ಯೋಹಾನನು 16:5 in Kannada

ಕನ್ನಡ ಕನ್ನಡ ಬೈಬಲ್ ಯೋಹಾನನು ಯೋಹಾನನು 16 ಯೋಹಾನನು 16:5

John 16:5
ಆದರೆ ಈಗ ನನ್ನನ್ನು ಕಳುಹಿಸಿದಾತನ ಬಳಿಗೆ ನಾನು ಹೋಗುತ್ತೇನೆ; ನಿಮ್ಮಲ್ಲಿ ಒಬ್ಬನಾದರೂ--ನೀನು ಎಲ್ಲಿಗೆ ಹೋಗುತ್ತೀ ಎಂದು ನನ್ನನ್ನು ಕೇಳುವದಿಲ್ಲ.

John 16:4John 16John 16:6

John 16:5 in Other Translations

King James Version (KJV)
But now I go my way to him that sent me; and none of you asketh me, Whither goest thou?

American Standard Version (ASV)
But now I go unto him that sent me; and none of you asketh me, Whither goest thou?

Bible in Basic English (BBE)
But now I am going to him who sent me; and not one of you says to me, Where are you going?

Darby English Bible (DBY)
But now I go to him that has sent me, and none of you demands of me, Where goest thou?

World English Bible (WEB)
But now I am going to him who sent me, and none of you asks me, 'Where are you going?'

Young's Literal Translation (YLT)
and now I go away to Him who sent me, and none of you doth ask me, Whither dost thou go?

But
νῦνnynnyoon
now
δὲdethay
way
my
go
I
ὑπάγωhypagōyoo-PA-goh
to
πρὸςprosprose
him
τὸνtontone
that
sent
πέμψαντάpempsantaPAME-psahn-TA
me;
μεmemay
and
καὶkaikay
none
οὐδεὶςoudeisoo-THEES
of
ἐξexayks
you
ὑμῶνhymōnyoo-MONE
asketh
ἐρωτᾷerōtaay-roh-TA
me,
μεmemay
Whither
Ποῦpoupoo
goest
thou?
ὑπάγειςhypageisyoo-PA-gees

Cross Reference

ಯೋಹಾನನು 13:36
ಸೀಮೋನ ಪೇತ್ರನು ಆತನಿಗೆ--ಕರ್ತನೇ, ನೀನು ಎಲ್ಲಿಗೆ ಹೋಗುತ್ತೀ? ಅನ್ನಲು ಯೇಸು ಪ್ರತ್ಯುತ್ತರವಾಗಿ ಅವನಿಗೆ--ನಾನು ಹೋಗುವಲ್ಲಿಗೆ ನೀನು ಈಗ ಬರಲಾರಿ; ತರುವಾಯ ನೀನು ನನ್ನನ್ನು ಹಿಂಬಾಲಿಸುವಿ ಅಂದನು.

ಯೋಹಾನನು 7:33
ತರುವಾಯ ಯೇಸು ಅವರಿಗೆ--ಇನ್ನು ಸ್ವಲ್ಪಕಾಲ ನಾನು ನಿಮ್ಮೊಂದಿಗಿದ್ದು ಆಮೇಲೆ ನನ್ನನ್ನು ಕಳುಹಿಸಿದಾತನ ಬಳಿಗೆ ಹೋಗು ತ್ತೇನೆ.

ಎಫೆಸದವರಿಗೆ 4:7
ಆದರೆ ಕ್ರಿಸ್ತನು ಅನುಗ್ರಹಿಸಿದ ದಾನದ ಅಳತೆ ಗನುಸಾರವಾಗಿ ನಮ್ಮಲ್ಲಿ ಪ್ರತಿಯೊಬ್ಬನಿಗೆ ಕೃಪೆಯು ಕೊಡಲ್ಪಟ್ಟಿತು.

ಯೋಹಾನನು 17:4
ನಾನು ನಿನ್ನನ್ನು ಭೂಮಿಯ ಮೇಲೆ ಮಹಿಮೆಪಡಿಸಿದ್ದೇನೆ; ನೀನು ನನಗೆ ಕೊಟ್ಟ ಕೆಲಸವನ್ನು ನಾನು ಮುಗಿಸಿದ್ದೇನೆ;

ಯೋಹಾನನು 16:28
ನಾನು ತಂದೆಯ ಬಳಿಯಿಂದ ಹೊರಟು ಈ ಲೋಕಕ್ಕೆ ಬಂದಿದ್ದೇನೆ; ತಿರಿಗಿ ಈ ಲೋಕವನ್ನು ಬಿಟ್ಟು ತಂದೆಯ ಬಳಿಗೆ ಹೋಗುತ್ತೇನೆ ಅಂದನು.

ಯೋಹಾನನು 16:10
ನಾನು ನನ್ನ ತಂದೆಯ ಬಳಿಗೆ ಹೋಗುವದರಿಂದ ನೀವು ನನ್ನನ್ನು ಎಂದಿಗೂ ನೋಡದ ಕಾರಣ ನೀತಿಯ ವಿಷಯವಾಗಿಯೂ

ಇಬ್ರಿಯರಿಗೆ 12:2
ನಮ್ಮ ನಂಬಿಕೆಯನ್ನೂ ಹುಟ್ಟಿಸುವಾತನೂ ಅದನ್ನು ಪೂರೈಸುವಾತನೂ ಆಗಿ ರುವ ಯೇಸುವಿನ ಮೇಲೆ ದೃಷ್ಟಿಯಿಟ್ಟು ನಮ್ಮ ಮುಂದೆ ಇಟ್ಟಿರುವ ಓಟವನ್ನು ತಾಳ್ಮೆಯಿಂದ ಓಡೋಣ. ಆತನು ತನ್ನ ಮುಂದೆ ಇಟ್ಟಿದ ಸಂತೋಷಕ್ಕೋಸ್ಕರ ಶಿಲುಬೆ ಯನ್ನು ಸಹಿಸಿಕೊಂಡು ಅವಮಾನವನ್ನು ಅಲಕ್ಷ್ಯಮಾಡಿ ದೇವರ

ಇಬ್ರಿಯರಿಗೆ 1:3
ಈತನು ದೇವರ ಮಹಿಮೆಯ ಪ್ರಕಾಶವೂ ಆತನ ವ್ಯಕ್ತಿತ್ವದ ಪ್ರತಿರೂಪವೂ ತನ್ನ ಬಲವುಳ್ಳ ವಾಕ್ಯದಿಂದ ಸಮಸ್ತಕ್ಕೆ ಆಧಾರವೂ ಆಗಿದ್ದು ತಾನೇ ನಮ್ಮ ಪಾಪಗಳನ್ನು ತೊಳೆದ ಮೇಲೆ ಉನ್ನತದೊಳಗೆ ಮಹೋನ್ನತನ ಬಲ ಗಡೆಯಲ್ಲಿ ಕೂತುಕೊಂಡನು.

ಯೋಹಾನನು 14:4
ನಾನು ಎಲ್ಲಿಗೆ ಹೋಗುತ್ತೇನೆಂಬದು ನಿಮಗೆ ತಿಳಿದದೆ; ಮಾರ್ಗವೂ ನಿಮಗೆ ಗೊತ್ತಿದೆ ಅಂದನು.

ಯೋಹಾನನು 13:3
ತಂದೆಯು ತನ್ನ ಕೈಯಲ್ಲಿ ಎಲ್ಲವನ್ನೂ ಕೊಟ್ಟಿದ್ದಾನೆಂತಲೂ ತಾನು ದೇವರ ಬಳಿಯಿಂದ ಹೊರಟು ಬಂದಿದ್ದು ತಿರಿಗಿ ದೇವರ ಬಳಿಗೆ ಹೋಗುತ್ತೇನೆಂತಲೂ ಯೇಸು ತಿಳಿದು ಕೊಂಡು

ಯೋಹಾನನು 16:16
ಸ್ವಲ್ಪ ಕಾಲವಾದ ಮೇಲೆ ನೀವು ನನ್ನನ್ನು ನೋಡುವದಿಲ್ಲ; ತಿರಿಗಿ ಸ್ವಲ್ಪ ಕಾಲವಾದ ಮೇಲೆ ನೀವು ನನ್ನನ್ನು ನೋಡುವಿರಿ; ಯಾಕಂದರೆ ನಾನು ತಂದೆಯ ಬಳಿಗೆ ಹೋಗುತ್ತೇನೆ ಅಂದನು.

ಯೋಹಾನನು 14:28
ನಾನು ಹೋಗಿ ತಿರಿಗಿ ನಿಮ್ಮ ಬಳಿಗೆ ಬರುವದು ಹೇಗೆ ಎಂದು ನಾನು ನಿಮಗೆ ಹೇಳಿದ್ದನ್ನು ನೀವು ಕೇಳಿದ್ದೀರಿ; ನೀವು ನನ್ನನ್ನು ಪ್ರೀತಿಸಿದ್ದರೆ ನಾನು ನನ್ನ ತಂದೆಯ ಬಳಿಗೆ ಹೊಗುತ್ತೇನೆಂದು ಹೇಳಿದ್ದಕ್ಕೆ ಸಂತೋಷಪಡುತ್ತಿದ್ದಿರಿ; ನನ್ನ ತಂದೆಯು ನನಗಿಂತಲೂ ದೊಡ್ಡವನಾಗಿದ್ದಾನೆ.

ಯೋಹಾನನು 6:62
ಹಾಗಾದರೆ ಮನುಷ್ಯಕುಮಾರನು ತಾನು ಮೊದಲು ಇದ್ದಲ್ಲಿಗೆ ಏರಿಹೋಗುವದನ್ನು ನೀವು ನೋಡಿದರೆ ಏನನ್ನುವಿರಿ?

ಯೋಹಾನನು 17:13
ಈಗ ನಾನು ನಿನ್ನ ಬಳಿಗೆ ಬರು ತ್ತೇನೆ ನನ್ನ ಆನಂದವು ಅವರೊಳಗೆ ಈಡೇರುವಂತೆ ನಾನು ಲೋಕದಲ್ಲಿ ಈ ವಿಷಯಗಳನ್ನು ಮಾತನಾಡು ತ್ತೇನೆ.