Index
Full Screen ?
 

ಮಲಾಕಿಯ 3:12

Malachi 3:12 ಕನ್ನಡ ಬೈಬಲ್ ಮಲಾಕಿಯ ಮಲಾಕಿಯ 3

ಮಲಾಕಿಯ 3:12
ಜನಾಂಗಗಳೆಲ್ಲಾ ನಿಮ್ಮನ್ನು ಧನ್ಯರು ಎಂದು ಕರೆಯುವರು; ಯಾಕಂದರೆ ನೀವು ರಮ್ಯವಾದ ದೇಶವಾಗುವಿರೆಂದು ಸೈನ್ಯಗಳ ಕರ್ತನು ಹೇಳುತ್ತಾನೆ.

And
all
וְאִשְּׁר֥וּwĕʾiššĕrûveh-ee-sheh-ROO
nations
אֶתְכֶ֖םʾetkemet-HEM
blessed:
you
call
shall
כָּלkālkahl

הַגּוֹיִ֑םhaggôyimha-ɡoh-YEEM
for
כִּֽיkee
ye
תִהְי֤וּtihyûtee-YOO
be
shall
אַתֶּם֙ʾattemah-TEM
a
delightsome
אֶ֣רֶץʾereṣEH-rets
land,
חֵ֔פֶץḥēpeṣHAY-fets
saith
אָמַ֖רʾāmarah-MAHR
the
Lord
יְהוָ֥הyĕhwâyeh-VA
of
hosts.
צְבָאֽוֹת׃ṣĕbāʾôttseh-va-OTE

Cross Reference

ಯೆಶಾಯ 61:9
ಆಗ ಅವರ ಸಂತಾನವು ಅನ್ಯ ಜನಾಂಗಗಳಲ್ಲಿಯೂ ಅವರಿಂದಾದ ಸಂತತಿಯು ಜನ ಗಳ ಮಧ್ಯದಲ್ಲಿಯೂ ತಿಳಿಸಲ್ಪಡುವದು; ಅವರನ್ನು ನೋಡುವವರೆಲ್ಲರೂ--ಅವರೇ ಕರ್ತನು ಆಶೀರ್ವದಿ ಸಿದ ಸಂತಾನವೆಂದು ಒಪ್ಪಿಕೊಳ್ಳುವರು.

ಜೆಕರ್ಯ 8:23
ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ಆ ದಿವಸ ಗಳಲ್ಲಿ ಜನಾಂಗಗಳ ಸಮಸ್ತ ಭಾಷೆಯವರೊಳಗಿಂದ ಹತ್ತು ಮನುಷ್ಯರು ಯೆಹೂದ್ಯನಾಗಿರುವವನ ಸೆರಗನ್ನು ಹಿಡಿದು--ನಾವು ನಿಮ್ಮ ಸಂಗಡ ಹೋಗುತ್ತೇವೆ; ಯಾಕಂದರೆ ನಿಮ್ಮ ಸಂಗಡ ದೇವರು ಇದ್ದಾನೆಂದು ಕೇಳಿದ್ದೇವೆ ಎಂದು ಹೇಳುವರು.

ಯೆರೆಮಿಯ 33:9
ಅದು ನನಗೆ ಆನಂದದ ಹೆಸರೂ ನಾನು ಅವರಿಗೆ ಒಳ್ಳೇದನ್ನೆಲ್ಲಾ ಮಾಡುವದನ್ನು ಕೇಳುವ ಭೂಮಿಯಲ್ಲಿರುವ ಎಲ್ಲಾ ಜನಾಂಗಗಳ ಮುಂದೆ ಸ್ತೋತ್ರವೂ ಮಹಿಮೆಯೂ ಆಗುವದು; ನಾನು ಅದಕ್ಕೆ ಉಂಟು ಮಾಡುವ ಮೇಲಿಗಾಗಿಯೂ ಎಲ್ಲಾ ಅಭಿವೃದ್ಧಿಗಾಗಿಯೂ ಅವರು ಹೆದರಿ ನಡುಗುವರು.

ಯೆಶಾಯ 62:4
ಇನ್ನು ಮೇಲೆ ನೀನು ಬಿಡಲ್ಪಟ್ಟವಳೆಂದು ಹೇಳಲ್ಪಡುವದಿಲ್ಲ, ಇಲ್ಲವೆ ನಿನ್ನ ದೇಶಕ್ಕೆ ಹಾಳಾದದ್ದೆಂದು ಹೇಳಲ್ಪಡುವದಿಲ್ಲ: ಆದರೆ ನೀನು (ಹೆಫ್ಜೀಬಾ) ಮೆಚ್ಚಿದವಳೆಂದೂ ನಿನ್ನ ದೇಶವು (ಬೆಯೂಲಾ) ಮದುವೆಯಾದದ್ದೆಂದೂ ಕರೆಯಲ್ಪ ಡುವದು; ಯಾಕಂದರೆ ಕರ್ತನು ನಿನ್ನಲ್ಲಿ ಉಲ್ಲಾಸಿಸು ವನು; ನಿನ್ನ ದೇಶವು ಮದುವೆಯಾಗುವದು.

ಲೂಕನು 1:48
ಆತನು ತನ್ನ ದಾಸಿಯ ದೀನಸ್ಥಿತಿಯನ್ನು ಲಕ್ಷಿಸಿದ್ದಾನೆ. ಇಗೋ, ಇಂದಿನಿಂದ ತಲತಲಾಂತರಗಳವರು ನನ್ನನ್ನು ಧನ್ಯಳೆಂದು ಕರೆಯುವರು.

ಚೆಫನ್ಯ 3:19
ಇಗೋ, ಆ ಕಾಲದಲ್ಲಿ ನಿನ್ನನ್ನು ಶ್ರಮೆ ಪಡಿಸುವವರನ್ನೆಲ್ಲಾ ತೀರಿಸಿಬಿಟ್ಟು, ಕುಂಟಾದ ದ್ದನ್ನು ರಕ್ಷಿಸಿ, ಹೊರಡಿಸಲ್ಪಟ್ಟವರನ್ನು ಕೂಡಿಸಿ, ಅವರಿಗೆ ನಾಚಿಕೆಯಾದ ದೇಶಗಳಲ್ಲೆಲ್ಲಾ ಹೊಗಳಿಕೆಯನ್ನೂ ಕೀರ್ತಿಯನ್ನೂ ಉಂಟುಮಾಡುವೆನು.

ದಾನಿಯೇಲನು 11:41
ಇದಲ್ಲದೆ ಅವನು ರಮ್ಯವಾದ ದೇಶದೊಳಕ್ಕೂ ನುಗ್ಗುವನು; ಅನೇಕ ದೇಶಗಳು ಕೆಡವಲ್ಪಡುವವು; ಆದರೆ ಎದೋಮು, ಮೋವಾಬು ಅಮ್ಮೋನನ ಮಕ್ಕಳಲ್ಲಿ ಮುಖ್ಯಸ್ಥರು ಆತನ ಕೈಯಿಂದ ತಪ್ಪಿಸಿಕೊಳ್ಳುವರು.

ದಾನಿಯೇಲನು 8:9
ಅವುಗಳಲ್ಲಿ ಒಂದರೊಳಗಿಂದ ಚಿಕ್ಕ ಕೊಂಬು ಮೊಳೆತು, ಬಹಳ ದೊಡ್ಡದಾಗಿ ಬೆಳೆದು, ದಕ್ಷಿಣದ ಕಡೆಗೂ ಪೂರ್ವದ ಕಡೆಗೂ ರಮ್ಯ ದೇಶದ ಕಡೆಗೂ ಪ್ರಬಲವಾಯಿತು.

ಕೀರ್ತನೆಗಳು 72:17
ಆತನ ನಾಮವು ಎಂದೆಂದಿಗೂ ಇರುವದು; ಸೂರ್ಯನು ಇರುವವರೆಗೂ ಆತನ ಹೆಸರು ಇರು ವದು. ಮನುಷ್ಯರು ಆತನಲ್ಲಿ ಆಶೀರ್ವಾದ ಹೊಂದು ವರು. ಎಲ್ಲಾ ಜನಾಂಗಗಳು ಆತನನ್ನು ಭಾಗ್ಯವಂತ ನೆಂದು ಕರೆಯುವರು.

2 ಪೂರ್ವಕಾಲವೃತ್ತಾ 32:23
ಅನೇಕರು ಯೆರೂಸಲೇಮಿ ನಲ್ಲಿರುವ ಕರ್ತನಿಗೆ ಅರ್ಪಣೆಗಳನ್ನೂ ಯೆಹೂದದ ಅರಸನಾದ ಹಿಜ್ಕೀಯನಿಗೆ ವಸ್ತುಗಳನ್ನೂ ತಂದರು. ಅಂದಿನಿಂದ ಅವನು ಸಮಸ್ತ ಜನಾಂಗಗಳ ಸಮ್ಮುಖ ದಲ್ಲಿ ಉನ್ನತಕ್ಕೇರಿಸಲ್ಪಟ್ಟನು.

ಧರ್ಮೋಪದೇಶಕಾಂಡ 11:12
ಅದು ನಿನ್ನ ದೇವರಾದ ಕರ್ತನು ಪರಾಂಬರಿಸುವ ದೇಶವೇ; ವರುಷದ ಆರಂಭ ದಿಂದ ಅಂತ್ಯದ ವರೆಗೂ ಯಾವಾಗಲೂ ನಿನ್ನ ದೇವ ರಾದ ಕರ್ತನ ಕಣ್ಣುಗಳು ಅದರ ಮೇಲೆ ಇವೆ.

ಧರ್ಮೋಪದೇಶಕಾಂಡ 8:7
ನಿನ್ನ ದೇವರಾದ ಕರ್ತನು ನಿನ್ನನ್ನು ಉತ್ತಮ ದೇಶಕ್ಕೆ ಬರಮಾಡುತ್ತಾನೆ; ಅದು ನೀರಿನ ಹಳ್ಳಗಳೂ ತಗ್ಗಿನಲ್ಲಿಯೂ ಬೆಟ್ಟದಲ್ಲಿಯೂ ಉಕ್ಕುವ ಬುಗ್ಗೆಗಳುಳ್ಳ ದೇಶವೇ.

ಧರ್ಮೋಪದೇಶಕಾಂಡ 4:6
ಹೀಗಿರುವ ದರಿಂದ ನೀವು ಅವುಗಳನ್ನು ಕೈಕೊಂಡು ಅನುಸರಿಸಿರಿ; ಯಾಕಂದರೆ ಜನಾಂಗಗಳ ಮುಂದೆ ಇರುವ ನಿಮ್ಮ ಜ್ಞಾನವೂ ನಿಮ್ಮ ವಿವೇಕವೂ ಇದೇ ಆಗಿದೆ. ಅವರು ಈ ನಿಯಮಗಳನ್ನೆಲ್ಲಾ ಕೇಳಿ--ನಿಶ್ಚಯವಾಗಿ ಈ ದೊಡ್ಡ ಜನಾಂಗವು ಜ್ಞಾನವೂ ವಿವೇಕವೂ ಉಳ್ಳ ಜನವಾಗಿದೆ ಅನ್ನುವರು.

Chords Index for Keyboard Guitar