Isaiah 1:29 in Kannada

Kannada Kannada Bible Isaiah Isaiah 1 Isaiah 1:29

Isaiah 1:29
ನೀವು ಇಷ್ಟ ಪಟ್ಟ ಏಲಾಮರಗಳ ನಿಮಿತ್ತ ನಾಚಿಕೊಳ್ಳುವರು, ಆರಿಸಿಕೊಂಡ ವನಗಳ ವಿಷಯವಾಗಿ ಲಜ್ಜೆಪಡುವಿರಿ.

Isaiah 1:28Isaiah 1Isaiah 1:30

Isaiah 1:29 in Other Translations

King James Version (KJV)
For they shall be ashamed of the oaks which ye have desired, and ye shall be confounded for the gardens that ye have chosen.

American Standard Version (ASV)
For they shall be ashamed of the oaks which ye have desired, and ye shall be confounded for the gardens that ye have chosen.

Bible in Basic English (BBE)
For you will be put to shame because of the trees of your desire, and because of the gardens of your pleasure.

Darby English Bible (DBY)
For they shall be ashamed of the terebinths that ye have desired, and ye shall blush for the gardens that ye have chosen.

World English Bible (WEB)
For they shall be ashamed of the oaks which you have desired, And you shall be confounded for the gardens that you have chosen.

Young's Literal Translation (YLT)
For `men' are ashamed because of the oaks That ye have desired, And ye are confounded because of the gardens That ye have chosen.

For
כִּ֣יkee
they
shall
be
ashamed
יֵבֹ֔שׁוּyēbōšûyay-VOH-shoo
oaks
the
of
מֵאֵילִ֖יםmēʾêlîmmay-ay-LEEM
which
אֲשֶׁ֣רʾăšeruh-SHER
ye
have
desired,
חֲמַדְתֶּ֑םḥămadtemhuh-mahd-TEM
confounded
be
shall
ye
and
וְתַ֨חְפְּר֔וּwĕtaḥpĕrûveh-TAHK-peh-ROO
for
the
gardens
מֵהַגַּנּ֖וֹתmēhaggannôtmay-ha-ɡA-note
that
אֲשֶׁ֥רʾăšeruh-SHER
ye
have
chosen.
בְּחַרְתֶּֽם׃bĕḥartembeh-hahr-TEM

Cross Reference

Isaiah 66:17
ತೋಟಗಳ ಮಧ್ಯದಲ್ಲಿ ಒಂದು ಮರದ ಹಿಂದೆ ತಮ್ಮನ್ನು ಪರಿಶುದ್ಧ ಮಾಡಿ ಕೊಂಡು ಪವಿತ್ರಮಾಡಿಕೊಳ್ಳುವವರೂ ಹಂದಿ ಮಾಂಸವನ್ನೂ ಅಸಹ್ಯವಾದದ್ದನ್ನೂ ಇಲಿಯನ್ನೂ ತಿನ್ನು ವವರೂ ಒಟ್ಟಾಗಿ ದಹಿಸಲ್ಪಡುವರು ಎಂದು ಕರ್ತನು ಹೇಳುತ್ತಾನೆ.

Isaiah 65:3
ಇವರು ಯಾವಾಗಲೂ ನನ್ನ ಮುಖದೆ ದುರಿಗೆ ನನಗೆ ಕೋಪೋದ್ರೇಕವನ್ನು ಎಬ್ಬಿಸುವ ಜನರು; ತೋಟಗಳಲ್ಲಿ ಬಲಿ ಅರ್ಪಿಸಿ, ಇಟ್ಟಿಗೆಯ ಯಜ್ಞವೇದಿಯ ಮೇಲೆ ಧೂಪ ಸುಡುವರು;

Isaiah 57:5
ಹಸಿರಾದ ಏಲಾ ಮರಗಳ ಕೆಳಗೆ ವಿಗ್ರಹಗಳಿಂದ ಮದವೇರಿಸಿ ಕೊಂಡು ಹಳ್ಳಗಳಲ್ಲಿ ಬಂಡೆಗಳ ಬಿರುಕುಗಳಲ್ಲಿ ಮಕ್ಕಳನ್ನು ಕೊಂದುಹಾಕುವ ನೀವು ದ್ರೋಹದ ಮಕ್ಕಳೂ ಸುಳ್ಳಿನ ಸಂತತಿಯೂ ಅಲ್ಲವೋ?

Hosea 4:13
ಅವರು ಬೆಟ್ಟಗಳ ತುದಿಯಲ್ಲಿ ಬಲಿಗಳನ್ನು ಅರ್ಪಿಸು ತ್ತಾರೆ; ಗುಡ್ಡಗಳ ಮೇಲೆ ಧೂಪವನ್ನು ಸುಡುತ್ತಾರೆ. ಅಲ್ಲೋನ್‌, ಲಿಬ್ನೆ, ಏಲಾ ಮರಗಳ ಕೆಳಗೆ ಅವುಗಳ ನೆರಳು ಚೆನ್ನಾಗಿರುವದರಿಂದ ಹಾಗೆ ಮಾಡುತ್ತಾರೆ; ಆದದರಿಂದ ನಿಮ್ಮ ಕುಮಾರ್ತೆಯರು ವ್ಯಭಿಚಾರ ಮಾಡುವರು; ನಿಮ್ಮ ನಿಮ್ಮ ಹೆಂಡತಿಯರು ವ್ಯಭಿಚಾರ ಮಾಡುವರು.

Romans 6:21
ನೀವು ಆಗ ಮಾಡಿ ದವುಗಳಿಂದ ನಿಮಗುಂಟಾದ ಫಲವೇನು? ಈಗ ಅವುಗಳ ವಿಷಯದಲ್ಲಿ ನಿಮಗೆ ನಾಚಿಕೆಯುಂಟಷ್ಟೆ; ಅವುಗಳ ಅಂತ್ಯವು ಮರಣವೇ.

Hosea 14:8
ಎಫ್ರಾಯಾಮೇ--ನಾನು ವಿಗ್ರಹಗಳೊಂದಿಗೆ ಇನ್ನು ಏನು ಮಾಡಬೇಕಾಗಿದೆ? ನಾನು ಅವನನ್ನು ಕೇಳಿದ್ದೇನೆ ಮತ್ತು ನಾನು ಅವನನ್ನು ದೃಷ್ಟಿಸಿದ್ದೇನೆ. ನಾನು ಹಸುರಾಗಿ ಬೆಳೆದಿರುವ ತುರಾಯಿ ಮರದಂತಿದ್ದೇನೆ. ನಿನ್ನ ಫಲವು ನನ್ನಿಂದ ಕಂಡುಕೊಂಡಿ ಎಂದು ಅಂದುಕೊಳ್ಳುವದು.

Hosea 14:3
ಅಶ್ಯೂರ್ಯವು ನಮ್ಮನ್ನು ರಕ್ಷಿಸುವದಿಲ್ಲ; ನಾವು ಕುದುರೆಗಳ ಮೇಲೆ ಸವಾರಿ ಮಾಡುವದಿಲ್ಲ; ಇಲ್ಲವೆ ನಮ್ಮ ಕೈಗಳಿಂದ ಆದ ಕೆಲಸಕ್ಕೆ--ನೀವು ನಮ್ಮ ದೇವರು ಗಳೇ ಎಂದು ನಾವು ಇನ್ನು ಮುಂದೆ ಹೇಳುವದೇ ಇಲ್ಲ; ನಿನ್ನಲ್ಲಿ ತಂದೆಗಳಿಲ್ಲದವರಿಗೆ ಕರುಣೆಯುಂಟು ಎಂದು ಆತನಿಗೆ ಹೇಳಿರಿ.

Ezekiel 36:31
ಆಮೇಲೆ ನೀವು ನಿಮ್ಮ ದುರ್ಮಾರ್ಗ ದುರಾಚಾರಗಳನ್ನು ಜ್ಞಾಪಕಕ್ಕೆ ತಂದುಕೊಂಡು ನಿಮ್ಮ ಅಪರಾಧಗಳ ಮತ್ತು ಅಸಹ್ಯ ಕಾರ್ಯಗಳ ನಿಮಿತ್ತ ನಿಮಗೆ ನೀವೇ ಹೇಸಿಕೊಳ್ಳುವಿರಿ.

Ezekiel 16:63
ನಾನು ನಿನ್ನ ದುಷ್ಕೃತ್ಯಗಳನ್ನೆಲ್ಲಾ ಕ್ಷಮಿಸಿಬಿಟ್ಟ ಮೇಲೆ ನೀನು ಅವು ಗಳನ್ನು ಜ್ಞಾಪಕಕ್ಕೆ ತಂದುಕೊಂಡು ನಿನ್ನ ಅವಮಾನದ ನಿಮಿತ್ತ ಇನ್ನು ನೀನು ಬಾಯಿ ತೆರೆಯಲೇಬಾರದೆಂದು ನಿನ್ನ ದೇವರಾದ ಕರ್ತನು ಹೇಳುತ್ತಾನೆ.

Ezekiel 6:13
ಆಮೇಲೆ ನೀವು ಅವರಲ್ಲಿ ಹತವಾದ ಮನುಷ್ಯರು ಅವರಲ್ಲಿರುವಾಗ ಅವರ ವಿಗ್ರಹಗಳ ಮಧ್ಯದಲ್ಲಿ ಅವರ ಯಜ್ಞವೇದಿಗಳ ಸುತ್ತ ಲಾಗಿಯೂ ಎತ್ತರವಾದ ಪ್ರತಿಯೊಂದು ಗುಡ್ಡದ ಮೇಲೆಯೂ ಸಮಸ್ತ ಪರ್ವತಗಳ ತುದಿಯಲ್ಲಿಯ ಪ್ರತಿಯೊಂದು ಹಸುರಾದ ಮರದ ಕೆಳಗೂ ಪ್ರತಿ ಯೊಂದು ದಪ್ಪವಾದ ಓಕ್‌ ಮರದ ಕೆಳಗಡೆಯೂ ಅವರು ತಮ್ಮ ವಿಗ್ರಹಗಳಿಗೆಲ್ಲಾ ಸುವಾಸನೆಯನ್ನು ಅರ್ಪಿಸುವದರಲ್ಲಿಯೂ ನಾನೇ ಕರ್ತನೆಂದು ತಿಳಿಯು ವಿರಿ

Jeremiah 3:6
ಕರ್ತನು ಅರಸನಾದ ಯೋಷೀಯನ ದಿವಸಗಳಲ್ಲಿ ನನಗೆ ಹೇಳಿದ್ದೇನಂದರೆ--ಹಿಂದಿರುಗಿದ ಇಸ್ರಾ ಯೇಲು ಮಾಡಿದ್ದನ್ನು ನೀನು ನೋಡಿದ್ದಿಯೋ? ಅವಳು ಒಂದೊಂದು ಎತ್ತರವಾದ ಬೆಟ್ಟದ ಮೇಲೆಯೂ ಒಂದೊಂದು ಹಸುರಾದ ಮರದ ಕೆಳಗೂ ಹೋಗಿ ಸೂಳೆತನ ಮಾಡಿದ್ದಾಳೆ.

Jeremiah 2:20
ಪೂರ್ವದಲ್ಲಿ ನಾನು ನಿನ್ನ ನೊಗವನ್ನು ಮುರಿದು ನಿನ್ನ ಬಂಧನಗಳನ್ನು ಹರಿದುಬಿಟ್ಟೆನು; ನೀನು--ನಾನು ವಿಾರುವದಿಲ್ಲ ಎಂದು ನೀನು ಹೇಳಿದಿ; ಆದರೆ ಒಂದೊಂದು ಎತ್ತರವಾದ ಗುಡ್ಡದ ಮೇಲೆಯೂ ಒಂದೊಂದು ಹಸುರಾದ ಮರದ ಕೆಳಗೂ ನೀನು ಸೂಳೆಯಾಗಿ ಅಲೆದಾಡುತ್ತಿ.

Isaiah 45:16
ಅವರೆಲ್ಲರೂ ನಾಚಿಕೆಪಟ್ಟು ನಿಂದಿತರಾಗುವರು. ವಿಗ್ರಹಗಳನ್ನು ಮಾಡುವವರು ಒಟ್ಟಾಗಿ ಗಲಿಬಿಲಿಗೆ ಒಳಗಾಗುವರು.

Isaiah 31:7
ನೀವು ನಿಮ್ಮ ಸ್ವಂತ ಕೈಗಳಿಂದ ಪಾಪಕ್ಕೋ ಸ್ಕರ ಮಾಡಿದ ಬೆಳ್ಳಿಬಂಗಾರದ ವಿಗ್ರಹಗಳನ್ನು ಆ ದಿನದಲ್ಲಿ ಪ್ರತಿಯೊಬ್ಬನು ಬಿಸಾಡಿಬಿಡುವನು.

Isaiah 30:22
ಕೆತ್ತಿದ ನಿಮ್ಮ ವಿಗ್ರಹಗಳ ಬೆಳ್ಳಿಯ ಕವಚಗಳನ್ನು ಎರಕದ ನಿಮ್ಮ ವಿಗ್ರಹಗಳ ಬಂಗಾರದ ಹೊದಿಕೆಯನ್ನು ನೀವು ಹೊಲಸುಮಾಡಿ ಆ ವಿಗ್ರಹಕ್ಕೆ ತೊಲಗಿಹೋಗಿರಿ ಎಂದು ಹೊಲೆಯ ಬಟ್ಟೆಯಂತೆ ಬಿಸಾಡಿಬಿಡುವಿರಿ.