2 Chronicles 35:6
ಪಸ್ಕವನ್ನು ವಧಿಸಿ ನಿಮ್ಮನ್ನು ಪರಿಶುದ್ಧ ಮಾಡಿ ಕೊಂಡು ಕರ್ತನು ಮೋಶೆಯ ಮುಖಾಂತರವಾಗಿ ಹೇಳಿದ ವಾಕ್ಯದ ಪ್ರಕಾರ ನಿಮ್ಮ ಸಹೋದರರು ಮಾಡುವ ಹಾಗೆ ಅವರನ್ನು ಸಿದ್ಧಮಾಡಿರಿ ಅಂದನು.
2 Chronicles 35:6 in Other Translations
King James Version (KJV)
So kill the passover, and sanctify yourselves, and prepare your brethren, that they may do according to the word of the LORD by the hand of Moses.
American Standard Version (ASV)
And kill the passover, and sanctify yourselves, and prepare for your brethren, to do according to the word of Jehovah by Moses.
Bible in Basic English (BBE)
And put the Passover lamb to death, and make yourselves holy, and make it ready for your brothers, so that the orders given by the Lord through Moses may be done.
Darby English Bible (DBY)
and slaughter the passover, and hallow yourselves, and prepare it for your brethren, that they may do according to the word of Jehovah through Moses.
Webster's Bible (WBT)
So kill the passover, and sanctify yourselves, and prepare your brethren, that they may do according to the word of the LORD by the hand of Moses.
World English Bible (WEB)
Kill the Passover, and sanctify yourselves, and prepare for your brothers, to do according to the word of Yahweh by Moses.
Young's Literal Translation (YLT)
and slaughter the passover-offering and sanctify yourselves, and prepare for your brethren, to do according to the word of Jehovah by the hand of Moses.'
| So kill | וְשַֽׁחֲט֖וּ | wĕšaḥăṭû | veh-sha-huh-TOO |
| the passover, | הַפָּ֑סַח | happāsaḥ | ha-PA-sahk |
| yourselves, sanctify and | וְהִתְקַדְּשׁוּ֙ | wĕhitqaddĕšû | veh-heet-ka-deh-SHOO |
| and prepare | וְהָכִ֣ינוּ | wĕhākînû | veh-ha-HEE-noo |
| your brethren, | לַֽאֲחֵיכֶ֔ם | laʾăḥêkem | la-uh-hay-HEM |
| do may they that | לַֽעֲשׂ֥וֹת | laʿăśôt | la-uh-SOTE |
| according to the word | כִּדְבַר | kidbar | keed-VAHR |
| Lord the of | יְהוָ֖ה | yĕhwâ | yeh-VA |
| by the hand | בְּיַד | bĕyad | beh-YAHD |
| of Moses. | מֹשֶֽׁה׃ | mōše | moh-SHEH |
Cross Reference
2 ಪೂರ್ವಕಾಲವೃತ್ತಾ 29:5
ಲೇವಿಯರೇ, ನನ್ನ ಮಾತನ್ನು ಕೇಳಿರಿ; ನೀವು ನಿಮ್ಮನ್ನು ಪರಿಶುದ್ಧ ಮಾಡಿಕೊಂಡು ನಿಮ್ಮ ಪಿತೃಗಳ ಕರ್ತನಾದ ದೇವರ ಮನೆಯನ್ನು ಪರಿಶುದ್ಧಮಾಡಿ ಅದರ ಮೈಲಿಗೆಯನ್ನು ಪರಿಶುದ್ಧ ಸ್ಥಾನದಿಂದ ತೆಗೆದುಹಾಕಿರಿ.
2 ಪೂರ್ವಕಾಲವೃತ್ತಾ 29:15
ಇವರು ತಮ್ಮ ಸಹೋ ದರರನ್ನು ಕೂಡಿಸಿ ತಮ್ಮನ್ನು ಪರಿಶುದ್ಧ ಮಾಡಿಕೊಂಡು ಕರ್ತನ ವಾಕ್ಯದಿಂದ ಅರಸನ ಆಜ್ಞೆಯ ಪ್ರಕಾರ ಕರ್ತನ ಆಲಯವನ್ನು ಶುಚಿಮಾಡಲು ಬಂದರು.
ಇಬ್ರಿಯರಿಗೆ 9:13
ಹೋತ ಹೋರಿಗಳ ರಕ್ತವೂ ಹೊಲೆಯಾದವರ ಮೇಲೆ ಚಿಮು ಕಿಸುವ ಕಡಸಿನ ಬೂದಿಯೂ ಶರೀರ ವನ್ನು ಶುಚಿಮಾಡಿ ಪವಿತ್ರ ಮಾಡುವದಾದರೆ
ಯೋವೇಲ 2:16
ಜನರನ್ನು ಕೂಡಿಸಿರಿ, ಸಭೆಯನ್ನು ಪರಿಶುದ್ಧಮಾಡಿರಿ; ಹಿರಿಯರನ್ನು ಒಟ್ಟುಗೂಡಿಸಿರಿ, ಮಕ್ಕಳನ್ನೂ ಮೊಲೆ ಕೂಸುಗಳನ್ನೂ ಕೂಡಿಸಿರಿ; ಮದುಮಗನು ತನ್ನ ಕೊಠಡಿಯೊಳ ಗಿಂದಲೂ ಮದುಮಗಳು ತನ್ನ ಅರೆಯೊಳಗಿಂದಲೂ ಹೊರಡಲಿ.
ಕೀರ್ತನೆಗಳು 51:7
ಹಿಸ್ಸೋಪ್‌ನಿಂದ ನನ್ನನ್ನು ತೊಳೆ; ಆಗ ನಾನು ಶುಚಿಯಾಗುವೆನು. ನನ್ನನ್ನು ತೊಳೆ, ಆಗ ಹಿಮಕ್ಕಿಂತ ಬಿಳುಪಾಗುವೆನು.
ಯೋಬನು 1:5
ಔತಣದ ದಿನಗಳು ಮುಗಿದ ಬಳಿಕ ಯೋಬನು ಅವರನ್ನು ಕರೆಕಳುಹಿಸಿ ಅವರನ್ನು ಶುದ್ಧಿ ಮಾಡಿ ಬೆಳಿಗ್ಗೆ ಎದ್ದು ಅವರೆಲ್ಲರ ಲೆಕ್ಕದ ಪ್ರಕಾರ ದಹನಬಲಿಗಳನ್ನು ಅರ್ಪಿಸುತ್ತಿದ್ದನು; ಯೋಬನುಒಂದುವೇಳೆ ನನ್ನ ಕುಮಾರರು ಪಾಪ ಮಾಡಿ ತಮ್ಮ ಹೃದಯಗಳಲ್ಲಿ ದೇವರನ್ನು ಶಪಿಸಿರಬಹುದು ಅಂದು ಕೊಂಡನು. ಹೀಗೆಯೇ ಯೋಬನು ಕ್ರಮವಾಗಿ ಮಾಡುತ್ತಿದ್ದನು.
ಎಜ್ರನು 6:20
ಯಾಜಕರೂ ಲೇವಿಯರ ಕೂಡ ಶುದ್ಧಮಾಡಿ ಕೊಂಡಿದ್ದರು; ಅವರೆಲ್ಲರು ಶುಚಿಯಾಗಿದ್ದು ಸೆರೆಯ ಸಮಸ್ತ ಮಕ್ಕಳಿಗೋಸ್ಕರವೂ ಯಾಜಕರಾದ ತಮ್ಮ ಸಹೋದರರಿಗೋಸ್ಕರವೂ ತಮಗೋಸ್ಕರವೂ ಪಸ್ಕ ವನ್ನು ವಧಿಸಿದರು.
2 ಪೂರ್ವಕಾಲವೃತ್ತಾ 30:15
ಎರಡನೇ ತಿಂಗಳ ಹದಿನಾಲ್ಕನೇ ದಿವಸದಲ್ಲಿ ಪಸ್ಕ ವನ್ನು ವಧಿಸಿದರು. ಯಾಜಕರೂ ಲೇವಿಯರೂ ಲಜ್ಜೆ ಯನ್ನು ಹೊಂದಿ ತಮ್ಮನ್ನು ಪರಿಶುದ್ಧ ಮಾಡಿಕೊಂಡು ಕರ್ತನ ಮನೆಯೊಳಗೆ ದಹನಬಲಿಗಳನ್ನು ತಂದರು.
2 ಪೂರ್ವಕಾಲವೃತ್ತಾ 30:3
ಯಾಕಂದರೆ ಯಾಜಕರು ತಮ್ಮನ್ನು ತಕ್ಕಹಾಗೆ ಪರಿಶುದ್ಧಮಾಡಿಕೊಳ್ಳದೆ ಇದ್ದದ್ದ ರಿಂದಲೂ ಜನರು ಯೆರೂಸಲೇಮಿಗೆ ಕೂಡಿ ಬಾರದೆ ಇದ್ದದ್ದರಿಂದಲೂ ಆ ಕಾಲದಲ್ಲಿ ಆಚರಿಸಲಾರದೆ ಇದ್ದರು.
2 ಪೂರ್ವಕಾಲವೃತ್ತಾ 29:34
ಯಾಜಕರು ಸ್ವಲ್ಪ ಜನರಾಗಿದ್ದು ದಹನಬಲಿಗಳನ್ನೆಲ್ಲಾ ಸುಲಿಯಲಾರದೆ ಇದ್ದದ್ದರಿಂದ ಕೆಲಸವು ತೀರುವ ವರೆಗೂ ಯಾಜಕರು ತಮ್ಮನ್ನು ಪರಿಶುದ್ಧಮಾಡಿಕೊಳ್ಳುವ ವರೆಗೂ ಲೇವಿ ಯರಾದ ಅವರ ಸಹೋದರರು ಅವರಿಗೆ ಸಹಾಯ ಮಾಡುತ್ತಿದ್ದರು. ಯಾಕಂದರೆ ತಮ್ಮನ್ನು ಪರಿಶುದ್ಧಮಾಡಿ ಕೊಳ್ಳಲು ಯಾಜಕರಿಗಿಂತ ಲೇವಿಯರು ಯಥಾರ್ಥ ಹೃದಯವುಳ್ಳವರಾಗಿದ್ದರು.
ಅರಣ್ಯಕಾಂಡ 19:11
ಮನುಷ್ಯನ ಹೆಣವನ್ನು ಮುಟ್ಟಿದವನು ಏಳು ದಿನಗಳವರೆಗೆ ಅಶುದ್ಧನಾಗಿರಬೇಕು.
ವಿಮೋಚನಕಾಂಡ 19:15
ಅವನು ಜನರಿಗೆ--ಮೂರನೆಯ ದಿನ ಕ್ಕಾಗಿ ಸಿದ್ಧರಾಗಿರ್ರಿ, ನೀವು ನಿಮ್ಮ ಹೆಂಡತಿಯರ ಬಳಿಗೆ ಸೇರದೆ ಇರ್ರಿ ಅಂದನು.
ವಿಮೋಚನಕಾಂಡ 19:10
ಆಗ ಕರ್ತನು ಮೋಶೆಗೆ--ಜನರ ಬಳಿಗೆ ಹೋಗಿ ಈ ಹೊತ್ತೂ ನಾಳೆಯೂ ಅವರನ್ನು ಶುದ್ಧಮಾಡು, ಅವರು ತಮ್ಮ ವಸ್ತ್ರಗಳನ್ನು ತೊಳಕೊಳ್ಳಲಿ.
ವಿಮೋಚನಕಾಂಡ 12:21
ಆಗ ಮೋಶೆಯು ಇಸ್ರಾಯೇಲಿನ ಎಲ್ಲಾ ಹಿರಿಯ ರನ್ನು ಕರೆದು ಅವರಿಗೆ--ನಿಮ್ಮ ಗೋತ್ರಗಳ ಪ್ರಕಾರ ಕುರಿಗಳನ್ನು ತೆಗೆದುಕೊಂಡು ಪಸ್ಕವನ್ನು (ಕುರಿಯನ್ನು) ಕೊಯ್ಯಿರಿ.
ವಿಮೋಚನಕಾಂಡ 12:6
ಅದನ್ನು ಈ ತಿಂಗಳಿನ ಹದಿನಾಲ್ಕನೆಯ ದಿನದ ವರೆಗೆ ಇಟ್ಟುಕೊಳ್ಳಬೇಕು. ತರುವಾಯ ಸಾಯಂ ಕಾಲದಲ್ಲಿ ಇಸ್ರಾಯೇಲಿನ ಕೂಟದ ಇಡೀ ಸಭೆಯು ಅದನ್ನು ಕೊಲ್ಲಬೇಕು.
ಆದಿಕಾಂಡ 35:2
ಆಗ ಯಾಕೋಬನು ತನ್ನ ಮನೆಯವರಿಗೂ ತನ್ನ ಸಂಗಡ ಇದ್ದವರೆಲ್ಲರಿಗೂ--ನಿಮ್ಮ ಮಧ್ಯದಲ್ಲಿರುವ ಅನ್ಯದೇವ ರುಗಳನ್ನು ತೆಗೆದುಹಾಕಿ ಶುದ್ಧರಾಗಿರಿ; ನೀವು ನಿಮ್ಮ ಬಟ್ಟೆಗಳನ್ನು ಬದಲಾಯಿಸಿರಿ;