Skip to content
CHRIST SONGS .IN
TAMIL CHRISTIAN SONGS .IN
  • Lyrics
  • Chords
  • Bible
  • /
  • A
  • B
  • C
  • D
  • E
  • F
  • G
  • H
  • I
  • J
  • K
  • L
  • M
  • N
  • O
  • P
  • Q
  • R
  • S
  • T
  • U
  • V
  • W
  • X
  • Y
  • Z

Index
  • A
  • B
  • C
  • D
  • E
  • F
  • G
  • H
  • I
  • J
  • K
  • L
  • M
  • N
  • O
  • P
  • Q
  • R
  • S
  • T
  • U
  • V
  • W
  • X
  • Y
  • Z
Revelation 10 KJV ASV BBE DBY WBT WEB YLT

Revelation 10 in Kannada WBT Compare Webster's Bible

Revelation 10

1 ಮೇಘವನ್ನು ಧರಿಸಿಕೊಂಡಿದ್ದ ಬಲಿಷ್ಠ ನಾದ ಮತ್ತೊಬ್ಬ ದೂತನು ಪರಲೋಕ ದಿಂದ ಇಳಿದು ಬರುವದನ್ನು ನಾನು ಕಂಡೆನು. ಅವನ ತಲೆಯ ಮೇಲೆ ಮಳೆ ಬಿಲ್ಲು ಇತ್ತು; ಅವನ ಮುಖವು ಸೂರ್ಯನಂತಿತ್ತು; ಅವನ ಪಾದಗಳು ಬೆಂಕಿಯ ಕಂಬಗಳಂತಿದ್ದವು;

2 ತೆರೆದಿದ್ದ ಒಂದು ಚಿಕ್ಕ ಪುಸ್ತಕವು ಅವನ ಕೈಯಲ್ಲಿ ಇತ್ತು; ಅವನು ತನ್ನ ಬಲಗಾಲನ್ನು ಸಮುದ್ರದ ಮೇಲೆಯೂ ಎಡಗಾಲನ್ನು ಭೂಮಿಯ ಮೇಲೆಯೂ ಇಟ್ಟು

3 ಸಿಂಹವು ಗರ್ಜಿಸುವ ಪ್ರಕಾರ ಮಹಾಶಬ್ದದಿಂದ ಕೂಗಿದನು. ಅವನು ಕೂಗಿದಾಗ ಏಳು ಗುಡುಗುಗಳು ತಮ್ಮ ಧ್ವನಿಕೊಟ್ಟವು.

4 ಆ ಏಳು ಗುಡುಗುಗಳು ತಮ್ಮ ಧ್ವನಿಕೊಟ್ಟಾಗ ನಾನು ಬರೆಯ ಬೇಕೆಂದಿದ್ದೆನು. ಅದಕ್ಕೆ--ಆ ಏಳು ಗುಡುಗುಗಳು ನುಡಿದವುಗಳನ್ನು ನೀನು ಬರೆಯದೆ ಮುದ್ರಿಸು ಎಂದು ಪರಲೋಕದಿಂದ ಬಂದ ಶಬ್ದವು ನನಗೆ ಹೇಳುವದನ್ನು ಕೇಳಿದೆನು.

5 ಅನಂತರ ಸಮುದ್ರದ ಮೇಲೆಯೂ ಭೂಮಿಯ ಮೇಲೆಯೂ ನಿಂತಿದ್ದ ದೂತನನ್ನು ನಾನು ಕಂಡೆನು. ಅವನು ತನ್ನ ಕೈಯನ್ನು ಪರಲೋಕದ ಕಡೆಗೆ ಎತ್ತಿ--

6 ಪರಲೋಕವನ್ನೂ ಅದರಲ್ಲಿರುವವುಗಳನ್ನೂ ಭೂಮಿಯನ್ನೂ ಅದರಲ್ಲಿರುವವುಗಳನ್ನೂ ಸಮುದ್ರ ವನ್ನೂ ಅದರಲ್ಲಿರುವವುಗಳನ್ನೂ ಸೃಷ್ಟಿಸಿ ಯುಗ ಯುಗಾಂತರಗಳಲ್ಲಿ ಜೀವಿಸುವಾತನ ಮೇಲೆ ಆಣೆ ಯಿಟ್ಟು ಇನ್ನು ಸಮಯವಿರುವದಿಲ್ಲ ಎಂತಲೂ

7 ಏಳನೆಯ ದೂತನು ಶಬ್ದಮಾಡುವ ದಿನಗಳಲ್ಲಿ ಅಂದರೆ ಅವನು ತುತೂರಿಯನ್ನು ಊದುವದಕ್ಕೆ ಪ್ರಾರಂಭಿಸು ವಾಗ ದೇವರ ರಹಸ್ಯವನ್ನು ತನ್ನ ಸೇವಕರಾದ ಪ್ರವಾದಿ ಗಳಿಗೆ ತಿಳಿಸಿದ್ದ ಪ್ರಕಾರ ಸಮಾಪ್ತಿಯಾಗತಕ್ಕದ್ದು ಎಂತಲೂ ಹೇಳಿದನು.

8 ಪರಲೋಕದಿಂದ ನನಗೆ ಕೇಳಿಸಿದ್ದ ಶಬ್ದವು ತಿರಿಗಿ ನನ್ನೊಂದಿಗೆ ಮಾತನಾಡಿ--ನೀನು ಹೋಗಿ ಸಮುದ್ರದ ಮೇಲೆಯೂ ಭೂಮಿಯ ಮೇಲೆಯೂ ನಿಂತುಕೊಂಡಿರುವ ದೂತನ ಕೈಯಲ್ಲಿರುವ ತೆರೆದಿದ್ದ ಆ ಚಿಕ್ಕ ಪುಸ್ತಕವನ್ನು ತೆಗೆದುಕೋ ಎಂದು ಹೇಳಿತು.

9 ನಾನು ಆ ದೂತನ ಬಳಿಗೆ ಹೋಗಿ ಅವನಿಗೆ--ಆ ಚಿಕ್ಕ ಪುಸ್ತಕವನ್ನು ನನಗೆ ಕೊಡು ಎಂದು ಹೇಳಲು ಅವನು ನನಗೆ--ನೀನು ಇದನ್ನು ತೆಗೆದು ಕೊಂಡು ತಿಂದುಬಿಡು, ಇದು ನಿನ್ನ ಹೊಟ್ಟೆಯನ್ನು ಕಹಿಯಾಗುವಂತೆ ಮಾಡುವದು, ಆದರೆ ನಿನ್ನ ಬಾಯಲ್ಲಿ ಅದು ಜೇನಿನಂತೆ ಸಿಹಿಯಾಗಿರುವದು ಎಂದು ಹೇಳಿ ದನು

10 ಆಗ ನಾನು ಆ ಚಿಕ್ಕ ಪುಸ್ತಕವನ್ನು ಆ ದೂತನ ಕೈಯಿಂದ ತೆಗೆದುಕೊಂಡು ತಿಂದುಬಿಟ್ಟೆನು. ಅದು ನನ್ನ ಬಾಯಲ್ಲಿ ಜೇನಿನಂತೆ ಸಿಹಿಯಾಗಿತ್ತು; ಅದನ್ನು ತಿಂದ ಕೂಡಲೆ ನನ್ನ ಹೊಟ್ಟೆಯು ಕಹಿ ಯಾಯಿತು.

11 ಅವನು ನನಗೆ--ನೀನು ಅನೇಕ ಪ್ರಜೆ, ಜನಾಂಗ, ಭಾಷೆ ಮತ್ತು ರಾಜರುಗಳ ಮುಂದೆ ತಿರಿಗಿ ಪ್ರವಾದಿಸತಕ್ಕದ್ದು ಎಂದು ಹೇಳಿದನು.

  • Tamil
  • Hindi
  • Malayalam
  • Telugu
  • Kannada
  • Gujarati
  • Punjabi
  • Bengali
  • Oriya
  • Nepali

By continuing to browse the site, you are agreeing to our use of cookies.

Close