Romans 2:28
ಹೊರಗೆ ಯೆಹೂದ್ಯನಾಗಿರುವವನು ಯೆಹೂದ್ಯನಲ್ಲ; ಹೊರಗೆ ಶರೀರದಲ್ಲಿ ಮಾಡಿರುವ ಸುನ್ನತಿಯು ಸುನ್ನತಿಯಲ್ಲ.
Romans 2:28 in Other Translations
King James Version (KJV)
For he is not a Jew, which is one outwardly; neither is that circumcision, which is outward in the flesh:
American Standard Version (ASV)
For he is not a Jew who is one outwardly; neither is that circumcision which is outward in the flesh:
Bible in Basic English (BBE)
The true Jew is not one who is only so publicly, and circumcision is not that which may be seen in the flesh:
Darby English Bible (DBY)
For he is not a Jew who [is] one outwardly, neither that circumcision which is outward in flesh;
World English Bible (WEB)
For he is not a Jew who is one outwardly, neither is that circumcision which is outward in the flesh;
Young's Literal Translation (YLT)
For he is not a Jew who is `so' outwardly, neither `is' circumcision that which is outward in flesh;
| For | οὐ | ou | oo |
| he | γὰρ | gar | gahr |
| is | ὁ | ho | oh |
| not | ἐν | en | ane |
| a Jew, | τῷ | tō | toh |
one is which | φανερῷ | phanerō | fa-nay-ROH |
| Ἰουδαῖός | ioudaios | ee-oo-THAY-OSE | |
| outwardly; | ἐστιν | estin | ay-steen |
| οὐδὲ | oude | oo-THAY | |
| neither | ἡ | hē | ay |
| is that circumcision, | ἐν | en | ane |
| which is | τῷ | tō | toh |
| outward | φανερῷ | phanerō | fa-nay-ROH |
| ἐν | en | ane | |
| in | σαρκὶ | sarki | sahr-KEE |
| the flesh: | περιτομή | peritomē | pay-ree-toh-MAY |
Cross Reference
ಗಲಾತ್ಯದವರಿಗೆ 6:15
ಕ್ರಿಸ್ತ ಯೇಸುವಿನಲ್ಲಿ ಸುನ್ನತಿಯಾಗುವದರಿಂದ ಏನೂ ಪ್ರಯೋಜನವಿಲ್ಲ, ಸುನ್ನತಿಯಾಗದೆ ಇರುವದ ರಿಂದಲೂ ಏನೂ ಪ್ರಯೋಜನವಿಲ್ಲ; ಆದರೆ ಹೊಸ ಸೃಷ್ಟಿಯೇ ಬೇಕು.
ಮತ್ತಾಯನು 3:9
ಮತ್ತು -- ಅಬ್ರಹಾಮನು ನಮಗೆ ತಂದೆಯಾಗಿದ್ದಾನೆ ಎಂದು ನಿಮ್ಮ ನಿಮ್ಮೊಳಗೆ ಅಂದು ಕೊಳ್ಳಬೇಡಿರಿ; ಯಾಕಂದರೆ ದೇವರು ಅಬ್ರಹಾಮನಿಗೆ ಈ ಕಲ್ಲುಗಳಿಂದ ಮಕ್ಕಳನ್ನು ಎಬ್ಬಿಸ ಶಕ್ತನೆಂದು ನಾನು ನಿಮಗೆ ಹೇಳುತ್ತೇನೆ.
ರೋಮಾಪುರದವರಿಗೆ 9:6
ದೇವರ ಮಾತು ನಿರರ್ಥಕವಾಯಿತೆಂತಲ್ಲ; ಯಾಕಂದರೆ ಇಸ್ರಾಯೇಲ್ಯರಿಗೆ ಸಂಬಂಧಪಟ್ಟವ ರೆಲ್ಲರೂ ಇಸ್ರಾಯೇಲ್ಯರಲ್ಲ;
ಪ್ರಕಟನೆ 2:9
ನಾನು ನಿನ್ನ ಕೃತ್ಯಗಳನ್ನೂ ಸಂಕಟವನ್ನೂ ಬಡತನವನೂ ಬಲ್ಲೆನು; (ಆದರೂ ನೀನು ಐಶ್ವರ್ಯವಂತನೇ). ಇದಲ್ಲದೆ ತಮ್ಮನ್ನು ಯೆಹೂದ್ಯರೆಂದು ಹೇಳಿಕೊಳ್ಳು ವವರ ದೂಷಣೆಯನ್ನು ನಾನು ಬಲ್ಲೆನು; ಅವರು ಯೆಹೂದ್ಯರಲ್ಲ, ಸೈತಾನನ ಸಭಾಮಂದಿರದವರಾಗಿ ದ್ದಾರೆ.
ಯೆಶಾಯ 48:1
ಇಸ್ರಾಯೇಲೆಂಬ ಹೆಸರಿನವರೂ ಯೆಹೂದವೆಂಬ ಒರತೆಯಿಂದ ಬಂದವರೂ ಆದ ಯಾಕೋಬನ ಮನೆತನದವರೇ, ಇದನ್ನು ಕೇಳಿರಿ; ಕರ್ತನ ಹೆಸರಿನ ಮೇಲೆ ಆಣೆಯಿಟ್ಟು, ಇಸ್ರಾಯೇಲಿನ ದೇವರನ್ನು ಸ್ಮರಿಸುತ್ತೀರಿ. ಆದರೆ ಸತ್ಯದಿಂದಲೂ ಅಥವಾ ನೀತಿಯಿಂದಲೂ ಅಲ್ಲ.
1 ಪೇತ್ರನು 3:21
ಆ ನೀರಿಗೆ ಅನುರೂಪವಾದ ಬಾಪ್ತಿಸ್ಮವು ಯೇಸು ಕ್ರಿಸ್ತನ ಪುನರುತ್ಥಾನದ ಮೂಲಕ ಈಗ ನಮ್ಮನ್ನು ರಕ್ಷಿಸುತ್ತದೆ; (ಅದು ಮೈಕೊಳೆಯನ್ನು ಹೋಗಲಾಡಿ ಸುವಂಥದ್ದಲ್ಲ. ಆದರೆ ದೇವರ ಕಡೆಗಿರುವ ನಮ್ಮ ಒಳ್ಳೇ ಮನಸ್ಸಾಕ್ಷಿಯ ಉತ್ತರವಾಗಿದೆ).
ರೋಮಾಪುರದವರಿಗೆ 4:10
ಹಾಗಾದರೆ ಅದು ಯಾವಾಗ ಎಣಿಸಲ್ಪಟ್ಟಿತು? ಅವನಿಗೆ ಸುನ್ನತಿಯಾದ ಮೇಲೆಯೋ? ಸುನ್ನತಿಯಾಗು ವದಕ್ಕೆ ಮೊದಲೋ? ಸುನ್ನತಿಯಾದ ಮೇಲೆ ಅಲ್ಲ, ಸುನ್ನತಿಯಾಗುವದಕ್ಕೆ ಮೊದಲೇ ಎಣಿಸಲ್ಪಟ್ಟಿತು.
ರೋಮಾಪುರದವರಿಗೆ 2:17
ಇಗೋ, ನೀನು ಯೆಹೂದ್ಯನೆಂದು ಕರೆಯಲ್ಪ ಟ್ಟವನೂ ನ್ಯಾಯಪ್ರಮಾಣದಲ್ಲಿ ಭರವಸವಿಟ್ಟವನೂ ದೇವರಲ್ಲಿ ಹೆಚ್ಚಳಪಡುವವನೂ ಆಗಿದ್ದು
ಯೋಹಾನನು 8:37
ನೀವು ಅಬ್ರಹಾಮನ ಸಂತತಿಯವರೆಂದು ನಾನು ಬಲ್ಲೆನು; ಆದರೆ ನಿಮ್ಮಲ್ಲಿ ನನ್ನ ವಾಕ್ಯಕ್ಕೆ ಸ್ಥಳವಿಲ್ಲದ ಕಾರಣ ನೀವು ನನ್ನನ್ನು ಕೊಲ್ಲುವದಕ್ಕೆ ನೋಡುತ್ತೀರಿ.
ಯೋಹಾನನು 1:47
ಯೇಸು ತನ್ನ ಬಳಿಗೆ ಬರುವ ನತಾನಯೇಲನನ್ನು ಕಂಡು ಅವನ ವಿಷಯವಾಗಿ--ಇಗೋ, ಇವನು ನಿಜ ವಾಗಿಯೂ ಇಸ್ರಾಯೇಲನು; ಇವನಲ್ಲಿ ಕಪಟವಿಲ್ಲ ಅಂದನು.
ಹೋಶೇ 1:6
ಅವಳು ತಿರುಗಿ ಬಸುರಾಗಿ ಮಗಳನ್ನು ಹೆತ್ತಳು. ಆಗ ದೇವರು ಅವನಿಗೆ-- ಅವಳನ್ನು ಲೋರುಹಾಮ ಎಂಬ ಹೆಸರಿನಿಂದ ಕರೆ; ಯಾಕಂದರೆ ನಾನು ಇನ್ನು ಮೇಲೆ ಇಸ್ರಾಯೇಲಿನ ಮನೆತನ ದವರನ್ನು ಕರುಣಿಸುವದೇ ಇಲ್ಲ; ಆದರೆ ನಾನು ಅವರನ್ನು ಸಂಪೂರ್ಣವಾಗಿ ತೆಗೆದುಬಿಡುತ್ತೇನೆ.
ಯೆರೆಮಿಯ 9:26
ಐಗುಪ್ತವನ್ನೂ ಯೆಹೂದ ವನ್ನೂ ಎದೋಮನ್ನೂ ಅಮ್ಮೋನನ ಮಕ್ಕಳನ್ನೂ ಮೋವಾಬನ್ನೂ ಅರಣ್ಯ ನಿವಾಸಿಗಳಾಗಿರುವ ಕಟ್ಟ ಕಡೆಯ ಮೂಲೆಯಲ್ಲಿ ಇರುವವರನ್ನೂ ನಾನು ಶಿಕ್ಷಿಸುವ ದಿನಗಳು ಬರುತ್ತವೆ. ಈ ಜನಾಂಗಗಳವರು ಸುನ್ನತಿ ಯಿಲ್ಲದವರು; ಇಸ್ರಾಯೇಲಿನ ಮನೆತನದವರೆಲ್ಲರೂ ಹೃದಯದಲ್ಲಿ ಸುನ್ನತಿಯಿಲ್ಲದವರಾಗಿದ್ದಾರೆ.
ಯೆಶಾಯ 1:9
ಸೈನ್ಯ ಗಳ ಕರ್ತನು ನಮಗೆ ಮಿಕ್ಕಿದ್ದರಲ್ಲಿ ಸ್ವಲ್ಪವನ್ನಾದರೂ ಉಳಿಸದೆ ಹೋಗಿದ್ದರೆ, ಸೊದೋಮಿನ ಹಾಗೆಯೂ ಗೊಮೋರಕ್ಕೆ ಸಮಾನವಾಗಿಯೂ ಇರುತ್ತಿದ್ದೆವು.
ಕೀರ್ತನೆಗಳು 73:1
ನಿಜವಾಗಿ ದೇವರು ಇಸ್ರಾಯೇಲಿಗೂ ಶುದ್ಧ ಹೃದಯದವರಿಗೂ ಒಳ್ಳೆಯವನು.