Skip to content
CHRIST SONGS .IN
TAMIL CHRISTIAN SONGS .IN
  • Lyrics
  • Chords
  • Bible
  • /
  • A
  • B
  • C
  • D
  • E
  • F
  • G
  • H
  • I
  • J
  • K
  • L
  • M
  • N
  • O
  • P
  • Q
  • R
  • S
  • T
  • U
  • V
  • W
  • X
  • Y
  • Z

Index
  • A
  • B
  • C
  • D
  • E
  • F
  • G
  • H
  • I
  • J
  • K
  • L
  • M
  • N
  • O
  • P
  • Q
  • R
  • S
  • T
  • U
  • V
  • W
  • X
  • Y
  • Z
2 Corinthians 3 KJV ASV BBE DBY WBT WEB YLT

2 Corinthians 3 in Kannada WBT Compare Webster's Bible

2 Corinthians 3

1 ನಮ್ಮನ್ನು ನಾವೇ ತಿರಿಗಿ ಹೊಗಳಿಕೊಳ್ಳು ವದಕ್ಕೆ ಪ್ರಾರಂಭಿಸುತ್ತೇವೋ? ಇಲ್ಲವೆ ಕೆಲವರಿಗೆ ಬೇಕಾಗಿರುವ ಪ್ರಕಾರ ನಿಮಗೆ ತೋರಿಸತಕ್ಕ ಯೋಗ್ಯತಾ ಪತ್ರಗಳು ನಮಗೆ ಅಗತ್ಯವೋ? ಅಥವಾ ಅಂಥ ಪತ್ರಗಳನ್ನು ನಿಮ್ಮಿಂದ ಪಡಕೊಳ್ಳ ಬೇಕೋ?

2 ನಮ್ಮನ್ನು ನಾವೇ ತಿರಿಗಿ ಹೊಗಳಿಕೊಳ್ಳು ವದಕ್ಕೆ ಪ್ರಾರಂಭಿಸುತ್ತೇವೋ? ಇಲ್ಲವೆ ಕೆಲವರಿಗೆ ಬೇಕಾಗಿರುವ ಪ್ರಕಾರ ನಿಮಗೆ ತೋರಿಸತಕ್ಕ ಯೋಗ್ಯತಾ ಪತ್ರಗಳು ನಮಗೆ ಅಗತ್ಯವೋ? ಅಥವಾ ಅಂಥ ಪತ್ರಗಳನ್ನು ನಿಮ್ಮಿಂದ ಪಡಕೊಳ್ಳ ಬೇಕೋ?

3 ನೀವು ಕ್ರಿಸ್ತನು ನಮ್ಮ ಕೈಯಿಂದ ಬರೆಯಿಸಿ ಕೊಟ್ಟ ಪತ್ರಿಕೆಯಾಗಿದ್ದೀರೆಂಬದು ಪ್ರತ್ಯಕ್ಷವಾಗಿಯೇ ಇದೆ; ಅದು ಮಸಿಯಿಂದ ಬರೆದದ್ದಲ್ಲ, ಆದರೆ ಜೀವವುಳ್ಳ ದೇವರ ಆತ್ಮನಿಂದಲೇ ಬರೆದದ್ದು; ಕಲ್ಲಿನ ಹಲಿಗೆಗಳ ಮೇಲೆಯಲ್ಲ, ಮನುಷ್ಯನ ಹೃದಯವೆಂಬ ಹಲಿಗೆಗಳ ಮೇಲೆ ಬರೆದದ್ದು.

4 ಇಂಥ ಭರವಸವು ಕ್ರಿಸ್ತನ ಮೂಲಕವೇ ದೇವರ ಮುಂದೆ ನಮಗುಂಟು.

5 ನಮ್ಮಿಂದಲೇ ಏನಾದರೂ ಉಂಟಾಯಿ ತೆಂದು ಆಲೋಚಿಸಿಕೊಳ್ಳುವದಕ್ಕೆ ನಮ್ಮಷ್ಟಕ್ಕೆ ನಾವೇ ಸಮರ್ಥರೆಂತಲ್ಲ; ನಮಗಿರುವ ಸಾಮರ್ಥ್ಯವು ದೇವರಿಂದಲೇ ಬಂದದ್ದು;

6 ಆತನು ನಮ್ಮನ್ನು ಸಹ ಹೊಸ ಒಡಂಬಡಿಕೆಗೆ ಸಮರ್ಥರಾದ ಸೇವಕರನ್ನಾಗಿ ಮಾಡಿದ್ದಾನೆ; ಅಕ್ಷರಕ್ಕನುಸಾರವಾಗಿ ಅಲ್ಲ; ಆತ್ಮನಿಗನು ಸಾರವಾಗಿಯೇ. ಯಾಕಂದರೆ ಅಕ್ಷರವು ಮರಣ ವನ್ನುಂಟು ಮಾಡುತ್ತದೆ; ಆತ್ಮವು ಜೀವವನ್ನುಂಟು ಮಾಡುತ್ತದೆ.

7 ಆದರೆ ಮರಣದ ಸೇವೆಯು ಕಲ್ಲಿನ ಮೇಲೆ ಲಿಖಿತವಾದ ಅಕ್ಷರಗಳಲ್ಲಿದ್ದರೂ ಪ್ರಭಾವದಿಂದ ಕೂಡಿದ್ದಾಗಿತ್ತು; ಆ ಪ್ರಭಾವದಿಂದ ಮೋಶೆಯ ಮುಖಕ್ಕೆ ಬಂದ ಪ್ರಕಾಶವು ಕುಂದಿ ಹೋಗುವಂಥ ದ್ದಾಗಿದ್ದರೂ ಅದರ ನಿಮಿತ್ತ ಇಸ್ರಾಯೇಲ್ಯರು ಅವನ ಮುಖವನ್ನು ದೃಷ್ಟಿಸಿ ನೋಡಲಾರದೆ ಇದ್ದರು.

8 ಹೀಗಿದ್ದ ಮೇಲೆ ಆತ್ಮ ಸಂಬಂಧವಾದ ಸೇವೆಯು ಎಷ್ಟೋ ಹೆಚ್ಚಾಗಿ ಪ್ರಭಾವದಿಂದಿರುವದಲ್ಲವೇ?

9 ಅಪರಾಧ ನಿರ್ಣಯದ ಸೇವೆಯು ಪ್ರಭಾವದಿಂದಿರುವದಾದರೆ ನೀತಿಯ ಸೇವೆಯು ಎಷ್ಟೋ ಅಧಿಕವಾದ ಪ್ರಭಾವವುಳ್ಳದ್ದಾಗಿರಬೇಕು.

10 ಈಗ ಅತ್ಯಧಿಕವಾದ ಪ್ರಭಾವವುಳ್ಳದ್ದು ಬಂದದ್ದರಿಂದ ಪ್ರಭಾವವಾಗಿದ್ದದ್ದು ಈ ವಿಷಯದಲ್ಲಿ ಪ್ರಭಾವ ವಿಲ್ಲದ್ದಾಯಿತು.

11 ಇಲ್ಲದೆ ಹೋಗುವಂಥದ್ದು ಪ್ರಭಾವ ವುಳ್ಳದ್ದಾಗಿದ್ದರೆ ಇರುವಂಥದ್ದು ಬಹು ಹೆಚ್ಚಾಗಿ ಪ್ರಭಾವವುಳ್ಳದ್ದಾಗಿರಬೇಕಲ್ಲವೇ?

12 ನಮಗೆ ಇಂಥ ನಿರೀಕ್ಷೆ ಇರುವಲ್ಲಿ ನಾವು ಅತಿ ಸ್ಪಷ್ಟವಾಗಿ ಮಾತನಾಡುತ್ತೇವೆ.

13 ಗತಿಸಿಹೋಗು ವದರ ಅಂತ್ಯವನ್ನು ಇಸ್ರಾಯೇಲ್ಯರು ದೃಷ್ಟಿಸಿ ನೋಡಲಾರದಂತೆ ತನ್ನ ಮುಖದ ಮೇಲೆ ಮುಸುಕು ಹಾಕಿಕೊಳ್ಳುವ ಮೋಶೆಯ ಹಾಗೆ ಅಲ್ಲ.

14 ಆದರೆ ಅವರ ಬುದ್ದಿಮಂದವಾಯಿತು, ಆ ಮುಸುಕು ಕ್ರಿಸ್ತನಲ್ಲಿ ತೆಗೆದು ಹಾಕಲ್ಪಟ್ಟಿರುವದರಿಂದ ಹಳೇ ಒಡಂಬಡಿಕೆಯು ಪಾರಾಯಣವಾಗುವಾಗೆಲ್ಲಾ ಈ ದಿನದ ವರೆಗೂ ಅವರಿಗೆ ಆ ಮುಸುಕು ತೆಗೆಯಲ್ಪಡದೆ ಉಳಿದಿದೆ.

15 ಆದರೆ ಈ ದಿನದವರೆಗೂ ಮೋಶೆಯ ಗ್ರಂಥಪಾರಾಯಣವು ಆಗುವಾಗೆಲ್ಲಾ ಮುಸುಕು ಅವರ ಹೃದಯದ ಮೇಲೆ ಇರುತ್ತದೆ.

16 ಆದಾಗ್ಯೂ ಅವರ ಹೃದಯವು ಕರ್ತನ ಕಡೆಗೆ ತಿರುಗಿಕೊಂಡಾಗಲೇ ಆ ಮುಸುಕು ತೆಗೆಯಲ್ಪಡುವದು.

17 ಕರ್ತನು ಆ ಆತ್ಮನೇ ಆಗಿದ್ದಾನೆ; ಕರ್ತನ ಆತ್ಮನು ಯಾರಲ್ಲಿದ್ದಾನೋ ಅವರಿಗೆ ಬಿಡುಗಡೆ ಉಂಟು.

18 ಆದರೆ ನಾವೆಲ್ಲರೂ ತೆರೆದ ಮುಖವುಳ್ಳವರಾಗಿ ದರ್ಪಣದಲ್ಲಿ ಕಾಣುವಂತೆ ಕರ್ತನ ಮಹಿಮೆಯನ್ನು ನೋಡುತ್ತಾ ಕರ್ತನ ಆತ್ಮನಿಂದಲೋ ಎಂಬಂತೆ ಅದೇ ಸಾರೂಪ್ಯಕ್ಕೆ ಮಹಿಮೆಯಿಂದ ಮಹಿಮೆಗೆ ಮಾರ್ಪಡುತ್ತೇವೆ.

  • Tamil
  • Hindi
  • Malayalam
  • Telugu
  • Kannada
  • Gujarati
  • Punjabi
  • Bengali
  • Oriya
  • Nepali

By continuing to browse the site, you are agreeing to our use of cookies.

Close