Psalm 44:7
ನೀನು ನಮ್ಮ ವೈರಿಗಳಿಂದ ನಮ್ಮನ್ನು ರಕ್ಷಿಸಿದಿ; ನಮ್ಮನ್ನು ಹಗೆಮಾಡಿದವರನ್ನು ನಾಚಿಕೆ ಪಡಿಸಿದಿ.
Psalm 44:7 in Other Translations
King James Version (KJV)
But thou hast saved us from our enemies, and hast put them to shame that hated us.
American Standard Version (ASV)
But thou hast saved us from our adversaries, And hast put them to shame that hate us.
Bible in Basic English (BBE)
But it is you who have been our saviour from those who were against us, and have put to shame those who had hate for us.
Darby English Bible (DBY)
For thou hast saved us from our adversaries, and hast put them to shame that hate us.
Webster's Bible (WBT)
For I will not trust in my bow, neither shall my sword save me.
World English Bible (WEB)
But you have saved us from our adversaries, And have shamed those who hate us.
Young's Literal Translation (YLT)
For Thou hast saved us from our adversaries, And those hating us Thou hast put to shame.
| But | כִּ֣י | kî | kee |
| thou hast saved | ה֭וֹשַׁעְתָּנוּ | hôšaʿtānû | HOH-sha-ta-noo |
| enemies, our from us | מִצָּרֵ֑ינוּ | miṣṣārênû | mee-tsa-RAY-noo |
| shame to them put hast and | וּמְשַׂנְאֵ֥ינוּ | ûmĕśanʾênû | oo-meh-sahn-A-noo |
| that hated | הֱבִישֽׁוֹתָ׃ | hĕbîšôtā | hay-vee-SHOH-ta |
Cross Reference
ಯೆಹೋಶುವ 1:5
ಆದರೆ ನೀನು ಜೀವಿಸುವ ದಿವಸಗಳಲ್ಲೆಲ್ಲಾ ಯಾವನೂ ನಿನ್ನ ಮುಂದೆ ನಿಲ್ಲಲಾರನು. ನಾನು ಮೋಶೆಯ ಸಂಗಡ ಇದ್ದ ಹಾಗೆಯೇ ನಿನ್ನ ಸಂಗಡ ಇರುವೆನು. ನಾನು ನಿನ್ನನ್ನು ಕೈಬಿಡುವುದಿಲ್ಲ, ಇಲ್ಲವೆ ನಿನ್ನನ್ನು ತೊರೆಯುವದಿಲ್ಲ.
ಕೀರ್ತನೆಗಳು 140:7
ನನ್ನ ರಕ್ಷಣೆಯ ಬಲವಾಗಿರುವ ಕರ್ತನಾದ ಓ ದೇವರೇ, ನನ್ನ ತಲೆಯನ್ನು ಯುದ್ಧದ ದಿವಸದಲ್ಲಿ ಮುಚ್ಚಿದ್ದೀ.
ಕೀರ್ತನೆಗಳು 136:24
ನಮ್ಮ ವೈರಿಗಳಿಂದ ನಮ್ಮನ್ನು ಬಿಡಿ ಸಿದಾತನನ್ನು ಕೊಂಡಾಡಿರಿ; ಆತನ ಕರುಣೆಯು ಎಂದೆಂದಿಗೂ ಅದೆ.
ಕೀರ್ತನೆಗಳು 132:18
ಅವನ ಶತ್ರುಗಳಿಗೆ ನಾಚಿಕೆಯನ್ನು ಹೊದಿಸುವೆನು; ಆದರೆ ಅವನ ಮೇಲೆ ಅವನ ಕಿರೀಟವು ಶೋಭಿಸುವದು ಎಂದು ಹೇಳಿದ್ದಾನೆ.
ಕೀರ್ತನೆಗಳು 83:1
1 ಓ ದೇವರೇ, ಮೌನವಾಗಿರಬೇಡ; ಓ ದೇವರೇ, ಮೌನವಾಗಿರಬೇಡ; ಸುಮ್ಮ ನಿರಬೇಡ.
ಕೀರ್ತನೆಗಳು 53:5
ಭಯವಿಲ್ಲದಿರುವಲ್ಲಿ ಅವರು ಭಯ ಭ್ರಾಂತರಾದರು; ನಿನಗೆ ವಿರೋಧವಾಗಿ ದಂಡು ಇಳಿ ಸುವವನ ಎಲುಬುಗಳನ್ನು ದೇವರು ಚದರಿಸಿ ಬಿಟ್ಟಿ ದ್ದಾನೆ. ನೀನು ಅವರನ್ನು ನಾಚಿಕೆಪಡಿಸಿದ್ದೀ; ದೇವರು ಅವರನ್ನು ತಿರಸ್ಕರಿಸಿದ್ದಾನೆ.
ಕೀರ್ತನೆಗಳು 40:14
ನನ್ನ ಪ್ರಾಣವನ್ನು ತೆಗೆಯಲು ಅದನ್ನು ಹುಡುಕುವದಕ್ಕೆ ಕೂಡಿಕೊಳ್ಳುವವರೆಲ್ಲರೂ ಆಶಾಭಂಗಪಟ್ಟು ಲಜ್ಜೆಪಡಲಿ; ನನ್ನ ಕೇಡಿನಲ್ಲಿ ಸಂತೋಷಪಡುವವರು ಹಿಂದಕ್ಕೆ ಅಟ್ಟಲ್ಪಟ್ಟು ಅವ ಮಾನ ಹೊಂದಲಿ.
2 ಸಮುವೇಲನು 7:10
ಇದಲ್ಲದೆ ನಾನು ನನ್ನ ಜನರಾದ ಇಸ್ರಾಯೇಲ್ಯರಿಗೆ ಒಂದು ಸ್ಥಳವನ್ನು ಏರ್ಪಡಿಸಿ ಅವರು ಇನ್ನು ಮೇಲೆ ಚಲಿಸದೆ ಸ್ವಸ್ಥಳದಲ್ಲಿ ವಾಸವಾಗಿರುವ ಹಾಗೆ ಅವರನ್ನು ನೆಡು ವೆನು. ಪೂರ್ವದ ಹಾಗೆಯೂ ನಾನು ನನ್ನ ಜನವಾದ ಇಸ್ರಾಯೇಲಿನ ಮೇಲೆ ನ್ಯಾಯಾಧಿಪತಿಗಳನ್ನು ನೇಮಿ ಸಿದ ದಿವಸದಿಂದಾದ ಹಾಗೆಯೂ ದುಷ್ಟತನದ ಮಕ್ಕಳು ಇನ್ನು ಮೇಲೆ ಅವರನ್ನು ಕುಂದಿಸದೆ ಇರುವರು.
1 ಸಮುವೇಲನು 17:47
ಈ ದಿನ ಇಸ್ರಾಯೇಲ್ಯರೊಳಗೆ ದೇವರು ಇದ್ದಾನೆಂದು ಭೂಲೋಕದವರೆಲ್ಲರೂ ತಿಳಿ ಯುವರು. ಕರ್ತನು ಕತ್ತಿಯಿಂದಲೂ ಈಟಿಯಿಂದಲೂ ರಕ್ಷಿಸುವದಿಲ್ಲ ಎಂದು ಈ ಸಭೆಯೆಲ್ಲಾ ತಿಳಿದುಕೊಳ್ಳು ವದು; ಯಾಕಂದರೆ ಯುದ್ಧವು ಕರ್ತನದು; ಆತನು ನಿಮ್ಮನ್ನು ನಮ್ಮ ಕೈಯಲ್ಲಿ ಒಪ್ಪಿಸಿಕೊಡುವನು ಅಂದನು.
1 ಸಮುವೇಲನು 14:6
ಆಗ ಯೋನಾತಾನನು ತನ್ನ ಆಯುಧಗಳನ್ನು ಹಿಡಿಯುವ ಯೌವನಸ್ಥನಿಗೆ--ನಾವು ಈ ಸುನ್ನತಿ ಇಲ್ಲದವರ ಠಾಣಕ್ಕೆ ದಾಟಿಹೋಗೋಣ ಬಾ; ಒಂದು ವೇಳೆ ದೇವರು ನಮಗೋಸ್ಕರ ಕಾರ್ಯ ನಡಿಸುವನು. ಯಾಕಂದರೆ ಅನೇಕ ಜನರಿಂದಾದರೂ ಸ್ವಲ್ಪ ಜನರಿಂದಾದರೂ ರಕ್ಷಿಸುವದಕ್ಕೆ ಕರ್ತನಿಗೆ ಯಾವ ಆಟಂಕವಿಲ್ಲ ಅಂದನು.
1 ಸಮುವೇಲನು 7:8
ಆಗ ಇಸ್ರಾಯೇಲ್ ಮಕ್ಕಳು ಇದನ್ನು ಕೇಳಿ ಫಿಲಿಷ್ಟಿಯರಿಗೋಸ್ಕರ ಭಯಪಟ್ಟು ಸಮುವೇಲ ನಿಗೆ--ನಮ್ಮ ದೇವರಾದ ಕರ್ತನು ನಮ್ಮನ್ನು ಫಿಲಿಷ್ಟಿ ಯರ ಕೈಯಿಂದ ತಪ್ಪಿಸಿ ರಕ್ಷಿಸುವ ಹಾಗೆ ನೀನು ನಮಗೋಸ್ಕರವಾಗಿ ಮೌನವಾಗಿರದೆ ಆತನಿಗೆ ಮೊರೆ ಯಿಡು ಅಂದರು.
ನ್ಯಾಯಸ್ಥಾಪಕರು 7:4
ಕರ್ತನು ಗಿದ್ಯೋನನಿಗೆ--ಜನರು ಇನ್ನೂ ಬಹಳ ವಾಗಿದ್ದಾರೆ; ಅವರನ್ನು ಜಲದ ಸವಿಾಪಕ್ಕೆ ಇಳಿದು ಹೋಗುವಂತೆ ಮಾಡು. ಅಲ್ಲಿ ನಾನು ಅವರನ್ನು ನಿನಗೋಸ್ಕರ ಪರೀಕ್ಷೆಮಾಡುವೆನು; ಯಾರು ನಿನ್ನ ಸಂಗಡ ಹೋಗಬಹುದೆಂದು ಅಲ್ಲಿ ಯಾವನನ್ನು ಕುರಿತು ಹೇಳುವೆನೋ ಅವನು ನಿನ್ನ ಸಂಗಡ ಹೋಗಲಿ. ಆದರೆ ನಾನು--ನಿನ್ನ ಸಂಗಡ ಬರಬಾರದೆಂದು ಯಾವನ ಕುರಿತಾಗಿ ಹೇಳುವೆನೋ ಅವನು ಹೋಗಬಾರದು ಅಂದನು.
ನ್ಯಾಯಸ್ಥಾಪಕರು 2:18
ಕರ್ತನು ಅವರಿಗೆ ನ್ಯಾಯಾಧಿಪತಿಗಳನ್ನು ಎಬ್ಬಿಸಿ ಆತನು ನ್ಯಾಯಾಧಿಪತಿಯ ಸಂಗಡ ಇದ್ದು ಆ ನ್ಯಾಯಾಧಿಪತಿಯ ದಿನಗಳೆಲ್ಲಾ ಅವರನ್ನು ಅವರ ಶತ್ರುಗಳ ಕೈಯಿಂದ ರಕ್ಷಿಸುತ್ತಿದ್ದನು. ಯಾಕಂದರೆ ಅವರು ತಮ್ಮನ್ನು ಬಾಧಿಸಿ ಶ್ರಮೆಪಡಿಸುವವರ ನಿಮಿತ್ತ ಗೋಳಾಡುವದರಿಂದ ಕರ್ತನು ಪಶ್ಚಾತ್ತಾಪಪಟ್ಟನು.
ಯೆಹೋಶುವ 23:9
ಕರ್ತನು ನಿಮ್ಮ ಮುಂದೆ ಬಲವಾದ ದೊಡ್ಡ ಜನಾಂಗಗಳನ್ನು ಹೊರಡಿಸಿಬಿಟ್ಟನು. ಆದರೆ ನಿಮ್ಮ ಮುಂದೆ ಈ ವರೆಗೂ ಒಬ್ಬರಾದರೂ ನಿಲ್ಲಲಾರದೆ ಹೋದರು.
ಯೆಹೋಶುವ 11:6
ಆಗ ಕರ್ತನು ಯೆಹೋಶುವನಿಗೆಅವರಿಗೆ ಭಯಪಡಬೇಡ; ನಾಳೆ ಇಷ್ಟು ಹೊತ್ತಿಗೆ ಅವರೆಲ್ಲರನ್ನು ಇಸ್ರಾಯೇಲಿನ ಮುಂದೆ ಕೊಲ್ಲಲ್ಪ ಡುವಂತೆ ಒಪ್ಪಿಸಿಕೊಡುವೆನು. ನೀನು ಅವರ ಕುದುರೆಗಳ ಹಿಂಗಾಲಿನ ನರವನ್ನು ಕೊಯಿದು ಅವರ ರಥಗಳನ್ನು ಬೆಂಕಿಯಿಂದ ಸುಟ್ಟುಬಿಡಬೇಕು ಅಂದನು.
ಯೆಹೋಶುವ 10:42
ಯೆಹೋಶುವನು ಈ ಸಮಸ್ತ ಅರಸುಗಳನ್ನೂ ಅವರ ದೇಶವನ್ನೂ ಒಂದೇ ಸಾರಿ ತೆಗೆದುಕೊಂಡನು. ಯಾಕಂದರೆ ಇಸ್ರಾಯೇಲಿನ ದೇವ ರಾದ ಕರ್ತನು ಇಸ್ರಾಯೇಲಿಗೋಸ್ಕರ ಯುದ್ಧ ಮಾಡಿದನು.
ಯೆಹೋಶುವ 10:8
ಆದರೆ ಕರ್ತನು ಯೆಹೋಶುವನಿಗೆ--ನೀನು ಅವರಿಗೆ ಭಯಪಡಬೇಡ; ಯಾಕಂದರೆ ನಿನ್ನ ಕೈಯಲ್ಲಿ ಅವರನ್ನು ಒಪ್ಪಿಸಿಕೊಟ್ಟಿದ್ದೇನೆ, ಅವರಲ್ಲಿ ಒಬ್ಬನಾದರೂ ನಿನ್ನ ಎದುರಿನಲ್ಲಿ ನಿಲ್ಲುವದಿಲ್ಲ ಅಂದನು.
ಕೀರ್ತನೆಗಳು 144:10
ಅರಸುಗಳಿಗೆ ರಕ್ಷಣೆಯನ್ನು ಕೊಡು ವಾತನೇ, ನಿನ್ನ ಸೇವಕನಾದ ದಾವೀದನನ್ನು ಕೇಡಿನ ಕತ್ತಿಯಿಂದ ತಪ್ಪಿಸುವಾತನೇ,