ಅರಣ್ಯಕಾಂಡ 23:11
ಆಗ ಬಾಲಾಕನು ಬಿಳಾಮನಿಗೆ--ಇದೇನು ನೀನು ನನಗೆ ಮಾಡಿದ್ದು? ನನ್ನ ಶತ್ರುಗಳನ್ನು ಶಪಿಸುವದಕ್ಕೆ ನಿನ್ನನ್ನು ಕರೆಯಿಸಿದೆನು; ಇಗೋ, ನೀನು ಅವರನ್ನು ಸಂಪೂರ್ಣ ವಾಗಿ ಆಶೀರ್ವದಿಸಿದಿ ಅಂದನು.
And Balak | וַיֹּ֤אמֶר | wayyōʾmer | va-YOH-mer |
said | בָּלָק֙ | bālāq | ba-LAHK |
unto | אֶל | ʾel | el |
Balaam, | בִּלְעָ֔ם | bilʿām | beel-AM |
What | מֶ֥ה | me | meh |
hast thou done | עָשִׂ֖יתָ | ʿāśîtā | ah-SEE-ta |
took I me? unto | לִ֑י | lî | lee |
thee to curse | לָקֹ֤ב | lāqōb | la-KOVE |
mine enemies, | אֹֽיְבַי֙ | ʾōyĕbay | oh-yeh-VA |
behold, and, | לְקַחְתִּ֔יךָ | lĕqaḥtîkā | leh-kahk-TEE-ha |
thou hast blessed | וְהִנֵּ֖ה | wĕhinnē | veh-hee-NAY |
them altogether. | בֵּרַ֥כְתָּ | bēraktā | bay-RAHK-ta |
בָרֵֽךְ׃ | bārēk | va-RAKE |
Cross Reference
ಅರಣ್ಯಕಾಂಡ 24:10
ಆಗ ಬಾಲಾಕನು ಬಿಳಾಮನ ಮೇಲೆ ಕೋಪಗೊಂಡು ಚಪ್ಪಾಳೆ ಹೊಡೆದು ಅವನಿಗೆ--ನನ್ನ ಶತ್ರುಗಳನ್ನು ಶಪಿಸುವದಕ್ಕೆ ನಿನ್ನನ್ನು ಕರೆದೆನು; ಆದರೆ ಇಗೋ, ನೀನು ಈ ಮೂರುಸಾರಿ ಆಶೀರ್ವದಿಸೇ ಆಶೀರ್ವದಿಸಿದಿ.
ಅರಣ್ಯಕಾಂಡ 22:11
ಇಗೋ, ಐಗುಪ್ತ ದೇಶದಿಂದ ಹೊರಟಿರುವ ಒಂದು ಜನಾಂಗವು ಭೂಮುಖವನ್ನು ಆವರಿಸಿಕೊಂಡಿದೆ; ಈಗ ನೀನು ಬಂದು ನನಗೋಸ್ಕರ ಅದನ್ನು ಶಪಿಸು; ಒಂದು ವೇಳೆ ಅದರ ಸಂಗಡ ಯುದ್ಧಮಾಡಿ ಅದನ್ನು ಹೊರಗೆ ಹಾಕುವದಕ್ಕೆ ನಾನು ಸಮರ್ಥನಾದೇನು ಎಂಬದು.
ನೆಹೆಮಿಯ 13:2
ಯಾಕಂದರೆ ಅವರು ರೊಟ್ಟಿಯನ್ನೂ ನೀರನ್ನೂ ತಂದು ಇಸ್ರಾಯೇಲ್ ಮಕ್ಕಳನ್ನು ಎದುರುಗೊಳ್ಳದೆ ಅವರನ್ನು ಶಪಿಸಿ ಅವರಿಗೆ ವಿರೋಧವಾಗಿ ಬಿಳಾಮ ನನ್ನು ಕೂಲಿಗೆ ಕರಕೊಂಡರು. ಆದರೆ ನಮ್ಮ ದೇವರು ಆ ಶಾಪವನ್ನು ಆಶೀರ್ವಾದವಾಗಿ ಮಾಡಿದನು ಅಂದನು.
ಅರಣ್ಯಕಾಂಡ 22:17
ನಾನು ನಿನ್ನನ್ನು ಬಹಳವಾಗಿ ಘನಪಡಿಸುವೆನು; ನೀನು ನನಗೆ ಹೇಳುವದನ್ನೆಲ್ಲಾ ನಾನು ಮಾಡುವೆನು; ಆದಕಾರಣ ನೀನು ದಯಮಾಡಿ ಬಂದು ಈ ಜನರನ್ನು ನನಗಾಗಿ ಶಪಿಸು ಅಂದನು.
ಅರಣ್ಯಕಾಂಡ 23:7
ಆಗ ಅವನು ಸಾಮ್ಯರೂಪವಾಗಿ--ಮೋವಾಬಿನ ಅರಸನಾದ ಬಾಲಾಕನು ನನ್ನನ್ನು ಅರಾಮಿನಿಂದಲೂ ಪೂರ್ವ ಪರ್ವತಗಳಿಂದಲೂ ಕರೆಯಿಸಿ--ನನಗೋ ಸ್ಕರ ಯಾಕೋಬನನ್ನು ಶಪಿಸ ಬಾ; ಇಸ್ರಾಯೇಲನ್ನು ಎದುರಿಸುವದಕ್ಕೆ ಬಾ ಎಂದು ನನಗೆ ಹೇಳಿದ್ದಾನೆ.
ಕೀರ್ತನೆಗಳು 109:17
ಅವನು ಶಾಪವನ್ನು ಪ್ರೀತಿ ಮಾಡಿದನು; ಅದು ಅವನಿಗೆ ಬರಲಿ. ಆಶೀರ್ವಾದಕ್ಕೆ ಮೆಚ್ಚಲಿಲ್ಲ; ಅದು ಅವನಿಗೆ ದೂರವಾಗಿರಲಿ.