ಯೆಹೆಜ್ಕೇಲನು 11:10 in Kannada

ಕನ್ನಡ ಕನ್ನಡ ಬೈಬಲ್ ಯೆಹೆಜ್ಕೇಲನು ಯೆಹೆಜ್ಕೇಲನು 11 ಯೆಹೆಜ್ಕೇಲನು 11:10

Ezekiel 11:10
ನೀವು ಕತ್ತಿಯ ಮೂಲಕ ಬೀಳುವಿರಿ; ನಾನು ನಿಮ್ಮ ಇಸ್ರಾಯೇಲಿನ ಮೇರೆಯಲ್ಲಿ ನ್ಯಾಯತೀರಿಸುವೆನು; ಆಗ ನಾನೇ ಕರ್ತನೆಂದು ನಿಮಗೆ ತಿಳಿಯುವದು.

Ezekiel 11:9Ezekiel 11Ezekiel 11:11

Ezekiel 11:10 in Other Translations

King James Version (KJV)
Ye shall fall by the sword; I will judge you in the border of Israel; and ye shall know that I am the LORD.

American Standard Version (ASV)
Ye shall fall by the sword; I will judge you in the border of Israel; and ye shall know that I am Jehovah.

Bible in Basic English (BBE)
You will come to your death by the sword; and I will be your judge in the land of Israel; and you will be certain that I am the Lord.

Darby English Bible (DBY)
Ye shall fall by the sword; I will judge you in the borders of Israel; and ye shall know that I [am] Jehovah.

World English Bible (WEB)
You shall fall by the sword; I will judge you in the border of Israel; and you shall know that I am Yahweh.

Young's Literal Translation (YLT)
By the sword ye do fall, On the border of Israel I do judge you, And ye have known that I `am' Jehovah.

Ye
shall
fall
בַּחֶ֣רֶבbaḥerebba-HEH-rev
by
the
sword;
תִּפֹּ֔לוּtippōlûtee-POH-loo
judge
will
I
עַלʿalal
you
in
גְּב֥וּלgĕbûlɡeh-VOOL
border
the
יִשְׂרָאֵ֖לyiśrāʾēlyees-ra-ALE
of
Israel;
אֶשְׁפּ֣וֹטʾešpôṭesh-POTE
know
shall
ye
and
אֶתְכֶ֑םʾetkemet-HEM
that
וִֽידַעְתֶּ֖םwîdaʿtemvee-da-TEM
I
כִּֽיkee
am
the
Lord.
אֲנִ֥יʾănîuh-NEE
יְהוָֽה׃yĕhwâyeh-VA

Cross Reference

2 ಅರಸುಗಳು 14:25
ಇದ ಲ್ಲದೆ ಇಸ್ರಾಯೇಲಿನ ದೇವರಾದ ಕರ್ತನು ಗತ್‌ಹೇಫೆ ರಿನವನಾದ ಪ್ರವಾದಿಯಾಗಿರುವ ಅಮಿತ್ತೈನ ಮಗ ನಾದ ಯೋನನೆಂಬ ತನ್ನ ಸೇವಕನ ಮುಖಾಂತರ ಹೇಳಿದ ವಾಕ್ಯದ ಪ್ರಕಾರವೇ ಅವನು ಹಮಾತಿನ ಪ್ರವೇಶ ಮೊದಲುಗೊಂಡು ಬಯಲಿನ ಸಮುದ್ರದ ವರೆಗೂ ಇರುವ ಇಸ್ರಾಯೇಲಿನ ಮೇರೆಯನ್ನು ತಿರಿಗಿ ತಕ್ಕೊಂಡನು.

ಯೆಹೆಜ್ಕೇಲನು 6:7
ಹತವಾದವರು ನಿಮ್ಮ ಮಧ್ಯದಲ್ಲಿ ಬೀಳು ವರು, ಆಗ ನೀವು ನಾನೇ ಕರ್ತನೆಂದು ತಿಳಿಯುವಿರಿ.

ಯೆರೆಮಿಯ 52:9
ಆಗ ಅವರು ಅರಸನನ್ನು ಹಿಡಿದು, ಬಾಬೆಲಿನ ಅರಸನ ಬಳಿಗೆ ಹಮಾತ್‌ ದೇಶದಲ್ಲಿರುವ ರಿಬ್ಲಕ್ಕೆ ತಕ್ಕೊಂಡು ಹೋದರು; ಅಲ್ಲಿ ಅವನು ಅವನ ವಿಷಯ ನ್ಯಾಯತೀರ್ಪು ಮಾಡಿದನು.

ಯೆರೆಮಿಯ 39:6
ಬಾಬೆಲಿನ ಅರಸನು ಚಿದ್ಕೀಯನ ಕುಮಾರರನ್ನು ರಿಬ್ಲದಲ್ಲಿ ಅವನ ಕಣ್ಣುಗಳ ಮುಂದೆ ಕೊಂದುಹಾಕಿದನು; ಯೆಹೂದದ ಘನವುಳ್ಳವರೆಲ್ಲ ರನ್ನು ಸಹ ಬಾಬೆಲಿನ ಅರಸನು ಕೊಂದುಹಾಕಿದನು.

2 ಅರಸುಗಳು 25:19
ಇದಲ್ಲದೆ ಪಟ್ಟಣದೊಳಗಿಂದ ಯುದ್ಧಸ್ಥರ ಮೇಲಿದ್ದ ಒಬ್ಬ ಅಧಿ ಕಾರಿಯನ್ನೂ ಪಟ್ಟಣದಲ್ಲಿ ಸಿಕ್ಕಿದ ಅರಸನ ಸಮ್ಮುಖ ದಲ್ಲಿದ್ದ ಐದು ಮಂದಿಯನ್ನೂ ದೇಶದ ಜನರನ್ನೂ ಸೈನ್ಯದ ತರಬೇತು ಮಾಡಿದ ಪ್ರಧಾನನ ಲೇಖಕನೂ ಪಟ್ಟಣದಲ್ಲಿ ಸಿಕ್ಕಿದ ದೇಶದ ಜನರಾದ ಅರವತ್ತು ಮಂದಿಯನ್ನೂ ಅವನು ಹಿಡಿದನು.

ಯೆಹೆಜ್ಕೇಲನು 13:23
ಆದದರಿಂದ ನೀವು ಇನ್ನು ಮೇಲೆ ವ್ಯರ್ಥವಾದದ್ದನ್ನು ಕಾಣುವದಿಲ್ಲ; ಭವಿಷ್ಯವನ್ನೂ ಕಾಣು ವದಿಲ್ಲ; ಯಾಕಂದರೆ ನಾನು ನನ್ನ ಜನರನ್ನು ನಿಮ್ಮ ಕೈಯೊಳಗಿಂದ ತಪ್ಪಿಸುವೆನು; ನಾನೇ ಕರ್ತನೆಂದು ನೀವು ತಿಳಿದುಕೊಳ್ಳುವಿರಿ.

ಯೆಹೆಜ್ಕೇಲನು 13:21
ನಿಮ್ಮ ವಸ್ತ್ರಗಳನ್ನು ಹರಿದು ಬಿಟ್ಟು ನನ್ನ ಜನರನ್ನು ನಿಮ್ಮ ಕೈಯೊಳಗಿಂದ ತಪ್ಪಿಸುತ್ತೇನೆ. ಅವರು ಇನ್ನು ಮೇಲೆ ನಿಮ್ಮ ಕೈಗೆ ಬೇಟೆಯಾಗಿ ಸಿಕ್ಕು ವದಿಲ್ಲ. ನಾನೇ ಕರ್ತನೆಂದು ನೀವು ತಿಳಿದುಕೊಳ್ಳುವಿರಿ.

ಯೆಹೆಜ್ಕೇಲನು 13:14
ನೀವು ಸುಣ್ಣ ಬಳಿದ ಗೋಡೆಯನ್ನು ನಾನು ಈಗ ಕೆಡವಿ ನೆಲಸಮ ಮಾಡಿ ಅದರ ಅಸ್ತಿವಾರ ವನ್ನು ಕಾಣದ ಹಾಗೆ ಮಾಡುವೆನು. ಅದು ಬಿದ್ದು ಹೋಗುವದು, ನೀವು ಅದರಲ್ಲಿ ನಾಶ ಮಾಡಲ್ಪಡು ವಿರಿ. ಆಗ ನಾನೇ ಕರ್ತನೆಂದು ನಿಮಗೆ ತಿಳಿದು ಬರುವದು.

ಯೆಹೆಜ್ಕೇಲನು 13:9
ವ್ಯರ್ಥವಾದದ್ದನ್ನು ದರ್ಶಿಸಿ, ಸುಳ್ಳು ಭವಿಷ್ಯಗಳನ್ನು ಹೇಳುವ ಪ್ರವಾದಿಗಳ ಮೇಲೆ ನನ್ನ ಕೈ ಮಾಡುವೆನು. ಅವರು ನನ್ನ ಜನರ ಸಭೆಯಲ್ಲಿ ಇರುವದೂ ಇಲ್ಲ, ಇಸ್ರಾಯೇಲನ ಮನೆತನದವರ ಪಟ್ಟಿಯಲ್ಲಿ ಬರೆಯಲ್ಪಡುವದೂ ಇಲ್ಲ; ಇಸ್ರಾಯೇಲಿನ ದೇಶದಲ್ಲಿ ಪ್ರವೇಶಿಸುವದೂ ಇಲ್ಲ; ನಾನೇ ದೇವರಾದ ಕರ್ತನೆಂದು ನೀವು ತಿಳಿದುಕೊಳ್ಳುವಿರಿ.

ಯೆರೆಮಿಯ 52:24
ಕಾವಲಿನ ಅಧಿಪತಿಯು ಪ್ರಧಾನ ಯಾಜಕನಾದ ಸೆರಾಯನನ್ನೂ ಎರಡನೇ ಯಾಜಕನಾದ ಚೆಫನ್ಯನನ್ನೂ ಮೂವರು ದ್ವಾರಪಾಲಕರನ್ನೂ ತಕ್ಕೊಂಡನು.

ಯೆರೆಮಿಯ 9:24
ಆದರೆ ಹೆಚ್ಚಳ ಪಡುವವನು ಇದರಲ್ಲಿ ಹೆಚ್ಚಳಪಡಲಿ; ಯಾವದರಲ್ಲಿ ಅಂದರೆ ಕರ್ತನಾದ ನಾನು ಭೂಮಿಯಲ್ಲಿ ಕೃಪೆಯನ್ನೂ ನ್ಯಾಯವನ್ನೂ ನೀತಿಯನ್ನೂ ನಡಿಸುವವನಾಗಿದ್ದೇ ನೆಂದು ನನ್ನನ್ನು ಗ್ರಹಿಸಿ ತಿಳುಕೊಳ್ಳುವದರಲ್ಲಿಯೇ; ಇವುಗಳಲ್ಲಿ ನಾನು ಸಂತೋಷ ಪಡುತ್ತೇನೆಂದು ಕರ್ತನು ಅನ್ನುತ್ತಾನೆ.

ಕೀರ್ತನೆಗಳು 9:16
ಕರ್ತನು ತಾನು ತೀರಿಸಿದ ನ್ಯಾಯತೀರ್ಪಿನಿಂದ ತನ್ನನ್ನು ಪ್ರಕಟಪಡಿಸಿಕೊಂಡಿ ದ್ದಾನೆ; ದುಷ್ಟನು ತನ್ನ ಕೈಕೆಲಸದಲ್ಲಿಯೇ ಸಿಕ್ಕಿಬಿದ್ದಿ ದ್ದಾನೆ. ಹಿಗ್ಗಾಯೋನ್‌. ಸೆಲಾ.

1 ಅರಸುಗಳು 8:65
ಅದೇ ಕಾಲದಲ್ಲಿ ಸೊಲೊಮೋನನೂ ಅವನ ಸಂಗಡ ಹಮಾತಿನ ಪ್ರದೇಶ ಮೊದಲುಗೊಂಡು ಐಗುಪ್ತದ ನದಿಯ ಮಟ್ಟಿಗೂ ಇರುವ ಮಹಾಸಭೆ ಯಾದ ಸಮಸ್ತ ಇಸ್ರಾಯೇಲ್ಯರೂ ನಮ್ಮ ದೇವರಾದ ಕರ್ತನ ಮುಂದೆ ಏಳೇಳು ಹದಿನಾಲ್ಕು ದಿವಸ ಹಬ್ಬವನ್ನು ಮಾಡಿದರು.

ಯೆಹೋಶುವ 13:5
ಗೆಬಾಲ್ಯರ ಪ್ರಾಂತ್ಯ; ಸೂರ್ಯನು ಉದಯಿಸುವ ದಿಕ್ಕಿನಲ್ಲಿ ಹೆರ್ಮೋನ್‌ ಬೆಟ್ಟದ ಕೆಳಗೆ ಇರುವ ಬಾಳ್ಗಾದಿನಿಂದ ಹಾಮಾತಿನಲ್ಲಿ ಪ್ರವೇಶಿಸುವ ಸ್ಥಳದ ವರೆಗೂ ಇರುವ ಲೆಬನೋನೆಲ್ಲಾ ಇವುಗಳೇ.

ಅರಣ್ಯಕಾಂಡ 34:8
ಸಾಲು ಮಾಡಿಕೊಂಡು ಹೋರ್‌ ಪರ್ವತದಿಂದ ಹಮಾತಿನ ಪ್ರದೇಶದ ವರೆಗೆ ಸಾಲು ಮಾಡಿರಿ; ಮೇರೆಯು ಚೆದಾದಿಗೆ ಹೊರಟು