John 15:12
ನಾನು ನಿಮ್ಮನ್ನು ಪ್ರೀತಿಸಿದ ಮೇರೆಗೆ ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬದೇ ನನ್ನ ಆಜ್ಞೆಯಾಗಿದೆ.
John 15:12 in Other Translations
King James Version (KJV)
This is my commandment, That ye love one another, as I have loved you.
American Standard Version (ASV)
This is my commandment, that ye love one another, even as I have loved you.
Bible in Basic English (BBE)
This is the law I give you: Have love one for another, even as I have love for you.
Darby English Bible (DBY)
This is my commandment, that ye love one another, as I have loved you.
World English Bible (WEB)
"This is my commandment, that you love one another, even as I have loved you.
Young's Literal Translation (YLT)
`This is my command, that ye love one another, according as I did love you;
| This | αὕτη | hautē | AF-tay |
| is | ἐστὶν | estin | ay-STEEN |
| ἡ | hē | ay | |
| my | ἐντολὴ | entolē | ane-toh-LAY |
| commandment, | ἡ | hē | ay |
| That | ἐμή | emē | ay-MAY |
| love ye | ἵνα | hina | EE-na |
| one another, | ἀγαπᾶτε | agapate | ah-ga-PA-tay |
| as | ἀλλήλους | allēlous | al-LAY-loos |
| I have loved | καθὼς | kathōs | ka-THOSE |
| you. | ἠγάπησα | ēgapēsa | ay-GA-pay-sa |
| ὑμᾶς | hymas | yoo-MAHS |
Cross Reference
ಯೋಹಾನನು 13:34
ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬ ಒಂದು ಹೊಸ ಆಜ್ಞೆಯನ್ನು ನಾನು ನಿಮಗೆ ಕೊಡುತ್ತೇನೆ--ನಾನು ನಿಮ್ಮನ್ನು ಪ್ರೀತಿಸಿದ ಹಾಗೆಯೇ ನೀವೂ ಒಬ್ಬರನ್ನೊಬ್ಬರು ಪ್ರೀತಿಸಬೇಕು.
1 ಯೋಹಾನನು 4:21
ದೇವರನ್ನು ಪ್ರೀತಿಸುವವನು ತನ್ನ ಸಹೋದರನನ್ನೂ ಪ್ರೀತಿಸಬೇಕೆಂಬ ಈ ಆಜ್ಞೆ ಯನ್ನು ನಾವು ಆತನಿಂದ ಹೊಂದಿದ್ದೇವೆ.
1 ಯೋಹಾನನು 3:23
ಆತನ ಆಜ್ಞೆ ಯಾವದೆಂದರೆ ನಾವು ಆತನ ಮಗನಾದ ಯೇಸು ಕ್ರಿಸ್ತನ ಹೆಸರನ್ನು ನಂಬಿ ಆತನು ನಮಗೆ ಆಜ್ಞೆಕೊಟ್ಟ ಪ್ರಕಾರ ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬದೇ.
1 ಪೇತ್ರನು 4:8
ಎಲ್ಲವುಗಳಿಗೆ ಮಿಗಿಲಾಗಿ ನಿಮ್ಮ ನಿಮ್ಮೊಳಗೆ ಯಥಾರ್ಥವಾದ ಪ್ರೀತಿಯಿರಲಿ; ಯಾಕಂದರೆ ಪ್ರೀತಿಯು ಎಷ್ಟೋ ಪಾಪಗಳನ್ನು ಮುಚ್ಚುತ್ತದೆ.
ರೋಮಾಪುರದವರಿಗೆ 12:10
ಸಹೋದರ ಪ್ರೀತಿಯಿಂದ ಒಬ್ಬರಿಗೊಬ್ಬರು ಕರುಣಾ ವಾತ್ಸಲ್ಯವುಳ್ಳ ವರಾಗಿರ್ರಿ; ಸನ್ಮಾನಿಸುವದರಲ್ಲಿ ಒಬ್ಬರಿಗಿಂತ ಒಬ್ಬರು ಮುಂದಾಗಿರ್ರಿ.
1 ಥೆಸಲೊನೀಕದವರಿಗೆ 3:12
ನಮ್ಮ ಪ್ರಿತಿಯು ನಿಮ್ಮ ಕಡೆಗೆ ಹೇಗೋ ಹಾಗೆಯೇ ನಿಮ್ಮ ಪ್ರೀತಿಯೂ ಒಬ್ಬರಿಂದೊಬ್ಬರಿಗೂ ಎಲ್ಲರ ಮೇಲೆಯೂ ಅಭಿವೃದ್ಧಿ ಹೊಂದಿ ಅತ್ಯಧಿಕವಾಗುವಂತೆ ಕರ್ತನು ನಿಮಗೆ ಅನುಗ್ರಹಿಸಲಿ.
ಎಫೆಸದವರಿಗೆ 5:2
ಕ್ರಿಸ್ತನು ನಮ್ಮನ್ನು ಪ್ರೀತಿಸಿ ನಮಗೋಸ್ಕರ ತನ್ನನ್ನೇ ದೇವರಿಗೆ ಸುಗಂಧವಾಸನೆಯಾದ ಕಾಣಿಕೆ ಯಾಗಿಯೂ ಯಜ್ಞವಾಗಿಯೂ ಸಮರ್ಪಿಸಿಕೊಂಡ ಪ್ರಕಾರ ನೀವೂ ಪ್ರೀತಿಯಲ್ಲಿ ನಡೆದುಕೊಳ್ಳಿರಿ.
1 ಯೋಹಾನನು 3:11
ನಾವು ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬದೇ ನೀವು ಮೊದಲಿನಿಂದಲೂ ಕೇಳಿದ ವಾರ್ತೆಯಾಗಿದೆ.
1 ಯೋಹಾನನು 2:7
ಸಹೋದರರೇ, ನಾನು ನಿಮಗೆ ಬರೆಯುವದು ಹೊಸ ಅಪ್ಪಣೆಯಲ್ಲ, ಮೊದಲಿನಿಂದಲೂ ನಿಮಗಿದ್ದ ಹಳೆಯ ಅಪ್ಪಣೆಯಾಗಿದೆ; ಈ ಹಳೆಯ ಅಪ್ಪಣೆಯು ಮೊದಲಿನಿಂದಲೂ ನೀವು ಕೇಳಿದ ವಾಕ್ಯವೇ.
1 ಪೇತ್ರನು 3:8
ಕಡೆಗೆ ನೀವೆಲ್ಲರೂ ಏಕ ಮನಸ್ಸುಳ್ಳವರಾಗಿರ್ರಿ; ಒಬ್ಬರಿಗೊಬ್ಬರು ಕರುಣೆಯುಳ್ಳವರಾಗಿದ್ದು ಸಹೋದರ ರಂತೆ ಪ್ರೀತಿಸಿರಿ; ಕನಿಕರವೂ ದೀನ ಭಾವವೂ ಉಳ್ಳವರಾಗಿರ್ರಿ.
1 ಪೇತ್ರನು 1:22
ನೀವು ಆತ್ಮನ ಮೂಲಕ ಸತ್ಯಕ್ಕೆ ವಿಧೇಯರಾಗಿದ್ದು ನಿಮ್ಮ ಆತ್ಮಗಳನ್ನು ಶುದ್ಧಮಾಡಿಕೊಂಡದ್ದರಿಂದ ನಿಷ್ಕಪಟ ವಾದ ಸಹೋದರ ಸ್ನೇಹವುಳ್ಳವರಾಗಿರತಕ್ಕದ್ದು. ಹೀಗಿರ ಲಾಗಿ ಒಬ್ಬರನ್ನೊಬ್ಬರು ಶುದ್ಧವಾದ ಹೃದಯದಿಂದಲೂ ಆಸಕ್ತಿಯಿಂದಲೂ ಪ್ರೀತಿಸಿರಿ.
1 ಥೆಸಲೊನೀಕದವರಿಗೆ 4:9
ಆದರೆ ಸಹೋದರ ಪ್ರೀತಿಯ ವಿಷಯದಲ್ಲಿ ನಿಮಗೆ ಬರೆಯುವದು ಅವಶ್ಯವಿಲ್ಲ; ಒಬ್ಬರನ್ನೊಬ್ಬರು ಪ್ರೀತಿಸ ಬೇಕೆಂಬ ಉಪದೇಶವನ್ನು ನೀವೇ ದೇವರಿಂದ ಹೊಂದಿದವರಾಗಿದ್ದೀರಿ.
2 ಥೆಸಲೊನೀಕದವರಿಗೆ 1:3
ಸಹೋದರರೇ, ನಾವು ಯಾವಾಗಲೂ ನಿಮ್ಮ ವಿಷಯದಲ್ಲಿ ದೇವರಿಗೆ ಕೃತಜ್ಞತಾಸ್ತುತಿ ಮಾಡುವದಕ್ಕೆ ಬದ್ಧರಾಗಿದ್ದೇವೆ. ಹಾಗೆ ಮಾಡುವದು ಯೋಗ್ಯ; ಯಾಕಂದರೆ ನಿಮ್ಮ ನಂಬಿಕೆಯು ಬಹಳ ಅಭಿವೃದ್ಧಿ ಹೊಂದುತ್ತಾ ಪರಸ್ಪರವಾದ ಪ್ರೀತಿಯು ನಿಮ್ಮೆಲ್ಲ ರಲ್ಲಿಯೂ ಹೆಚ್ಚುತ್ತಾ ಬರುತ್ತದೆ.