Matthew 19:22
ಆದರೆ ಆ ಯೌವನಸ್ಥನು ಆತನು ಹೇಳಿದ್ದನ್ನು ಕೇಳಿ ದುಃಖ ದಿಂದ ಹೊರಟುಹೋದನು. ಯಾಕಂದರೆ ಅವನಿಗೆ ಬಹಳ ಆಸ್ತಿ ಇತ್ತು.
Matthew 19:22 in Other Translations
King James Version (KJV)
But when the young man heard that saying, he went away sorrowful: for he had great possessions.
American Standard Version (ASV)
But when the young man heard the saying, he went away sorrowful; for he was one that had great possessions.
Bible in Basic English (BBE)
But hearing these words the young man went away sorrowing: for he had much property.
Darby English Bible (DBY)
But the young man, having heard the word, went away grieved, for he had large possessions.
World English Bible (WEB)
But when the young man heard the saying, he went away sad, for he was one who had great possessions.
Young's Literal Translation (YLT)
And the young man, having heard the word, went away sorrowful, for he had many possessions;
| But | ἀκούσας | akousas | ah-KOO-sahs |
| when the | δὲ | de | thay |
| young | ὁ | ho | oh |
| man heard | νεανίσκος | neaniskos | nay-ah-NEE-skose |
| that | τὸν | ton | tone |
| saying, | λόγον | logon | LOH-gone |
| away went he | ἀπῆλθεν | apēlthen | ah-PALE-thane |
| sorrowful: | λυπούμενος· | lypoumenos | lyoo-POO-may-nose |
| for | ἦν | ēn | ane |
| he | γὰρ | gar | gahr |
| had | ἔχων | echōn | A-hone |
| great | κτήματα | ktēmata | k-TAY-ma-ta |
| possessions. | πολλά | polla | pole-LA |
Cross Reference
Ezekiel 33:31
ಬೇರೆ ಜನರು ಬರುವ ಹಾಗೆ ಅವರು ನಿನ್ನ ಬಳಿಗೆ ಬಂದು ಜನರು ಕುಳಿತುಕೊಳ್ಳುವ ಹಾಗೆ ನಿನ್ನ ಮುಂದೆ ಕುಳಿತುಕೊಳ್ಳುವರು; ಅವರು ನಿನ್ನ ವಾಕ್ಯಗಳನ್ನು ಕೇಳುವರು, ಆದರೆ ಅವರು ಅವುಗಳನ್ನು ಮಾಡುವದಿಲ್ಲ. ಅವರು ತಮ್ಮ ಬಾಯಿಂದ ಹೆಚ್ಚಾದ ಪ್ರೀತಿಯನ್ನು ತೋರಿಸುವರು; ಆದರೆ ಅವರ ಹೃದಯವು ಲೋಭತ್ವದ ಕಡೆಗೆ ಹೋಗುವದು.
Luke 18:23
ಅವನು ಇದನ್ನು ಕೇಳಿ ಬಹಳ ದುಃಖವುಳ್ಳವನಾದನು; ಯಾಕಂದರೆ ಅವನು ಬಹಳ ಐಶ್ವರ್ಯವಂತನಾಗಿದ್ದನು.
Mark 10:22
ಆ ಮಾತಿಗೆ ಅವನು ವ್ಯಸನಗೊಂಡು ದುಃಖದಿಂದ ಹೊರಟುಹೋದನು; ಯಾಕಂದರೆ ಅವನಿಗೆ ಬಹಳ ಆಸ್ತಿಯಿತ್ತು.
Matthew 16:26
ಒಬ್ಬ ಮನುಷ್ಯನು ಇಡೀ ಲೋಕವನ್ನು ಸಂಪಾದಿಸಿ ಕೊಂಡು ತನ್ನ ಆತ್ಮವನ್ನು ನಷ್ಟಪಡಿಸಿ ಕೊಂಡರೆ ಅವನಿಗೆ ಲಾಭವೇನು? ಇಲ್ಲವೆ ತನ್ನ ಆತ್ಮಕ್ಕೆ ಬದಲಾಗಿ ಒಬ್ಬ ಮನುಷ್ಯನು ಏನು ಕೊಟ್ಟಾನು?
Matthew 13:22
ಮುಳ್ಳುಗಳಲ್ಲಿ ಬೀಜವನ್ನು ಅಂಗೀಕರಿಸಿದವನು ಸಹ ಇವನೇ; ಇವನು ವಾಕ್ಯವನ್ನು ಕೇಳುತ್ತಾನೆ; ಆದರೆ ಈ ಪ್ರಪಂಚದ ಚಿಂತೆಯೂ ಐಶ್ವರ್ಯದ ಮೋಸವೂ ವಾಕ್ಯವನ್ನು ಅಡಗಿಸುವ ದರಿಂದ ಅವನು ಫಲ ಕೊಡಲಾರನು.
Matthew 6:24
ಯಾವ ಮನುಷ್ಯನೂ ಇಬ್ಬರು ಯಜಮಾನರಿಗೆ ಸೇವೆ ಮಾಡಲಾರನು; ಯಾಕಂದರೆ ಅವನು ಒಬ್ಬನನ್ನು ಹಗೆಮಾಡಿ ಇನ್ನೊಬ್ಬನನ್ನು ಪ್ರೀತಿಮಾಡುವನು; ಇಲ್ಲವಾದರೆ ಒಬ್ಬನನ್ನು ಹೊಂದಿಕೊಂಡು ಮತ್ತೊಬ್ಬ ನನ್ನು ಅಸಡ್ಡೆ ಮಾಡುವನು. ನೀವು ದೇವರನ್ನೂ ಧನವನ್ನೂ ಸೇವಿಸಲಾರಿರಿ.
Colossians 3:5
ಆದದರಿಂದ ನಿಮ್ಮಲ್ಲಿರುವ ಭೂಸಂಬಂಧವಾದ ಭಾವಗಳನ್ನು ಅಂದರೆ ಜಾರತ್ವ ಬಂಡುತನ ಕಾಮಾಭಿ ಲಾಷೆ ದುರಾಶೆ ವಿಗ್ರಹಾರಾಧನೆಯಾಗಿರುವ ಲೋಭ ಇವುಗಳನ್ನು ಸಾಯಿಸಿರಿ.
Ephesians 5:5
ಯಾವ ಜಾರನಾಗಲಿ, ಅಶುದ್ಧನಾಗಲಿ, ವಿಗ್ರಹಾರಾಧಕನಂತಿರುವ ಲೋಭಿಯಾಗಲಿ ಕ್ರಿಸ್ತನ ಮತ್ತು ದೇವರ ರಾಜ್ಯದಲ್ಲಿ ಬಾಧ್ಯನಾಗುವದಿಲ್ಲವೆಂದು ನೀವು ಬಲ್ಲಿರಲ್ಲವೇ.
John 19:12
ಅಂದಿನಿಂದ ಪಿಲಾತನು ಆತನನ್ನು ಬಿಡಿಸಲು ಪ್ರಯತ್ನಪಟ್ಟನು. ಆದರೆ ಯೆಹೂದ್ಯರು--ನೀನು ಈ ಮನುಷ್ಯನನ್ನು ಹೋಗಗೊಡಿಸಿದರೆ ಕೈಸರನಿಗೆ ಸ್ನೇಹಿತನಲ್ಲ; ತನ್ನನ್ನು ಅರಸನನ್ನಾಗಿ ಮಾಡಿಕೊಳ್ಳು ವವನು ಕೈಸರನಿಗೆ ವಿರೋಧವಾಗಿ ಮಾತನಾಡುತ್ತಾನೆ ಎಂದು ಕೂಗಿ ಹೇಳಿದರು.
Mark 6:26
ಆಗ ಅರಸನು ಬಹಳವಾಗಿ ದುಃಖಪಟ್ಟನು; ಆದಾಗ್ಯೂ ತನ್ನ ಆಣೆಯ ನಿಮಿತ್ತವಾಗಿಯೂ ತನ್ನೊಂದಿಗೆ ಕೂತಿದ್ದವರ ನಿಮಿತ್ತವಾಗಿಯೂ ಅವಳನ್ನು ತಿರಸ್ಕರಿಸುವದಕ್ಕೆ ಮನಸ್ಸಿಲ್ಲದವನಾದನು.
Matthew 14:9
ಆಗ ಅರಸನು ದುಃಖಪಟ್ಟಾಗ್ಯೂ ತನ್ನ ಆಣೆಯ ನಿಮಿತ್ತದಿಂದಲೂ ತನ್ನೊಂದಿಗೆ ಊಟಕ್ಕೆ ಕೂತಿದ್ದವರ ನಿಮಿತ್ತದಿಂದಲೂ ಅದನ್ನು ಅವಳಿಗೆ ಕೊಡುವಂತೆ ಅಪ್ಪಣೆಕೊಟ್ಟನು.
Daniel 6:14
ಅರಸನು ಯಾವಾಗ ಈ ಮಾತುಗಳನ್ನು ಕೇಳಿದನೋ ಆಗ ತನ್ನಲ್ಲಿಯೇ ಬಹಳವಾಗಿ ಬೇಸರ ಗೊಂಡನು ಮತ್ತು ಅವನನ್ನು ಅದರಿಂದ ತಪ್ಪಿಸ ಬೇಕೆಂದು ತನ್ನ ಹೃದಯದಲ್ಲಿ ತಿಳಿದು ಸೂರ್ಯಾಸ್ತ ಮಾನದ ವರೆಗೂ ಪ್ರಯತ್ನಪಟ್ಟನು.
Psalm 17:14
ಓ ಕರ್ತನೇ, ನಿನ್ನ ಕೈಚಾಚಿ ಈ ಮನುಷ್ಯರಿಂದ ಅಂದರೆ ಜೀವನದಲ್ಲಿ ತಮ್ಮ ಪಾಲಿಗಿರುವ ಈ ಲೋಕದ ಜನರಿಂದ ನನ್ನನ್ನು ಪಾರುಮಾಡು. ಅವರ ಹೊಟ್ಟೆಯನ್ನು ಮರೆಯಾದ ನಿನ್ನ ನಿಕ್ಷೇಪದಿಂದ ತುಂಬಿಸುತ್ತೀ; ಅವರು ಮಕ್ಕಳಿಂದ ತೃಪ್ತರಾಗಿ ತಮ್ಮ ಮಿಕ್ಕ ಆಸ್ತಿಯನ್ನು ತಮ್ಮ ಶಿಶುಗಳಿಗೆ ಉಳಿಸುತ್ತಾರೆ.
Judges 18:23
ಅವರು ತಮ್ಮ ಮುಖ ತಿರುಗಿಸಿ ವಿಾಕನಿಗೆ--ನೀನು ಗುಂಪನ್ನು ಕೂಡಿಸಿ ಬರುವುದಕ್ಕೆ ನಿನಗೆ ಏನಾಯಿತು ಅಂದರು.