Galatians 2:1
ಹದಿನಾಲ್ಕು ವರುಷಗಳಾದ ಮೇಲೆ ನಾನು ತೀತನನ್ನು ಕರೆದುಕೊಂಡು ಬಾರ್ನಬನ ಜೊತೆಯಲ್ಲಿ ತಿರಿಗಿ ಯೆರೂಸಲೇಮಿಗೆ ಹೋದೆನು.
Galatians 2:1 in Other Translations
King James Version (KJV)
Then fourteen years after I went up again to Jerusalem with Barnabas, and took Titus with me also.
American Standard Version (ASV)
Then after the space of fourteen years I went up again to Jerusalem with Barnabas, taking Titus also with me.
Bible in Basic English (BBE)
Then after the space of fourteen years I went up again to Jerusalem with Barnabas, taking Titus with me.
Darby English Bible (DBY)
Then after a lapse of fourteen years I went up again to Jerusalem with Barnabas, taking Titus also with [me];
World English Bible (WEB)
Then after a period of fourteen years I went up again to Jerusalem with Barnabas, taking Titus also with me.
Young's Literal Translation (YLT)
Then, after fourteen years again I went up to Jerusalem with Barnabas, having taken with me also Titus;
| Then | Ἔπειτα | epeita | APE-ee-ta |
| fourteen | διὰ | dia | thee-AH |
| years | δεκατεσσάρων | dekatessarōn | thay-ka-tase-SA-rone |
| after | ἐτῶν | etōn | ay-TONE |
| I went up | πάλιν | palin | PA-leen |
| again | ἀνέβην | anebēn | ah-NAY-vane |
| to | εἰς | eis | ees |
| Jerusalem | Ἱεροσόλυμα | hierosolyma | ee-ay-rose-OH-lyoo-ma |
| with | μετὰ | meta | may-TA |
| Barnabas, | Βαρναβᾶ | barnaba | vahr-na-VA |
| and took with | συμπαραλαβὼν | symparalabōn | syoom-pa-ra-la-VONE |
| Titus | καὶ | kai | kay |
| me also. | Τίτον· | titon | TEE-tone |
Cross Reference
Titus 1:4
ನಮ್ಮಲ್ಲಿ ಹುದುವಾಗಿರುವ ನಂಬಿಕೆ ಗನುಸಾರವಾಗಿ ನನ್ನ ನಿಜಕುಮಾರನಾದ ತೀತನಿಗೆ-- ತಂದೆಯಾದ ದೇವರಿಂದಲೂ ನಮ್ಮ ರಕ್ಷಕನೂ ಕರ್ತನೂ ಆಗಿರುವ ಯೇಸು ಕ್ರಿಸ್ತನಿಂದಲೂ ನಿನಗೆ ಕೃಪೆಯೂ ಕನಿಕರವೂ ಶಾಂತಿಯೂ ಆಗಲಿ.
Galatians 2:13
ಇದಲ್ಲದೆ ಮಿಕ್ಕಾದ ಯೆಹೂದ್ಯರೂ ಅವನೊಂದಿಗೆ ಸೇರಿ ಹಾಗೆಯೇ ಕಪಟಮಾಡಿದರು; ಹೀಗೆ ಬಾರ್ನಬನೂ ಅವರ ಕಪಟದ ಸೆಳವಿಗೆ ಬಿದ್ದನು.
Galatians 2:3
ನನ್ನ ಜೊತೆಯಲ್ಲಿದ್ದ ತೀತನು ಗ್ರೀಕನಾಗಿದ್ದರೂ ಅವನಿಗೆ ಸುನ್ನತಿಯಾಗಬೇಕೆಂದು ಯಾರೂ ಬಲಾತ್ಕಾರ ಮಾಡ ಲಿಲ್ಲ.
Colossians 4:10
ನನ್ನ ಜೊತೆಸೆರೆಯವನಾದ ಅರಿಸ್ತಾರ್ಕನೂ ಬಾರ್ನಬನ ಸಹೋದರಿಯ ಮಗನಾದ ಮಾರ್ಕನೂ (ಮಾರ್ಕನ) ವಿಷಯದಲ್ಲಿ ನೀವು ಅಪ್ಪಣೆ ಹೊಂದಿದ್ದೀರಲ್ಲಾ; ಅವನು ನಿಮ್ಮ ಬಳಿಗೆ ಬಂದರೆ ಸೇರಿಸಿಕೊಳ್ಳಿರಿ.
Galatians 1:18
ಮೂರು ವರುಷಗಳಾದ ಮೇಲೆ ಪೇತ್ರನನ್ನು ನೋಡುವದಕ್ಕಾಗಿ ಯೆರೂಸಲೇಮಿಗೆ ಹೋಗಿ ಅವನ ಬಳಿಯಲ್ಲಿ ಹದಿನೈದು ದಿವಸ ಇದ್ದೆನು.
2 Corinthians 8:23
ತೀತನನ್ನು ಕುರಿತು ಕೇಳುತ್ತೀರೋ, ಅವನು ನನ್ನ ಪಾಲುಗಾರನೂ ನಿಮ್ಮ ವಿಷಯವಾಗಿ ನನಗೆ ಜೊತೆ ಸಹಕಾರಿಯೂ ಆಗಿದ್ದಾನೆ; ನಮ್ಮ ಸಹೋದರರನ್ನು ಕುರಿತು ಕೇಳುತ್ತೀರೋ, ಅವರು ಸಭೆಗಳ ಸೇವಕರೂ ಕ್ರಿಸ್ತನಮಹಿಮೆಯೂ ಆಗಿದ್ದಾರೆ.
2 Corinthians 8:16
ಆದರೆ ನಿಮ್ಮ ವಿಷಯವಾಗಿ ಅದೇ ಹಿತಚಿಂತನೆ ಯನ್ನು ದೇವರು ತೀತನ ಹೃದಯದಲ್ಲಿ ಹುಟ್ಟಿಸಿದ್ದಕ್ಕಾಗಿ ದೇವರಿಗೆ ಸ್ತೋತ್ರವಾಗಲಿ.
1 Corinthians 9:6
ಇಲ್ಲವೆ ಕೆಲಸಮಾಡದೆ ಇರುವದಕ್ಕೆ ನನಗೂ ಬಾರ್ನಬನಿಗೂ ಮಾತ್ರ ಅಧಿಕಾರವಿಲ್ಲವೇ?
Acts 15:36
ಕೆಲವು ದಿವಸಗಳಾದ ಮೇಲೆ ಪೌಲನು ಬಾರ್ನಬನಿಗೆ--ನಾವು ಕರ್ತನ ವಾಕ್ಯವನ್ನು ಸಾರಿದ ಎಲ್ಲಾ ಪಟ್ಟಣಗಳಿಗೆ ತಿರಿಗಿ ಹೋಗಿ ಅಲ್ಲಿರುವ ಸಹೋದರರು ಹೇಗಿದ್ದಾರೆಂದು ನೋಡೋಣ ಬಾ ಎಂದು ಹೇಳಿದನು.
Acts 15:25
ನಾವು ಒಮ್ಮನ ಸ್ಸಾಗಿ ಸೇರಿಬಂದು ನಮ್ಮ ಕರ್ತನಾದ ಯೇಸು ಕ್ರಿಸ್ತನ ಹೆಸರಿನ ನಿಮಿತ್ತ ಜೀವದ ಹಂಗನ್ನು ತೊರೆದವರಾಗಿರುವ
Acts 15:2
ಆದದರಿಂದ ಅವರ ಮತ್ತು ಪೌಲ ಬಾರ್ನಬರ ಮಧ್ಯೆ ದೊಡ್ಡ ಭಿನ್ನಾಭಿ ಪ್ರಾಯವೂ ವಾಗ್ವಾದವೂ ಉಂಟಾದಾಗ ಪೌಲ ಬಾರ್ನಬರೂ ಅವರಲ್ಲಿ ಬೇರೆ ಕೆಲವರೂ ಈ ಪ್ರಶ್ನೆಗಾಗಿ ಯೆರೂಸಲೇಮಿನಲ್ಲಿದ್ದ ಅಪೊಸ್ತಲರ ಮತ್ತು ಹಿರಿಯರ ಬಳಿಗೆ ಹೋಗಬೇಕೆಂದು ಅವರು ನಿರ್ಧರಿಸಿದರು.
Acts 14:12
ಅವರು ಬಾರ್ನಬನನ್ನು ೃಹಸ್ಪತಿ ಎಂದೂ ಪೌಲನು ಮುಖ್ಯ ಪ್ರಸಂಗಿಯಾಗಿದ್ದರಿಂದ ಬುಧನೆಂದೂ ಕರೆದರು;
Acts 13:50
ಆದರೆ ಭಕ್ತಿಯುಳ್ಳ ಮತ್ತು ಗೌರವವುಳ್ಳ ಸ್ತ್ರೀಯರನ್ನೂ ಪಟ್ಟಣದ ಪ್ರಮುಖರನ್ನೂ ಯೆಹೂದ್ಯರು ಪ್ರೇರಿಸಿ ಪೌಲ ಬಾರ್ನಬರಿಗೆ ವಿರೋಧವಾಗಿ ಹಿಂಸೆ ಯನ್ನೆಬ್ಬಿಸಿ ತಮ್ಮ ಮೇರೆಗಳಿಂದ ಅವರನ್ನು ಅಟ್ಟಿಬಿಟ್ಟರು.
Acts 13:2
ಇವರು ಕರ್ತನನ್ನು ಸೇವಿಸುತ್ತಾ ಉಪವಾಸ ಮಾಡುತ್ತಾ ಇದ್ದಾಗ ಪವಿ ತ್ರಾತ್ಮನು--ನಾನು ಬಾರ್ನಬ ಸೌಲರನ್ನು ಕರೆದ ಕೆಲಸಕ್ಕೆ ನನಗಾಗಿ ಅವರನ್ನು ಪ್ರತ್ಯೇಕಿಸಿರಿ ಎಂದು ಹೇಳಿದನು.
Acts 12:25
ಬಾರ್ನಬ ಸೌಲರು ತಮ್ಮ ಸೇವೆ ತೀರಿಸಿಕೊಂಡು ಮಾರ್ಕನೆನಿಸಿಕೊಳ್ಳುವ ಯೋಹಾನ ನನ್ನು ಕರಕೊಂಡು ಯೆರೂಸಲೇಮಿನಿಂದ ಹಿಂತಿರುಗಿ ಬಂದರು.
Acts 11:30
ಹಾಗೆಯೇ ಮಾಡಿ ಅದನ್ನು ಬಾರ್ನಬ ಸೌಲರ ಕೈಯಿಂದ ಸಭೆಯ ಹಿರಿಯರಿಗೆ ಕಳುಹಿಸಿದರು.
Acts 11:25
ತರುವಾಯ ಬಾರ್ನಬನು ಸೌಲನನ್ನು ಹುಡುಕುವದಕ್ಕಾಗಿ ತಾರ್ಸಕ್ಕೆ ಹೊರಟುಹೊಗಿ
Acts 4:36
ಅಪೊಸ್ತಲರಿಂದ ಬಾರ್ನಬನೆಂದು ಅಡ್ಡ ಹೆಸರು ಹೊಂದಿದ ಕುಪ್ರ ದೇಶದ ಲೇವಿಯನಾದ ಯೋಸೇಫನೆಂಬವನು (ಬಾರ್ನಬ ಅಂದರೆ ಆದರ ಣೆಯ ಮಗನು)