Matthew 14:20
ಅವರೆಲ್ಲರೂ ತಿಂದು ತೃಪ್ತರಾದರು; ಮತ್ತು ಅವರು ಉಳಿದ ತುಂಡುಗಳನ್ನು ಕೂಡಿಸಿ ಹನ್ನೆ ರಡು ಪುಟ್ಟಿಗಳಲ್ಲಿ ತುಂಬಿಸಿದರು.
Matthew 14:20 in Other Translations
King James Version (KJV)
And they did all eat, and were filled: and they took up of the fragments that remained twelve baskets full.
American Standard Version (ASV)
And they all ate, and were filled: and they took up that which remained over of the broken pieces, twelve baskets full.
Bible in Basic English (BBE)
And they all took of the food and had enough: and they took up twelve baskets full of broken bits which were not used.
Darby English Bible (DBY)
And all ate and were filled, and they took up what was over and above of fragments twelve hand-baskets full.
World English Bible (WEB)
They all ate, and were filled. They took up twelve baskets full of that which remained left over from the broken pieces.
Young's Literal Translation (YLT)
and they did all eat, and were filled, and they took up what was over of the broken pieces twelve hand-baskets full;
| And | καὶ | kai | kay |
| they did all | ἔφαγον | ephagon | A-fa-gone |
| eat, | πάντες | pantes | PAHN-tase |
| and | καὶ | kai | kay |
| were filled: | ἐχορτάσθησαν | echortasthēsan | ay-hore-TA-sthay-sahn |
| and | καὶ | kai | kay |
| up took they | ἦραν | ēran | A-rahn |
| of the | τὸ | to | toh |
| fragments | περισσεῦον | perisseuon | pay-rees-SAVE-one |
| τῶν | tōn | tone | |
| remained that | κλασμάτων | klasmatōn | kla-SMA-tone |
| twelve | δώδεκα | dōdeka | THOH-thay-ka |
| baskets | κοφίνους | kophinous | koh-FEE-noos |
| full. | πλήρεις | plēreis | PLAY-rees |
Cross Reference
Luke 9:17
ಆಗ ಅವರೆಲ್ಲರೂ ತಿಂದು ತೃಪ್ತರಾದರು; ಉಳಿದ ತುಂಡುಗಳನ್ನು ಕೂಡಿಸಲು ಅವರಿಗೆ ಹನ್ನೆರಡು ಪುಟ್ಟಿಗಳು ಉಳಿದವು.
Luke 1:53
ಹಸಿದವರನ್ನು ಒಳ್ಳೆಯವು ಗಳಿಂದ ತೃಪ್ತಿಪಡಿಸಿ ಐಶ್ವರ್ಯವಂತರನ್ನು ಬರಿದಾಗಿ ಕಳುಹಿಸಿಬಿಟ್ಟಿದ್ದಾನೆ.
Mark 8:8
ಅವರೆಲ್ಲರೂ ತಿಂದು ತೃಪ್ತರಾ ದರು; ಮುರಿದ ಮಿಕ್ಕತುಂಡುಗಳನ್ನು ಅವರು ಏಳು ಪುಟ್ಟಿ ತುಂಬಿದರು.
Mark 6:42
ಅವರೆಲ್ಲರೂ ತಿಂದು ತೃಪ್ತರಾದರು.
Matthew 16:8
ಯೇಸು ಅದನ್ನು ತಿಳುಕೊಂಡವನಾಗಿ ಅವರಿಗೆ--ಓ ಅಲ್ಪ ವಿಶ್ವಾಸಿಗಳೇ, ನೀವು ರೊಟ್ಟಿಯನ್ನು ತಕ್ಕೊಂಡು ಬರಲಿಲ್ಲವೆಂದು ನಿಮ್ಮಲ್ಲಿ ಯಾಕೆ ಅಂದುಕೊಳ್ಳುತ್ತೀರಿ?
Matthew 15:37
ಅವರೆಲ್ಲರೂ ಊಟಮಾಡಿ ತೃಪ್ತರಾದರು; ಮತ್ತು ಅವರು ಮಿಕ್ಕ ತುಂಡುಗಳನ್ನು ಕೂಡಿಸಲಾಗಿ ಏಳು ಪುಟ್ಟಿಗಳು ತುಂಬಿದವು.
Mark 8:16
ಆಗ ಅವರು ತಮ್ಮೊಳಗೆ--ನಮಗೆ ರೊಟ್ಟಿ ಇಲ್ಲದಿರುವದರಿಂದಲೇ ಹೀಗೆ ಹೇಳುತ್ತಾನೆಂದು ಅವರು ತರ್ಕಿಸಿಕೊಂಡರು.
John 6:7
ಫಿಲಿಪ್ಪನು ಪ್ರತ್ಯುತ್ತರ ವಾಗಿ ಆತನಿಗೆ--ಇವರಲ್ಲಿ ಪ್ರತಿಯೊಬ್ಬನು ಸ್ವಲ್ಪ ಸ್ವಲ್ಪ ತಿಂದರೂ ಇನ್ನೂರು ಹಣಗಳಷ್ಟು ರೊಟ್ಟಿಗಳು ಅವ ರಿಗೆ ಸಾಲುವದಿಲ್ಲ ಅಂದನು.
John 6:11
ತರುವಾಯ ಯೇಸು ರೊಟ್ಟಿ ಗಳನ್ನು ತೆಗೆದುಕೊಂಡು ಸ್ತೋತ್ರಮಾಡಿ ಶಿಷ್ಯರಿಗೆ ಹಂಚಿದನು; ಅವರು ಕುಳಿತುಕೊಂಡವರಿಗೆ ಹಂಚಿ ದರು; ಅದೇ ರೀತಿಯಲ್ಲಿ ವಿಾನುಗಳನ್ನು ಅವರಿಗೆ ಬೇಕಾದಷ್ಟು ಹಂಚಿದರು.
Matthew 15:33
ಅದಕ್ಕೆ ಆತನ ಶಿಷ್ಯರು ಆತನಿಗೆ--ಇಂಥಾ ದೊಡ್ಡ ಸಮೂಹವನ್ನು ತೃಪ್ತಿಪಡಿಸುವಂತೆ ಈ ಅರಣ್ಯದಲ್ಲಿ ನಮಗೆ ಎಲ್ಲಿಂದ ರೊಟ್ಟಿಯು ಸಿಕ್ಕೀತು ಅಂದರು.
Matthew 5:6
ನೀತಿಗೋಸ್ಕರ ಹಸಿದು ಬಾಯಾರಿದವರು ಧನ್ಯರು; ಯಾಕಂದರೆ ಅವರು ತೃಪ್ತಿ ಹೊಂದುವರು.
Exodus 16:12
ಇಸ್ರಾಯೇಲ್ ಮಕ್ಕಳ ಗುಣುಗುಟ್ಟು ವಿಕೆಯನ್ನು ಕೇಳಿದ್ದೇನೆ. ಅವರ ಸಂಗಡ ನೀನು ಮಾತ ನಾಡಿ--ನೀವು ಸಾಯಂಕಾಲದಲ್ಲಿ ಮಾಂಸವನ್ನು ಉಣ್ಣು ವಿರಿ, ಬೆಳಿಗ್ಗೆ ರೊಟ್ಟಿಯಿಂದ ತೃಪ್ತರಾಗುವಿರಿ. ನಾನೇ ನಿಮ್ಮ ದೇವರಾದ ಕರ್ತನೆಂದು ತಿಳಿದುಕೊಳ್ಳುವಿರಿ ಎಂದು ಅವರಿಗೆ ಹೇಳು ಅಂದನು.
Leviticus 26:26
ನಾನು ನಿಮ್ಮ ಅನ್ನಾಧಾರವನ್ನು ಮುರಿದುಹಾಕಿ ದಾಗ ಹತ್ತು ಸ್ತ್ರೀಯರು ನಿಮ್ಮ ರೊಟ್ಟಿಯನ್ನು ಒಂದೇ ಒಲೆಯಲ್ಲಿ ಸುಟ್ಟು ತೂಕದ ಪ್ರಕಾರ ನಿಮಗೆ ರೊಟ್ಟಿಯನ್ನು ಕೊಡುವರು. ನೀವು ಅದನ್ನು ತಿನ್ನುವಿರಿ; ನಿಮಗೆ ತೃಪ್ತಿಯಾಗುವದಿಲ್ಲ.
1 Kings 17:12
ಅದಕ್ಕೆ ಅವಳು--ನಿನ್ನ ದೇವರಾದ ಕರ್ತನ ಜೀವದಾಣೆ, ಮಡಕೆಯಲ್ಲಿ ಒಂದು ಹಿಡಿ ಹಿಟ್ಟೂ ತಂಬಿಗೆಯಲ್ಲಿ ಸ್ವಲ್ಪ ಎಣ್ಣೆಯ ಹೊರತಾಗಿ ನನಗೆ ಬೇರೇನೂ ಇಲ್ಲ. ಇಗೋ, ನಾನೂ ನನ್ನ ಕುಮಾರನೂ ಅದನ್ನು ತಿಂದು ಸತ್ತುಹೋಗುವ ಹಾಗೆ ಅದನ್ನು ನನಗೂ ಅವನಿಗೂ ಸಿದ್ಧ ಮಾಡಲು ಎರಡು ಕಟ್ಟಿಗೆಗಳನ್ನು ಕೂಡಿಸಿಕೊಂಡಿದ್ದೇನೆ ಅಂದಳು.
2 Kings 4:1
ಪ್ರವಾದಿಗಳ ಮಕ್ಕಳ ಹೆಂಡತಿಯರಲ್ಲಿ ಒಬ್ಬಳು ಎಲೀಷನಿಗೆ ಕೂಗಿ--ನಿನ್ನ ದಾಸ ನಾದ ನನ್ನ ಗಂಡನು ಸತ್ತನು; ನಿನ್ನ ದಾಸನು ಕರ್ತನಿಗೆ ಭಯಪಡುವವನಾಗಿದ್ದನೆಂದು ನೀನು ಬಲ್ಲೆ; ಈಗ ಸಾಲಗಾರನು ನನ್ನ ಇಬ್ಬರು ಮಕ್ಕಳನ್ನು ತನಗೆ ದಾಸ ರಾಗಿ ತೆಗೆದುಕೊಳ್ಳಲು ಬಂದಿದ್ದಾನೆ ಅಂದಳು.
2 Kings 4:43
ಆಗ ಅವನು--ಜನರಿಗೆ ಕೊಡು; ಅವರು ತಿನ್ನಲಿ ಅಂದನು. ಆದರೆ ಅವನ ಸೇವಕನು ಇದನ್ನು ನೂರು ಮಂದಿಗೆ ಬಡಿಸುವದು ಹೇಗೆ ಅಂದನು. ಅದಕ್ಕವನು -- ಜನರಿಗೆ ಕೊಡು; ಅವರು ತಿನ್ನಲಿ; ಅವರು ತಿಂದು ಇನ್ನೂ ಉಳಿಸಿ ಬಿಡುವರೆಂದು ಕರ್ತನು ಹೇಳುತ್ತಾನೆ ಅಂದನು.
Proverbs 13:25
ತನಗೆ ತೃಪ್ತಿಯಾಗುವ ವರೆಗೆ ನೀತಿವಂತನು ತಿನ್ನುತ್ತಾನೆ; ದುಷ್ಟರ ಹೊಟ್ಟೆಗೆ ಕೊರತೆಯಾಗುವದು.
Ezekiel 4:14
ಆಮೇಲೆ ನಾನು--ಹಾ! ದೇವ ರಾದ ಕರ್ತನೇ, ಇಗೋ, ನನ್ನ ಪ್ರಾಣವು ಅಶುದ್ಧವಾಗ ಲಿಲ್ಲ, ಯಾಕಂದರೆ ನಾನು ಚಿಕ್ಕಂದಿನಿಂದ ಇಷ್ಟರವರೆಗೂ ತನ್ನಷ್ಟಕ್ಕೆ ತಾನೇ ಸತ್ತಿರುವದನ್ನು ಅಥವಾ ಹರಿದು ಚೂರು ಚೂರಾಗಿರುವದನ್ನು ತಿನ್ನಲಿಲ್ಲ; ಇಲ್ಲವೆ ಅಸಹ್ಯ ವಾದ ಮಾಂಸವನ್ನಾದರೂ ನನ್ನ ಬಾಯಿಯ ಹತ್ತಿರ ತಂದಿಲ್ಲ ಎಂದೆನು.
Haggai 1:6
ನೀವು ಬಹಳವಾಗಿ ಬಿತ್ತಿದ್ದೀರಿ, ಆದರೆ ಕೊಂಚವಾಗಿ ತಂದಿದ್ದೀರಿ; ನೀವು ತಿನ್ನುತ್ತೀರಿ, ಆದರೆ ಸಾಕಾಗಲಿಲ್ಲ; ಕುಡಿಯುತ್ತೀರಿ, ಆದರೆ ತೃಪ್ತಿ ಯಾಗಲಿಲ್ಲ; ಧರಿಸುತ್ತೀರಿ, ಆದರೆ ಬೆಚ್ಚಗಾಗಲಿಲ್ಲ; ಸಂಬಳವನ್ನು ಸಂಪಾದಿಸುವವನು ಅದನ್ನು ತೂತು ಗಳುಳ್ಳ ಚೀಲದಲ್ಲಿ ಹಾಕುವದಕ್ಕೆ ಸಂಪಾದಿಸುತ್ತಾನೆ.
Exodus 16:8
ಆಗ ಮೋಶೆಯು--ಸಾಯಂಕಾಲದಲ್ಲಿ ಕರ್ತನು ನಿಮಗೆ ಮಾಂಸಾಹಾರವನ್ನೂ ಹೊತ್ತಾರೆಯಲ್ಲಿ ಬೇಕಾದಷ್ಟು ರೊಟ್ಟಿಯನ್ನೂ ಕೊಡುವನು. ನೀವು ಗುಣುಗುಟ್ಟುವ ಮಾತುಗಳು ಕರ್ತನಿಗೆ ಕೇಳಿಸಿದವು. ಆ ಗುಣುಗುಟ್ಟುವಿಕೆಯು ಕರ್ತನಿಗೇ ಹೊರತು ನಮ ಗಲ್ಲ. ನಾವು ಎಷ್ಟು ಮಾತ್ರದವರು ಅಂದನು.