Lamentations 3:55
ಓ ಕರ್ತನೇ, ನಾನು ಆಳವಾದ ಕಾರಾಗೃಹದಿಂದ ನಿನ್ನ ಹೆಸರನ್ನು ಎತ್ತಿ ಬೇಡಿಕೊಂಡೆನು.
Lamentations 3:55 in Other Translations
King James Version (KJV)
I called upon thy name, O LORD, out of the low dungeon.
American Standard Version (ASV)
I called upon thy name, O Jehovah, out of the lowest dungeon.
Bible in Basic English (BBE)
I was making prayer to your name, O Lord, out of the lowest prison.
Darby English Bible (DBY)
I called upon thy name, Jehovah, out of the lowest pit.
World English Bible (WEB)
I called on your name, Yahweh, out of the lowest dungeon.
Young's Literal Translation (YLT)
I called Thy name, O Jehovah, from the lower pit.
| I called upon | קָרָ֤אתִי | qārāʾtî | ka-RA-tee |
| thy name, | שִׁמְךָ֙ | šimkā | sheem-HA |
| Lord, O | יְהוָ֔ה | yĕhwâ | yeh-VA |
| out of the low | מִבּ֖וֹר | mibbôr | MEE-bore |
| dungeon. | תַּחְתִּיּֽוֹת׃ | taḥtiyyôt | tahk-tee-yote |
Cross Reference
2 ಪೂರ್ವಕಾಲವೃತ್ತಾ 33:11
ಆದಕಾರಣ ಕರ್ತನು ಅಶ್ಶೂರದ ಅರಸನ ಸೈನ್ಯದ ಅಧಿಪತಿಗಳನ್ನು ಬರಮಾಡಿದನು. ಅವರು ಮನಸ್ಸೆಯನ್ನು ಮುಳ್ಳುಗಿಡಗಳಲ್ಲಿ ಹಿಡಿದು ಅವನಿಗೆ ಸಂಕೋಲೆಗಳನ್ನು ಹಾಕಿ ಅವನನ್ನು ಬಾಬೆಲಿಗೆ ಒಯ್ದರು.
ಯೋನ 2:2
ನಾನು ನನ್ನ ವ್ಯಥೆಯ ದೆಸೆಯಿಂದ ಕರ್ತನಿಗೆ ಮೊರೆಯಿಟ್ಟೆನು; ಆತನು ನನ್ನ ಕೂಗನ್ನು ಕೇಳಿದನು; ನರಕದ ಹೊಟ್ಟೆ ಯೊಳಗಿಂದ ನಾನು ಕೂಗಿದೆನು, ಆಗ ನನ್ನ ಶಬ್ದವನ್ನು ನೀನು ಕೇಳಿದಿ.
ಯೆರೆಮಿಯ 38:6
ಆಗ ಅವರು ಯೆರೆವಿಾಯನನ್ನು ತಕ್ಕೊಂಡು ಸೆರೆಮನೆಯ ಅಂಗಳದಲ್ಲಿದ್ದ ಹಮ್ಮೇಲೆಕನ ಮಗನಾದ ಮಲ್ಕೀಯನ ಕುಣಿಯಲ್ಲಿ ಹಾಕಿದರು; ಅವರು ಯೆರೆವಿಾಯನನ್ನು ಹಗ್ಗಗಳಿಂದ ಇಳಿಸಿದರು; ಆ ಕುಣಿಯಲ್ಲಿ ನೀರು ಇರಲಿಲ್ಲ; ಕೆಸರು ಮಾತ್ರ ಇತ್ತು; ಯೆರೆವಿಾಯನು ಕೆಸರಿನಲ್ಲಿ ಮುಣುಗಿದನು.
ಕೀರ್ತನೆಗಳು 142:3
ನನ್ನ ಆತ್ಮವು ನನ್ನಲ್ಲಿ ಕುಂದಿ ಹೋದಾಗ ನೀನು ನನ್ನ ದಾರಿಯನ್ನು ತಿಳುಕೊಂಡಿದ್ದೀ; ನಾನು ನಡೆಯುವ ದಾರಿಯಲ್ಲಿ ಗುಪ್ತವಾಗಿ ನನಗೆ ಉರ್ಲನ್ನು ಒಡ್ಡಿದ್ದಾರೆ.
ಕೀರ್ತನೆಗಳು 130:1
ಓ ಕರ್ತನೇ, ಆಗಾಧಗಳೊಳಗಿಂದ ನಿನಗೆ ಕೂಗುತ್ತೇನೆ.
ಕೀರ್ತನೆಗಳು 116:3
ಮರಣದ ದುಃಖ ಗಳು ನನ್ನನ್ನು ಆವರಿಸಿಕೊಂಡವು; ನರಕದ ಬಾಧೆ ಗಳೂ ಇಕ್ಕಟ್ಟೂ ದುಃಖವೂ ನನ್ನನ್ನು ಹಿಡಿದವು.
ಕೀರ್ತನೆಗಳು 69:13
ಓ ಕರ್ತನೇ, ನಾನಾದರೋ ಅಂಗೀಕಾರದ ಸಮ ಯದಲ್ಲಿ ನಿನಗೆ ನನ್ನ ಪ್ರಾರ್ಥನೆಯನ್ನು ಮಾಡುವೆನು. ಓ ದೇವರೇ, ನಿನ್ನ ಅತಿಶಯವಾದ ಕರುಣೆಯಿಂದಲೂ ನಿನ್ನ ರಕ್ಷಣೆಯ ಸತ್ಯದಲ್ಲಿಯೂ ನನಗೆ ಉತ್ತರಕೊಡು.
ಕೀರ್ತನೆಗಳು 40:1
ನಾನು ಕರ್ತನಿಗಾಗಿ ತಾಳ್ಮೆಯಿಂದ ಕಾದಿದ್ದೆನು; ಆತನು ಕಿವಿಗೊಟ್ಟು ನನ್ನ ಮೊರೆ ಯನ್ನು ಲಕ್ಷಿಸಿದನು.
ಕೀರ್ತನೆಗಳು 18:5
ಪಾತಾಳದ ದುಃಖಗಳು ನನ್ನನ್ನು ಸುತ್ತಿಕೊಂಡವು; ಮರಣದ ನೇಣುಗಳು ನನ್ನನ್ನು ಸುತ್ತಿದವು.
ಅಪೊಸ್ತಲರ ಕೃತ್ಯಗ 16:24
ಅವನು ಅಂಥಾ ಒಂದು ಜವಾಬ್ದಾರಿಕೆಯನ್ನು ಹೊಂದಿ ಅವರನ್ನು ಸೆರೆಯ ಒಳಭಾಗಕ್ಕೆ ದೂಡಿ ಅವರ ಕಾಲುಗಳಿಗೆ ಕೋಳವನ್ನು ಹಾಕಿ ಬಿಗಿಸಿದನು.