Base Word
עֲנָקִי
Short Definitionan Anakite or descendant of Anak
Long Definitiona race of giants, descendants of Anak, which dwelled in southern Canaan
Derivationpatronymically from H6061
International Phonetic Alphabetʕə̆.n̪ɔːˈk’ɪi̯
IPA modʕə̆.nɑːˈkiː
Syllableʿănāqî
Dictionuh-naw-KEE
Diction Moduh-na-KEE
UsageAnakim
Part of speecha

ಧರ್ಮೋಪದೇಶಕಾಂಡ 1:28
ನಾವು ಎಲ್ಲಿಗೆ ಹೋಗೋಣ? ನಮ್ಮ ಸಹೋದರರು--ಆ ಜನರು ನಮಗಿಂತ ದೊಡ್ಡವರೂ ಉದ್ದವಾದವರೂ; ಪಟ್ಟಣ ಗಳು ದೊಡ್ಡವುಗಳೂ ಆಕಾಶದ ಎತ್ತರಕ್ಕೂ ಗೋಡೆ ಯುಳ್ಳವುಗಳೂ; ಇದಲ್ಲದೆ ಅನಾಕ್ಯರ ಮಕ್ಕಳನ್ನು ಅಲ್ಲಿ ನೋಡಿದೆವು ಎಂದು ಹೇಳಿ ನಮ್ಮ ಹೃದಯಗಳನ್ನು ಅಧೈರ್ಯಪಡಿಸಿದ್ದಾರೆ ಎಂದು ಹೇಳಿದಿರಿ.

ಧರ್ಮೋಪದೇಶಕಾಂಡ 2:10
ಅದರೊಳಗೆ ಪೂರ್ವದಲ್ಲಿ ಏಮಿಯರು ವಾಸವಾಗಿದ್ದರು. ಅವರು ಅನಾಕ್ಯರ ಹಾಗೆ ದೊಡ್ಡವ ರಾಗಿಯೂ ಬಹಳವಾದವರಾಗಿಯೂ ಉದ್ದವಾದವ ರಾಗಿಯೂ ಇರುವ ಜನರು.

ಧರ್ಮೋಪದೇಶಕಾಂಡ 2:11
ಅವರು ಅನಾಕ್ಯರ ಹಾಗೆ ಮಹಾಶರೀರಗಳೆನ್ನಿಸಿಕೊಂಡರು; ಮೋವಾಬ್ಯರು ಅವರನ್ನು ಏಮಿಯರೆಂದು ಕರೆದರು.

ಧರ್ಮೋಪದೇಶಕಾಂಡ 2:21
ಅವರು ಅನಾಕ್ಯರ ಹಾಗೆ ದೊಡ್ಡವರೂ ಬಹಳವಾದ ವರೂ ಉದ್ದವಾದವರೂ ಆಗಿರುವ ಜನರು; ಆದರೆ ಕರ್ತನು ಅವರನ್ನು ಇವರ ಮುಂದೆ ನಾಶಮಾಡಿದ್ದರಿಂದ ಇವರು ಅವರನ್ನು ಹೊರಡಿಸಿ ಅವರ ಬದಲಾಗಿ ವಾಸಿಸಿದರು.

ಧರ್ಮೋಪದೇಶಕಾಂಡ 9:2
ಅನಾಕ್ಯರ ಮಕ್ಕಳ ಮುಂದೆ ಯಾರು ನಿಲ್ಲುವರು ಎಂದು ನೀನು ಕೇಳಿ ತಿಳುಕೊಂಡಂಥ ಆ ಮಹಾ ಎತ್ತರವಾದ ಜನವಾಗಿರುವ ಅನಾಕ್ಯರ ಮಕ್ಕಳನ್ನೂ ಸ್ವತಂತ್ರಿಸಿಕೊಳ್ಳುವದಕ್ಕೆ ಈಹೊತ್ತು ಯೊರ್ದನನ್ನು ದಾಟುತ್ತೀ.

ಯೆಹೋಶುವ 11:21
ಆ ಕಾಲದಲ್ಲಿ ಯೆಹೋಶುವನು ಬಂದು ಬೆಟ್ಟದ ದೇಶವಾದ ಹೆಬ್ರೋನಿನಲ್ಲಿಯೂ ದೆಬೀರಿನಲ್ಲಿಯೂ ಅನಾಬಿನಲ್ಲಿಯೂ ಯೂದನ ಸಕಲ ಬೆಟ್ಟಗಳಲ್ಲಿಯೂ ಇಸ್ರಾಯೇಲಿನ ಸಕಲ ಬೆಟ್ಟಗಳಲ್ಲಿಯೂ ಇದ್ದ ಅನಾಕ್ಯ ರನ್ನು ಕಡಿದುಬಿಟ್ಟು ಅವರನ್ನೂ ಅವರ ಪಟ್ಟಣ ಗಳನ್ನೂ ಸಂಪೂರ್ಣ ನಾಶಮಾಡಿದನು.

ಯೆಹೋಶುವ 11:22
ಅನಾಕ್ಯರು ಇಸ್ರಾಯೇಲ್‌ ಮಕ್ಕಳ ದೇಶದಲ್ಲಿ ಒಬ್ಬನೂ ಉಳಿಯ ಲಿಲ್ಲ. ಗಾಜಾದಲ್ಲಿಯೂ ಗತ್‌ನಲ್ಲಿಯೂ ಅಷ್ಡೋದಿ ನಲ್ಲಿಯೂ ಮಾತ್ರ ಉಳಿದರು.

ಯೆಹೋಶುವ 14:12
ಆದದರಿಂದ ಕರ್ತನು ಆ ದಿವಸದಲ್ಲಿ ಹೇಳಿದ ಈ ಬೆಟ್ಟವನ್ನು ಈಗ ನನಗೆ ಕೊಡು; ಯಾಕಂದರೆ ಅಲ್ಲಿ ಅನಾಕ್ಯರು ಇದ್ದಾರೆಂದೂ ಗೋಡೆಗಳುಳ್ಳ ದೊಡ್ಡ ಪಟ್ಟಣಗಳುಂಟೆಂದೂ ನೀನು ಆ ದಿನದಲ್ಲಿ ಕೇಳಿದ್ದೀ. ಕರ್ತನು ನನ್ನ ಸಂಗಡ ಇದ್ದರೆ ಕರ್ತನು ಹೇಳಿದ ಪ್ರಕಾರವೇ ನಾನು ಅವರನ್ನು ಹೊರಡಿಸಲು ಶಕ್ತನಾಗಿರುವೆನು ಅಂದನು.

ಯೆಹೋಶುವ 14:15
ಹೆಬ್ರೋನಿನ ಹೆಸರು ಮೊದಲು ಕಿರ್ಯತ್‌ಅರ್ಬ; ಈ ಹೆಸರು ಅನಾಕ್ಯರಲ್ಲಿ ಒಬ್ಬ ದೊಡ್ಡ ಮನುಷ್ಯನದು. ದೇಶವು ಯುದ್ಧವಿಲ್ಲದೆ ಶಾಂತವಾಯಿತು.

Occurences : 9

எபிரேய எழுத்துக்கள் Hebrew Letters in Tamilஎபிரேய உயிரெழுத்துக்கள் Hebrew Vowels in TamilHebrew Short Vowels in Tamil எபிரேய குறில் உயிரெழுத்துக்கள்Hebrew Long Vowels in Tamil எபிரேய நெடில் உயிரெழுத்துக்கள்