John 19:1
ಆಗ ಪಿಲಾತನು ಯೇಸುವನ್ನು ತೆಗೆದುಕೊಂಡು ಆತನನ್ನು ಕೊರಡೆ ಯಿಂದ ಹೊಡಿಸಿದನು.
John 19:1 in Other Translations
King James Version (KJV)
Then Pilate therefore took Jesus, and scourged him.
American Standard Version (ASV)
Then Pilate therefore took Jesus, and scourged him.
Bible in Basic English (BBE)
Then Pilate took Jesus and had him whipped with cords.
Darby English Bible (DBY)
Then Pilate therefore took Jesus and scourged [him].
World English Bible (WEB)
So Pilate then took Jesus, and flogged him.
Young's Literal Translation (YLT)
Then, therefore, did Pilate take Jesus and scourge `him',
| Then | Τότε | tote | TOH-tay |
| οὖν | oun | oon | |
| Pilate | ἔλαβεν | elaben | A-la-vane |
| therefore | ὁ | ho | oh |
| took | Πιλᾶτος | pilatos | pee-LA-tose |
| τὸν | ton | tone | |
| Jesus, | Ἰησοῦν | iēsoun | ee-ay-SOON |
| and | καὶ | kai | kay |
| scourged | ἐμαστίγωσεν | emastigōsen | ay-ma-STEE-goh-sane |
Cross Reference
ಯೆಶಾಯ 53:5
ನಮ್ಮ ದ್ರೋಹಗಳ ನಿಮಿತ್ತ ಆತನಿಗೆ ಗಾಯವಾಯಿತು, ನಮ್ಮ ದುಷ್ಕೃತ್ಯಗಳ ನಿಮಿತ್ತ ಆತನು ಜಜ್ಜಲ್ಪಟ್ಟನು; ನಮ್ಮ ಸಮಾಧಾನಕ್ಕೆ ಕಾರಣವಾದ ಶಿಕ್ಷೆಯು ಆತನ ಮೇಲೆ ಬಿತ್ತು; ಆತನ ಬಾಸುಂಡೆ ಗಳಿಂದ ನಮಗೆ ಸ್ವಸ್ಥವಾಯಿತು.
ಯೆಶಾಯ 50:6
ನಾನು ಹೊಡೆಯುವವರಿಗೆ ಬೆನ್ನನ್ನು ಮತ್ತು ಕೂದಲು ಕೀಳುವವರಿಗೆ ನನ್ನ ಕೆನ್ನೆಯನ್ನು ಕೊಟ್ಟೆನು; ನನ್ನ ಮುಖವನ್ನು ನಿಂದೆಗೂ ಉಗುಳುವಿಕೆಗೂ ಮರೆ ಮಾಡಲಿಲ್ಲ.
ಲೂಕನು 23:16
ಹೀಗಿರುವದರಿಂದ ನಾನು ಆತನನ್ನು ಹೊಡಿಸಿ ಬಿಟ್ಟುಬಿಡುವೆನು ಅಂದನು.
ಮತ್ತಾಯನು 20:19
ಇದಲ್ಲದೆ ಆತನನ್ನು ಹಾಸ್ಯ ಮಾಡು ವದಕ್ಕೂ ಕೊರಡೆಗಳಿಂದ ಹೊಡೆಯುವದಕ್ಕೂ ಶಿಲುಬೆಗೆ ಹಾಕುವದಕ್ಕೂ ಆತನನ್ನು ಅನ್ಯಜನರಿಗೆ ಒಪ್ಪಿಸಿಕೊಡುವರು; ಮತ್ತು ಮೂರನೆಯ ದಿನದಲ್ಲಿ ಆತನು ತಿರಿಗಿ ಎದ್ದು ಬರುವನು ಎಂದು ಹೇಳಿದನು.
1 ಪೇತ್ರನು 2:24
ನಾವು ಪಾಪಗಳ ಪಾಲಿಗೆ ಸತ್ತು ನೀತಿವಂತರಾಗಿ ಜೀವಿಸುವಂತೆ ಆತನು ಮರದ ಮೇಲೆ ನಮ್ಮ ಪಾಪ ಗಳನ್ನು ತಾನೇ ತನ್ನ ದೇಹದಲ್ಲಿ ಹೊತ್ತನು; ಆತನ ಬಾಸುಂಡೆಗಳಿಂದ ನಿಮಗೆ ಗುಣವಾಯಿತು.
ಇಬ್ರಿಯರಿಗೆ 11:36
ಬೇರೆ ಕೆಲವರು ಅಪಹಾಸ್ಯ ಕೊರಡೆಯಪೆಟ್ಟು, ಹೌದು, ಇನ್ನು ಬೇಡಿ ಸೆರೆಮನೆ ಇವುಗಳನ್ನು ಅನುಭವಿಸಿದರು.
2 ಕೊರಿಂಥದವರಿಗೆ 11:24
ಐದು ಸಾರಿ ಯೆಹೂದ್ಯರಿಂದ ನನಗೆ ಒಂದು ಕಡಿಮೆ ನಾಲ್ವತ್ತು ಏಟುಗಳು ಬಿದ್ದವು;
ಅಪೊಸ್ತಲರ ಕೃತ್ಯಗ 22:24
ಯಾವದಕ್ಕಾಗಿ ಅವರು ಅವನಿಗೆ ವಿರೋಧವಾಗಿ ಕೂಗಿಕೊಂಡರೆಂಬದನ್ನು ಮುಖ್ಯ ನಾಯಕನು ತಿಳುಕೊಳ್ಳುವಂತೆ ಅವನನ್ನು ಕೋಟೆ ಯೊಳಕ್ಕೆ ತರಬೇಕೆಂದು ಆಜ್ಞಾಪಿಸಿ ಕೊರಡೆಗಳಿಂದ ಹೊಡೆದು ವಿಚಾರಿಸಬೇಕೆಂದು ಅಪ್ಪಣೆಕೊಟ್ಟನು;
ಅಪೊಸ್ತಲರ ಕೃತ್ಯಗ 16:22
ಸಮೂಹವು ಒಟ್ಟಾಗಿ ಕೂಡಿ ಅವರಿಗೆ ವಿರೋಧವಾಗಿ ಎದ್ದಾಗ ನ್ಯಾಯಾಧಿಪತಿಗಳು ಅವರ ವಸ್ತ್ರಗಳನ್ನು ಹರಿದು ಅವರನ್ನು ಹೊಡೆಯುವಂತೆ ಅಪ್ಪಣೆಕೊಟ್ಟರು.
ಲೂಕನು 23:23
ಆದರೆ ಆತನು ಶಿಲುಬೆಗೆ ಹಾಕಲ್ಪಡಬೇಕೆಂದು ಅವರು ಮಹಾಧ್ವನಿಯಿಂದ ಒತ್ತಾಯ ಮಾಡಿದರು. ಹೀಗೆ ಅವರ ಕೂಗಾಟವೂ ಪ್ರಧಾನಯಾಜಕರ ಕೂಗಾಟವೂ ಗೆದ್ದಿತು.
ಲೂಕನು 18:33
ಇದಲ್ಲದೆ ಅವರು ಆತನನ್ನು ಕೊರಡೆಗಳಿಂದ ಹೊಡೆದು ಕೊಲ್ಲುವರು. ಮೂರನೆಯ ದಿನದಲ್ಲಿ ಆತನು ತಿರಿಗಿ ಏಳುವನು ಅಂದನು.
ಮಾರ್ಕನು 15:15
ಹೀಗೆ ಪಿಲಾತನು ಜನರನ್ನು ತೃಪ್ತಿಪಡಿಸಲು ಮನಸ್ಸುಳ್ಳವನಾಗಿ ಬರಬ್ಬನನ್ನು ಅವರಿಗೆ ಬಿಟ್ಟುಕೊಟ್ಟು ಯೇಸುವನ್ನು ಕೊರಡೆಯಿಂದ ಹೊಡಿಸಿ ಶಿಲುಬೆಗೆ ಹಾಕುವದಕ್ಕೆ ಒಪ್ಪಿಸಿದನು.
ಮಾರ್ಕನು 10:33
ಇಗೋ, ನಾವು ಯೆರೂಸಲೇ ಮಿಗೆ ಹೋಗುತ್ತೇವೆ; ಮತ್ತು ಮನುಷ್ಯಕುಮಾರನು ಪ್ರಧಾನಯಾಜಕರಿಗೂ ಶಾಸ್ತ್ರಿಗಳಿಗೂ ಒಪ್ಪಿಸಲ್ಪಡು ವನು; ಅವರು ಆತನಿಗೆ ಮರಣದಂಡನೆಯನ್ನು ವಿಧಿಸಿ ಆತನನ್ನು ಅನ್ಯಜನಗಳಿಗೆ ಒಪ್ಪಿಸುವರು.
ಮತ್ತಾಯನು 27:26
ಆಗ ಅವನು ಬರಬ್ಬನನ್ನು ಅವರಿಗೆ ಬಿಟ್ಟುಕೊಟ್ಟು ಯೇಸುವನ್ನು ಕೊರಡೆಗಳಿಂದ ಹೊಡಿಸಿ ಶಿಲುಬೆಗೆ ಹಾಕುವಂತೆ ಒಪ್ಪಿಸಿದನು.
ಮತ್ತಾಯನು 23:34
ಆದದರಿಂದ ಇಗೋ, ನಾನು ಪ್ರವಾದಿಗಳನ್ನೂ ಜ್ಞಾನಿಗಳನ್ನೂ ಶಾಸ್ತ್ರಿಗಳನ್ನೂ ನಿಮ್ಮ ಬಳಿಗೆ ಕಳುಹಿ ಸುತ್ತೇನೆ. ಅವರಲ್ಲಿ ಕೆಲವರನ್ನು ನೀವು ಕೊಂದು ಶಿಲುಬೆಗೆ ಹಾಕುವಿರಿ; ಮತ್ತು ಕೆಲವರನ್ನು ನೀವು ನಿಮ್ಮ ಸಭಾಮಂದಿರಗಳಲ್ಲಿ ಕೊರಡೆಗಳಿಂದ ಹೊಡೆದು ಅವ ರನ್ನು ಪಟ್ಟಣದಿಂದ ಪಟ್ಟಣಕ್ಕೆ ಅಟ್ಟಿ ಹಿಂಸಿಸ
ಕೀರ್ತನೆಗಳು 129:3
ಉಳುವವರು ನನ್ನ ಬೆನ್ನಿನ ಮೇಲೆ ಉತ್ತು ತಮ್ಮ ಸಾಲುಗಳನ್ನು ಉದ್ದ ಮಾಡಿದ್ದಾರೆ.