ತಂಗಬೇಕೆಂದು ತಮ್ಮ ಮುಖಗಳನ್ನು ತಿರುಗಿಸಿರುವ ಯೆಹೂದದಲ್ಲಿ ಉಳಿದಿರುವವರನ್ನು ತಕ್ಕೊಳ್ಳುತ್ತೇನೆ; ಅವರೆಲ್ಲರೂ ಕಡಿದು ಬಿಡಲ್ಪಟ್ಟ ಐಗುಪ್ತದೇಶದಲ್ಲಿ ಬೀಳುವರು; ಕತ್ತಿಯಿಂದಲೂ ಕ್ಷಾಮದಿಂದಲೂ ಕಡಿದು ಬಿಡಲ್ಪಡು ವರು; ಚಿಕ್ಕವನು ಮೊದಲುಗೊಂಡು ದೊಡ್ಡವನ ವರೆಗೂ ಕತ್ತಿಯಿಂದಲೂ ಕ್ಷಾಮದಿಂದಲೂ ಸಾಯು ವರು. ಅವರು ಅಸಹ್ಯವೂ ವಿಸ್ಮಯವೂ ಶಾಪವೂ ನಿಂದೆಯೂ ಆಗುವರು.
Jeremiah 29:22
ಬಾಬೆಲಿನಲ್ಲಿರುವ ಯೆಹೂದದ ಸೆರೆಯವರೆಲ್ಲರೂ ಅವರಿಂದ ಶಾಪವನ್ನು ತಕ್ಕೊಂಡು--ಬಾಬೆಲಿನ ಅರಸನು ಬೆಂಕಿಯಲ್ಲಿ ಸುಟ್ಟುಬಿಟ್ಟ ಚಿದ್ಕೀಯನ ಹಾಗೆಯೂ ಅಹಾಬನ ಹಾಗೆಯೂ ಕರ್ತನು ನಿನಗೆ ಮಾಡಲಿ ಎಂದು ಹೇಳುವರು
Jeremiah 24:9
ನಾನು ಅವರನ್ನು ಓಡಿಸಿಬಿಡುವ ಎಲ್ಲಾ ಸ್ಥಳಗಳಲ್ಲಿ ನಿಂದೆಗೂ ಗಾದೆಗೂ ಹಾಸ್ಯಕ್ಕೂ ಶಾಪಕ್ಕೂ ಗುರಿಮಾಡಿ ಅವರನ್ನು ಭೂಮಿಯ ಸಮಸ್ತ ರಾಜ್ಯಗಳಿಂದ ತೆಗೆದು ಕೇಡಿಗೆ ಒಪ್ಪಿಸುವೆನು.
Isaiah 65:15
ನಾನು ಆದುಕೊಂಡವರಿಗೆ ನಿಮ್ಮ ಹೆಸರನ್ನು ಶಾಪವಾಗಿ ಉಳಿ ಸುವಿರಿ; ಕರ್ತನಾದ ಯೆಹೋವನು ನಿಮ್ಮನ್ನು ಕೊಂದು ಹಾಕಿ, ತನ್ನ ಸೇವಕರಿಗೆ ಬೇರೆ ಹೆಸರನ್ನು ಇಡುವನು.
Deuteronomy 28:37
ಇದಲ್ಲದೆ ದೇವರು ನಿನ್ನನ್ನು ನಡಿಸುವ ಎಲ್ಲಾ ಜನಾಂಗಗಳಲ್ಲಿ ವಿಸ್ಮಯಕ್ಕೂ ಗಾದೆಗೂ ಹಾಸ್ಯಕ್ಕೂ ಗುರಿಯಾಗುವಿ.
2 Peter 2:10
ಆದರೆ ಮುಖ್ಯವಾಗಿ ಬಂಡು ತನದ ದುರಾಶೆಯಲ್ಲಿ ಶರೀರಾನುಸಾರ ನಡೆದು ಪ್ರಭುತ್ವವನ್ನು ತಿರಸ್ಕಾರ ಮಾಡುವವರನ್ನು ಹೀಗೆ ಶಿಕ್ಷಿಸುವನು. ಇವರು ಯಾರಿಗೂ ಹೆದರದೆ ಸ್ವೇಚ್ಛಾಪರರಾಗಿದ್ದಾರೆ; ದುರಹಂಕಾರದಿಂದ ಗೌರವವುಳ್ಳವರನ್ನು ದೂಷಿಸುತ್ತಾರೆ.
Hebrews 10:26
ನಾವು ಸತ್ಯದ ಪರಿಜ್ಞಾನವನ್ನು ಹೊಂದಿದ ಮೇಲೆ ಬೇಕೆಂದು ಪಾಪಮಾಡಿದರೆ ಪಾಪಗಳಿಗಾಗಿ ಇನ್ನಾವ ಯಜ್ಞವೂ ಉಳಿದಿರುವದಿಲ್ಲ.
2 Corinthians 2:16
ನಾವು ನಾಶವಾಗುವವರಿಗೆ ಮರಣದಿಂದಾದ ಮರಣದ ವಾಸನೆಯಾಗಿಯೂ ರಕ್ಷಿಸಲ್ಪಟ್ಟವರಿಗೆ ಜೀವದಿಂದಾದ ಜೀವದ ಸುವಾಸನೆ ಯಾಗಿಯೂ ಇದ್ದೇವೆ; ಹೀಗಿರುವಾಗ ಇವುಗಳಿಗೆ ಯೋಗ್ಯನು ಯಾರು?
Romans 6:21
ನೀವು ಆಗ ಮಾಡಿ ದವುಗಳಿಂದ ನಿಮಗುಂಟಾದ ಫಲವೇನು? ಈಗ ಅವುಗಳ ವಿಷಯದಲ್ಲಿ ನಿಮಗೆ ನಾಚಿಕೆಯುಂಟಷ್ಟೆ; ಅವುಗಳ ಅಂತ್ಯವು ಮರಣವೇ.
Ecclesiastes 7:26
ತನ್ನ ಹೃದಯವು ಉರುಲುಗಳೂ ಬಲೆ ಗಳೂ ಅವಳ ಕೈಗಳ ಕಟ್ಟುಗಳೂ ಆಗಿರುವ ಸ್ತ್ರೀಯು ಮರಣಕ್ಕಿಂತಲೂ ಕಠೋರವಾಗಿದ್ದಾಳೆಂದು ನಾನು ಕಂಡಿದ್ದೇನೆ. ದೇವರನ್ನು ಮೆಚ್ಚಿಸಿದವನು ಅವಳಿಂದ ತಪ್ಪಿಸಿಕೊಳ್ಳುವನು; ಪಾಪಿಯು ಅವಳಿಂದ ಹಿಡಿಯಲ್ಪ ಡುವನು.
Proverbs 5:4
ಆದರೆ ಅವಳ ಅಂತ್ಯವು ಮಾಚಿ ಪತ್ರೆಯಂತೆ ಕಹಿಯೂ ಇಬ್ಬಾಯಿ ಕತ್ತಿಯಂತೆ ಹರಿತವೂ ಇರುತ್ತದೆ.
Psalm 83:9
ಮಿದ್ಯಾನಿಗೂ ಸೀಸೆರನಿಗೂ ಯಾಬೀನನಿಗೂ ಕೀಷೋನ್ ಹಳ್ಳದಲ್ಲಿ ಮಾಡಿದ ಹಾಗೆ ಅವರಿಗೆ ಮಾಡು.
Numbers 5:20
ಆದರೆ ನೀನು ನಿನ್ನ ಗಂಡನನ್ನು ಬಿಟ್ಟು ಜಾರತ್ವಮಾಡಿ ಅಶುದ್ಧಳಾಗಿದ್ದರೆ ನಿನ್ನ ಗಂಡನನ್ನು ಬಿಟ್ಟು ಮತ್ತೊಬ್ಬನು ನಿನ್ನ ಸಂಗಡ ಮಲಗಿದ್ದರೆ