Jeremiah 7:19
ಕರ್ತನು ಅನ್ನುತ್ತಾನೆ--ಅವರು ನಿನಗೆ ಕೋಪವನ್ನೆಬ್ಬಿಸುತ್ತಾರೋ? ಅವರ ಸ್ವಂತ ಮುಖ ಗಳು ಗಲಿಬಿಲಿಗೊಳ್ಳುವ ಹಾಗೆ ತಮಗೆ ತಾವೇ ರೇಗಿಸಿಕೊಳ್ಳುತ್ತಾರಲ್ಲವೋ?
Jeremiah 7:19 in Other Translations
King James Version (KJV)
Do they provoke me to anger? saith the LORD: do they not provoke themselves to the confusion of their own faces?
American Standard Version (ASV)
Do they provoke me to anger? saith Jehovah; `do they' not `provoke' themselves, to the confusion of their own faces?
Bible in Basic English (BBE)
Are they moving me to wrath? says the Lord; are they not moving themselves to their shame?
Darby English Bible (DBY)
Is it I whom they provoke to anger? saith Jehovah; is it not themselves, to the shame of their own face?
World English Bible (WEB)
Do they provoke me to anger? says Yahweh; [do they] not [provoke] themselves, to the confusion of their own faces?
Young's Literal Translation (YLT)
Me are they provoking to anger? an affirmation of Jehovah, Is it not themselves, For the shame of their own faces?
| Do they | הַאֹתִ֛י | haʾōtî | ha-oh-TEE |
| anger? to me provoke | הֵ֥ם | hēm | hame |
| מַכְעִסִ֖ים | makʿisîm | mahk-ee-SEEM | |
| saith | נְאֻם | nĕʾum | neh-OOM |
| the Lord: | יְהוָ֑ה | yĕhwâ | yeh-VA |
| not they do | הֲל֣וֹא | hălôʾ | huh-LOH |
| provoke themselves to | אֹתָ֔ם | ʾōtām | oh-TAHM |
| confusion the | לְמַ֖עַן | lĕmaʿan | leh-MA-an |
| of their own faces? | בֹּ֥שֶׁת | bōšet | BOH-shet |
| פְּנֵיהֶֽם׃ | pĕnêhem | peh-nay-HEM |
Cross Reference
1 ಕೊರಿಂಥದವರಿಗೆ 10:22
ಕರ್ತ ನನ್ನು ರೇಗಿಸಬೇಕೆಂದಿದ್ದೇವೋ? ಆತನಿಗಿಂತಲೂ ನಾವು ಬಲಿಷ್ಠರೇನು?
ದಾನಿಯೇಲನು 9:7
ಓ ಕರ್ತನೇ, ನೀನು ನೀತಿವಂತನು; ಆದರೆ ನಾವು ಈ ದಿನದ ಪ್ರಕಾರ ನಾಚಿಕೆಗೀಡಾದವರು; ಯೆಹೂದದ ಮನುಷ್ಯರನ್ನೂ ಯೆರೂಸಲೇಮಿನ ನಿವಾ ಸಿಗಳನ್ನೂ ಸಮಸ್ತ ಇಸ್ರಾಯೇಲ್ಯರನ್ನೂ ಹತ್ತಿರದಲ್ಲಿ ರುವವರನ್ನೂ ಮತ್ತು ದೂರದಲ್ಲಿರುವವರನ್ನೂ ಅವರು ನಿನಗೆ ವಿರುದ್ಧವಾಗಿ ಮಾಡಿರುವ ಅವರ ಅಪರಾಧದ ನಿಮಿತ್ತ ನೀನು ಅವರನ್ನು ಎಲ್ಲಾ ದೇಶಗಳಲ್ಲಿಯೂ ಓಡಿಸಿ ಬಿಟ್ಟಿದ್ದೀ.
ಯೆಹೆಜ್ಕೇಲನು 8:17
ಆಗ ಆತನು ನನಗೆ--ಓ ಮನುಷ್ಯಪುತ್ರನೇ, ನೋಡಿ ದೆಯಾ? ಅವರು ಇಲ್ಲಿ ಮಾಡುವ ಅಸಹ್ಯವಾದವುಗಳು ಯೆಹೂದನ ಮನೆತನದವರಿಗಲ್ಲವೇ? ಅವರು ದೇಶವನ್ನು ಹಿಂಸೆಯಿಂದ ತುಂಬಿಸಿದ್ದಲ್ಲದೆ ನನ್ನನ್ನು ಕೆಣಕಬೇಕೆಂದು ಮತ್ತೆ ಯತ್ನಿಸುತ್ತಿದ್ದಾರೆ. ನೋಡು, ಅವರ ಮೂಗಿಗೆ ಕೊಂಬೆಗಳನ್ನಿಟ್ಟು ಕೊಳ್ಳುತ್ತಾರೆ.
ಯೆರೆಮಿಯ 20:11
ಆದರೆ ಕರ್ತನು ಭಯಂಕರವಾದ ಪರಾಕ್ರಮಶಾಲಿಯ ಹಾಗೆ ನನ್ನ ಸಂಗಡ ಇದ್ದಾನೆ; ಆದದರಿಂದ ನನ್ನನ್ನು ಹಿಂಸಿಸು ವವರು ಎಡವುವರು, ಗೆಲ್ಲುವದಿಲ್ಲ; ಅನುಕೂಲ ವಾಗದೆ ಇದ್ದದರಿಂದ ಅವರು ಬಹಳ ನಾಚಿಕೆಪಡುವರು; ಅವರ ಗಲಿಬಿಲಿಯು ನಿತ್ಯವಾಗಿರುವದು. ಅದು ಮರೆತು ಹೋಗಲ್ಪಡುವದಿಲ್ಲ.
ಯೆರೆಮಿಯ 9:19
ನಾವು ಹೇಗೆ ಹಾಳಾದೆವು, ನಾವು ದೇಶವನ್ನು ಬಿಟ್ಟದ್ದರಿಂದಲೂ ನಮ್ಮ ನಿವಾಸಗಳು ನಮ್ಮನ್ನು ಹೊರಗೆ ಹಾಕಿದ್ದರಿಂದಲೂ ಬಹಳವಾಗಿ ನಾಚಿಕೆಪಡುತ್ತೇವೆ ಎಂಬ ಗೋಳಾಟದ ಶಬ್ದವು ಚೀಯೋನಿನಿಂದ ಕೇಳಿ ಬಂತು.
ಯೆರೆಮಿಯ 2:19
ನಿನ್ನ ಕೆಟ್ಟತನವೇ ನಿನ್ನನ್ನು ತಿದ್ದುವದು; ನಿನ್ನ ಹಿಂಜಾರಿಕೆಗಳೇ ನಿನ್ನನ್ನು ಗದರಿಸುವವು; ಹೀಗಿ ರುವದರಿಂದ ನೀನು ನಿನ್ನ ದೇವರಾದ ಕರ್ತನನ್ನು ಬಿಟ್ಟದ್ದೂ ನನ್ನ ಭಯವೂ ನಿನ್ನಲ್ಲಿ ಇಲ್ಲದಿರುವದೂ ಕೆಟ್ಟದ್ದೂ ಕಹಿಯಾದದ್ದೂ ಎಂದು ತಿಳುಕೊಂಡು ನೋಡು ಎಂದು ಸೈನ್ಯಗಳ ಕರ್ತನಾದ ದೇವರು ಅನ್ನುತ್ತಾನೆ.
ಯೆರೆಮಿಯ 2:17
ಆತನು ನಿನ್ನನ್ನು ದಾರಿಯಲ್ಲಿ ನಡೆಸುತ್ತಿರುವಾಗ ನೀನು ನಿನ್ನ ದೇವರಾದ ಕರ್ತನನ್ನು ಬಿಟ್ಟಿದ್ದರಿಂದಲೇ ಇದನ್ನು ನಿನಗೆ ನೀನೇ ಮಾಡಿಕೊಂಡಿ ಅಲ್ಲವೋ?
ಯೆಶಾಯ 45:16
ಅವರೆಲ್ಲರೂ ನಾಚಿಕೆಪಟ್ಟು ನಿಂದಿತರಾಗುವರು. ವಿಗ್ರಹಗಳನ್ನು ಮಾಡುವವರು ಒಟ್ಟಾಗಿ ಗಲಿಬಿಲಿಗೆ ಒಳಗಾಗುವರು.
ಯೆಶಾಯ 1:24
ಆದದರಿಂದ ಸೈನ್ಯಗಳ ಕರ್ತನೂ ಇಸ್ರಾಯೇಲಿನ ಪರಾಕ್ರಮಿಯೂ ಆದ ಕರ್ತನು ಹೇಳುವದೇನಂದರೆ ಹಾ, ನನ್ನ ವಿರೋಧಿಗಳಿಂದ ನಾನು ಶಾಂತನಾಗಿರು ವೆನು, ನನ್ನ ಶತ್ರುಗಳಿಗೆ ಮುಯ್ಯಿತೀರಿಸುವೆನು.
ಯೆಶಾಯ 1:20
ನೀವು ತಿರಸ್ಕರಿಸಿ ತಿರುಗಿಬಿದ್ದರೆ ಕತ್ತಿಯ ಬಾಯಿಗೆ ತುತ್ತಾಗುವಿರಿ; ಕರ್ತನ ಬಾಯಿಯೇ ಇದನ್ನು ನುಡಿದಿದೆ.
ಯೋಬನು 35:6
ನೀನು ಪಾಪಮಾಡಿದರೆ ಆತನಿಗೆ ವಿರೋಧವಾಗಿ ಏನು ಮಾಡುವಿ? ನಿನ್ನ ದ್ರೋಹಗಳು ಹೆಚ್ಚಿದರೆ ಆತನಿಗೆ ಏನು ಮಾಡುವಿ?
ಎಜ್ರನು 9:7
ನಮ್ಮ ತಂದೆಗಳ ದಿವಸಗಳು ಮೊದಲುಗೊ ಂಡು ಈ ದಿವಸದ ವರೆಗೆ ದೊಡ್ಡ ಅಪರಾಧಕ್ಕೊಳಗಾಗಿದ್ದೇವೆ. ಇಂದಿನ ಪ್ರಕಾರವೇ ನಾವು ಈ ದೇಶಗಳ ಅರಸುಗಳ ಕೈಗೆ ಒಪ್ಪಿಸಲ್ಪಟ್ಟು ನಮ್ಮ ಅಕ್ರಮಗಳಿಗೋಸ್ಕರ ನಾವೂ ನಮ್ಮ ಅರಸುಗಳೂ ನಮ್ಮ ಯಾಜಕರೂ ಕತ್ತಿಗೂ ಸೆರೆಗೂ ಕೊಳ್ಳೆಗೂ ನಾಚಿಕೆಗೂ ಗುರಿಯಾಗಿದ್ದೇವೆ
ಧರ್ಮೋಪದೇಶಕಾಂಡ 32:21
ದೇವರಲ್ಲದ್ದರಿಂದ ಅವರು ನನಗೆ ರೋಷ ಹುಟ್ಟಿಸಿ ದರು; ತಮ್ಮ ವ್ಯರ್ಥವಾದವುಗಳಿಂದ ನನಗೆ ಕೋಪ ವನ್ನು ಎಬ್ಬಿಸಿದರು. ಜನವಲ್ಲದ್ದರಿಂದ ನಾನು ಅವರಿಗೆ ರೋಷ ಹುಟ್ಟಿಸುವೆನು; ಮೂಢ ಜನಾಂಗದಿಂದ ಅವರಿಗೆ ಕೋಪವನ್ನೆಬ್ಬಿಸುವೆನು.
ಧರ್ಮೋಪದೇಶಕಾಂಡ 32:16
ಅನ್ಯದೇವತೆಗಳಿಂದ ಆತನಿಗೆ ಅವರು ರೋಷ ಹುಟ್ಟಿಸಿದರು. ಅಸಹ್ಯವಾದವುಗಳಿಂದ ಆತನಿಗೆ ಕೋಪ ವನ್ನು ಎಬ್ಬಿಸಿದರು.